
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:
ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇದ್ರ ಹೆಗ್ಗಡೆ ಅವರ ಸದಿಚ್ಚೆಯ ಮೇರೆಗೆ ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಡಸ್ಟಬಿನ್‍ಗಳನ್ನು ವಿತರಿಸುವ ಮೂಲಕ ನಮ್ಮೂರು, ನಮ್ಮ ಶ್ರದ್ಧಾಕೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ವ್ಯವಸ್ಥಾಪಕ ಹೊನ್ನಪ್ಪ ತಿಳಿಸಿದ್ದಾರೆ.
ಪ್ರತಿಯೊಂದು ಊರಲ್ಲಿರುವ ಧಾರ್ಮಿಕ ಕೇಂದ್ರಕ್ಕೆ ಹಸಿರು ಮತ್ತು ನೀಲಿ ಬಣ್ಣದ ತಲಾ ಒಂದು ಡಸ್ಟಬಿನ್ ವಿತರಿಸಲಾಗಿದೆ. ಹಸಿರು ಡಸ್ಟಬಿನ್‍ನಲ್ಲಿ ಹಸಿ ಕಸ, ನೀಲಿ ಡಸ್ಟಬಿನ್‍ನಲ್ಲಿ ಒಣ ಕಸ ಹಾಕುವಂತೆ ಶ್ರದ್ಧಾಕೇಂದ್ರಗಳ ಕಸ ವಿಲೇವಾರಿ ಮಾಡುವವರಿಗೆ ತಿಳಿವಳಿಕೆ ನೀಡಲಾಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಸ್ವಚ್ಛತೆಯ ಮಹತ್ವ ಕುರಿತು ಈಗಾಗಲೇ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು. ವಿವಿಧೆಡೆ ನಡೆದ ಕಾರ್ಯಕ್ರಮಗಳಲ್ಲಿ ಆಯಾ ಭಾಗದ ಮೇಲ್ವಿಚಾರಕರು, ಸಹವರ್ತಿಗಳು, ಸ್ಥಳೀಯ ಸಂಘದ ಸದಸ್ಯರು, ಶ್ರದ್ಧಾಕೇಂದ್ರದ ಪ್ರಮುಖರು ಪಾಲ್ಗೊಂಡಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts