ಬಿಜೆಪಿ ಸರ್ಕಾರದ ಬಜೆಟ್ ಜನ ವಿರೋಧಿಯಾದದ್ದು-ಸದ್ದಾಂ ಕುಂಟೋಜಿ

ರಾಜ್ಯ ಆರ್ಥಿ ಸಂಕಷ್ಟದಲ್ಲಿದೆ ಎಂಬುದು ತಿಳಿದಿದ್ದರೂ ಜನಪರ ಯೋಜನೆಗಳಿಗೆ ಜಾಸ್ತಿ ಒತ್ತು ನೀಡುವ ಬದಲು ಮೋದಿ ಮಾದರಿಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದು, ರಾಜ್ಯ ಬಿಜೆಪಿಗೆ ಜನಪರ ಕಾಳಜಿ ಇಲ್ಲ ಎಂಬುದರ ಸೂಚಕ ತೋರಿಸುತ್ತದೆ. ಇಂದು ಮಂಡಿಸಿದ ಬಜೆಟ್ ಜನವಿರೋಧಿ ಬಜೆಟ್ ಆಗಿದೆ.

ಕೇಂದ್ರದಿಂದ ಬರಬೇಕಿದ್ದ ಸುಮಾರು ₹11 ಸಾವಿರ ಕೋಟಿ ಜಿ.ಎಸ್.ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ, ಅನುದಾನದಲ್ಲಿ ಸುಮಾರು ₹8 ಕೋಟಿ ಕಡಿಮೆಯಾಗಿದ್ದರಿಂದ ಬಜೆಟ್ ಗೆ ಸಮಸ್ಯೆಯಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿದ್ದೀರಿ. ಕೇಂದ್ರದಲ್ಲಿ ಇರುವುದು ತಮ್ಮ ಸರ್ಕಾರ ಅಲ್ಲವೆ ?

ಮಹದಾಯಿ ಯೋಜನೆಗೆ ₹2,000 ಕೋಟಿ ಅನುದಾನ ಅವಶ್ಯಕತೆ ಇದೆ ಎಂದು ತಿಳಿದಿದ್ದರೂ, ಬಜೆಟ್ ನಲ್ಲಿ ₹500 ಕೋಟಿ ಮಾತ್ರ ಮೀಸಲಿಟ್ಟಿದ್ದು ಉತ್ತರ ಕರ್ನಾಟಕದ ಜನತೆಗೆ ರಾಜ್ಯ ಬಿಜೆಪಿ ಅನ್ಯಾಯ ಮಾಡುತ್ತಿರುವುದನ್ನು ತೋರಿಸುತ್ತಿದೆ.

BSYBJP ಸರ್ಕಾರ ಪ್ರಸಕ್ತ ಬಜೆಟ್ ನಲ್ಲಿ ಪೆಟ್ರೋಲ್ ಬೆಲೆ ₹1.60 ಮತ್ತು ಡೀಸೆಲ್ ಬೆಲೆ ₹1.59 ಏರಿಕೆ ಮಾಡಿದೆ.

ಹದಗೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಬೆಲೆ ಏರಿಕೆಯಿಂದ ಜನರು ತತ್ತರಿಸಿರುವಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವುದು ಖಂಡನೀಯ. ಬೆಲೆ ಏರಿಕೆಯನ್ನು ಹಿಂಪಡೆಯಿರಿ.

ಇದು ಜನ ವಿರೋಧಿ ಬಜೆಟ್ ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಎನ್ ಎಸ್ ಯು ಐ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ, ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಿ-8792900064

ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಸಾಥ್

  • ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮದ್ಯ ಮಾರಾಟ. ದಿನನಿತ್ಯ ತಾಲ್ಲೂಕಿನಲ್ಲಿ ಹಾಗೂ ಪಟ್ಟಣದ ಸುತ್ತಮುತ್ತಲೂ ಇರುವ ಧಾಬಾಗಳಲ್ಲಿ ಮದ್ಯಮಾರಾಟ ನಡೆಯುತ್ತಿದೆ.ಪರವಾನಿಗೆ ಇಲ್ಲದೆ ಅಕ್ರಮವಾಗಿ ನಡೆಯುವ ಈ ಮಾರಾಟಕ್ಕೆ ತಾಲ್ಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಪ್ರತಿಯೊಂದು ಧಾಬಾಗಳಿಂದ ಅಧಿಕಾರಿಗಳಿಗೆ ಲಂಚ ಹೋಗುತ್ತಿದ್ದು ಕಾರಣ ಧಾಬಾ ಗಳಲ್ಲಿ ನಡೆಯುವ ಈ ಮಾರಾಟಕ್ಕೆ ಕಡಿವಾನ ಹಾಕುವವರಿಲ್ಲ ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಇತ್ತ ಗಮನಿಸುತ್ತಿಲ್ಲ.

  • ತಾಲ್ಲೂಕಿನಲ್ಲಿರುವ ಮಧ್ಯದ ಅಂಗಡಿಗಳು ಬೆಳಿಗ್ಗೆ 6 ಘಂಟೆಗೆ ತಗೆಯುತ್ತಿದ್ದು ಅವರ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ‌,ಕಾರಣ ಆ ಅಂಗಡಿಕಾರರಿಂದ ಹಪ್ತಾ ವಸೂಲಿ ಇದ್ದ ಕಾರಣ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಇದರಿಂದಾಗಿ ಎಷ್ಟು ಕುಟುಂಬಗಳು ಈ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿ ಪಾಲು ಆಗುತ್ತಿವೆ,ಹೆಣ್ಣು ಮಕ್ಕಳು ಅಬಕಾರಿ ಇಲಾಖೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ,ತಾಲ್ಲೂಕಿನ ಹಲವು ಗ್ರಾಮದ ಮಹಿಳೆಯರು ಸೇರಿಕೊಂಡು ನಮ್ಮ ಗ್ರಾಮದಲ್ಲಿ ಸಾರಾಯಿ ನಿಷೇಧ ಮಾಡಬೇಕೆಂದು ಅಬಕಾರಿ ಇಲಾಖೆಗೆ ಹಾಗೂ ತಹಶಿಲ್ದಾರರ ಕಛೇರಿಗೆ ಮನವಿ ಸಲ್ಲಿಸಿದರು ಕೂಡಾ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ತಮ್ಮ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

  • ಹಳ್ಳಿಗಳಲ್ಲಿನ ತಾಂಡಾಗಳಲ್ಲಿ ಸರಾಗವಾಗಿ ಎಗ್ಗಿಲ್ಲದೆ ನಡೆಯುತ್ತಿದೆ ಕಳ್ಳಬಟ್ಟಿ ಸಾರಾಯಿ ಮಾರಾಟ ಅದರಿಂದ ಹಲವು ಸಿಬ್ಬಂದಿಗಳಿಗೆ ಲಂಚ ಹೋಗುತ್ತಿದ್ದು ಅದರಿಂದ ಈ ಕಂಟ್ರಿ ಸಾರಾಯಿ ನಿಷೇಧಕ್ಕೆ ಲಗಾಮ ಇಲ್ಲದಂತಾಗಿದೆ. ಬೇಲಿಯೇ ಎದ್ದು ಹೊಲ ಮೇಯುವಾಗ ಸಿಗಬೇಕಾಗ ನ್ಯಾಯ ಯಾರಿಗೆ ಸಿಗಲು ಸಾಧ್ಯ ಇದರ ಸಲುವಾಗಿ ತಾಲ್ಲೂಕು ಅಧಿಕಾರಿಗಳ ಗಮನಕ್ಕೆ ತಂದರು ಕಾಟಾಚಾರಕ್ಕೆ ಆಯಿತು ಗಮನಿಸುತ್ತೇವೆ ಎಂದು ಹೇಳಿ ಕಳುಹಿಸುತ್ತಾರೆ.ಆದರೆ ಅದನ್ನು ನಿಯಂತ್ರಣ ಮಾಡುವುದು ಕನಸಿನ ಮಾತಾಗಿದೆ.

