
ಕರೋನ ವೈರಸ್ ಸೊಂಕು ಈಗಾಗಲೇ ದೇಶ ವ್ಯಾಪ್ತಿ ಹರಡಿ ನಮ್ಮ ರಾಜ್ಯಕ್ಕೂ ವ್ಯಾಪಿಸಿದೆ.ಇನ್ನೂ ಇದಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಿಲ್ಲ, ಆದಕಾರಣ ಜನರು ಭಯಭೀತರಾಗಿದ್ದಾರೆ.ಈ ಸೋಂಕು ತಗುಲದ ಹಾಗೆ ರಾಜ್ಯ ಸರ್ಕಾರ ಹೈ ಅಲರ್ಟ ಘೋಷಣೆ ಮಾಡಿದೆ,ರಾಜ್ಯಾದ್ಯಂತ ಪಟ್ಟಣಗಳು ಜನರಿಲ್ಲದೆ ಭಿಕೊ ಎನ್ನುತ್ತಿವೆ..ಈ ಕರೋನ ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಆಯುರ್ವೇದ ಮೂಲಿಕೆಯಿಂದ ಸೊಂಕು ಬರದ ಹಾಗೆ ರಕ್ಷಣೆ ಪಡೆಯ ಬಹುದಾಗಿದೆ.
ಹೌದು ಸಮಾಜ ಸೇವಕಿ,ಹಾಗೂ ಬಾಜಪ ಪಕ್ಷದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುಖಂಡರಾಗಿರುವ ಕಾಶೀಬಾಯಿ ಎಸ್ ರಾಂಪೂರ ಅವರು ಕೆಲವೊಂದು ಔಷಧೀಯಗಳನ್ನು ಜನರಿಗೆ ನೀಡುತ್ತಿದ್ದಾರೆ ಅಲ್ಲದೆ ಮಾಹಿತಿಯನ್ನು ಕೂಡ ನೀಡುತ್ತಿದ್ದಾರೆ.
ಪಾರಿಜಾತದ ಹೂವನ್ನು ತಂದು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಈ ಸೋಂಕಿನಿಂದ ರಕ್ಷಣೆ ಪಡೆಯಬಹುದಾಗಿದೆ,ಈಗಾಗಲೇ ಅವರ ಹತ್ತಿರ ಇರುವ ಪಾರಿಜಾತ ಹೂವನ್ನು ಜನರಿಗೆ ನೀಡುತ್ತಿದ್ದಾರೆ.
ಹಾಗೆ ಹಾಲಿನಲ್ಲಿ ಅರಿಶಿನ ಪುಡಿ ಹಾಕಿಕೊಂಡು ಕುಡಿಯುವುದು, ಬೆಳ್ಳುಳ್ಳಿ ನೀರಿನಲ್ಲಿ ಕುದಿಸಿ ಅದರ ನೀರನ್ನು ಕುಡಿದರೆ ಈ ಸೋಂಕು ಬರದಂತೆ ತಡೆ ಬಹುದಾಗಿದೆ ಎಂದು ಶ್ರೀಮತಿ ಕಾಶೀಬಾಯಿ ಎಸ್ ರಾಂಪೂರ ನಮ್ಮೊಂದಿಗೆ ಸಂಪರ್ಕಿಸಿ ಜನರಿಗೆ ತಿಳಿಸುವಂತೆ ಹೇಳಿದ್ದಾರೆ.
ಒಟ್ಟಿನಲ್ಲಿ ಜನರು ಸೋಂಕು ತಗುಲದ ಹಾಗೆ ಇಂತಹ ಕ್ರಮಗಳನ್ನು ಅನುಸರಿಸಿ ಎಚ್ಚರಿಕೆಯಿಂದ ಇರಬೇಕಾಗಿದೆ ನಿರ್ಲಕ್ಷ್ಯ ಮಾಡಬೇಡಿ ಜೀವ ಅಮೂಲ್ಯವಾದದ್ದು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts