ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಕವಿತಾ ಮಿಶ್ರಾ ಆಗಮನ

ವಿಜಯಪುರ : ರಾಷ್ಟ್ರೀಯ ಮಹಿಳಾ ಸಂಘಟನಾ ಸೇವಾ ಸಂಸ್ಥೆ ವಿಜಯಪುರ ಇವರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ದಿನಾಂಕ 14-03-2020 ರಂದು ಬೆಳಿಗ್ಗೆ 9:00 ಘಂಟೆಗೆ ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನ ಬಂಜಾರಾ ಕ್ರಾಸ್ ಸೊಲ್ಲಾಪುರ ರಸ್ತೆ,ಯಲ್ಲಿ ಕಾರ್ಯಕ್ರಮ ನಡೆಯಲಿದ್ದು.

ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆ ಶ್ರೀಮತಿ ಕವಿತಾ ಮಿಶ್ರಾ ಆಗಮಿಸಲಿದ್ದು ಅಲ್ಲದೆ ವಿವಿಧ ಮಹಿಳಾ ಮುಖಂಡರು ಆಗಮಿಸಲಿದ್ದಾರೆ.

ಕಾರಣ ಸಂಘಟನೆಯ ಮಹಿಳೆಯರು ,ಮಹಿಳಾ ಮುಖಂಡರು ಆಗಮಿಸಿ ಎಸ್ಸೆಸ್ವಿಗೊಳಿಸಲು, ರಾಷ್ಟ್ರೀಯ ಮಹಿಳಾ ಸಂಘಟನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಕೃಷ್ಣಾ ನಾಯಕ ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

ಮನೆ ‌ಮನೆಗೆ ತೆರಳಿ ವೃದ್ಧಾಪ್ಯವೇತನ ಮಾಡಿಸಿದ ಗ್ರಾಮ ಪಂಚಾಯತ ಸದಸ್ಯ ಶ್ರೀಶೈಲ ಹೂಗಾರ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದ ಗ್ರಾಮ ಪಂಚಾಯತ ಸದಸ್ಯ ಹಾಗೂ ಟವಿ 9 ಹಾಸ್ಯ ಕಲಾವಿದರಾದ ಶ್ರೀಶೈಲ ಹೂಗಾರ ಅವರು ಇಂದು ಸರೂರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ೩೦ ಕ್ಕೂ ಹೆಚ್ಚು ವೃದ್ಧರಿಗೆ ಸಂಧ್ಯಾ ಸುರಕ್ಷಾ (ವೃದ್ಧ್ಯಾಪ್ಯ ವೇತನ) ಮಾಡಿಸಿ ಆದೇಶ‌ ಪತ್ರಗಳನ್ನು ಸರೂರ ಗ್ರಾಮದಲ್ಲಿ ಮನೆ ಮನೆಗೆ ಹೋಗಿ‌ ನೀಡಿದರು, ಯಾರ ಹತ್ತಿರವು ಹಣವನ್ನು ಪಡೆಯದೆ ನಿಷ್ಠಾವಂತವಾಗಿ ಮಾಡಿದ್ದಾರೆ.ಈ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಳನ್ನು ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ -8792900064

ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾರತಿಯಾಗಿ ಡಿ.ಕೆ ಶಿವಕುಮಾರ್

ಬೆಂಗಳೂರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರನ್ನು ಹೈಕಮಾಂಡ ನೇಮಕ ಮಾಡಿದ್ದಾರೆ. ಇನ್ನೂ ಪ್ರಮುಖ ಮುಖಂಡರಾದ ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ ಹಾಗೂ ಸಲೀಂ ಅಹ್ಮದ್ ನೂತನ ಕಾರ್ಯಾಧ್ಯಕ್ಷರಾಗಿ ನೇಮಿಸಲಾಗಿದೆ.

ಸದ್ಯ ತುಂಬಾ ದಿನದಿಂದ ಜನರಲ್ಲಿ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ದಿನೇಶ ಗುಂಡೂರಾವ್ ರಾಜೀನಾಮೆ ನೀಡಿದ್ದರಿಂದಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಾಲಿಯಾಗಿತ್ತು. ಈ ಸ್ಥಾನಕ್ಕೆ ಹಲವರು ಕಣ್ಣು ಇತ್ತು ಯಾರನ್ನು ನೇಮಕಮಾಡಲಾಗುತ್ತಿದೆ ಎನ್ನುವ ಕುತೂಹಲ. ಅಂತಿಮವಾಗಿ ಡಿ.ಕೆ.ಶಿವಕುಮಾರ ಅವರ ಮೇಲೆಯೆ ಪಕ್ಷ ವಿಶ್ವಾಸವಿಟ್ಟು ನಾಯಕತ್ವದ ಜವಾಬ್ದಾರಿ ವಹಿಸಿದೆ.