  • ಈ ಅಕ್ರಮಕ್ಕೆ ಮೇಲಿನ ಅಧಿಕಾರಿಗಳು ಕಡಿವಾಣ ಹಾಕದಿದ್ದರೆ ಮುಂದೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಹೆಸರು ಸಮೇತ ಪಡೆಯುವ ಲಂಚದ ವಿವರಣೆಯನ್ನು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಸುಮಾರು ಹಳ್ಳಿಗಳಲ್ಲಿನ ಜನರು ನಮ್ಮೊಂದಿಗೆ ಹೇಳಿಕೊಂಡಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಅಧಿಕಾರಿಗಳ ನಿರ್ಲಕ್ಷ್ಯ ಕೊಳಚೆಯಾಗುತ್ತಿದೆ ದಲಿತರ ಕೇರಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ ಊರಿನ ಚರಂಡಿ ನೀರು ಬಂದು ದಲಿತರ ಕಾಲೋನಿಯಲ್ಲಿ ಸಂಗ್ರಹ ಇಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇರದೆ ಇಲ್ಲಿನ ನಿವಾಸಿಗಳಿಗೆ ತೊಂದರೆ. ಇದರಿಂದ ಸಾಂಕ್ರಾಮಿಕ ರೋಗ ಡೆಂಗ್ಯೂ ಜ್ವರ ಮುಂತಾದ ರೋಗಗಳನ್ನು ಹರಡುವ ಸಂಭವ.ಇದ್ದರು ಗೊತ್ತಿದ್ದರು ಕೂಡ ಸರೂರ್ ಗ್ರಾಮದಲ್ಲಿನ ಎಡ ಬಲ ಹೊಲದ ರೈತರು ಮೇಲ್ವರ್ಗದವರು ದಲಿತ ಸಮಾಜ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.ಅದನ್ನು ಸರಿಪಡಿಸದೆ ಹೋದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಧರಣಿ ಕುಳಿತು ಹೋರಾಟ ಮಾಡಬೇಕಾಗುತ್ತದೆ. ಎಂದು ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ಪ್ರಕಾಶ ಛಲವಾದಿ ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ

Mr.Neeraj patil met on Bangalore (INDIA)

INTERNATIONAL NEWS

Mr. Neeraj Patil (London) and Mr.Mallanagouda S Biradar (Korwar) had a meeting on

Saturday, 29th February 2020, at Vidhanasoudha Bangalore.

Brief introduction:

Mr. Mallanagouda Biradar (Engineering Postgraduate,

Semiconductor and Technology Industry Veteran, Educationist

and Indian Politician) is an Engineer of Indian origin and served

in America, Europe and India in Technical and Management

positions. RSS Volunteer, active BJP member and a social

worker. He is basically from North Karnataka region, native of

Korwar, Devar-Hipparagi taluk, Vijayapur district.

Mr. Neeraj Patil is a doctor by Indian origin, British Politician,

He served as the mayor of London Borough of Lambeth. He was

the Borough’s first Mayor of Asian origin. A member of the

Labour Party. He was an instrumental and played a key role in

establishing JagadhJyoti Vishwaguru Basavanna’s statue at

sea shore of Thames river at London. He is basically from

North Karnataka region, Kalaburgi.

They had a meeting at Vidhanasoudha Bangalore and discussed in

detail about Business Opportunities across the globe about various

fields: developments of the state in terms of social, economic,

financial, educational, cultural and political aspects. Both are

devotees of Vishwaguru Basavanna.

Published by: ROYAL TV NEWS VIJAYAPUR (INDIA)

ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಪೈನಲ್ ಪಂದ್ಯ ಉದ್ಘಾಟನೆ ಮಾಡಿದ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆಯುತ್ತಿರುವ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ನ ಪೈನಲ್ ಪಂದ್ಯ ಇಂದು ಸ್ಥಳೀಯ ವಿಬಿಸಿ ಪ್ರೌಢ ಶಾಲೆ ಆವರಣದಲ್ಲಿ ನಡೆಯಿತು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಹಾಗೂ ವೇದಿಕೆ ಮೇಲಿನ ಗಣ್ಯರು ಸೇರಿ ಉದ್ಘಾಟನೆ ಮಾಡಿದರು.

ನಂತರ ಉದ್ಘಾಟಕರಾಗಿ ಆಗಮಿಸಿದ ಸ್ಥಳೀಯ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಬ್ಯಾಟಿಂಗ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಇಸ್ಲಾಂ ಧರ್ಮದ ಗುರುಗಳು, ಚಿನ್ನು ನಾಡಗೌಡ, ಶರಣು ಬೂದಿಹಾಳಮಠ,ಅಲ್ಲಾಭಕ್ಷ ಢವಳಗಿ, ಕಾಮರಾಜ ಬಿರಾದಾರ,ಅಶೋಕ, ಸದ್ದಾಂ ಕುಂಟೋಜಿ,ರಫೀಕ ಶಿರೋಳ,ಸೇರಿದಂತೆ ಮುದ್ದೇಬಿಹಾಳ ಪ್ರೀಮಿಯರ್ ಲೀಗ್‌ ನ ಎಲ್ಲ ಸದಸ್ಯರು ಹಾಗೂ ಆಟಗಾರರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಬಿಜೆಪಿ ಪಕ್ಷದ ಮುಖಂಡರಿಂದ ಹಣ್ಣು ಹಂಪಲ ವಿತರಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಬಡಮಕ್ಕಳಿಗೆ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಿಎಂ ಯಡಿಯೂರಪ್ಪ ಜನ್ಮದಿನಾಚರಣೆ ಹಿನ್ನೆಲೆ ಸಮಾಜಸೇವಕರು ಹಾಗೂ ಬಿಜೆಪಿ ಪಕ್ಷದ ಮುಖಂಡರಾದ ಶ್ರೀಮತಿ ಕಾಶೀಬಾಯಿ ರಾಂಪೂರ, ಗಿರೀಶಗೌಡ ಪಾಟೀಲ ನೇತೃತ್ವದಲ್ಲಿ ಗುರುವಾರ ಬಾಳೆಹಣ್ಣು, ಬಿಸ್ಕೆಟ್ ವಿತರಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ಗಿರೀಶಗೌಡ ಪಾಟೀಲ, ಬಿಜೆಪಿ ಮಹಿಳಾ ಧುರೀಣೆ, ಕಾಶಿಬಾಯಿ ರಾಂಪೂರ, ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಾಧನೆ, ಜೀವನದ ಕುರಿತು ತಿಳಿವಳಿಕೆ ನೀಡಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ,ಶ್ರೀಶೈಲ ದೊಡಮನಿ,ರಾಜು ಬಳ್ಳೊಳ್ಳಿ,ರವಿಚಂದ್ರ ಹಡಲಗೇರಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಶಿಲ್ಪಾ ಛಲವಾದಿ,ಗೌರಮ್ಮ ಹುನಗುಂದ,ನೀಲಮ್ಮ ಛಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ಮುದ್ದೇಬಿಹಾಳ

ಬಡವರಿಗೆ ಧಾನ ಮಾಡುವ ಮೂಲಕ ಶಿವರಾತ್ರಿ ಹಬ್ಬ ಆಚರಿಸಿದ-ಕಾಶೀಬಾಯಿ ರಾಂಪೂರ

ವಿಶೇಷವಾಗಿ ಶಿವರಾತ್ರಿ ಆಚರಣೆ:

ಶಿವರಾತ್ರಿ ಹಬ್ಬದ ಪ್ರಯುಕ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಿಜೆಪಿಯ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಶಿವಯೋಗಪ್ಪ ರಾಂಪೂರ ಅವರು ಬಳ್ಳಾರಿಗೆ ತೆರಳಿದ ಪ್ರಯುಕ್ತ ಅಲ್ಲಿನ ಬಡ ಹಿರಿಯ ನಾಗರಿಕರಿಗೆ ಬಟ್ಟೆ ಮತ್ತು ಧನಸಹಾಯ ಮಾಡಿದರು. ಈ ಸಂದರ್ಭದಲ್ಲಿ ಬಡ ಜೀವಿಗಳು ಧಾನಿಗಳಿಗೆ ಹರಿಸಿದರು.

ರಾಯಲ್ ಟಿವಿ ನ್ಯೂಸ್ ಬಳ್ಳಾರಿ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಿತ್ತೂರು ಚೆನ್ನಮ್ಮ ಪ್ರತಿಮೆ ಸ್ಥಾಪಿಸಲು ಒತ್ತಾಯ

ಭಾರತದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ವೀರ ಮಹಿಳೆ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಸ್ಥಾಪನೆ ಮಾಡಬೇಕು. ಮತ್ತು ಶಾಲಾ ಕಾಲೇಜು ಪಠ್ಯ ಪುಸ್ತಕದಲ್ಲಿ ಕಿತ್ತೂರ ಚನ್ನಮ್ಮನ ಸಂಪೂರ್ಣ ಇತಿಹಾಸ ಹಾಕಲು ಆಗ್ರಹ.

ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ಮಹನೀಯರ ಪ್ರತಿಮೆ ಇವೆ ಆದರೆ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಥಮ ವೀರ ಮಹಿಳೆ ಭಾರತದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಧಾರವಾಡ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ ಕಿತ್ತೂರ ಚನ್ನಮ್ಮನ ಪಾರ್ಕ ಇದೆ ಆದರೆ ಅಲ್ಲಿ ಠ್ಯಾಕೆರೆ ಸಮಾಧಿ ಇದೆ. ಧಾರವಾಡ ಜಿಲ್ಲೆಯಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆ ಇಲ್ಲದಿರುವುದು ದುರಂತದ ವಿಷಯ. ಕೊಡಲೇ ರಾಜ್ಯ ಸರ್ಕಾರ ವೀರ ಕಿತ್ತೂರು ಚನ್ನಮ್ಮನ ಪ್ರತಿಮೆಯನ್ನು ಧಾರವಾಡ ಜಿಲ್ಲೆಯ ನಿಮ್ಯಾನ್ಸ ಆಸ್ಪತ್ರೆ ಹತ್ತಿರ ಒಂದು ಕಡೆ ಗೋವಾ ಹೋಗುವ ಮಾರ್ಗ ಇನ್ನೂಂದು ಕಡೆ ಬೆಳಗಾವಿ ಹೋಗುವ ಮಾರ್ಗ ನಡುವೆ ಇರುವ ಸರ್ಕಲನಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರತಿಮೆ ಸ್ಥಾಪನೆ ಮಾಡಬೇಕು. ಎಂದು ರಾಣಿ ಚನ್ನಮ್ಮ ನವಭಾರತ ಸೇನೆಯ

ಜಗದೀಶ ಕಡೋಲಿ

ರಾಣಿ ಚನ್ನಮ್ಮ ನವಭಾರತ ಸೇನೆ

ಉತ್ತರ ಕರ್ನಾಟಕ ಪ್ರದಾನ ಸಂಚಾಲಕ ಒತ್ತಾಯಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ಬೆಳಗಾವಿ

ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಅಧ್ಯಕ್ಷರಾಗಿ ಸಚೇಂದ್ರ ಲಂಬು ನೂತನ ಅಧಿಕಾರ ಸ್ವೀಕಾರ

ವಿಜಯಪುರ ಜಿಲ್ಲೆಯ ಸುದ್ದಿ:

ನೂತನ ಕಾ ನಿ ಪ ಸಂಘದ ಅಧಿಕಾರಿ ಸ್ವೀಕರಿಸಿ ಸುಕ್ಷೇತ್ರ ಯಲಗೂರಿನ ಶ್ರೀ ಆಂಜನೇಯ ಸ್ವಾಮಿ ದರ್ಶನ ಪಡೆದರು. ಮರಿಕಾರ್ತಿಕೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಸಮೀತಿ ವತಿಯಿಂದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ಸಚೇಂದ್ರ ಲಂಬು ಅವರನ್ನು ಸಮಿತಿ ಅಧ್ಯಕ್ಷ ಅನಂತ ಓಂಕಾರ ಸತ್ಕರಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಂಘದ ಗ್ರಾಮೀಣ ಭಾಗದ ಉಪಾಧ್ಯಕ್ಷರಾದ ಶ್ರೀ ಡಿ.ಬಿ‌ವಡವಡಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀ ದೇವೇಂದ್ರ ಹೆಳವರ, ಪ್ರಧಾನ ಕಾರ್ಯದರ್ಸಿ ಶ್ರೀ ವಿನಾಯಕ ಸೊಂಡೂರ ಹಾಗೂ ಹಿರಿಯ ಪತ್ರಕರ್ತರಾದ ಶ್ರೀ ಬಾಬು ಮುರಾಳ ಅವರನ್ನೂ ಸತ್ಕರಿಸಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಗೆ ಮನವಿ ಸಲ್ಲಿಸಿದ ಕೂಡಲಸಂಗಮ ಪೀಠದ ಜಗದ್ಗುರು ಜಯಮೃತ್ಯೂಂಜಯ ಸ್ವಾಮೀಜಿ

ರಾಜ್ಯ ಸುದ್ದಿ:

ಬೆಂಗಳೂರು –

ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನೇತ್ರುತ್ವದ ನಿಯೋಗ ಗುರುವಾರ ದಿನಾಂಕ 20 ಫೆಬ್ರವರಿ 2020 ರಂದು, ಬೆಂಗಳೂರಿನ ಢವಳಗಿರಿ ನಿವಾಸದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರಿಗೆ ಸಮಾಜದವತಿಯಿಂದ ಮನವಿ ಪತ್ರ ಸಲ್ಲಿಸಿದರು.

1) ಕೃಷಿ ಆಧಾರಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜವನ್ನು ಕೇಂದ್ರ

ಸರ್ಕಾರದ ಒಬಿಸಿ ಮೀಸಲಾತಿ ಸೇರ್ಪಡಿಸುವಂತೆ

2) ಪಂಚಮಸಾಲಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ

3)ಕಿತ್ತೂರು ರಾಣಿ ಚೆನ್ನಮ್ಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂಗಡ ಪತ್ರದಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯ

4) ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಮೋಹನ್ ಲಿಂಬಿಕಾಯಿಯವರಿಗೆ ಧಾರವಾಡ ಹುಬ್ಬಳ್ಳಿ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯ

ಈ ಸಂದರ್ಭದಲ್ಲಿ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಉದ್ಯಮಿ ಹಾಗೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣ ರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ , ಡಾ. ಬಿ. ಎಸ್. ಪಾಟೀಲ ನಾಗರಾಳ ಹುಲಿ ಹಾಗೂ ಶಿಕ್ಷಕರ ಸಂಘಟನೆಯ ನಿರಂಜನಕುಮಾರ್ ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ಬೆಂಗಳೂರು

Design a site like this with WordPress.com
Get started