ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ವತಿಯಿಂದ ಉಚಿತ ಡಸ್ಟ್ ಬಿನ್ ವಿತರಣೆ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡ ಶ್ರದ್ದಾ ಕಾರ್ಯಕ್ರಮದಲ್ಲಿ ಇಂದು ವಿಧ್ಯಾನಗರದಲ್ಲಿ ಉಚಿತವಾಗಿ ಸಂಸ್ಥೆಯ ವತಿಯಿಂದ ಡಸ್ಟಬಿನ್ ವಿತರಣೆ ಮಾಡಿದರು.

ನಂತರ ಅನೇಕರು ಈ ಕಾರ್ಯಕ್ರಮದಲ್ಲಿ ಸ್ವಚ್ಚತೆಯ ಕುರಿತು ಮಾತನಾಡಿದರು. ಸಂಸ್ಥೆಯ ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಕವಿತಾ ಕೆ.ಅವರು ಸ್ವಚ್ಚತಾ ಕುರಿತು ಹಮ್ಮಿಕೊಳ್ಳಬಹುದಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಮಂಜುಳಾ,ಗೀತಾ,ಶಿರವಾಳ, ಕೆಸರಟ್ಟಿ,ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಆದಿನಾಥ, ಹಾಗೂ ಸೇವಾ ಪ್ರತಿನಿಧಿ ಇದ್ದರು.ಕಾರ್ಯಕ್ರಮದಲ್ಲಿ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಸೇವಾ ಪ್ರತಿನಿಧಿ ವಿಜಯಲಕ್ಷ್ಮಿ ಮೊಟಗಿ ಮಾಡಿದರು.

ರಾಯಲ್ ಟಿವಿ ನ್ಯೂಸ್ ಮುದ್ದೇಬಿಹಾಳ

ಮಾನ್ಯ ಮುಖ್ಯಮಂತ್ರಿಗಳೇ ಯಾರಿಗೂ ಅನ್ವಯಿಸದ ಮಾನದಂಡಗಳು ಕುಮಟಳ್ಳಿ ಯವರಿಗೆ ಏಕೆ..?

ವಿಜಯಪುರ ಜಿಲ್ಲೆಯ ಸುದ್ದಿ:

ಸನ್ಮಾನ್ಯ ಯಡಿಯೂರಪ್ಪನವರೆ ನೀವು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕಾದರೆ ಕುಮಟಳ್ಳಿ ಅವರ ತ್ಯಾಗವೂ ಇದೆ ಎನ್ನುವುದನ್ನು ಮರೆಯಬೇಡಿ…? ಈ ಹಿಂದೆ ಉಪಚುನಾವಣೆಯಲ್ಲಿ ತಾವೇ ಹೇಳಿದಂತೆ ಗೆದ್ದ ಎಲ್ಲಾ ಶಾಸಕರಿಗೂ ನಾನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದೀರಿ. ಆದರೆ ಕುಮಟಳ್ಳಿ ಅವರಿಗೆ ಮಾತ್ರ ಬಿಟ್ಟು ಬೇರೆ ಎಲ್ಲ ಶಾಸಕರಿಗೂ ಇಂದು ಮಂತ್ರಿ ಮಾಡಿದ್ದೀರಾ ಅದಕ್ಕೆ ಕಾರಣವೇನು.?