ಇನ್ನು ವಿರೋಧ ಪಕ್ಷ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ಕಾಂಗ್ರೆಸ್ ಹೈ ಕಮಾಂಡ್ ಇನ್ನೂ ಅಂಗೀಕರಿಸಿಲ್ಲ. ಹೀಗಾಗಿ ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ -8792900064

ನೂತನ ಕಾರ್ಯದರ್ಶಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಮುಖಂಡ ಮಲ್ಲನಗೌಡ ಬಿರಾದಾರ

ಬೆಳಗಾವಿ:ಕುಂದಾನಗರಿಯ ಜಿಲ್ಲಾ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ದಾದಾಗೌಡ ಎಸ್ ಬಿರಾದಾರ ಅವರನ್ನು ನೇಮಕ. ಮಾಡಿ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ ಆದೇಶ ಹೊರಡಿಸಿದ ಹಿನ್ನೆಲೆ ಮುದ್ದೇಬಿಹಾಳ ದೇವರಹಿಪ್ಪರಗಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮುಖಂಡರಾದ ಮಲ್ಲನಗೌಡ ಬಿರಾದಾರ ಕೋರವಾರ ಅವರು ನೂತನ ಪ್ರಧಾನ ಕಾರ್ಯದರ್ಶಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಿ – 8792900064

ಹಿರಿಯ ಮುತ್ಸದ್ದಿ ಪಿ ಎಮ್ ನಾಡಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಅವರಿಗೆ ಆಹ್ವಾನ

ಬೆಂಗಳೂರು: ಶುಕ್ರವಾರ ದಿನಾಂಕ 27ನೇ ಮಾರ್ಚ್ 2020 ರಂದು ಸಾಯಂಕಾಲ 5 ಘಂಟೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಂಭಾಂಗಣದಲ್ಲಿ ಆಚರಿಸಲಿರುವ ಗಾಂಧೀವಾದಿ, ನಾಡಿನ ಮಹಾನ್ ಚೇತನ, ಸಹಕಾರಿ ಹಾಗೂ ಶಿಕ್ಷಣ ಧುರೀಣ ಮತ್ತು ರಾಜಕೀಯ ಹಿರಿಯ ಮುತ್ಸದ್ದಿ ದಿ।। ಶ್ರೀ ಪಿ.ಎಮ್ ನಾಡಗೌಡರ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆ ಲೋಕಸಭೆಯ ವಿರೋಧಪಕ್ಷದ ಮಾಜಿ ನಾಯಕರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪಿ. ಎಮ್. ನಾಡಗೌಡರ ಶತಮಾನೋತ್ಸವ ಗ್ರಂಥ ಬಿಡುಗಡೆ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಾ” ಎಮ್. ಪಿ. ನಾಡಗೌಡರ ನೇತ್ರುತ್ವದ ನಿಯೋಗ ಖುದ್ದು ಭೇಟಿಯಾಗಿ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಸವರಾಜ ದಿಂಡೂರ, ಶ್ರೀ ಸಂಗನಗೌಡ ಪಿ ನಾಡಗೌಡ, ಶ್ರೀ ಮಲ್ಲನಗೌಡ ಎಸ್ ಬಿರಾದಾರ ಕೋರವಾರ, ಶ್ರೀ ಡಾ. ಬಿ. ಎಸ್. ಪಾಟೀಲ ನಾಗರಾಳಹುಲಿ, ಶ್ರೀ ಶಿವನಗೌಡ ಪಾಟೀಲ ಶಿಕಾರಿಪುರ, ಶ್ರೀ ಶಿವಾನಂದ ಬಿರಾದಾರ, ಶ್ರೀ ದಯಾನಂದ ಪಾಟೀಲ, ಶ್ರೀ ಸಂಗಮೇಶ ಗೌಡಪ್ಪನವರ ನಾಡಗೌಡ ಕುಟುಂಬದ ಹಿತೈಸಿಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ -8792900064

ಮಹಾನ್ ಚೇತನ ಪಿ ಎಮ್ ನಾಡಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಆಹ್ವಾನ

ಬೆಂಗಳೂರು: ಶುಕ್ರವಾರ ದಿನಾಂಕ 27ನೇ ಮಾರ್ಚ 2020 ರಂದು ಸಾಯಂಕಾಲ 5 ಘಂಟೆಗೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಂಭಾಂಗಣದಲ್ಲಿ ಆಚರಿಸಲಿರುವ ಗಾಂಧೀವಾದಿ, ನಾಡಿನ ಮಹಾನ್ ಚೇತನ, ಸಹಕಾರಿ ಹಾಗೂ ಶಿಕ್ಷಣ ಧುರೀಣ ಮತ್ತು ರಾಜಕೀಯ ಹಿರಿಯ ಮುತ್ಸದ್ದಿ ದಿ।। ಶ್ರೀ ಪಿ.ಎಮ್ ನಾಡಗೌಡರ ಜನ್ಮಶತಮಾನೋತ್ಸವದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪನವರನ್ನು ಕಾರ್ಯಕ್ರಮ ಉದ್ಘಾಟನೆ ಮಾಡಲು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಾ – ಎಮ್. ಪಿ. ನಾಡಗೌಡರ ನೇತ್ರತ್ವದಲ್ಲಿ ನಿಯೋಗ ಖುದ್ದು ಭೇಟಿಯಾಗಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಶ್ರೀ ಬಸವರಾಜ ದಿಂಡೂರ, ಶ್ರೀ ಸಂಗನಗೌಡ ಪಿ ನಾಡಗೌಡ, ಶ್ರೀ ಮಲ್ಲನಗೌಡ ಎಸ್ ಬಿರಾದಾರ ಕೋರವಾರ, ಶ್ರೀ ಡಾ. ಬಿ. ಎಸ್. ಪಾಟೀಲ ನಾಗರಾಳಹುಲಿ, ಶ್ರೀ ಶಿವನಗೌಡ ಪಾಟೀಲ ಶಿಕಾರಿಪುರ, ಶ್ರೀ ಶಿವಾನಂದ ಬಿರಾದಾರ, ಶ್ರೀ ದಯಾನಂದ ಪಾಟೀಲ, ಶ್ರೀ ಸಂಗಮೇಶ ಗೌಡಪ್ಪನವರ ನಾಡಗೌಡ ಕುಟುಂಬದ ಹಿತೈಸಿಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ – 8792900064

ನಿಧನ ವಾರ್ತೆ

ಶಾಂತಾಬಾಯಿ ರಾಮಪ್ಪ ರಾಠೋಡ ಬಂಜಾರ ಸಮಾಜದ ಹಿರಿಯ ಜೀವ ನಿಧನ.

ಇವರು ವಿನಾಯಕ ಪ್ರಾಥಮಿಕ ಶಾಲೆ ರೂಡಗಿಯ ಕಾರ್ಯದರ್ಶಿ ಪ್ರಕಾಶ ರಾಠೋಡ ಅವರ ಅಜ್ಜಿ ಇವರು ದಿನಾಂಕ 10-03-2020 ರಂದು ನಿಧನರಾಗಿದ್ದು ದಿನಾಂಕ 11-03-2020 ಬುದುವಾರ ರಂದು 11 ಘಂಟೆಗೆ ಮುದ್ದೇಬಿಹಾಳ ತಾಲ್ಲೂಕಿನ ಆಲಕೊಪ್ಪರ ತೋಟದಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.

