
ಮುದ್ದೇಬಿಹಾಳ: ಶಿಕ್ಷಣವು ಇಂದಿನ ದಿನಮಾನಗಳಲ್ಲಿ ವ್ಯಾಪಾರೀಕರಣವಾಗುತ್ತಿದೆ. ಅದು ಆಗಬಾರದು ಶಿಕ್ಷಣವನ್ನು ನೀಡುವುದು ಒಂದು ದೊಡ್ಡ ಸಾಧನೆ. ಮತ್ತು ಒಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ, ಶಿಕ್ಷಕರಾದವರು ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಉನ್ನತವಾದ ವಿದ್ಯಾಭ್ಯಾಸವನ್ನು ನೀಡಬೇಕು, ಅಲ್ಲದೆ ಆ ವಿದ್ಯಾರ್ಥಿಯನ್ನು ಉತ್ತಮ ನಾಗರಿಕನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಅಂಜುಮನ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಭಾರತಿ ಪಬ್ಲಿಕ್ ಶಾಲೆಯ ಎರಡನೆಯ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಉತ್ತಮ ವಿದ್ಯಾಭ್ಯಾಸವನ್ನು ಪಾಲಕರು ನೋಡುತ್ತಿರಬೇಕು ಮಕ್ಕಳನ್ನು ಶಾಲೆಗೆ ಕಳುಹಿಸಿದ್ದೇವೆ ಎಂದು ಮನೆಯಲ್ಲಿ ಕುಳಿತರೆ ಸಾಲದು ಅವರ ಪ್ರತಿ ನಿತ್ಯ ಚಟುವಟಿಕೆಯನ್ನು ಗಮನಿಸುತ್ತಿರಬೇಕು ಎಂದು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಗಳನ್ನು ನೀಡಿದರು, ವರದಿ ವಾಚನವನ್ನು ಶಾಲೆಯ ಕಾರ್ಯಾಧ್ಯಕ್ಷ ವೀರೇಶ್ ಗುರುಮಠ ಹೇಳಿದರು. ಸಾನಿಧ್ಯವನ್ನು ಸಂಗಯ್ಯ ಹಾಲ್ ಗಂಗಾಧರಮಠ ವಹಿಸಿಕೊಂಡಿದ್ದರು. ಎಚ್ಎಲ್ ಕರಡ್ಡಿ ಶರಣಯ್ಯ ಬೂದಿಹಾಳ ಮಠ ನೂರಂದಯ್ಯ ಹಿರೇಮಠ್ ಸುರೇಶ್ ಹಡಪದ್ ಎಚ್ ಎ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿತ್ರಿ ಬಿರಾದಾರ ಸ್ವಾಗತಿಸಿದರು, ಗೋಪಾಲ್ ಹೂಗಾರ್ ನಿರೂಪಿಸಿದರು, ವೀರೇಶ್ ಗುರುಮಠ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮಗಳು ಜರುಗಿದವು.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts