
ಮುದ್ದೇಬಿಹಾಳ:ಸಾರ್ವಜನಿಕರ ರಕ್ಷಣೆಗೆ ನಿಂತ ಹಾಗೂ ದಕ್ಷತೆಗೆ ಸದಾಕಾಲ ಹೆಸರಾಗಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿಗಳು ತಮ್ಮ ಜೀವವನ್ನು ತಮ್ಮ ಆಸೆಯನ್ನು ಲೆಕ್ಕಿಸದೆ,ತಮ್ಮ ಕುಟುಂಬದಿಂದ ದೂರ ಉಳಿದು ತಮ್ಮ ಹೊಟ್ಟೆಗೆ ಸರಿಯಾಗಿ ಆಹಾರ, ನೀರಿಲ್ಲದೆ ಸರಿಯಾದ ಸಮಯಕ್ಕೆ ಆಹಾರ ಸಿಗದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯು. ಈ ಮಹಾಮಾರಿ ಕೊರೋನ ವೈರಸ್ ನಿಯಂತ್ರಣಕ್ಕೆ ಹಗಲಿರುಳು ತಮ್ಮ ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯದ ಅನೇಕ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರ ಕಾರ್ಯ ಹಾಗೂ ಕರ್ತವ್ಯ ಮೆಚ್ಚುವಂತದ್ದಾಗಿದೆ.ಮೊನ್ನೆಯ ದಿನ ಮುಗಿದ 21ದಿನಗಳ ಲಾಕ್ ಡೌನ್ ನಲ್ಲಿ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಮುದ್ದೇಬಿಹಾಳ ತಾಲೂಕಿನಲ್ಲಿ ತಮ್ಮ ದಕ್ಷತೆಯಿಂದ ಸರ್ಕಾರ ಹೇಳಿದ ಆಜ್ಞೆಯಂತೆ ಕಟ್ಟುನಿಟ್ಟಾಗಿ ಶಿಸ್ತು ಕ್ರಮದಿಂದ ಜನದಟ್ಟಣೆಯು ಸೇರದಂತೆ ಕರ್ತವ್ಯವನ್ನು ನಿರ್ವಹಿಸಿದರು.
ಅಲ್ಲದೆ ಅನಗತ್ಯವಾಗಿ ತಿರುಗಾಡುತ್ತಿರುವ ಮೋಟರ್ ಸೈಕಲ್ ಸವಾರರಿಗೆ ಮೊದಲು ವಿನಂತಿಸಿಕೊಂಡು ಅವರು ಕೇಳದಿದ್ದ ಪಕ್ಷದಲ್ಲಿ ಅಂತಹ ಮೋಟರ್ ಸೈಕಲ್ ನಲ್ಲಿ ಸಂಚರಿಸುವವರನ್ನು ಸದೆಬಡೆದು ಯಾವುದೇ ಒತ್ತಡಕ್ಕೂ ಮನೆಯದೇ ನಿಯಮ ಮೀರಿ ಓಡಾಡುವ ಬೈಕುಗಳನ್ನು ಹಿಡಿದು ಠಾಣೆಯಲ್ಲಿ ನಿಲ್ಲಿಸಿ ಕೇಸ್ ದಾಖಲಿಸಿದ್ದಾರೆ. ಅಲ್ಲದೆ ಎಷ್ಟು ಹೇಳಿದರು ಬೇಕಾಬಿಟ್ಟಿ ತಿರುಗಾಡುವ ಜನರಿಗೆ ಬಿಸಿ ಮುಟ್ಟಿಸುವ ಕಾರ್ಯ ಎಗ್ಗಿಲ್ಲದೆ ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೂ ಅಬಕಾರಿ ಇಲಾಖೆಯವರು ಮಾಡಬೇಕಾಗಿದ್ದ ಕಾರ್ಯ ಕಳ್ಳಬಟ್ಟಿ ಸಾರಾಯಿ ದಂಧೆ ನಡೆಸುತ್ತಿರುವ ತಾಲೂಕಿನ ತಾಂಡಾಗಳ ಮೇಲೆ ದಾಳಿ ನಡೆಸಿ ಸುಮಾರು 2000ಕ್ಕೂ ಅಧಿಕ ಲೀಟರ್ ಕಳ್ಳಭಟ್ಟಿ ಸಾರಾಯಿ ಯನ್ನು ಸಿಬ್ಬಂದಿಗಳ ಸಹಾಯದಿಂದ ನಾಶಮಾಡಿದ್ದಾರೆ.
