ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಸಮ್ಮುಖದಲ್ಲಿ ಗ್ರಾಮ ಸಭೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಮದರಿ ಪುನರ್ವಸತಿ ಕೆಂದ್ರವು ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಇದ್ದುದರಿಂದ ಮೂಲಭೂತ ಸೌಕರ್ಯ ಗಳಿಂದ ವಂಚಿತವಾಗಿರುತ್ತದೆ ಎಂದು ಮಾತಾಗಿದೆ.

ಕಾರಣ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಇಂದು ಮದರಿ ಗ್ರಾಮಕ್ಕೆ ಭೇಟಿ ನೀಡಿದರು. ಪ್ರಸ್ತುತ ಮಂಜೂರಾತಿ ದೊರೆತಿರುವ ಅನುದಾನವನ್ನು ಸದ್ಬಳಕೆ ಮಾಡುವ ದೃಷ್ಟಿಯಿಂದ ಗ್ರಾಮಸಭೆ ನಡೆಸಿ, ಅಧಿಕಾರಿಗಳೊಂದಿಗೆ ಮೂಲಭೂತಸೌಕರ್ಯ ಕುರಿತಂತೆ ಸಾರ್ವಜನಿಕರ ಅಭಿಪ್ರಾಯ ಆಲಿಸುತ್ತಿರುವುದು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಚಾಲಕನ ನಿಯಂತ್ರಣ ತಪ್ಪಿ ರೈಲು ಸೇತುವೆಯಿಂದ ಬಿದ್ದ ಲಾರಿ ಸ್ಥಳದಲ್ಲೆ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಸಾವು

ಬೆಳಗಾವಿ ಜಿಲ್ಲೆಯ ಸುದ್ದಿ

ಕಾಗವಾಡ ವರದಿ

ಚಾಲಕನ ನಿಯಂತ್ರಣ ತಪ್ಪಿ ರೈಲ್ವೆ ಸೇತುವೆಯ ಮೇಲಿಂದ ಲಾರಿ ಉರುಳಿ ಬಿದ್ದು ಚಾಲಕ ಹಾಗೂ ಕ್ಲೀನರ್ ಮೃತಪಟ್ಟ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮದ ಮೆಹಬೂಬ್ ಬಾದಷಹಾ ಮುಲ್ಲಾ (28) ಹಾಗೂ ಗುಳೇದಗುಡ್ಡ ತಾಲೂಕಿನ ಹಳ್ಳದೂರು ಗ್ರಾಮದ ಮುಸ್ತಫಾ ಜನಾಫ್ ಕುರಿ (20) ಮೃತ ದುರ್ದೈವಿಗಳು.

14 ಚಕ್ರದ ಬೃಹತ್ ಗಾತ್ರದ ಲಾರಿಯು ರಾಜಸ್ಥಾನದಿಂದ ಸಣ್ಣಕಲ್ಲು ತುಂಬಿಕೊಂಡು ಬಾಗಲಕೋಟೆ ಜಿಲ್ಲೆಯ ಲೋಕಾಪುರಕ್ಕೆ ತೆರಳುತ್ತಿರುವಾಗ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ಪೋಲಿಸರು ಅನುಮಾನ ವ್ಯಕ್ತಪಡಿಸಿದ್ದಾರೆ.ಉಗಾರ ರೈಲ್ವೆ ಸೇತುವೆ ಸುಮಾರು 60 ಅಡಿ ಎತ್ತರವಿದ್ದು,ಈ ಸೇತುವೆ ಮೇಲಿಂದ ಲಾರಿ ಬಿದ್ದಿರುವುದರಿಂದ ಚಾಲಕ ಹಾಗೂ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಲಾರಿ ರೈಲ್ವೆ ಹಳಿಯ ಬಿದ್ದಿರುವದರಿಂದ ಕೆಲಕಾಲ ರೈಲು ಸಂಚಾರಕ್ಕೆ ತೊಂದರೆಯಾಗಿದೆ.ಈ ಕುರಿತು ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ವರದಿ:ಸಚೀನ ಕಾಂಬಳೆ

ಹಳ್ಳಿ ಹುಡುಗನ ಬೆಳ್ಳಿ ಸಾಧನೆ-ರಾಷ್ಟಮಟ್ಟದ ಲಾಂಗಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಂದೀಪ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸುದ್ದಿ:

ಸಪ್ತಸಾಗರ-

ಸತತ ಪ್ರಯತ್ನವೋಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಂದೀಪ ಕುಂಬಾರ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲವುದರ ಮೂಲಕ ಸಾಧಿಸಿ ತೋರಿಸಿದ್ದಾನೆ.

ರೈತನ ಮಗನೊಬ್ಬ ರಾಷ್ಟ್ರಮಟ್ಟದ ಲಾಂಗ್ ಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದು, ಮುಂದಿನ ತಿಂಗಳು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಸಂದೀಪ ಕುಂಬಾರ ಇತ್ತೀಚಿಗೆ ತಮಿಳುನಾಡು ತಿರುಚಿನಾಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ. ಮುಂದಿನ ತಿಂಗಳು 10 ರಂದು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿ ಕುಟುಂಬ ಹಾಗೂ ಗ್ರಾಮಕ್ಕೆ ಸಂದ ಜಯ. ಇನ್ನು ಮುಂದೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುತ್ತಾನೆ ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಾನೆ ಎಂದು ಆತನ ತಂದೆ ರಾಮು ಕುಂಬಾರ ಹೇಳುತ್ತಾರೆ.

ಸಂದೀಪ್ ಅವರಿಗೆ ದೈಹಿಕ ಶಿಕ್ಷಕ ಜ್ಞಾನೇಶ್ವರ್ ಚೌಗಲಾ ಅವರು ಮಾರ್ಗದರ್ಶನ ಮಾಡಿದ್ದಾರೆ. ಯುವಕನ ಸಾಧನೆಗೆ ಸಪ್ತಸಾಗರ ಗ್ರಾಮಸ್ಥರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಏನೇ ಆಗಲಿ ಹಳ್ಳಿ ಹುಡುಗನ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುವದು ನಮ್ಮೆಲ್ಲರ ಆಶಯ.

ವರದಿ:ಸಚೀನ ಕಾಂಬಳೆ

ಹಳ್ಳಿ ಹುಡುಗನ ಬೆಳ್ಳಿ ಸಾಧನೆ-ರಾಷ್ಟಮಟ್ಟದ ಲಾಂಗಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಸಂದೀಪ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಪ್ತಸಾಗರ ಸುದ್ದಿ:

ಸತತ ಪ್ರಯತ್ನವೋಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಸಂದೀಪ ಕುಂಬಾರ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲವುದರ ಮೂಲಕ ಸಾಧಿಸಿ ತೋರಿಸಿದ್ದಾನೆ.

ರೈತನ ಮಗನೊಬ್ಬ ರಾಷ್ಟ್ರಮಟ್ಟದ ಲಾಂಗ್ ಜಂಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿದ್ದು, ಮುಂದಿನ ತಿಂಗಳು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಸಂದೀಪ ಕುಂಬಾರ ಇತ್ತೀಚಿಗೆ ತಮಿಳುನಾಡು ತಿರುಚಿನಾಪಳ್ಳಿಯಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾರೆ. ಮುಂದಿನ ತಿಂಗಳು 10 ರಂದು ನೇಪಾಳದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿ ಕುಟುಂಬ ಹಾಗೂ ಗ್ರಾಮಕ್ಕೆ ಸಂದ ಜಯ. ಇನ್ನು ಮುಂದೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಮಟ್ಟದಲ್ಲೂ ಉತ್ತಮ ಸಾಧನೆ ಮಾಡುತ್ತಾನೆ ದೇಶದ ಗೌರವವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುತ್ತಾನೆ ಎಂದು ಆತನ ತಂದೆ ರಾಮು ಕುಂಬಾರ ಹೇಳುತ್ತಾರೆ.

ಸಂದೀಪ್ ಅವರಿಗೆ ದೈಹಿಕ ಶಿಕ್ಷಕ ಜ್ಞಾನೇಶ್ವರ್ ಚೌಗಲಾ ಅವರು ಮಾರ್ಗದರ್ಶನ ಮಾಡಿದ್ದಾರೆ. ಯುವಕನ ಸಾಧನೆಗೆ ಸಪ್ತಸಾಗರ ಗ್ರಾಮಸ್ಥರು, ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.

ಏನೇ ಆಗಲಿ ಹಳ್ಳಿ ಹುಡುಗನ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುವದು ನಮ್ಮೆಲ್ಲರ ಆಶಯ.

ವರದಿ:ಸಚೀನ ಕಾಂಬಳೆ

ಕೊಲೆ ಮಾಡಿದ ವ್ಯಕ್ತಿಗಳನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ ಪೋಲಿಸ್ ಇಲಾಖೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಗುರಪ್ಪ ಕರಕಪ್ಪ ಜಗಲಿ (30) ಎಂಬಾತನ ಕೊಲೆ ಆರೋಪದ ಮೇಲೆ ಅದೇ ಗ್ರಾಮದ ರಹೆಮಾನಸಾಬ ಬುರಾನಸಾಬ ಗುರಿಕಾರ (38), ಶರಣಪ್ಪ ಮಲ್ಲಪ್ಪ ಜಗಲಿ (38), ಬೀರಪ್ಪ ಬಸಪ್ಪ ಮುರಾಳ (38) ಇವರನ್ನು ಮುದ್ದೇಬಿಹಾಳ ಪೊಲೀಸರು ಬಂಧಿಸಿ ಸೋಮವಾರ ಜೈಲಿಗೆ ಕಳಿಸಿದ್ದಾರೆ.

ಕೊಲೆಗೆ ಅನೈತಿಕ ಸಂಬಂಧ ಕಾರಣವಾಗಿದೆ. ಗುರಪ್ಪನನ್ನು ಹಳ್ಳೂರ ಗ್ರಾಮವ್ಯಾಪ್ತಿಯ ಹೊಲವೊಂದರ ಬಳಿ ಕರೆದೊಯ್ದು ಮದ್ಯಪಾನ ಮಾಡಿಸಿ ಕೊಲೆ ಮಾಡಿ ಶವವನ್ನು ಸೇತುವೆ ಕೆಳಭಾಗ ಮುಚ್ಚಿಟ್ಟಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣ ಬೇಧಿಸಲು ಎಸ್ಪಿ ಪ್ರಕಾಶ ನಿಕ್ಕಂ, ಹೆಚ್ಚುವರಿ ಎಸ್ಪಿ ಡಾ| ರಾಮ ಅರಸಿದ್ದಿ, ಬಸವನ ಬಾಗೇವಾಡಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಈ ಶಾಂತವೀರ ಅವರ ಮಾರ್ಗದರ್ಶನದಲ್ಲಿ ಸಿಪಿಐ ಆನಂದ ವಾಗಮೋಡೆ ನೇತೃತ್ವದ ತಂಡವೊಂದನ್ನು ರಚಿಸಲಾಗಿತ್ತು. ತಂಡದಲ್ಲಿದ್ದ ಪಿಎಸೈ ಎಂ.ಡಿ.ಮಡ್ಡಿ, ಸಿಬ್ಬಂದಿಗಳಾದ ಆರ್.ಎಸ್.ಪಾಟೀಲ, ಡಿ.ಬಿ.ಲಮಾಣಿ, ಮಹೇಶ ಹೂಗಾರ, ಎಸ್.ಪಿ.ಜಾಧವ, ಎಸ್.ಜಿ.ಬನ್ನೆಟ್ಟಿ, ಎಸ್.ವಿ.ಬಿರಾದಾರ, ಸಂಗಮೇಶ ಚಲವಾದಿ ಇವರನ್ನು ಎಸ್ಪಿ ಪ್ರಕಾಶ ನಿಕ್ಕಂ ಶ್ಲಾಘಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಘಟನೆಯ ವಿವರ:

ಜ.14ರ ರಾತ್ರಿ ಮುದ್ದೇಬಿಹಾಳ ತಾಲೂಕು ಮಡಿಕೇಶ್ವರ ಕ್ರಾಸ್ ಬಳಿ ಸೇತುವೆ ಪುರುಷನ ಶವ ದೊರಕಿತ್ತು. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಶವದ ಗುರ್ತು ಪತ್ತೇ ಆಗಿರಲಿಲ್ಲ. ಜ.15 ರಂದು ಹೊಕ್ರಾಣಿ ಗ್ರಾಮದ ಕರಕಪ್ಪ ಜಗಲಿ ಎನ್ನುವವರು ಆ ಶವವನ್ನು ಗುರ್ತಿಸಿ ಅದು ತನ್ನ ಮಗ ಗುರಪ್ಪನದ್ದು ಎಂದು ಹೇಳಿಕೆ ನೀಡಿದ್ದರು. ಆತನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮುದ್ದೇಬಿಹಾಳ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು ಯಾರು ಎನ್ನುವುದು ಗೊತ್ತಿಲ್ಲದ ಕಾರಣ ಎಸ್ಪಿ ಅವರು ತಂಡ ರಚಿಸಿದ್ದರು. ಪ್ರಕರಣ ದಾಖಲಾದ 4-5 ದಿನಗಳಲ್ಲೇ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ.

ವರದಿ:ಸಾಗರ ಉಕ್ಕಲಿ

ದೇವರಹಳ್ಳಿ ತಪಸಿರಾಯಸ್ವಾಮಿ ಜಾತ್ರೆ

ದೇವರಹಳ್ಳಿ ತಪಸಿರಾಯಸ್ವಾಮಿಯ ಜಾತ್ರೆ ಮಂಡ್ಯ ಜಿಲ್ಲೆಯ

ನಾಗಮಂಗಲ ತಾಲ್ಲೂಕಿನ ದೇವಲಾ ಪುರ ಹೋಬಳಿಗೆ ಸೇರಿರುವ ದೇವರಹಳ್ಳಿ ಗ್ರಾಮದಲ್ಲಿರುವ”ಶ್ರೀತಪಾಸಿರಾಯಸ್ವಾಮಿಯ ಜಾತ್ರೆಯೂ ಅದ್ದುರಿಯಾಗಿ ನೆಡೆಯಿತು .

ನಾಗಮಂಗಲ ತಾಲ್ಲೂಕಿನಲ್ಲಿರುವ ವಿಜಯನಗರಕಾಲದ ಇತಿಹಾಸ ತಿಳಿಸುವ ಈ ದೇವಲಾಯಗಳಲ್ಲಿ ಇದು ಸಹ ಒಂದಾಗಿದ್ದು ಈ ದೇವಲಾಯದಲ್ಲಿನ ವಿಶೇಷತೆಯಉಂಟು .

ದೇವಲಾಯದಲ್ಲಿ 232ಕಂಭಗಳು ಇದ್ದು ದೊಡ್ಡದೇವಲಾಯ ಇದಾಗಿದ್ದು ಬಹಳ ಸುಂದರವಾದಮೂರ್ತಿಯಿದ್ದು ದೇವಲಾಪುರ ಹೋಬಳಿಯಲ್ಲೇಡೆಭಕ್ತರಿದ್ದು ಹೊರ ಜಿಲ್ಲೆ ತಾಲ್ಲೂಕು ಈ ದೇವರ ಭಕ್ತರು ಆಗಮಿಸುತ್ತಾರೆ. ಜನವರಿಸಂಕ್ರಾಂತಿಯ ಹಬ್ಬದ ನಂತರ ಜಾತ್ರೆ ಆರಂಭವಾಗುತ್ತದೆ .

ದೇವಲಾಯದಲ್ಲಿ ಒಂದು ಕಂಭಮಾತ್ರ ಹಬ್ಬ ದ ವರೆಗೆ ಸವೆಯುತ್ತದೆ ಈ ಹಬ್ಬದ ವೇಳೆಗೆ ಕಂಭವು ಸವೆಯುವದು ಕಡಿಮೆಯಾಗುತ್ತದೆ. ಈ ಕಂಭವು ಇಲ್ಲಿನ ದೇವಲಾಯದ ವಿಶೇಷವಾಗಿದೆ .

ಜಾತ್ರೆಯೂ ಪತ್ರೆ ಉತ್ಸವ ದಿಂದ ಆರಂಭಗೊಡು 4ದಿನಗಳ ವರೆಗೆ ಜಾತ್ರೆ ನೆಡೆಯಿತು

ಜನತೆಯ ಆಗ್ರಹ :ಈ ದೇವಲಾ ಯಕ್ಕೆ ಹೊರಗಡೆ ಬಂದಯಾತ್ರಿಕರಿಗೆ ತಂಗುವ ಪ್ರವಾಸಿಮಂದಿರ ಹಾಗೂ ಪ್ರವಾಸಿ ಜಾಗ ವನ್ನಾಗಿ ಮಾಡಬೇಕೆಂಬುದು ಆಗ್ರಹವಾಗಿ ದೆ.

ವರದಿ: ಡಿ ಆರ್.ಜಗದೀಶ ನಾಗಮಂಗಲ

3rd ಕ್ಲಾಸ್ ಚಿತ್ರ ತಂಡದಿಂದ ಗ್ರಾಮ ದತ್ತು ಪಡೆದು ಗ್ರಾಮ ವಾಸ್ತವ್ಯ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊಟ್ಟ ಮೊದಲನೆಯ ಬಾರಿಗೆ 3rd ಕ್ಲಾಸ್ ಚಿತ್ರ ತಂಡದಿಂದ ಗ್ರಾಮವನ್ನು ದತ್ತು ಪಡೆದು ಗ್ರಾಮ ವಾಸ್ತವ್ಯ.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕರಳುಕೊಪ್ಪ ಗ್ರಾಮವನ್ನು ದತ್ತು ಪಡೆದ 3rd ಕ್ಲಾಸ್ ಚಿತ್ರದ ನಾಯಕ ನಟ- ಜಗದೀಶ್ ನಾಯಕ ನಟಿ- ರೂಪಿಕಾ,ನಂದನಕುಮಾರ ಒಳಗೊಂಡ ಚಿತ್ರದ ತಂಡ.

ಅದೆ ಗ್ರಾಮದ ಶಿಥಿಲಾವಸ್ಥೆಗೊಂಡ ಸರ್ಕಾರಿ ಶಾಲೆಯ ಪುನರ್ ಕಟ್ಟಡ ನಿರ್ಮಾಣಕ್ಕೆ ಈ ಚಿತ್ರ ತಂಡ ಮುಂದಾಗಿದ್ದು ಅದಕ್ಕಾಗಿ ಶ್ರೀಗಳು, ಬಾಗಲಕೋಟ ಜಿಲ್ಲಾ ವರಿಷ್ಠಾಧಿಕಾರಿಗಳು , ಬಾಗಲಕೋಟ ಎಸಿ, ತಾಲ್ಲೂಕು ದಂಡಾದಿಕಾರಿಗಳು, ಹಿರಿಯರು ಗ್ರಾಮದ ಗಣ್ಯರ ಸಮ್ಮುಖದಲ್ಲಿ ದಿನಾಂಕ 20-1-2020 ರಂದು ಸರ್ಕಾರಿ ಶಾಲೆಯ ಭೋಮಿ ಪೂಜೆ ಹಾಗೂ ಕಟ್ಟದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ಚಿತ್ರ ತಂಡದಿಂದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವರದಿ:ಸಾಗರ ಉಕ್ಕಲಿ

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕುರಿತು ಪತ್ರಿಕಾ ಪ್ರಕಟಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:

ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸಮಾಜಬಾಂಧವರು ಮುದ್ದೇಬಿಹಾಳ ತಾಲೂಕ ವತಿಯಿಂದ ಇದೇ ತಿಂಗಳು ದಿನಾಂಕ 21 1 2020 ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಗುವುದು.

ಕಾರಣ ಅಂದಿನ ದಿನ ತಾಲೂಕಿನ ಎಲ್ಲಾ ಸಮಾಜ ಬಾಂಧವರು ಬೆಳಗ್ಗೆ 9 ಗಂಟೆಗೆ ಮುದ್ದೇಬಿಹಾಳದ ತಂಗಡಿಗಿ ರಸ್ತೆಯಲ್ಲಿರುವ ಅಂಬಿಗರ ಚೌಡಯ್ಯ ವೃತ್ತಕ್ಕೆ ಆಗಮಿಸಬೇಕು ಅಲ್ಲಿಂದ ಮೆರವಣಿಗೆ ಹೊರಟು ತಾಲೂಕು ಕಚೇರಿಯಲ್ಲಿ ಜಯಂತಿ ಆಚರಣೆ ಮಾಡಿ ಮಾರುತಿ ನಗರದಲ್ಲಿರುವ ಗಂಗಾ ಪರಮೇಶ್ವರಿ ದೇವಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಗುವುದು ಕಾರಣ ಸುಲೋಚನಾ ಎಲ್ಲ ಅಂಬಿಗರ ಚೌಡಯ್ಯ ಸಮಾಜ ಬಾಂಧವರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮುದ್ದೇಬಿಹಾಳ ಸಮಾಜ ಬಾಂಧವರಿಂದ ವಿನಂತಿಸಿಕೊಳ್ಳುತ್ತೇವೆ.

ವರದಿ:ಸಾಗರ ಉಕ್ಕಲಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಮಾಧ್ಯಮ ಮತ್ತು ಸಂವಾಹನ ವಿಭಾಗದ ವಿಶ್ಲೇಷಕರಾಗಿ ನೇಮಕ.

ವಿಜಯಪುರದ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಶಿವಕಾಂತಮ್ಮ ನಾಯಕ್ (ಕಾಂತಾ ನಾಯ್ಕ್ ) ಅವರನ್ನು ಮಾಧ್ಯಮ ಮತ್ತು ಸಂವಾಹನ ವಿಭಾಗದ ಅಧ್ಯಕ್ಷರಾದ ವಿ ಎಸ್ ಉಗ್ರಪ್ಪ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷರ ಪೋನ್ ಇನ್ ಕಾರ್ಯಕ್ರಮ ಇಂದು

ಜಿ.ಪಂ.ಅಧ್ಯಕ್ಷರ ಪೋನ್ ಇನ್ ಕಾರ್ಯಕ್ರಮ ಪ್ರತಿಒಬ್ಬರು ಪೋನ್ ಮಾಡಿ ಅಧ್ಯಕ್ಷರ ಜೊತೆ ನೇರ ವಾಗಿ ಮಾತನಾಡಿ.

ಬೆಳಗಾವಿ ಜಿಲ್ಲೆಯಲ್ಲಿ ಸರಕಾರಿ ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಸಾರ್ವಜನಿಕರಿಂದ ನೇರವಾಗಿ ಪೋನ್ ಇನ್ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಶ್ರೀಮತಿ ಆಶಾ ಪ್ರಶಾಂತ್ ರಾವ್ ಐಹೊಳೆ ಅವರು ಶುಕ್ರವಾರ ದಿನಾಂಕ 17-01-2020 ರಂದು ಮುಂಜಾನೆ 11:00 ಗಂಟೆಯಿಂದ ಮಧ್ಯಾಹ್ನ 2:00 ಘಂಟೆ ಯವರಿಗೆ ಭಾಗವಹಿಸಲಿದ್ದಾರೆ ಸಾರ್ವಜನಿಕರು ನೇರವಾಗಿ ಪೋನ್ ಮುಖಾಂತರ ಅಧ್ಯಕ್ಷೆ ಜೊತೆ ಮಾತನಾಡಿ ಹಳ್ಳಿ ಮತ್ತು ಪಟ್ಟಣದಲ್ಲಿ ಸರ್ಕಾರ ದಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ದೂರಗಳಿದ್ದರೆ ನೇರವಾಗಿ ಮಾತನಾಡಿ ಮಾಹಿತಿ ಸಲ್ಲಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಧ್ಯಕ್ಷರ ಮೊಬೈಲ್ ನಂ .9663397777. ಆಪೀಸ್ ನಂ.08312407299

ರಾಯಲ್ ಟಿವಿ ನ್ಯೂಸ್ ಬೆಳಗಾವಿ

Design a site like this with WordPress.com
Get started