ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಣೆ: ಕಳೆದ 10 ವರ್ಷಗಳ ಕಾಲ ಶಾಸಕರಾಗಿ ಕಾರ್ಯನಿರ್ವಹಿಸಿದ ದೇವರಹಿಪ್ಪರಗಿ ವಿಧಾನ ಸಭಾ ಕ್ಷೇತ್ರದ ದೇವರಹಿಪ್ಪರಗಿ ಪಟ್ಟಣದ ಅಭಿಮಾನಿ ಕಾರ್ಯಕರ್ತರ ಸಲಹೆಯಂತೆ ಪಟ್ಟಣದಲ್ಲಿ ಬಡ ಜನತೆಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾರಾಜ ಕೆಸರಟ್ಟಿ ಇವರ ಸಾನಿಧ್ಯದಲ್ಲಿ ಮಾನ್ಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರು ಹಾಗೂ ಧರ್ಮ ಪತ್ನಿಯಾದ ಶ್ರೀಮತಿ ಮಹಾದೇವಿ ಪಾಟೀಲ ನಡಹಳ್ಳಿ ಯವರು ಜೊತೆಗೂಡಿ ವಿತರಣೆ ಮಾಡಿದರು.Continue reading “ದೇವರ ಹಿಪ್ಪರಗಿಯಲ್ಲಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕುಟುಂಬದಿಂದ ಕಿಟ್ ವಿತರಣೆ”
Category Archives: Uncategorized
ಮಾಜಿ ಸಚಿವ ಸಿ ಎಸ್ ನಾಡಗೌಡರಿಂದ ಮಾಸ್ಕ್ ವಿತರಣೆ
ವಿಜಯಪು ಜಿಲ್ಲೆಯ ಮುದ್ದೇಬಿಹಾಳ: ನೋವೆಲ್ ಕೊರೋನಾ ವೈರಸ್ ಹಿನ್ನಲೆಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನೋವೆಲ್ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ನಮ್ಮ ಹೆಮ್ಮೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ತಾಳಿಕೋಟಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತರಿಗೆ ಭೇಟಿ ನೀಡಿ ಧನ್ಯವಾದ ಅರ್ಪಿಸಿದ ಸಿ ಎಸ್ ನಾಡಗೌಡ (ಅಪ್ಪಾಜೀ) ಮುದ್ದೇಬಿಹಾಳ ವಿಧಾನಸಭಾ ಮತ ಕ್ಷೇತ್ರದ ಮಾಜಿ ಸಚಿವContinue reading “ಮಾಜಿ ಸಚಿವ ಸಿ ಎಸ್ ನಾಡಗೌಡರಿಂದ ಮಾಸ್ಕ್ ವಿತರಣೆ”
ಬಸವ ವಚನ ಮಂಟಪದಲ್ಲಿ ಬಸವ ನಾಮ ಜಪ ಸ್ಮರಣೆ
ಸಮಗ್ರ ಕ್ರಾಂತಿಯ ಹರಿಕಾರ ಗುರು ಬಸವಣ್ಣನವರು: ಗುರು ಬಸವ ವಚನ ಮಂಟಪದಲ್ಲಿ ಎಲ್ಲ ಶರಣ ಶರಣೆಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗುರು ಬಸವಣ್ಣನವರ ಪ್ರಾರ್ಥನೆ, ವಚನ ಚಿಂತನ ಹಾಗೂ ಬಸವ ನಾಮಜಪ ಸ್ಮರಣೆ ಮಾಡಿದರು.ಈ ಕಾರ್ಯಕ್ರಮ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ನಡೆಯಿತು. ಮತ್ರ್ಯ ಲೋಕದ ಮಹಾ ಮನೆ ಹಾಳಾಗಿ ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ. ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿದರು. ಗುರುಬಸವಣ್ಣನವರನ್ನು, ನಮ್ಮ ಉಸಿರಾಗಿ, ಅವರ ಸಂದೇಶಗಳನ್ನು ನಮ್ಮ ಜೀವನದContinue reading “ಬಸವ ವಚನ ಮಂಟಪದಲ್ಲಿ ಬಸವ ನಾಮ ಜಪ ಸ್ಮರಣೆ”
ಮಾನವಿಯತೆ ಮೆರೆದ ಪೋಲಿಸ್ ಅಧಿಕಾರಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಪೋಲಿಸ್ ಅಧಿಕಾರಿಗಳಾದ ದೇವಾನಂದ ರಾಠೋಡ ಹಾಗೂ ಸಹೋದ್ಯೋಗಿಗಳು ತಮ್ಮ ಮನೆಯಿಂದ ತಂದ ಊಟದ ಡಬ್ಬಿಯಿಂದ ಇಂದು ಬಿದಿ ನಾಯಿ ಮರಿಗಳಿಗೆ ಊಟ ಬಡಿಸಿ ಮಾನವೀಯತೆ ಮೆರೆದರು. ಈ ಕೋವಿಡ್-19 ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೂ ಕೂಡ ಈ ರೀತಿಯ ಮಾನವೀಯತೆಗೆ ಸಾಕ್ಷಿಯಾಗಿದೆ. ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
ಶಾಸಕರ ಕುಟುಂಬದಿಂದ ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಕೋವಿಡ್-19 ಹಿನ್ನಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ನಾಲತ್ತವಾಡ ಪಟ್ಟಣದಲ್ಲಿ ಬಡ ಜನತೆಗೆ ಅಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ತೊಡಗಿರುವ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಮಹಾದೇವಿ ಎ ಪಾಟೀಲ ನಡಹಳ್ಳಿ, ಹಾಗೂ ಹಿರಿಯ ಧುರಿಣರಾದ ಎಂ ಎಸ್ ಪಾಟೀಲ್,ಪುರಸಭೆ ಸದಸ್ಯನಿ ಸಂಗಮ್ಮ ದೇವರಹಳ್ಳಿ,ಸಹನಾ ಬಡಿಗೇರ,ಶಿಲ್ಪಾ ಸಿದರೆಡ್ಡಿ,ಶಿಲ್ಪಾ ಶರ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಹಗಲಿರುಳು ಶ್ರಮಿಸುತ್ತಿರುವ ಜೀವಗಳಿಗೆ ನೆರವು ನೀಡಿದ – ಶಾಸಕ ಎ ಎಸ್ ಪಾಟೀಲ ನಡಹಳ್ಳಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ತಾಳಿಕೋಟಿಯಲ್ಲಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪರಿಶ್ರಮವಹಿಸುತ್ತಿರುವ ದೇಶವೂ ತಲ್ಲನವಾಗಿರುವ ಸಂದರ್ಭದಲ್ಲಿ ಕೋವಿಡ್-19 ಸಲುವಾಗಿ ಶ್ರಮಿಸುತ್ತಿರುವ ಹೆಮ್ಮೆಯ ತಾಳಿಕೋಟಿ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಪೋಲಿಸ್ ಠಾಣೆಗೆ ಹೋಗಿ ಅಭಿನಂದನೆ ಸಲ್ಲಿಸಿ,ಹಾಗೂ ಪೌರ ಕಾರ್ಮಿಕರಿಗೆ,ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಹಾರ ಧಾನ್ಯಗಳ ಕಿಟ್ ಮತ್ತು N 95 ಮಾಸ್ಕ ವಿತರಿಸಿ ಮಾನವೀಯತೆ ಮೆರೆದ ಮುದ್ದೇಬಿಹಾಳ ವಿಧಾನ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲContinue reading “ಹಗಲಿರುಳು ಶ್ರಮಿಸುತ್ತಿರುವ ಜೀವಗಳಿಗೆ ನೆರವು ನೀಡಿದ – ಶಾಸಕ ಎ ಎಸ್ ಪಾಟೀಲ ನಡಹಳ್ಳಿ”
ತುತ್ತು ಅನ್ನ ಕ್ಕೂ ಪರದಾಡಿದ ಜೀವಕ್ಕೆ ನ್ಯಾಯ ನೀಡಿದ ನ್ಯಾಯಾಧೀಶರು
ಕರೋನಾ ಸಂಕಷ್ಟ ಮತ್ತು ಲಾಕ್ಡೌನ್ ಜನರಿಗೆ ಅಸಹನೀಯ ನೋವನ್ನು ನೀಡಿರಬಹುದು, ಆದರೆ ಇದು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಪ್ರತಿಯೊಬ್ಬರೂ ತಮ್ಮ ಮನುಷ್ಯತ್ವವನ್ನ ಈ ಸಂದರ್ಭದಲ್ಲಿ ತೋರಿಸುತ್ತಿದ್ದು ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಹಸಿದವರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದರೆ ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಳಿದವರ ಪ್ರಾಣವನ್ನು ರಕ್ಷಿಸುತ್ತಿದ್ದಾರೆ. ಬಿಹಾರದ ನಳಂದದಲ್ಲಿ ನ್ಯಾಯಾಧೀಶರೊಬ್ಬರೂ ಕೂಡ ಇದೇ ರೀತಿಯ ಕಾರ್ಯವೊಂದನ್ನ ಮಾಡಿದ್ದಾರೆ. ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್ ನಲ್ಲಿ ಅಪ್ರಾಪ್ತContinue reading “ತುತ್ತು ಅನ್ನ ಕ್ಕೂ ಪರದಾಡಿದ ಜೀವಕ್ಕೆ ನ್ಯಾಯ ನೀಡಿದ ನ್ಯಾಯಾಧೀಶರು”
