ಅನಾಮಧೇಯ ಸಿಲಿಂಡರ್ ನೋಡಿ ಭಯ ಭೀತರಾದ ಜನತೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದ ಮನೆಗಳ ಹತ್ತಿರದಲ್ಲಿ ಯಾರೊ ಎನನ್ನೊ ಚೀಲದಲ್ಲಿ ಪ್ಯಾಕ್ ಮಾಡಿ ತಂದು ಎಸೆದು ಹೋಗಿದ್ದರು, ಸ್ಥಳೀಯರು ಬೆಳಿಗ್ಗೆ ನೋಡಿ ಭಯ ಬೀತರಾಗಿದ್ದರು ಕೆಲವೊಬ್ಬರು ನೋಡಿ ಹೆದರಿ ಪೋಲಿಸ್ ಕಂಟ್ರೋಲ್ ರೂಂ ಗೆ ಕಾಲ್ ಮಾಡಿ ಪೋಲಿಸ್ ಸ್ಟೇಷನ್ ಗೆ ಕಾಲ ಮಾಡಿದಾಗ ಪೋಲಿಸ್ ರು ಬಂದು ನೋಡಿದ್ದರು ಆದರೆ ಅದರಲ್ಲಿ ಅನಾಮಧೇಯ ಗ್ಯಾಸ್ ಸಿಲಿಂಡರ್ ಪ್ಯಾಕ್ ಮಾಡಿ ಎಸೆದು ಹೋಗಿದ್ದರು,ಜನ ಇದರಲ್ಲಿ ಬಾಂಬ್ ಪಿಕ್ಸ್ ಮಾಡಿ ಒಗದಿರಬಹುದೆಂದು,ಅಲ್ಲದೇ ಕೊರೋನ ವೈರಸ್ ತುಂಬಿ ಒಗದಿರಬಹುದೆಂದು ಭಯದಲ್ಲಿ ಇದ್ದರು.

ನಂತರ ಪಿಎಸ್ಐ ಮಲ್ಲಪ್ಪ ಮಡ್ಡಿ ಹಾಗೂ ಪುರಸಭೆ ಅಧಿಕಾರಿ ರಮೇಶ ಮಾಡಬಾಳ ಅವರನ್ನು ಸಂಪರ್ಕಿಸಿದಾಗ ಪುರಸಭೆ ಸಿಬ್ಬಂದಿಗಳನ್ನು ವಾಹನದ ಸಮೇತ ಸ್ಥಳಕ್ಕೆ ಆಗಮಿಸಿದರು.

ಪುರಸಭೆ ಸಿಬ್ಬಂದಿಗಳು ಬಂದು ಅದನ್ನು ಮುಟ್ಟಲು ಹಿಂಜರಿದರು ಕಾರಣ ತುಂಬಾ ಗಬ್ಬು ವಾಸನೆ, ಒಂದೆಡೆ ಬ್ಲಾಸ್ಟ್ ಆಗುವುದೆಂಬ ಭಯ ಆದರು ಜೀವವನ್ನು ಒತ್ತೆ ಇಟ್ಟು ಅದನ್ನು ಎತ್ತಿ ಗಾಡಿಯಲ್ಲಿ ಹಾಕಿಕೊಂಡು ಹೋದರು. ನೆರೆಹೊರೆಯ ಜನರು ಭಯವನ್ನು ಹೋಗಲಾಡಿಸಿದರು.

ಇಲ್ಲಿ ಸಾರ್ವಜನಿಕರೆ ಗಮನಿಸಬೇಕು ಆ ಸಿಲಿಂಡರ್ ರಾತ್ರಿನೆ ಯಾರು ತಂದು ಒಗದಿದ್ದಾರೆ ಬೆಳಿಗ್ಗೆ ನೋಡಿದ ಜನ ಭಯ ಭೀತರಾಗಿ ನೂರಾರು ಜನ ಅದನ್ನು ದೂರದಿಂದಲೇ ನೋಡಿದರು ಮಾತ್ರ ಯಾರು ಮುಟ್ಟಲಿಲ್ಲ ಆದರೆ ಪೋಲಿಸರು ಪುರಸಭೆ ಸಿಬ್ಬಂದಿಗಳು ಅದನ್ನು ಮುಟ್ಟಬೇಕಾಯಿತು,ಯಾಕೆ ಅವರಿಗೆ ನಮ್ಮ ನಿಮ್ಮ ಹಾಗೆ ಜೀವನ ಅಲ್ಲವೆ.. ಅವರು ನೆಪ ಹೇಳಬಹುದಿತ್ತು ಆದರೆ ಅವರು ನಮ್ಮ ಸಲುವಾಗಿ ಹಗಲಿರುಳು ದುಡಿಯುತ್ತಿದ್ದಾರೆ,ಈ ಕೋವಿಡ್-19 ನಲ್ಲಿ ಮಾತ್ರ ಅಲ್ಲ ನಿರಂತರವಾಗಿ ಅವರ ಶ್ರಮ ಇದೆ ದಯವಿಟ್ಟು ಅವರಿಗೂ ಮರ್ಯಾದೆ ಕೋಡಿ ಮನೆಯಲ್ಲಿ ಇರಿ.

ವರದಿ:ಸಾಗರ ಉಕ್ಕಲಿ

ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

Published by Royal TV

Royal tv Kannada news online website channel

Leave a comment

Design a site like this with WordPress.com
Get started