-

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ. ದಿನನಿತ್ಯ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದ ಸುತ್ತಮುತ್ತಲೂ ಇರುವ ಧಾಬಾಗಳಲ್ಲಿ ಮದ್ಯಮಾರಾಟ ನಡೆಯುತ್ತಿದೆ.ಪರವಾನಿಗೆ ಇಲ್ಲದೆ ಅಕ್ರಮವಾಗಿ ನಡೆಯುವ ಈ ಮಾರಾಟಕ್ಕೆ ತಾಲ್ಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಪ್ರತಿಯೊಂದು ಧಾಬಾಗಳಿಂದ ಅಧಿಕಾರಿಗಳಿಗೆ ಲಂಚ ಹೋಗುತ್ತಿದ್ದು ಕಾರಣ ಧಾಬಾ ಗಳಲ್ಲಿ ನಡೆಯುವ ಈ ಮಾರಾಟಕ್ಕೆ ಕಡಿವಾನ ಹಾಕುವವರಿಲ್ಲ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಇತ್ತ ಗಮನಿಸುತ್ತಿಲ್ಲ.
-
ತಾಲ್ಲೂಕಿನಲ್ಲಿರುವ ಮಧ್ಯದ ಅಂಗಡಿಗಳು ಬೆಳಿಗ್ಗೆ 6 ಘಂಟೆಗೆ ತಗೆಯುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ,ಕಾರಣ ಆ ಅಂಗಡಿಕಾರರಿಂದ ಹಪ್ತಾ ವಸೂಲಿ ಇದ್ದ ಕಾರಣ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದಾಗಿ ಎಷ್ಟು ಕುಟುಂಬಗಳು ಈ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿ ಪಾಲು ಆಗುತ್ತಿವೆ,ಹೆಣ್ಣು ಮಕ್ಕಳು ಅಬಕಾರಿ ಇಲಾಖೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ,ತಾಲ್ಲೂಕಿನ ಹಲವು ಗ್ರಾಮದ ಮಹಿಳೆಯರು ಸೇರಿಕೊಂಡು ನಮ್ಮ ಗ್ರಾಮದಲ್ಲಿ ಸಾರಾಯಿ ನಿಷೇಧ ಮಾಡಬೇಕೆಂದು ಅಬಕಾರಿ ಇಲಾಖೆಗೆ ಹಾಗೂ ತಹಶಿಲ್ದಾರರ ಕಛೇರಿಗೆ ಮನವಿ ಸಲ್ಲಿಸಿದರು ಕೂಡಾ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ತಮ್ಮ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
-
ಹಳ್ಳಿಗಳಲ್ಲಿನ ತಾಂಡಾಗಳಲ್ಲಿ ಸರಾಗವಾಗಿ ಎಗ್ಗಿಲ್ಲದೆ ನಡೆಯುತ್ತಿದೆ ಕಳ್ಳಬಟ್ಟಿ ಸಾರಾಯಿ ಮಾರಾಟ ಅದರಿಂದ ಹಲವು ಸಿಬ್ಬಂದಿಗಳಿಗೆ ಲಂಚ ಹೋಗುತ್ತಿದ್ದು ಅದರಿಂದ ಈ ಕಂಟ್ರಿ ಸಾರಾಯಿ ನಿಷೇಧಕ್ಕೆ ಲಗಾಮ ಇಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯುವಾಗ ಸಿಗಬೇಕಾಗ ನ್ಯಾಯ ಯಾರಿಗೆ ಸಿಗಲು ಸಾಧ್ಯ ಇದರ ಸಲುವಾಗಿ ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ತಂದರು ಕಾಟಾಚಾರಕ್ಕೆ ಆಯಿತು ಗಮನಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಾರೆ.ಆದರೆ ಅದನ್ನು ನಿಯಂತ್ರಣ ಮಾಡುವುದು ಕನಸಿನ ಮಾತಾಗಿದೆ.
-
ಈ ಅಕ್ರಮಕ್ಕೆ ಮೇಲಿನ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಮುಂದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹೆಸರು ಸಮೇತ ಪಡೆಯುವ ಲಂಚದ ವಿವರಣೆಯನ್ನು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಸುಮಾರು ಹಳ್ಳಿಗಳಲ್ಲಿನ ಜನರು ನಮ್ಮೊಂದಿಗೆ ಹೇಳಿಕೊಂಡಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ
Published by Royal TV
Royal tv Kannada news online website channel
View more posts