
ವಿಜಯಪುರ:ರಾಜ್ಯದ ವಿವಿಧ ಜಿಲ್ಲೆಗಳಿಂದ ಬಸ್‌ಗಳ ಮೂಲಕ ಮುದ್ದೇಬಿಹಾಳಕ್ಕೆ ಆಗಮಿಸಿದ ಮುದ್ದೇಬಿಹಾಳ ಇಂಡಿ. ಸಿಂದಗಿ, ಬಸವನ ಬಾಗೇವಾಡಿ ತಾಲೂಕಿನ ವಿವಿಧ ಗ್ರಾಮಗಳ ಕಾರ್ಮಿಕರನ್ನು ಬೆಳಿಗ್ಗೆ ಮುದ್ದೇಬಿಹಾಳ ಮತ ಕ್ಷೇತ್ರದ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಧರ್ಮಪತ್ನಿ ಶ್ರೀಮತಿ ಮಹಾದೇವಿ ಎ ಪಾಟೀಲ ನಡಹಳ್ಳಿ ಅವರು ಸ್ವಾಗತಿಸಿ

ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಿ ಬಸ್ ಚಾಲಕ ನಿರ್ವಾಹಕರು ಹಾಗೂ ಆಗಮಿಸಿದ ಪ್ರತಿ ಕುಟುಂಬಕ್ಕೆ ಒಂದು ಆಹಾರದ ಕಿಟ್ಟನ್ನು ನೀಡಿ ಅವರಿಗೆ ಗೌರವಿಸಿ ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಸಹಕಾರಿ ಯಾದರು.ಈ ಸಂದರ್ಭದಲ್ಲಿ ಸಿಪಿಐ ಆನಂದ ವಾಗ್ಮೋಡೆ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ,ಸಂಗಮ್ಮ ದೇವರಹಳ್ಳಿ, ಸಿದ್ದಮ್ಮ ಸಿದರೆಡ್ಡಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ-8792900064
Published by Royal TV
Royal tv Kannada news online website channel
View more posts