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್ ತಯಾರಿಸಿ ವಿತರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಕೊಣ್ಣೂರ ಗ್ರಾಮದಲ್ಲಿ ಸುಮಾರು 500 ಮಾಸ್ಕಗಳನ್ನು ಗ್ರಾಮದ ಯುವಕರು ,ಹಿರಿಯರು ಹಾಗೂ ಮಹಿಳೆಯರಿಗೆ ಕೋವಿಡ್ -19 ವೈರಸ್ ಬಗ್ಗೆ ಜನಜಾಗೃತಿ ಮೂಡಿಸಿ ಸಾಮಾಜಿಕ ಅಂತರದ ಬಗ್ಗೆ ಹಾಗೂ ಮಾಸ್ಕ್ ಯಾಕೆ ಧರಿಸಬೇಕು ಅನ್ನುವ ಮಾಹಿತಿ ನೀಡಿ ವಿತರಿಸಿದರು. ಈ ಸಂದರ್ಭದಲ್ಲಿ ,ಸಿದ್ದನಗೌಡ ಗೌಡರ್, ಸಂಗಗೌಡ ಕೌಡಿಮಟ್ಟಿ,ಶಿವನಗೌಡ ತಾಳಿಕೋಟಿ, ಚಿದಾನಂದ ಯಾಳವಾರ, ಬಸಪ್ಪ ಗಣಿ, ರಾಮಣ್ಣ ಗಣಿ, ಶಿವಶರಣ ಹಡಪದ, ಹಾಗೂ ವಾಲ್ಮೀಕಿ ಸಂಘದ ಯುವಕರು ಬಾಗವಹಿಸಿದ್ದರು. ಅಲ್ಲದೆ ಹೊಲಿಗೆ ಕೆಲಸContinue reading “ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮಾಸ್ಕ್ ತಯಾರಿಸಿ ವಿತರಣೆ”
ಬಡಜನರಿಗಾಗಿ ದಾಸೋಹಕ್ಕೆ ಚಾಲನೆ ನೀಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕುಟುಂಬ
ವಿಜಯಪುರ:ಕೊರೋನ ಸೋಂಕು ತಗುಲಿ ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ಹಸಿವಿನಿಂದ ಅನೇಕರು ಚಟಪಡಿಸುತ್ತಿದ್ದಾರೆ,ಇನ್ನೂ ಎಷ್ಟೋ ಜನರು ಅನೇಕ ಬಡ ಜನರಿಗೆ ಆಹಾರ ಧಾನ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ.ಹೀಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ1 ಕೋಟಿ ವೆಚ್ಚದಷ್ಟು ಆಹಾರ ದಾನ್ಯ,ಸೇರಿದಂತೆ ಊಟಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಂದು ಸ್ವತಃ ಮುಂದೆ ನಿಂತು ತಾವು ಅದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕಿಟ್ ತಯಾರಿಸಿ ಮುದ್ದೇಬಿಹಾಳದ ಸ್ಲಂ ನಿವಾಸಿಗಳಿಗೆ ಕುಟುಂಬ ಸಮೇತವಾಗಿ ನಿಜವಾದ ಬಡವರಿಗೆ ತಲುಪಿಸುವಲ್ಲಿContinue reading “ಬಡಜನರಿಗಾಗಿ ದಾಸೋಹಕ್ಕೆ ಚಾಲನೆ ನೀಡಿದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಕುಟುಂಬ”
ಸೋಂಕಿತರ ಸಂಖ್ಯೆ21 ರಿಂದ 32 ಕ್ಕೆ ದಾಟಿದ ವಿಜಯಪುರ ಜಿಲ್ಲೆ
ವಿಜಯಪುರ: ವಿಜಯಪುರದಲ್ಲಿ 7 ವರ್ಷದ ಬಾಲಕಿ ಮತ್ತು 14 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.ಅದರಂತೆ ವಿಜಯಪುರ ದಲ್ಲಿ ಇಂದು 11 ಜನರಿಗೆ ಪಾಸಿಟಿವ್ ಬಂದಿದೆ. ಹಳೆಯ ಸೋಂಕಿತರ ಸಂಪರ್ಕದಿಂದಲೇ ಬಂದಿರುತ್ತದೆ, ಒಟ್ಟಾರೆಯಾಗಿ ವಿಜಯಪುರ ದಲ್ಲಿ ಸೋಂಕಿತರ ಸಂಖ್ಯೆ 32 ಕ್ಕೆ ಏರಿದೆ ಎಂದು ಹೇಳಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟೂ 408 ಜನರಿಗೆ ಸೋಂಕು ದೃಢಪಟ್ಟಿದ್ದು, 16 ಜನರು ಸಾವಿಗೀಡಾಗಿದ್ದಾರೆ. ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಳಿಗಾಗಿ ಸಂಪರ್ಕಿಸಿ-8792900064