ನಮ್ಮ ಸಮಾಜದ ಶಾಸಕರು ಮಾಡಿದ ತಪ್ಪೇನು..? ವಿವೇಚನೆಯಿಲ್ಲದೆ ತಮ್ಮ ಮೇಲಿನ ಅಂದಾಭಿಮಾನದಿಂದ ಲಿಂಗಾಯತ ಒಳಪಂಗಡಗಳು ಎಲ್ಲವೂ ಒಂದೇ ಎಂದು ಭಾವಿಸಿ ತಮ್ಮ ನಾಯಕತ್ವವನ್ನು ಪ್ರಶ್ನಾತೀತವಾಗಿ ಬೆಂಬಲಿಸಿದ್ದು ತಪ್ಪಾಯಿತೆ…? ನಮ್ಮ ಸಮಾಜದಲ್ಲಿ ಮುಖ್ಯಮಂತ್ರಿಗಳಾಗುವ ಯೋಗ್ಯತೆಯುಳ್ಳವರು ಅನೇಕರಿದ್ದಾರೆ. ಆದರೆ ತಾವು ತುಂಬಾ ಹಿರಿಯರು ಹಾಗೂ ಅನುಭವವುಳ್ಳವರು ಎಂದು ಭಾವಿಸಿ ತಮಗೆ ಷರತ್ತು ರಹಿತ ಬೆಂಬಲ ಸೂಚಿಸಿದ್ದು ತಪ್ಪಾಯಿತೇ…? ಬಹುದಿನಗಳಿಂದ ನಮ್ಮ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯ ವಾಗುತ್ತಿದೆ ಎಂಬುದು ನಮ್ಮ ಜನರಿಂದ ಕೇಳಿ ಬರುತ್ತಿತ್ತು ಇಂದು ಅದನ್ನು ತಾವು ಸಾಬೀತು ಮಾಡಿ ತೋರಿಸಿದ್ದೀರಾ ಇದೇ ರೀತಿ ನೀವು ಸ್ವಾಭಿಮಾನಿ ಪಂಚಮಸಾಲಿ ಸಮುದಾಯವನ್ನು ತುಳಿಯಲು ಪ್ರಯತ್ನಪಟ್ಟರೆ ಮುಂದೆ ಬರತಕ್ಕಂತಹ ದಿನಮಾನದಲ್ಲಿ ಬೆಲೆ ತೆರಬೇಕಾಗುತ್ತದೆ.ಎಂದು ಈ ಮೂಲಕ ಬೆಂಬಲಿಗರಾದ ಮಾಜಿ ಯುವ ಘಟಕ ರಾಜ್ಯ ಉಪಾಧ್ಯಕ್ಷರು ಪಂಚಮಸಾಲಿ ಡಾಕ್ಟರ್ ಬಸನಗೌಡ ಪಾಟೀಲ್ ನಾಗರಾಳ ಹುಲಿ, ಡಾಕ್ಟರ್ ಸಿಎಸ್ ಸೋಲಾಪುರ್, ರವಿ ಖಾನಾಪುರ್, ರಾಯನಗೌಡ ಆರ್ ಪಾಟೀಲ್ ಗುಣಕಿ, ಮಲ್ಲನಗೌಡ ಎಸ್ ಬಿರಾದಾರ್ ಕೋರವಾರ, ಶ್ರೀ ಸಂತೋಷ ಬಿರಾದಾರ್, ಕಲ್ಲು ಬಳ್ಳಾರಿ ಮುಂತಾದವರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ತಾನು ಕಲಿತ ಶಾಲೆಯ ದುರಸ್ತಿಗೆ ಮುಂದಾದ ಗ್ರಾಮ ಪಂಚಾಯತ ಸದಸ್ಯ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾನು ಕಲಿತ ತಮ್ಮೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಶಿಕ್ಷಕರ ಜೋತೆಗೆ ಚರ್ಚೆ ಮಾಡಿದ ಗ್ರಾಮ ಪಂಚಾಯತ ಸದಸ್ಯ ಶ್ರೀಶೈಲ ಹೂಗಾರ.

ಬಿಸಿ ಊಟ,ನೀರಿನ ಸಮಸ್ಯೆ ಬಗ್ಗೆ ಕೇಳಲಾಯಿತು, ಶಾಲೆಯ ಎರಡೂ ರೋಮಿನ ಮೇಲ್ಚಾವಣಿಗಳು ಬಿದ್ದು ಹೋಗಿದ್ದು ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ.ಮಳೆಗಾಲದಲ್ಲಿ ನೀರು ಶಾಲೆಯ ರೋಮಿನಲ್ಲಿ ಬಿದ್ದು ನಿಲ್ಲುತ್ತದೆ.ಬೇಸಿಗೆ ಕಾಲದಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ನೀರಿನ ಸಮಸ್ಯೆ ಎನು ಇಲ್ಲಾ ಎಂದು ಹೇಳಿದರು,ಕೊಠಡಿಗಳ ದುರಸ್ತಿ ಬಗ್ಗೆ ಮೆಲಾಧಿಕಾರಿಗಳಿಗೆ ಹಾಗೂ ಮಾನ್ಯ ಶಾಸಕರ ಮತ್ತು ಜಿಲ್ಲಾ ಪಂಚಾಯತ ಉಪಾಧ್ಯಕ್ಷರ ಗಮನಕ್ಕೆ ತಂದು ಆದಷ್ಟು ಬೇಗನೆ ದುರಸ್ತಿ ಮಾಡಲು ಎನೂ ಅನುಕೂಲ ಬೇಕು ಅದನ್ನು ಸಿದ್ದ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದೇವೆ.ನಮ್ಮ ಗ್ರಾಮ ಪಂಚಾಯತಿ ವತಿಯಿಂದ ಎನೂ ಸಹಾಯ ಬೇಕಾಗುತ್ತದೆ ಅದನ್ನು ಮಾಡಿಸಿ ಕೊಡಲಾಗುವುದು ಎಂದು ಹೇಳಿದ್ದು ಇದಕ್ಕೆ ತಾಲ್ಲೂಕು ಪಂಚಾಯತ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಅವರ ಗಮನಕ್ಕೆ ತಂದಿದ್ದೇನೆ ಅವರು ಕೂಡ ಈ ಸಮಸ್ಯೆಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಎಂದು ಶ್ರೀಶೈಲ ಹೂಗಾರ ಗ್ರಾಮ ಪಂಚಾಯತಿ ಸದಸ್ಯ ಸರೂರ ಹೇಳಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಪ್ರೇಮ ಹಾಗೂ ವಿಶ್ವಮಾನವ ಸಂದೇಶ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ನಾಗಮಂಗಲ ಸುದ್ದಿ:

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ‌ ಇತಿಹಾಸವಿದ್ದು, ಸಾವಿರಾರು ಶ್ರೇಷ್ಠ ಕವಿಗಳು ಬಂದು ಹೋಗಿದ್ದಾರೆ. ಆದರೆ ಕನ್ನಡ ಭಾಷೆ ಕಂಡ ಶ್ರೇಷ್ಟ ‌ಪ್ರಕೃತಿ ಕುವೆಂಪು ಎಂದು ಸಾಹಿತಿ‌ ನಾ.ಸು.ನಾಗೇಶ್ ಹೇಳಿದರು.

ನಾಗಮಂಗಲದ ತಾಲ್ಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕುವೆಂಪು ಕನ್ನಡ ಪ್ರೇಮ ಹಾಗೂ ವಿಶ್ವ ಮಾನವ ಸಂದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕುವೆಂಪು ಕನ್ನಡಕ್ಕೆ ಪ್ರಥಮ ಜ್ಞಾನ ಪೀಠ ಪ್ರಶಸ್ತಿಯನ್ನು ತರುವ ಮೂಲಕ ಕನ್ನಡದ ಕೀರ್ತಿಯನ್ನು ದೇಶದಾದ್ಯಂತ ಹೆಚ್ಚಿಸಿದರು. ಪ್ರಕೃತಿ ಕವಿಯಾಗಿ, ರ‌ಸ ಋಷಿ,ಯುಗದ ಕವಿ,ಜಗದ ಕವಿಯಾಗಿ ಕನ್ನಡ ಸಾಹಿತ್ಯವನ್ನು ಆಕಾಶದೆತ್ತರಕ್ಕೆ ಕೊಂಡೊಯ್ದು ಶ್ರೇಷ್ಠ ಕವಿಯಾಗಿದ್ದಾರೆ.ಅವರ ಮೌಲ್ಯಗಳನ್ನು,ಜೀವನದ ಆದರ್ಶ ಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ಮಾಡಿದ ಪ್ರೊ.ಎಸ್. ಮಂಜು ಮಾತನಾಡಿ ಕುವೆಂಪು ಅವರು ಜೀವನದ ಪ್ರಾರಂಭದಲ್ಲಿ ಇಂಗ್ಲಿಷ್ ನಲ್ಲಿ ಕವನಗಳನ್ನು ರಚಿಸಿದರು.ನಂತರ ಸಾಹಿತಿಯೊಬ್ಬರ ಸಲಹೆಯಂತೆ ಮಾತೃಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡುವ ಅಭಿರುಚಿ ಬೆಳೆಸಿಕೊಂಡು ಕನ್ನಡ ಸಾಹಿತ್ಯ ದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದ ಮಹಾನ್ ಕವಿಯಾದರು.ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರ ಗಳಲ್ಲಿಯೂ ಸಾಹಿತ್ಯವನ್ನು ರಚಿಸಿರುವ ಕುವೆಂಪು ವಿಶ್ವ ಮಾನವ ಸಂದೇಶವನ್ನು ನೀಡಿ ವಿಶ್ವ ಮಾನವ ಕವಿಯಾಗುವ ಜೊತೆಗೆ ಕನ್ನಡಿಗರ ವಿಶ್ವ ಮಾನವ ಗುಣವನ್ನು ಜಗತ್ತಿಗೆ ಸಾರಿದರು. ಸಮಾಜದ ಎಲ್ಲಾ ಜಾತಿ ಮತಗಳು ಒಂದೇ,ಎಲ್ಲಾ ದೇವರುಗಳು ಒಂದೇ ಆಗಿದ್ದು ನಮ್ಮಲ್ಲಿ ದ್ವೇಷ ಅಸೂಯೆ ಮನೋಭಾವನೆ ಇರಬಾರದು.ಯುವಜನತೆ ಹಿರಿಯರನ್ನು ಗೌರವಿಸಬೇಕು.ಅಲ್ಲದೇ ಒಳ್ಳೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.ಆಗ ನಿಮ್ಮ‌ ಜೀವನ‌ ಸಾರ್ಥಕವಾಗುತ್ತದೆ ಎಂದರು.

ಉಪನ್ಯಾಸಕ ದಾನೇಗೌಡ,ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಬಸವೇಗೌಡ ಖರಡ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಾರದಮ್ಮ, ಪ್ರೊ.ಪರಮೇಶ್ ,ರವೀಶ್, ಅಧ್ಯಾಪಕರಾದ ರೇವಣ್ಣ, ಸಿದ್ದೇಶ್ವರ, ಶ್ರೀನಿವಾಸ,ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು‌.

ವರದಿ:ಜಗದೀಶ ನಾಗಮಂಗಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಬಿಸಿ ಟ್ರಸ್ಟ್ ನಾಗಮಂಗಲ ವತಿಯಿಂದ

ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ರವರ ಮಾರ್ಗದರ್ಶನಲ್ಲಿ ತಾಜ್ಯ ವಿಲೇವಾರಿ ಬುಟ್ಟಿ ವಿತರಣೆ ಹಾಗೂ ಸೃಜನಶೀಲತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೈ.ಕೆ. ರಾಮು ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆ ಅವರು ಪ್ರಾಸ್ತಾವಿಕ ನುಡಿಯನ್ನು ನುಡಿದರು.

ತಾಲ್ಲೂಕಿನ ವಿವಿಧ ದೇವಾಲಯ,ಮಸೀದಿ,ಚರ್ಚ್ ಗಳಿಗೆ ತಾಜ್ಯ ವಿಲೇವಾರಿ ಬುಟ್ಟಿಯನ್ನು ವಿತರಣೆ ಮಾಡಿದರು.

ಇದೆ ಸಂದರ್ಭದಲ್ಲಿ ಖ್ಯಾತ ಯೋಗ ಶಿಕ್ಷಕ ಬದ್ರಿಕೊಪ್ಪಲು ನಾರಾಯಣ್. ASI ವೈ. ಕೆ ರಾಮುರವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿಯ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆರವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಸಾಕ್ಷರತಾ ಶ್ರೀನಿವಾಸ, ಚನ್ನಯ್ಯ ಭಾಸ್ಕರ್ ಭಟ್, ಕಲೀಮ್ ಉಲ್ಲಾ, ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳ ಅರ್ಚಕರು ಮಸೀದಿಯ ಮುಖ್ಯಸ್ಥರು ಭಾಗವಹಿಸಿದ್ದರು.

ವರದಿ:ಜಗದೀಶ ನಾಗಮಂಗಲ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ತ್ಯಾಜ ವಿಲೇವಾರಿ ಬುಟ್ಟಿ ವಿತರಣೆ,ಸೃಜನಶೀಲತೆ ಕಾರ್ಯಕ್ರಮ

ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಗಾಣಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಬಿಸಿ ಟ್ರಸ್ಟ್ ನಾಗಮಂಗಲ ವತಿಯಿಂದ

ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ರವರ ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆ ರವರ ಮಾರ್ಗದರ್ಶನಲ್ಲಿ ತಾಜ್ಯ ವಿಲೇವಾರಿ ಬುಟ್ಟಿ ವಿತರಣೆ ಹಾಗೂ ಸೃಜನಶೀಲತೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ವೈ.ಕೆ. ರಾಮು ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ದಿ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆ ಅವರು ಪ್ರಾಸ್ತಾವಿಕ ನುಡಿಯನ್ನು ನುಡಿದರು.

ತಾಲ್ಲೂಕಿನ ವಿವಿಧ ದೇವಾಲಯ,ಮಸೀದಿ,ಚರ್ಚ್ ಗಳಿಗೆ ತಾಜ್ಯ ವಿಲೇವಾರಿ ಬುಟ್ಟಿಯನ್ನು ವಿತರಣೆ ಮಾಡಿದರು.

ಇದೆ ಸಂದರ್ಭದಲ್ಲಿ ಖ್ಯಾತ ಯೋಗ ಶಿಕ್ಷಕ ಬದ್ರಿಕೊಪ್ಪಲು ನಾರಾಯಣ್. ASI ವೈ. ಕೆ ರಾಮುರವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿಯ ಯೋಜನಾಧಿಕಾರಿ ಹೇಮಲತಾ ಹೆಗ್ಗಡೆರವರು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಸಾಕ್ಷರತಾ ಶ್ರೀನಿವಾಸ, ಚನ್ನಯ್ಯ ಭಾಸ್ಕರ್ ಭಟ್, ಕಲೀಮ್ ಉಲ್ಲಾ, ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳ ಅರ್ಚಕರು ಮಸೀದಿಯ ಮುಖ್ಯಸ್ಥರು ಭಾಗವಹಿಸಿದ್ದರು.

ವರದಿ:ಜಗದೀಶ ನಾಗಮಂಗಲ

ಶಾಲೆ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಶಿಕ್ಷಕರು.

ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ಶಾಲೆಯ ಮಕ್ಕಳು ಶಾಲೆಯಲ್ಲಿ ಆಳಾಗಿ ದುಡಿಯುತ್ತಿರುವ ಮಕ್ಕಳು ಮಾನ್ಯ ಶಿಕ್ಷಣ ಸಚಿವರೆ ನೀವು ನೋಡಬೇಕಾಗಿದೆ ಈ ಸುದ್ದಿ.

ಅಥಣಿ: ತಾಲೂಕಿನ ಶಾಲಾ ಮಕ್ಕಳನ್ನು ಕೆಲಸಕ್ಕೆ ಹಚ್ಚಿದ ಶಿಕ್ಷಕರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರಾಥಮಿಕ ಸರಕಾರಿ ಶಾಲೆ ಯಲ್ಲಿ ಅ ಮಾನವೀಯ ಘಟನೆ ನಡೆದಿದೆ.

ಮಕ್ಕಳಿಗೆ ಪಾಠಹೇಳಿ ಕೊಡುವ ಸಮಯದಲ್ಲಿ ಕೆಲಸಕ್ಕೆ ಹಚ್ಚಿ ಬಂಡ ತಣವನ್ನು ಮೆರೆದ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯ.

ಸುಮಾರು ದಿನಗಳಿಂದ ಕೋಣೆ ಗಳಲ್ಲಿ ಬಿದ್ದ ರಾಶಿ ರಾಶಿ ಹಂಚುಗಳನ್ನ ತೆಗೆಯಲು ಹೇಳಿ ಬೇಜವಾಬ್ದಾರಿ ತನವನ್ನ ಮೆರೆದಿದ್ದಾರೆ.. ಹಳೆಕಟ್ಟದಿಂದ ಬೆರೆ ಕಡೆ ಸ್ಥಳಾಂತರ ಮಾಡುತ್ತಿರುವ ಪುಟ್ಟ ಪುಟ್ಟ ವಿದ್ಯಾರ್ಥಿಗಳು.

ಇಲ್ಲಿ ಏನಾದರೂ ಹುಳು, ಹಾವು,ಚೇಳು ಕಚಿದ್ರೆ , ಏನು ಗತಿ ಎಂಬುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ನೂರಾರು ಬಡ ವಿದ್ದ್ಯಾರ್ಥಿಗಳು ಪಾಠ ಕಲಿಯಲು ಸರಕಾರಿ ಶಾಲೆಗೆ ಬಂದ್ರೆ ಶಿಕ್ಷಕರು ಇಲ್ಲಿ ಕೆಲಸಕ್ಕೆ ಹಚ್ಚುತ್ತಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ತಾಲೂಕಿನ ಅನೇಕ ಶಾಲೆಗಳಲ್ಲಿ ಕೆಲವು ಶಿಕ್ಷಕರು ಮಕ್ಕಳನ್ನು ಕೆಲಸಕ್ಕೆ ಬಳಿಸಿಕೊಂಡ , ಸರ್ಕಾರದಿಂದ ಶಾಲೆಗಳ ಸುಧಾರಣೆಗೆ ಹಾಗೂ ಕೆಲವು ಕೆಲಸಗಳಿಗೆ ಹಣ ಸಂದಾಯ ಮಾಡುತ್ತದೆ, ಇದನ್ನು ದೋಚಲು ಕೆಲವು ಶಿಕ್ಷಕರು ಈ ರೀತಿ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಆರೋಪ ಮಾಡುತ್ತಿದ್ದಾರೆ, ಸಾರ್ವಜನಿಕರು.

ವರದಿ:ಸಚೀನ ಕಾಂಬಳೆ

ತೊಗರಿ ಕೇಂದ್ರಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಸಿ ಎಸ್ ನಾಡಗೌಡ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ತಾಲ್ಲೂಕಿನ ಹಿರೇಮುರಾಳದಲ್ಲಿ ರೈತರಿಗೆ ತೊಗರಿ ಕೇಂದ್ರವನ್ನು ಮುದ್ದೇಬಿಹಾಳ ಮತ ಕ್ಷೇತ್ರದ ಮಾಜಿ ಸಚಿವ ಸಿ ಎಸ್ ನಾಡಗೌಡ ಅಪ್ಪಾಜೀ ಅವರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿಯ ಬೆಂಗಳೂರಿನ ಸದಸ್ಯರಾದ ಗುರು ಎಮ್ ತಾರನಾಳ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ರಾಯನಗೌಡ ತಾತರೆಡ್ಡಿ,ಕೃಷಿ ಉತ್ಪನ್ನ ಮಾರುಕಟ್ಟೆಯ ಸಿಬ್ಬಂದಿ,ಕಾಂಗ್ರೆಸ್ ಯುವ ಮುಖಂಡರ ಮಹಮ್ಮದ್ ರಫೀಕ ಶಿರೋಳ,ಸದ್ದಾಂ ಕುಂಟೋಜಿ, ಹಾಗೂ ಅನೇಕ ರೈತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಸಾವಯವ ಕೃಷಿಯಿಂದ ಭರ್ಜರಿ ಬೆಳೆ ತೆಗೆದ ರೈತ – ಶಿವಾನಂದ ಕುಂಬಾರ

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ರೆವೂರ ಬಿ ಯಲ್ಲಿ ಕಾವೇರಿ ಸೀಡ್ ಕಂಪನಿ ಲಿಮಿಟೆಡ್ ವತಿಯಿಂದ ಕ್ಷೇತ್ರ ವೀಕ್ಷಣೆ ಕಾರ್ಯಕ್ರಮ ನಡೆಯಿತು ಷ.ಬ್ರ.ಶ್ರೀಕಂಠ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕಲಬುರ್ಗಿ ಪ್ರಮುಖ ರಾಮಚಂದ್ರ ಸುತಾರ:

ರೈತರಿಗೆ ಸರಿಯಾಗಿ ಮಳೆ ಆಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆಯು ಸರಿಯಾದ ಮಾಹಿತಿ ನೀಡದೆ ಅವ್ಯವಹಾರ ದಲ್ಲಿ ತೊಡಗಿದ್ದಾರೆ ವಿದ್ಯುತ್ ಇಲಾಖೆ ಅಧಿಕಾರಿಗಳು ಸರಿಯಾಗಿ ಕರೆಂಟ್ ಕೊಡದೆ ರೈತರಿಗೆ ಸತಾಯಿಸಿ ಬೆಳೆ ಬೆಳೆಯುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಬೇಕು. ಎಂದು ತರಾಟೆಗೆ ತೆಗೆದುಕೊಂಡರು ಸಾವಯವ ಕೃಷಿಯಿಂದ ಸಮೃದ್ಧಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡುವ ಮೂಲಕ ಭಾರತದ ಬದಲಾವಣೆಗೆ ಹೆಚ್ಚು ಶಕ್ತಿ ಕೊಡಬೇಕು ಎಂದು ತಿಳಿಸಿದರು.

ಮೃತ್ಯುಂಜಯ ಅಗ್ರೊ ಕಲಬುರ್ಗಿಯ ಪಂಡಿತರಾವ ಪಾಟಿಲ್ ಮಾತನಾಡಿ:

ಕಾವೇರಿ ಸಂಪದ ತೊಗರಿ ಬೀಜವು ಒಣ ಬೆಸಾಯದಲ್ಲಿ ಎಕರೆಗೆ ಸುಮಾರು 8-10 ಕ್ವಿಂಟಾಲ್ ಇಳುವರಿ ಬರುತ್ತದೆ. ನೀರಾವರಿಯಲ್ಲಿ ಎಕರೆಗೆ ಸುಮಾರು 12-14 ಕ್ವಿಂಟಾಲ್ ಇಳುವರಿ ಪಡೆಯಬಹುದು. ರೈತರು ದೇವರ ಸಮಾನ ಅವರಿಗೆ ಮೋಸ ಮಾಡಿದರೆ ಹೆತ್ತ ತಾಯಿ ತಂದೆಗೆ ಮೋಸ ಮಾಡಿದಂತೆ ಎಂದು ತಿಳಿಸಿದರು.

ಶ್ರೀಗಳು ಮಾತನಾಡಿ:

ಮೊದಲು ರೈತರು ಒಂದಾಗಬೇಕು ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು ಅಂದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಶಿವಾನಂದ ಕುಂಬಾರ ಸಮಾಜದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಜೊತೆಗೆ ಸಾವಯವ ಕೃಷಿಯಿಂದ ಭರ್ಜರಿ ತೊಗರಿ ಬೆಳೆದ ರೈತ ಎಂದು ತಿಳಿಸಿದರು .

ಅಧ್ಯಕ್ಷ ಸ್ಥಾನವಹಿಸಿದ ಚಿತ್ರಶೇಕರ ಮಾತನಾಡಿ:

ಕಾವೇರಿ ಸಂಪದ ತೊಗರಿ ಬೇಳೆ ಬೆಳೆಯಬೇಕು ಅದು ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ

ಶಿವಲಿಂಗಪ್ಪ ,ಮಾಂತು ಉಡುಗಿ, ರಾಮಲಿಂಗ ವಡ್ಡರ್, ಯಶ್ವಂತರಾವ ಪಾಟಿಲ್, ಬಸವರಾಜ ಬಸೆಟ್ಟಿ, ನಿಂಗನಗೌಡ ಅಂಕಲಗಿ ,ರಾಜು ಪಾಟೀಲ್,ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಕಾರ್ಯವನ್ನು ವಿಜಯಕುಮಾರ್ ನಿರೂಪಿಸಿದರು. ಶಿವರಾಜ್ ಘಾಣೂರ ಪ್ರಾರ್ಥಿಸಿದರು. ಚಂದ್ರಕಾಂತ ಪೂಜಾರಿ ಸ್ವಾಗತಿಸಿದರು. ರೈತ ಶಿವಾನಂದ ಕುಂಬಾರ ವಂದಿಸಿದರು.

ರಾಯಲ್ ಟಿವಿ ನ್ಯೂಸ್ ಗುಲಬರ್ಗಾ

ವಿಜಯಪುರ ಜಿಲ್ಲೆಗೆ ನೂತನ ಎಸ್ಪಿಯಾಗಿ ಅನುಪ್ ಅಗರವಾಲ

ವಿಜಯಪುರ ಜಿಲ್ಲೆಗೆ ನೂತನ ಹೊಸದಾಗಿ ಸೂಪರಿಂಟೆಂಡೆಂಟ್ ಆಪ್ ಪೋಲಿಸ್ (ಎಸ್ಪಿ) ಆಗಿ ದಕ್ಷ ಹಾಗೂ ಪ್ರಾಮಾಣಿಕ,ನಿಷ್ಠಾವಂತ ಪೋಲಿಸ್ ಅಧಿಕಾರಿಯಾದ ಶ್ರೀ ಅನುಪ್ ಅಗರವಾಲ ಅವರು ಅಧಿಕಾರ ಸ್ವೀಕಾರ.

ಇದಕ್ಕೂ ಮೊದಲು ವಿಜಯಪುರ ಜಿಲ್ಲೆಯ ಎಸ್ಪಿ ಆಗಿದ್ದ ಪ್ರಕಾಶ ನಿಕ್ಕಂ ಅವರು ಬೇರೆಡೆಗೆ ವರ್ಗಾವಣೆಯಾದ ಹಿನ್ನೆಲೆ ನೂತನವಾಗಿ ಅಧಿಕಾರ ಸ್ವೀಕಾರ.

ವರದಿ:ರಾಯಲ್ ಟಿವಿ ನ್ಯೂಸ್ ವಿಜಯಪುರ

Design a site like this with WordPress.com
Get started