ಶ್ರೀ ಮುರುಡ ಬಸವೇಶ್ವರ ಜಾತ್ರೆ ಪ್ರಯುಕ್ತ “ಸಮಾಜ ಸಂಜೀವಿನಿ” ಪ್ರಶಸ್ತಿ ಪ್ರಧಾನ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ಸದ್ಗುರು ಶ್ರೀ ಮುರುಡ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹನ್ನೊಂದು ದಿನಗಳ ಪರ್ಯಂತರ ವಾಗಿ ಸಾಗಿ ಬಂದಂತ ಮಹಾತ್ಮಾ ಗುಳೇದ ಗಾದಿಲಿಂಗೇಶ್ವರ ಮಹಾಪುರಾಣದ ನಿಮಿತ್ಯ ಮಹಾಮಂಗಲೋತ್ಸವದಲ್ಲಿ “ಸಮಾಜ ಸಂಜೀವಿನಿ” ಎಂಬ ಪ್ರಶಸ್ತಿಯನ್ನು ನೀಡಿ ಶ್ರೀ ಮುರುಡ ಬಸವೇಶ್ವರ ಸೇವಾ ಸಮಿತಿಯವರು ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಒಡೆಯರ್ ಆದಂಥ ಪರಮ ಪೂಜ್ಯ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಹಾಗೂ ಕವಡಿಮಟ್ಟಿ ಹಿರೇಮಠದ ಬಸವಪ್ರಭು ಅಪ್ಪಾಜಿ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನದಲ್ಲಿದ್ದರು. ಲೊಟಗೇರಿ ಗುರುಮೂರ್ತಿ ದೇವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಸವರಾಜ ಶಾಸ್ತ್ರೀಜಿ ಶ್ರೀ ರಾಜರಾಜೇಶ್ವರಿ ಬ್ರಹನ್ಮಠ ಅರಳಹಳ್ಳಿಯವರು ಸೇರಿಕೊಂಡು ಪೂಜ್ಯ ರಾದ ಶ್ರೀ ಲಾಲಪ್ಪ ಗುರುಗಳನ್ನು ದಂಪತಿಗಳ ಸಮೇತ ಕರೆಯಿಸಿಕೊಂಡು “ಸಮಾಜ ಸಂಜೀವಿನಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಜೊತೆಯಲ್ಲಿ ದಂಪತಿಗಳ ಇಬ್ಬರಿಗೂ ಸನ್ಮಾನಿಸಿ ಗೌರವಿಸಿದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಯಾವುದೇ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started