ರಾಯಲ್ ಟಿವಿ ನ್ಯೂಸ್ – ವಿಜಯಪುರ

ಶ್ರೀ ಮುರುಡ ಬಸವೇಶ್ವರ ಜಾತ್ರೆ ಪ್ರಯುಕ್ತ “ಸಮಾಜ ಸಂಜೀವಿನಿ” ಪ್ರಶಸ್ತಿ ಪ್ರಧಾನ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ಸದ್ಗುರು ಶ್ರೀ ಮುರುಡ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹನ್ನೊಂದು ದಿನಗಳ ಪರ್ಯಂತರ ವಾಗಿ ಸಾಗಿ ಬಂದಂತ ಮಹಾತ್ಮಾ ಗುಳೇದ ಗಾದಿಲಿಂಗೇಶ್ವರ ಮಹಾಪುರಾಣದ ನಿಮಿತ್ಯ ಮಹಾಮಂಗಲೋತ್ಸವದಲ್ಲಿ “ಸಮಾಜ ಸಂಜೀವಿನಿ” ಎಂಬ ಪ್ರಶಸ್ತಿಯನ್ನು ನೀಡಿ ಶ್ರೀ ಮುರುಡ ಬಸವೇಶ್ವರ ಸೇವಾ ಸಮಿತಿಯವರು ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಒಡೆಯರ್ ಆದಂಥ ಪರಮ ಪೂಜ್ಯ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಹಾಗೂ ಕವಡಿಮಟ್ಟಿ ಹಿರೇಮಠದ ಬಸವಪ್ರಭು ಅಪ್ಪಾಜಿ ಕಾರ್ಯಕ್ರಮದಲ್ಲಿ ಅತಿಥಿ ಸ್ಥಾನದಲ್ಲಿದ್ದರು. ಲೊಟಗೇರಿ ಗುರುಮೂರ್ತಿ ದೇವರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದವರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಸವರಾಜ ಶಾಸ್ತ್ರೀಜಿ ಶ್ರೀ ರಾಜರಾಜೇಶ್ವರಿ ಬ್ರಹನ್ಮಠ ಅರಳಹಳ್ಳಿಯವರು ಸೇರಿಕೊಂಡು ಪೂಜ್ಯ ರಾದ ಶ್ರೀ ಲಾಲಪ್ಪ ಗುರುಗಳನ್ನು ದಂಪತಿಗಳ ಸಮೇತ ಕರೆಯಿಸಿಕೊಂಡು “ಸಮಾಜ ಸಂಜೀವಿನಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಜೊತೆಯಲ್ಲಿ ದಂಪತಿಗಳ ಇಬ್ಬರಿಗೂ ಸನ್ಮಾನಿಸಿ ಗೌರವಿಸಿದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ಶೇರ್ ಮಾಡಿ ನಿಮ್ಮ ಯಾವುದೇ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ರಾಜ್ಯ ಹೆದ್ದಾರಿ ಕಾಮಗಾರಿ ನಿಯಮಾನುಸಾರಿ ಇಲ್ಲ ಚೇತನ.ಮ.ಶಿವಶಿಂಪಿ ಆರೋಪ ಸಚಿವ ಗೋವಿಂದ ಕಾರಜೋಳರವರಿಗೆ ದೂರು:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಹಾದು ಹೋಗುವ

ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯಹೆದ್ದಾರಿ ಕಾಮಗಾರಿಯು ಬೇಕಾಬಿಟ್ಟಿಯಾಗಿ ನಡೆಯುತ್ತಿದೆ ಅಂತ ಚಕ್ರವರ್ತಿಯ ಪ್ರತಿಭಟನೆ ವಾರ ಪತ್ರಿಕೆ ಸಂಪಾದಕರಾದ ಚೇತನ ಶಿವಶಿಂಪಿ ಅವರು ಮಾನ್ಯ ಸಚಿವ ಗೋವಿಂದ ಕಾರಜೋಳ ಅವರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಕಳಪೆ ಕಾಮಗಾರಿ ಅಷ್ಟೇ ಅಲ್ಲ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ದೂರಿದ್ದಾರೆ.ಚರಂಡಿ ಮತ್ತು ಫುಟಪಾತ್ ಕೂಡ ಸರಿಯಾಗಿಲ್ಲ..ತಮ್ಮ ಕಾರ್ಯಾಲಯದಿಂದ ಒಬ್ಬ ಅಧಿಕಾರಿಯನ್ನು ನೇಮಿಸಿ ನಿಯಮಾನುಸಾರ ರಸ್ತೆ,ಚರಂಡಿ ಮತ್ತು ಫುಟಪಾತ್ ಕಾಮಗಾರಿ ಆಗಬೇಕು ಅಂತಾ ಆಗ್ರಹಿಸಿದ್ದಾರೆ.ಅಲ್ಲದೇ ಬಸ್ ನಿಲ್ದಾಣದ ಮುಂದೆ ಕೀರ್ತಿ ಸಾಗರ ಹೊಟೆಲ್ ಮುಂದೆ ಚರಂಡಿ ಮಾಡಿರುವುದು ನಿಯಮಾನುಸಾರ ಇಲ್ಲ ವಕ್ರವಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆ, ಅಷ್ಟು ನಿರ್ಮಾಣ ಮಾಡುವುದಕ್ಕೆ ಅಲ್ಲಿನ ಅಂಗಡಿ ಮಾಲಿಕರಿಂದ ಹಣ ಪಡೆದು ಅರ್ಧ ಮರ್ಧ ಕೆಲಸ ಮಾಡಿ ಚರಂಡಿಯನ್ನು ರಸ್ತೆಯ ಕಡೆ ಜಾಸ್ತಿ ಮಾಡಿ ಅಂಗಡಿಯವರಿಗೆ ಲಾಭ ಮಾಡಿದ್ದರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ಅದನ್ನು ಗಮನಿಸಿ ಸರಿಯಾದ ನಿಯಮದ ಪ್ರಕಾರ ಚರಂಡಿ ನಿರ್ಮಾಣ ಮಾಡಬೇಕು ಇಲ್ಲವಾದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ಕನ್ನಡಪರ ಹಾಗೂ ದಲಿತಪರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

