
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ150 ಆಯುಷ್ಮಾನ್ ಕಾರ್ಡ್ ಉಚಿತವಾಗಿ ವಿತರಣೆ ಮಾಡಿದರು.

ಗ್ರಾಮೀಣ ಹೆಣ್ಣು ಮಕ್ಕಳಿಗೆ ಆರೋಗ್ಯದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಆಯುಷ್ಮಾನ ಕಾರ್ಡ್ ಗಳನ್ನು ಸಂಘದ ಮಹಿಳಾ ಸದಸ್ಯರಿಗೆ ಉಚಿತವಾಗಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಉಪಾದ್ಯಕ್ಷ ಮಂಜುನಾಥಗೌಡ ಪಾಟೀಲ ಧರ್ಮಸ್ಥಳ ಸಂಸ್ಥೆ ಕೊಡುವ ಯೋಜನೆಯನ್ನು ಸರಿಯಾಗಿ ಉಪಯೋಗಿಸಿಳ್ಳಲೂ ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ. ಮತ್ತು ಜೊತೆಗೆ ಈ ಯೋಜನೆಯನ್ನು ಇಡಿ ತಾಲೂಕಿನ ಪ್ರತಿಯೊಬ್ಬ ವ್ಯಕ್ತಿಯೂ ಕಾರ್ಡ್ ಮಾಡಲೂ ಪ್ರತಿ ಗ್ರಾಮ ಪಂಚಾಯತ್ ಅದಿಕಾರಿಗಳೂಂದಿಗೆ ಮಾತನಾಡಿ ಆದಷ್ಟು ಬೇಗನೆ ಗುರಿತಲುಪಲೂ ಕ್ರಮ ಕೈಗೊಳ್ಳುತ್ತೆನೆ ಎಂದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ ಮಾತನಾಡಿ:
ಇಡೀ ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಸರಕೋಡ ಗ್ರಾಮದಲ್ಲಿ ಪ್ರಥಮ ಬಾರಿಗೆ ಉಚಿತವಾಗಿ ನೀಡಿದ್ದು ನಾಳೆಯಿಂದ ವಿಜಯಪುರ ಜಿಲ್ಲೆಯ ನಾನಾ ಭಾಗಗಳಲ್ಲಿ ಪ್ರಾರಂಭ ಆಗುತ್ತದೆ. ವಿಜಯಪುರ ಜಿಲ್ಲೆಯ ಜನರು ಆರೋಗ್ಯವಂತರು. ಒಳ್ಳೆಯ ಮನಸ್ಥಿತಿ ಉಳ್ಳವರು ಎಂದರು.
ಆಯುಷ್ಮಾನ ಯೋಜನೆಯ ಉಪಯೋಗವನ್ನು ಡವಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಬಸವರಾಜ ಆಲೂರ ಹೇಳಿದರು.
ತಾಲೂಕ ಪಂಚಾಯತ್ ಉಪ ನಿರ್ದೇಶಕರು ಪಿ. ಕೆ. ದೇಸಾಯಿ. ನಿವೃತ್ತ ಉಪ ತಹಶೀಲ್ದಾರ್ ಡಿ. ಏನ್. ಬೇಲಾಳ. ಶ್ರೀಮತಿ ಪುಷ್ಪಾ ಜಿಗಜಿಣಗಿ ಮಾತನಾಡಿದರು. ಸದಸ್ಯರ ಪರವಾಗಿ ಶ್ರೀಮತಿ ಚಂದ್ರಕಲಾ ಅಗಸಬಾಳ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯ ಮೇಲೆ ಗ್ರಾಮ ಪಂಚಾಯತ ಸದಸ್ಯೆ ಶ್ರೀಮತಿ ಶರಣಮ್ಮಗೌಡತಿ ಸಂ ಪಾಟೀಲ ಇದ್ದರು. ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೀಮತಿ ಸುಧಾ ಸ್ವಾಗತಿಸಿದರು. ಸಂಸ್ಥೆಯ ಅಧಿಕಾರಿ ಶ್ರೀ ಮಲ್ಲಪ್ಪ ವಂದನೆ ಸಲ್ಲಿಸಿದರು.ಸೇವಾ ಪ್ರತಿನಿಧಿ ವಿಜಯಲಕ್ಷ್ಮೀ ರೂಪ ಇದ್ದರು.
ವರದಿ:ಸಾಗರ ಉಕ್ಕಲಿ
Published by Royal TV
Royal tv Kannada news online website channel
View more posts