ಡೈನಾಮಿಕ್ ಹೀರೊ ದೇವರಾಜ ಸಮ್ಮುಖದಲ್ಲಿ “ನಾನೊಂಥರ” ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

ಉತ್ತರ ಕರ್ನಾಟಕ ಬಾಗದ ಹಾಸ್ಯ ಕಲಾವಿದನಾದ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದ ಕಲಾವಿದ ಶ್ರೀಶೈಲ ಹೂಗಾರ ನಟಿಸಿರುವ “ನಾನೊಂಥರ” ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಇದೆ ದಿನಾಂಕ 8-3-2020 ರವಿವಾರ ದಂದು ಸಾಯಂಕಾಲ 6 ಘಂಟೆಗೆ,ವಿಬಿಸಿ ಪ್ರೌಢ ಶಾಲೆಯ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಜರುಗಲಿದೆ.

ಈ ಸಮಾರಂಭದಲ್ಲಿ ಚಲನಚಿತ್ರ ಹಿರಿಯ ನಟ ಡ್ಯೆನಾಮಿಕ್ ಸ್ಟಾರ್ ದೇವರಾಜ್ ,ಚಲನಚಿತ್ರ ನಟರಾದ ಶ್ರೀ ತಾರಕ್ ಸರ್ ,ನಟಿ ಕುಮಾರಿ ಹರ್ಷಿತಾ,ಹಾಸ್ಯ ನಟ ರಾದ ಸುಧಾಕರ ,ಮಹಾಂತೇಶ ಹಡಪದ ,ಆಗಮಿಸುವರು ಹಾಗೂ ನಮ್ಮ ಇಂಚರ್ ಮೆಲೋಡಿಸ್ ಸಂಸ್ಕೃತಿಕ ಕಲಾ ತಂಡದಿಂದ ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವುದು,ಕಲಾವಿದರಾದ ಕಾಮಿಡಿ ಕಿಲಾಡಿಗಳಾದ ಶ್ರೀ ಶಕ್ತಿಕುಮಾರ ವಿಜಯಪುರ ,ಮಜಾ ಭಾರತ,ಕಾಮಿಡಿ ಕಂಪನಿ ಹಾಸ್ಯ ಕಲಾವಿದರಾದ ದೇವಕುಮಾರ ಸಾತಲಗಾಂವ, ಖ್ಯಾತ್ ಗಾಯಕಿ ಶೀಲಾ ಹಿರೇಮಠ,ಈಶ್ವರ ಉಮರಾಣಿ, ಸಾಗರ್ ಬಾಗಲಕೋಟೆ,ರಾಜು ಶಿರೋಳ, ಪುಂಡಲೀಕ ಲಮಾಣಿ,ವಿಷ್ಣು ಲಮಾಣಿ,ದೀಪಾ ರತ್ನ ಶ್ರೀ, ಉದಯ ಟಿವಿ ಕಲಾವಿದರಾದ ಶ್ರೀ ಮುನಿರ್ ಅವಟಿಗೇರ್,ವಿಜೇಂದ್ರ ಹಿರೇಮಠ ,ಇನ್ನಿತರ ಕಲಾವಿದರು ಆಗಮಿಸಿ ಹಾಸ್ಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ಹೂಗಾರ ಹೇಳಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started