ಡೈನಾಮಿಕ್ ಹೀರೊ ದೇವರಾಜ ಸಮ್ಮುಖದಲ್ಲಿ “ನಾನೊಂಥರ” ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ

ಉತ್ತರ ಕರ್ನಾಟಕ ಬಾಗದ ಹಾಸ್ಯ ಕಲಾವಿದನಾದ ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದ ಕಲಾವಿದ ಶ್ರೀಶೈಲ ಹೂಗಾರ ನಟಿಸಿರುವ “ನಾನೊಂಥರ” ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಇದೆ ದಿನಾಂಕ 8-3-2020 ರವಿವಾರ ದಂದು ಸಾಯಂಕಾಲ 6 ಘಂಟೆಗೆ,ವಿಬಿಸಿ ಪ್ರೌಢ ಶಾಲೆಯ ಶ್ರೀ ಸಿದ್ದೇಶ್ವರ ವೇದಿಕೆಯಲ್ಲಿ ಜರುಗಲಿದೆ.

ಈ ಸಮಾರಂಭದಲ್ಲಿ ಚಲನಚಿತ್ರ ಹಿರಿಯ ನಟ ಡ್ಯೆನಾಮಿಕ್ ಸ್ಟಾರ್ ದೇವರಾಜ್ ,ಚಲನಚಿತ್ರ ನಟರಾದ ಶ್ರೀ ತಾರಕ್ ಸರ್ ,ನಟಿ ಕುಮಾರಿ ಹರ್ಷಿತಾ,ಹಾಸ್ಯ ನಟ ರಾದ ಸುಧಾಕರ ,ಮಹಾಂತೇಶ ಹಡಪದ ,ಆಗಮಿಸುವರು ಹಾಗೂ ನಮ್ಮ ಇಂಚರ್ ಮೆಲೋಡಿಸ್ ಸಂಸ್ಕೃತಿಕ ಕಲಾ ತಂಡದಿಂದ ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವುದು,ಕಲಾವಿದರಾದ ಕಾಮಿಡಿ ಕಿಲಾಡಿಗಳಾದ ಶ್ರೀ ಶಕ್ತಿಕುಮಾರ ವಿಜಯಪುರ ,ಮಜಾ ಭಾರತ,ಕಾಮಿಡಿ ಕಂಪನಿ ಹಾಸ್ಯ ಕಲಾವಿದರಾದ ದೇವಕುಮಾರ ಸಾತಲಗಾಂವ, ಖ್ಯಾತ್ ಗಾಯಕಿ ಶೀಲಾ ಹಿರೇಮಠ,ಈಶ್ವರ ಉಮರಾಣಿ, ಸಾಗರ್ ಬಾಗಲಕೋಟೆ,ರಾಜು ಶಿರೋಳ, ಪುಂಡಲೀಕ ಲಮಾಣಿ,ವಿಷ್ಣು ಲಮಾಣಿ,ದೀಪಾ ರತ್ನ ಶ್ರೀ, ಉದಯ ಟಿವಿ ಕಲಾವಿದರಾದ ಶ್ರೀ ಮುನಿರ್ ಅವಟಿಗೇರ್,ವಿಜೇಂದ್ರ ಹಿರೇಮಠ ,ಇನ್ನಿತರ ಕಲಾವಿದರು ಆಗಮಿಸಿ ಹಾಸ್ಯ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶ್ರೀಶೈಲ ಹೂಗಾರ ಹೇಳಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಯಾವುದೇ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

Design a site like this with WordPress.com
Get started