ಅಲ್ಲದೆ ಇತರೆ ತಾಲ್ಲೂಕಿನಲ್ಲಿ ನಡೆಯುವ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿ ತಮ್ಮ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ತಾಲೂಕಿನಲ್ಲಿ ಯಾವುದೇ ರೀತಿಯ ಕೋಮು ಸೌಹಾರ್ದತೆಗೆ ಅವಕಾಶ ನೀಡದೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ಇಷ್ಟೇ ಅಲ್ಲದೆ ಮುದ್ದೇಬಿಹಾಳ ತಾಲೂಕಿನಲ್ಲಿ ಜಾತ್ರೆ ಸಮಾರಂಭ ಗಳಲ್ಲಿ ತಮ್ಮ ಕಂಠದಿಂದ ಹಾಡನ್ನು ಹಾಡುವ ಮೂಲಕ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿ ಸ್ನೇಹಮಯ ಜೀವಿ ಎಂದು ಖ್ಯಾತಿಯನ್ನು ಪಡೆದಿದ್ದಾರೆ.
ಇವರು ಮೂಲತಹ ವಿಜಯಪುರ ಜಿಲ್ಲೆಯ ಹೊರ್ತಿ ಗ್ರಾಮದವರಾಗಿದ್ದು ಮೊದಲಿಗೆ ವಿಜಯಪುರ ಜಿಲ್ಲೆಯಲ್ಲಿ ಕಾನ್ಸ್ಟೇಬಲ್ ಆಗಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿ ಅಂದಿಗೂ ಕೂಡ ಅವರ ಸಹೋದ್ಯೋಗಿಗಳ ಜೊತೆಗೆ ಪ್ರೀತಿಯಿಂದ ಕಾರ್ಯನಿರ್ವಹಿಸಿ ನಂತರ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಪಾಸಾಗಿ ಕರ್ತವ್ಯಕ್ಕೆ ಹಾಜರಾಗಿ ಅವರು ಕಾರ್ಯನಿರ್ವಹಿಸಿದರು ಮಂಗಳೂರು ಹಾಗೂ ಗದಗ್ ಠಾಣೆಯಲ್ಲೂ ಸಹ ಅತ್ಯಂತ ದಕ್ಷತೆಯಿಂದ ಹಾಗೂ ಸಾರ್ವಜನಿಕರ ಪ್ರೀತಿಯನ್ನು ಗಳಿಸುವುದರ ಮೂಲಕ ಜನರ ಮನವನ್ನು ಗೆದ್ದಿರುವ ಅಧಿಕಾರಿಯಾದರು.
ಹಾಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದು. ಅದಾಗಲೇ ತಾಲೂಕಿನ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಅದರ ಜೊತೆಯಲ್ಲಿ ದಕ್ಷತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.ಈ ಕೋವಿಡ್-19 ಕಾರ್ಯಾಚರಣೆಯಲ್ಲಿ ದಕ್ಷತೆ ಯೊಂದಿಗೆ ಮಾನವೀಯತೆಗೂ ಸಾಕ್ಷಿಯಾಗಿದ್ದಾರೆ. ಇವರೊಂದಿಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳೊಂದಿಗೆ ಬೆರೆತು ಅವರನ್ನು ಜೊತೆಗೂಡಿಸಿಕೊಂಡು ಸ್ನೇಹ ಮಯದಿಂದ ಇವತ್ತು ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ಈ ಕೊರೋನ ಸೋಂಕನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರು ಸರಕಾರದ ನಿಯಮದಂತೆ ಮುದ್ದೇಬಿಹಾಳ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡಿದ್ದು. ಸಾರ್ವಜನಿಕರು ಅನಾವಶ್ಯಕವಾಗಿ ಹೊರಗಡೆ ತಿರುಗಾಡಿ ನಿಯಮವನ್ನು ಮೀರಿ ಅವರಿಂದ ಶಿಕ್ಷೆಗೆ ಒಳಗಾಗಬೇಡಿ ಪೊಲೀಸ್ ಇಲಾಖೆಯು ತಮ್ಮ ಕುಟುಂಬವನ್ನು ಲೆಕ್ಕಿಸದೆ ನಮ್ಮ-ನಿಮ್ಮೆಲ್ಲರ ಪ್ರಾಣರಕ್ಷಣೆಗಾಗಿ ಸರ್ಕಾರ ಹೇಳಿದ ನಿಯಮದಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ದಕ್ಷತೆಯ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸಹಕರಿಸುವುದರ ಜೊತೆಯಲ್ಲಿ ಅವರಿಗೆ ಸಹಕಾರವನ್ನು ನೀಡಿ ಅವರನ್ನು ಬೆಂಬಲಿಸಿ ಗೌರವಿಸಿ ಅವರ ಆದ್ಯತೆ ಹಾಗು ನಿಮ್ಮ ಪ್ರಾಣರಕ್ಷಣೆಗಾಗಿ ದಯವಿಟ್ಟು ಮನೆಯಲ್ಲಿ ಇರಿ.ಈ ಕೊರೋನ ಮಹಾಮಾರಿಯನ್ನು ತಡೆಗಟ್ಟಲು ದಾರಿಯಾಗಿ.
ರಾಯಲ್ ಟಿವಿ ನ್ಯೂಸ್ ವಿಜಯಪುರ-8792900064