
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಮಕರ ಸಂಕ್ರಮಣದ ನಿಮಿತ್ಯ ಶ್ರೀ ಕಾಶಿ ವಿಶ್ವೇಶ್ವರ ಜಾತ್ರೆಯು ಜನವರಿ 12 ರಿಂದ 16 ರ ವರೆಗೆ ಜರುಗಲಿದೆ.
ಸಪ್ತಸಾಗರ ಗ್ರಾಮದ ಪುಣ್ಯ ಕ್ಷೇತ್ರದಲ್ಲಿ ಜನಮೇಜಯ ರಾಜನು ಸರ್ಪ ಯಜ್ಞ ಮಾಡಿದ ಪುಣ್ಯ ಕ್ಷೇತ್ರವಾಗಿದೆ.ಈ ಸರ್ಪ ಯಜ್ಞ ಮಾಡಿದ ಭೂಮಿಯು ಸಪ್ತಸಾಗರ ಗ್ರಾಮದ ಪೂರ್ವೋತ್ತರಕ್ಕೆ ಎರಡು ಕಿ.ಮೀ ದೂರದಲ್ಲಿದೆ.ಈ ಗ್ರಾಮದಲ್ಲಿ ಪುರಾತನ ಶಿವನ ಶ್ರೀ ಕಾಶಿ ಈಶ್ವರನ ದೇವಸ್ಥಾನವಿದೆ.ಇಲ್ಲಿ ಪ್ರತಿವರ್ಷ ಸಂಕ್ರಮಣದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ರವಿವಾರ 12/01/2020 ರಂದು ತೇರಿನ ಕಳಸಾರೋಣ ಕಾರ್ಯಕ್ರಮ ನಡೆಯುತ್ತದೆ ಹಾಗೂ 14 /01/2020 ರಂದು ಯಜ್ಞ ಭೂಮಿಕ್ಷೇತ್ರ ಹಾಗೂ ಭೋಗಿ ಕಾರ್ಯಕ್ರಮದಲ್ಲಿ ಒನಿಕೆ ಹಾಗೂ ಒಳ್ಳದ ಕಾರ್ಯಕ್ರಮ ಮತ್ತು ದಿನಾಂಕ 15/01/2020 ರಂದು ಬುಧವಾರದಂದು ಮಕರ ಸಂಕ್ರಮಣದ ಪುಣ್ಯ ಮುಂಜಾನೆಯಿಂದ ಸಂಜೆಯವರೆಗೆ ಶ್ರೀ ಕೃಷ್ಣಾನದಿಯಲ್ಲಿ ಕಾಶಿವಿಶ್ವೇಶ್ವರನಿಗೆ ಜಲಾಭಿಷೇಕ ಹಾಗೂ ಸಂಜೆ 6 ಗಂಟೆಗೆ ವಾದ್ಯವೃಂದದೊಂದಿಗೆ ರಥೋತ್ಸವ ಕಾರ್ಯಕ್ರಮದ ಜೊತೆಗೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.
ವರದಿ:ಸಚೀನ ಕಾಂಬಳೆ ಅಥಣಿ
Published by Royal TV
Royal tv Kannada news online website channel
View more posts