
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಾದು ಹೋಗುವ
ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯಹೆದ್ದಾರಿ ಕಾಮಗಾರಿಯು ಬೇಕಾಬಿಟ್ಟಿಯಾಗಿ ನಡೆಯುತ್ತಿದೆ ಅಂತ ಚಕ್ರವರ್ತಿಯ ಪ್ರತಿಭಟನೆ ವಾರ ಪತ್ರಿಕೆ ಸಂಪಾದಕರಾದ ಚೇತನ ಶಿವಶಿಂಪಿ ಅವರು ಮಾನ್ಯ ಸಚಿವ ಗೋವಿಂದ ಕಾರಜೋಳ ಅವರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಕಳಪೆ ಕಾಮಗಾರಿ ಅಷ್ಟೇ ಅಲ್ಲ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ದೂರಿದ್ದಾರೆ.ಚರಂಡಿ ಮತ್ತು ಫುಟಪಾತ್ ಕೂಡ ಸರಿಯಾಗಿಲ್ಲ..ತಮ್ಮ ಕಾರ್ಯಾಲಯದಿಂದ ಒಬ್ಬ ಅಧಿಕಾರಿಯನ್ನು ನೇಮಿಸಿ ನಿಯಮಾನುಸಾರ ರಸ್ತೆ,ಚರಂಡಿ ಮತ್ತು ಫುಟಪಾತ್ ಕಾಮಗಾರಿ ಆಗಬೇಕು ಅಂತಾ ಆಗ್ರಹಿಸಿದ್ದಾರೆ.ಅಲ್ಲದೇ ಬಸ್ ನಿಲ್ದಾಣದ ಮುಂದೆ ಕೀರ್ತಿ ಸಾಗರ ಹೊಟೆಲ್ ಮುಂದೆ ಚರಂಡಿ ಮಾಡಿರುವುದು ನಿಯಮಾನುಸಾರ ಇಲ್ಲ ವಕ್ರವಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆ, ಅಷ್ಟು ನಿರ್ಮಾಣ ಮಾಡುವುದಕ್ಕೆ ಅಲ್ಲಿನ ಅಂಗಡಿ ಮಾಲಿಕರಿಂದ ಹಣ ಪಡೆದು ಅರ್ಧ ಮರ್ಧ ಕೆಲಸ ಮಾಡಿ ಚರಂಡಿಯನ್ನು ರಸ್ತೆಯ ಕಡೆ ಜಾಸ್ತಿ ಮಾಡಿ ಅಂಗಡಿಯವರಿಗೆ ಲಾಭ ಮಾಡಿದ್ದರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ಅದನ್ನು ಗಮನಿಸಿ ಸರಿಯಾದ ನಿಯಮದ ಪ್ರಕಾರ ಚರಂಡಿ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ಕನ್ನಡಪರ ಹಾಗೂ ದಲಿತಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts