ಬೆಂಗಳೂರು: ನಾಳೆಯಿಂದ ಕರ್ನಾಟಕ ರಾಜ್ಯ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಆದೇಶ ಹೊರಡಿಸಿದ ಸರ್ಕಾರ.ಕಾರಣ ಈ ಸಲುವಾಗಿ ಜನರು ಮನೆಯಿಂದ ಹೊರಗಡೆ ಬರುವಂತೆ ಇಲ್ಲ.
ಎನಾದರೂ ನೆಪ ಹೇಳಿ ಅನಗತ್ಯವಾಗಿ ಹೊರಗಡೆ ಜನರು ತಿರುಗಾಟ ನಡೆಸಿದರೆ ಪೊಲೀಸ್ ಇಲಾಖೆಯು ಅಂಥವರ ಮೇಲೆ ಕೇಸು ದಾಖಲಿಸುವಂತೆ ರಾಜ್ಯ ಸರ್ಕಾರ ಖಡಕ್ ಸೂಚನೆ ನೀಡಿದೆ. ಕೊರೋನ ವೈರಸ್ ಸೋಂಕು ಬಹಳಷ್ಟು ಆತಂಕಕಾರಿಯಾದದ್ದು. ಅದು ಈಗಾಗಲೇ ದೇಶದಲ್ಲಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಹೆಚ್ಚಿನ ಅಪಾಯ ಆಗದಿರಲಿ ಎಂಬ ಮುಂಜಾಗೃತ ಕ್ರಮಕ್ಕಾಗಿ ರಾಜ್ಯಸರ್ಕಾರ ಈ ರೀತಿಯ ಕ್ರಮ ಕೈಗೊಂಡಿದೆ.
ಈ ಸಂದರ್ಭದಲ್ಲಿ ಏನೇನು ಸಿಗುತ್ತೆ:
ಆಸ್ಪತ್ರೆ ,ಹಾಲು-ಹಣ್ಣು ,ತರಕಾರಿಗಳು ಸೇರಿದಂತೆ ತುರ್ತು ಸೇವೆಗಳು ಮಾತ್ರ ಲಭ್ಯವಾಗಲಿವೆ.
ಏನೇನು ಸಿಗಲ್ಲ:
ಕೆಎಸ್ಆರ್ ಟಿಸಿ ಬಸ್ ಸೇರಿದಂತೆ ಸರಕಾರಿ ಸಾರಿಗೆ ಸೇವೆಗಳು ಸೌಲಭ್ಯ ಇಲ್ಲ.
ಅಂಗಡಿ ಬಾರ್ ರೆಸ್ಟೋರೆಂಟ್ ಹೋಟೆಲ್ ಮಾಲ್ ಚಿತ್ರಮಂದಿರಗಳು ಬಂದ ಇರುತ್ತವೆ.
ಗುಂಪುಗುಂಪಾಗಿ ಓಡಾಡುವುದಕ್ಕೆ ನಿರ್ಬಂಧ ಹಾಕಲಾಗಿದೆ.
ಯಾವುದೇ ಸಭೆ ಸಮಾರಂಭ ಮಾಡುವಂತಿಲ್ಲ.
ಬಟ್ಟೆ ಅಂಗಡಿ, ಜ್ಯುವೆಲ್ಲರಿ ,ಹೂವು, ಪುಸ್ತಕದಂಗಡಿಗಳು ಬಂದಿರುತ್ತವೆ.
ಶಾಲಾ ಕಾಲೇಜುಗಳು ರಜೆ
ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಸೇರಿದಂತೆ ಪರಮಾನಂದವಾಡಿ ಗ್ರಾಮದ ಜನತೆ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು
ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ನಿನ್ನೆ ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಪರಮಾನಂದವಾಡಿ ಗ್ರಾಮದ ಜನತೆ ಪ್ರಧಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ.
ವರದಿ: ರಂಜಾನ್ ಮುಲ್ಲಾ
ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಂಗಳೂರು: ಕೊರೋನಾ ಎಂಬ ಮಾರಕ ವೈರಸ್ ಸೋಲಿಸಲು ಅದರ ವಿರುದ್ಧ ಹೋರಾಟ ಮಾಡುತ್ತಿರುವ ಎಲ್ಲಾ,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು, ಮಾಧ್ಯಮ ಮಿತ್ರರು ಮತ್ತು ಪೊಲೀಸ್ ಇಲಾಖೆ ಹಾಗೂ ಜನತಾ ಕರ್ಫ್ಯೂಗೆ ಸಹಕರಿಸಿದ ಎಲ್ಲಾ ಸಾರ್ವಜನಿಕರಿಗೂ ತುಂಬು ಹೃದಯದ ಧನ್ಯವಾದಗಳನ್ನು ಹೇಳಿದ್ದಾರೆ.
ಕೇವಲ ಇವತ್ತಿಗೆ ಸೀಮಿತವಾಗದೆ ಈ ಕೊರೊನಾ ಹತೋಟಿಗೆ ಬರೋವರೆಗೂ ಯಾರು ಮನೆಯಿಂದ ಹೊರಗೆ ಬರಬೇಡಿ ಇದನ್ನು ಹೀಗೆ ಮುಂದುವರಿಸಿ ಕೊರೋನಾ ಮಾರಕ ವೈರಸ್ ಹರಡದಂತೆ ಸಹಕರಿಸಬೇಕೆಂದು
ಮಾಜಿ ಸಚಿವ ಸಿ ಎಸ್ ನಾಡಗೌಡ ವಿನಂತಿಸಿಕೊಂಡಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ – 8792900064
ಕೊರೋನ ವೈರಸ್ ಸೋಂಕು ನಿವಾರಣೆಗೆ ದೇಶಾದ್ಯಂತ ಪ್ರಧಾಮಂತ್ರಿ ನರೇಂದ್ರ ಮೋದಿ ಹೊರಡಿಸಿದ ಜನತಾ ಕರ್ಪ್ಯೂ ಯೆಸ್ಸೆಸ್ವಿಯಾದ ಹಿನ್ನೆಲೆ ಸಂಜೆ 5 ಘಂಟೆಗೆ ಕೊರೋನ ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸಿದ ವೈದ್ಯಕೀಯ ತಂಡ,ಮಾಧ್ಯಮ, ಯೋಧರಿಗೆ, ಪೋಲಿಸ್ ಇಲಾಖೆ,ಪೌರಾಡಳಿತ ಇಲಾಖೆ ಸೇರಿದಂತೆ ಎಷ್ಟು ಇಲಾಖೆಯಿಂದ ಜನರು ಶ್ರಮಿಸಿದ್ದಾರೆಯೋ ಅವರಿಗೆ ಚಪ್ಪಾಳೆ ತಟ್ಟುವ ಮುಖಾಂತರ ಗೌರವ ಸಲ್ಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಈಗ ದೇಶಾದ್ಯಂತ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸುತ್ತಿದ್ದಾರೆ.
ಕೇಂದ್ರದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.
ಹೋರಾಟಗಾರರು ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರು ಬೆಂಗಳೂರಿನ ನಿವಾಸದಲ್ಲಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.
ಇನ್ನೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಹಸಿರು ತೋರನ ಬಳಗದ ಸಂಚಾಲಕ ಮಹಾಬಲೇಶ ಗಡೆದ,ಹಾಗೂ ನ್ಯಾಯವಾದಿಗಳಾದ ರವಿ ನಾಲತ್ತವಾಡ ಸೇರಿದಂತೆ ಹಲವಾರು ಜನತೆ ಚಪ್ಪಾಳೆ ತಟ್ಟುವ ಮೂಲಕ ಬಹು ಸಂಖ್ಯಾತ ಜನರು ಗೌರವ ಸಲ್ಲಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ – 8792900064
ಜಿಲ್ಲಾ ಅಧಿಕಾರಿಗಳಾದ ಮಹಾಂತೇಶ ಬಿಳಗಿ ಅವರ ಜೀವನದಲ್ಲಿ ಯೆಸ್ಸೆಸ್ವಿಗೆ ಕಾರಣವಾದ ಸಂಗತಿಯು ಪೆಸ್ ಬುಕ್ ನಲ್ಲಿ ಹಂಚಿಕೊಂಡ ಒಂದು ಪೋಸ್ಟ ನೋಡಿ ಸ್ನೇಹಿತರೆ.. ಸಾಧನೆಗೆ ಬಡತನವೆ ಬುನಾದಿ ಎಂಬ ಮಾತು ಸುಳ್ಳಲ್ಲ.
ನನ್ನ ತಂದೆ ನಾನು 5 ವರ್ಷದ ವಯಸ್ಸಿನವನಾಗಿದ್ದಾಗ ಅಕಾಲಿಕ ಮರಣ ಹೊಂದುತ್ತಾರೆ, ಆಗ ನಮಗೆ ಕಿತ್ತು ತಿನ್ನುವ ಬಡತನ, ಆ ಸಮಯದಲ್ಲಿ ನನ್ನ ತಾಯಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದಾಗ ಅನೇಕ ದಿನಗಳವರೆಗೆ ನನ್ನ ತಾಯಿಗೆ ಸಂಬಂಧಪಟ್ಟ ಅಧಿಕಾರಿಗಳು ಅಲೆದಾಡಿಸಿ ಕೊನೆಗೆ ನನ್ನ ತಾಯಿ 25 ರೂಪಾಯಿ ವಿಧವಾ ವೇತನ ಪಡೆಯಲು ನೂರು ರೂಪಾಯಿಗಳನ್ನು ಲಂಚವಾಗಿ ನೀಡಿದ ಮೇಲೆ ನನ್ನ ತಾಯಿಗೆ ವಿಧವಾ ವೇತನದ ಆದೇಶ ಪತ್ರವನ್ನು ನೀಡುತ್ತಾರೆ.
ಇದನ್ನೆಲ್ಲ ಗಮನಿಸಿದ ನನಗೆ ನನ್ನ ತಾಯಿಗೆ ಆದ ಅನ್ಯಾಯ ಸಮಾಜದ ಬೇರೆ ತಾಯಂದಿರಿಗೆ ಆಗಬಾರದು ಎಂದು ಸಂಕಲ್ಪ ಮಾಡಿ ಕಷ್ಟಪಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಹಂತ ಹಂತವಾಗಿ ಬೆಳೆದು ಇಂದು ನಾನು ಜಿಲ್ಲಾಧಿಕಾರಿಯಾಗಿದ್ದೇನೆ.
ನನ್ನ ಮೊದಲ ಗುರಿ ನನ್ನ ತಾಯಿ ಅನುಭವಿಸಿದ ಕಷ್ಟವನ್ನು ಬೇರೆ ತಾಯಂದಿರು ಅನುಭವಿಸಬಾರದು, ಈ ಹಿನ್ನೆಲೆಯಲ್ಲಿ ನಾನು ಜಿಲ್ಲಾಧಿಕಾರಿಯಾದ ತಕ್ಷಣ “ಪಿಂಚಣಿ ಅದಾಲತ್ ಕಾರ್ಯಕ್ರಮ”ವನ್ನು ಜಾರಿಗೆ ತಂದಿದ್ದು ಇದರ ಉದ್ದೇಶ ತಹಶೀಲ್ದಾರ್ ಕಚೇರಿ ಜನರ ಮನೆಬಾಗಿಲಿಗೆ ಎಂಬುದು, ಇದರ ಅರ್ಥ ನಮ್ಮ ಅಧಿಕಾರಿಗಳು ಜನರ ಮನೆಬಾಗಿಲಿಗೆ ಹೋಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗಬೇಕಾಗಿರುವ ವಿವಿಧ ಪಿಂಚಣಿ ಯೋಜನೆಗಳನ್ನು ತಲುಪಿಸುವುದು. ಈ ನನ್ನ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಚಾಚೂತಪ್ಪದೆ ನಿರ್ವಹಿಸಬೇಕಾಗಿ ಸೂಚಿಸಿರುತ್ತೇನೆ.
ಜಿಲ್ಲಾ ಅಧಿಕಾರಿಗಳಾದ ಅವರು ಜೀವನದ ಒಂದು ಮಹತ್ವವನ್ನು ಹೇಳಿಕೊಂಡಿರುವುದು ಇನ್ನಿತರ ಸಾಧಕರಿಗೆ ಸ್ಪೂರ್ತಿ ಯಾಗಲಿ..
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದೇಶ ವ್ಯಾಪ್ತಿಯಲ್ಲಿ ಕೊರೋನ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ರವಿವಾರ ದಿನವಾದ ಇಂದು ಹಮ್ಮಿಕೊಂಡ ಜನತಾ ಕರ್ಫ್ಯೂ ಸ್ವಯಂಘೋಷಿತ ಬಂದ್ ಯಶಸ್ವಿಯಾಗಿದೆ.
ವಿಜಯಪುರ ಸೇರಿದಂತೆ ಜಿಲ್ಲೆಯ ಮುದ್ದೇಬಿಹಾಳ,ಬಸವನಬಾಗೇವಾಡಿ,ತಾಳಿಕೋಟಿ, ಸಿಂದಗಿ, ಇಂಡಿ ಸೇರಿದಂತೆ ಅನೇಕ ತಾಲೂಕಿನಲ್ಲಿ ಬಂದಗೆ ಸಾರ್ವಜನಿಕರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಬಸ್ ನಿಲ್ದಾಣ ಬಜಾರ್ ಅಂಗಡಿ-ಮುಂಗಟ್ಟುಗಳು ವಾಹನ ಸಂಚಾರ ಸೇರಿದಂತೆ ಎಲ್ಲವೂ ಯಶಸ್ವಿಯಾಗಿ ಬಂದ್ ಆಗಿವೆ.
ಇದರ ಜೊತೆಯಲ್ಲಿ ಜನರು ಅಕ್ಕಪಕ್ಕದ ಮನೆಯಲ್ಲಿ ಹೋಗುವುದು ಜನರೊಂದಿಗೆ ಬೆರೆಯುವುದು ಸದ್ಯಕ್ಕೆ ನಿಲ್ಲಿಸಬೇಕು. ಸರ್ಕಾರ ಕೈಗೊಂಡಿರುವ ಈ ಕಠಿಣ ಕ್ರಮಕ್ಕೆ ಎಲ್ಲರೂ ಬದ್ಧರಾಗಿ ಬಿರುಗಾಳಿಯಂತೆ ನುಗ್ಗುತ್ತಿರುವ ಕೊರೋನ ವೈರಸ್ ಗೆ ಕಡಿವಾಣ ಹಾಕಿ ದೇಶದಿಂದ ಹೊರದಬ್ಬಿಸುವ ಕೆಲಸ ಎಲ್ಲ ಜನತೆ ಹಾಗೂ ನಾವು ನೀವು ಸೇರಿಕೊಂಡು ಮಾಡಿದರೆ, ಅದರ ನಿರ್ಮೂಲನೆ ಸಾಧ್ಯವಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ ಇದು ರಾಯಲ್ ಟಿವಿ ನ್ಯೂಸ್ ನ ಕಳಕಳಿ ಸಾರ್ವಜನಿಕರೆ ನಿರ್ಲಕ್ಷ್ಯ ಮಾಡಬೇಡಿ ಜೀವ ಅಮೂಲ್ಯವಾದದ್ದು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ : ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲದ ಉಳಿವಿಗೆ ನಾವೆಲ್ಲರೂ ಸ್ವಲ್ಪಮಟ್ಟಿಗಾದರೂ ಕೆಲಸ ಮಾಡಬೇಕಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ ಹೇಳಿದರು. ಅವರು ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ವಿಶ್ವ ಗುಬ್ಬಚ್ಚಿ ದಿನ ಹಾಗೂ ವಿಶ್ವ ಅರಣ್ಯ ದಿನಾಚರಣೆ ನಿಮಿತ್ಯ ಪಕ್ಷಿಗಳಿಗೆ ನೀರುಣಿಸುವ ಮಣ್ಣಿನ ಮುಚ್ಚಳಗಳನ್ನು ವಿತರಿಸಿ ಮಾತನಾಡಿದರು.
ನಾವು ಸಣ್ಣವರಿದ್ದಾಗ ನಮ್ಮ ಮನೆಯಂಗಳದಲ್ಲೇ ಗುಬ್ಬಿಗಳು ಗೂಡು ಕಟ್ಟಿ, ಮೊಟ್ಟೆಗಳನ್ನಿಟ್ಟು, ಮರಿ ಮಾಡಿ, ನಾವು ಹಾಕಿದ ಕಾಳು ಕಡಿ ತಿನ್ನುತ್ತ ಇದ್ದವು, ಈಚೆಗೆ ಅವುಗಳು ಬಹಳಷ್ಟು ಕಡಿಮೆ ಸಂಖ್ಯೆಯಲ್ಲಿವೆ. ನಾವು ಗಿಡಮರಗಳನ್ನು ಕಡಿಯುತ್ತ ಇರುವುದು ಅವುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ಜೊತೆಗೆ ಕಾಂಕ್ರೀಟ್ ಮನೆಗಳಲ್ಲಿ ಅವುಗಳ ಸಂತಾನ ಬೆಳೆಯುತ್ತಿಲ್ಲ, ನಾವು ಆಸಕ್ತಿ ವಹಿಸಿ ಗುಬ್ಬಿಗಳಿಗೆ, ಪಕ್ಷಿಗಳಿಗೆ ಮನೆಗಳ ಮೇಲ್ಮಹಡಿಗಳಲ್ಲಿ ಗೂಡು ನಿರ್ಮಿಸಬೇಕು. ಅವುಗಳಿಗೆ ಕಾಳು ಕಡಿ ಹಾಕಿ, ನೀರೂ ಸಮೀಪದಲ್ಲಿ ಸಿಗುವಂತೆ ವ್ಯವಸ್ಥೆ ಮಾಡಬೇಕು. ಆಸಕ್ತಿಯಿಂದ ಯಾರೇ ಕೇಳಿದರೂ ಮಣ್ಣಿನ ಪಾತ್ರೆಗಳನ್ನು ಹಸಿರು ತೋರಣ ಬಳಗ ಉಚಿತವಾಗಿ ವಿತರಿಸಲಿದೆ ಎಂದರು. ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ: ಅರಣ್ಯ ಹಾಗೂ ಪಕ್ಷಿ ಸಂಕುಲ ಒಂದಕ್ಕೊಂದು ಪೂರಕವಾಗಿವೆ. ಗಿಡ, ಮರಗಳು ಇದ್ದರೆ ಮಾತ್ರ ಪಕ್ಷಿ ಸಂಕುಲ ಉಳಿಯುತ್ತದೆ. ವೈಜ್ಞಾನಿಕ ಸಂಶೋಧನೆಯಂತೆ ಮೊಬೈಲ್ ವಿಕಿರಣಗಳು (ತರಂಗ)ಗಳಿಂದಾಗಿ ಪಕ್ಷಿಗಳ ಸಂಖ್ಯೆ ಕಡಿಮೆಯಾಗಿದೆಯಂತೆ. ಆದರೆ ಮನುಷ್ಯ ಮನಸ್ಸು ಮಾಡಿದರೆ ಮನೆಯಂಗಳದಲ್ಲಿ ಪಕ್ಷಿಗಳು ಗೂಡುಕಟ್ಟಿಕೊಳ್ಳುವಂತೆ ಮಾಡಬಹುದು, ಇದು ಮಕ್ಕಳಿಗೆ ಖುಷಿ ಕೊಡುತ್ತದೆ ಎಂದರು. ಕಾರ್ಯಕ್ರಮದ ಅಂಗವಾಗಿ ಹಸಿರು ತೋರಣ ಉದ್ಯಾನವನದಲ್ಲಿ ಹಾಗೂ ಮಾರುತಿ ನಗರದಲ್ಲಿರುವ ಕಿತ್ತೂರು ಚನ್ನಮ್ಮ ಉದ್ಯಾನವನದಲ್ಲಿ ಅಲ್ಲಲ್ಲಿ ಮಣ್ಣಿನ ಮುಚ್ಚಳಗಳನ್ನು ಮಣ್ಣಲ್ಲಿ ಇಟ್ಟು ನೀರು ಹಾಗೂ ಕಾಳುಗಳನ್ನು ಹಾಕಲಾಯಿತು. ಹಾಗೂ ಆಸಕ್ತರಿಗೆ ಮಣ್ಣಿನ ಮುಚ್ಚಳಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಳಗದ ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ನಾಗಭೂಷಣ ನಾವದಗಿ ವಕೀಲರು, ಉಪಾಧ್ಯಕ್ಷ ಎಲ್.ಎಂ.ಚಲವಾದಿ, ಕಾರ್ಯದಶರ್ಿ ರಾಜಶೇಖರ ಕಲ್ಯಾಣಮಠ, ಬಿ.ಎಸ್.ಮೇಟಿ, ಬಿ.ಎಂ.ಪಲ್ಲೇದ, ಜೆಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಎಚ್.ವೈ.ಪಾಟೀಲ ವಕೀಲರು, ರವಿ ತಡಸದ, ವೆಂಕನಗೌಡ ಪಾಟೀಲ, ಪರಶುರಾಮ ಢವಳಗಿ, ಮಲ್ಲಿಕಾರ್ಜುನ ಬಾಗೇವಾಡಿ, ಬಿ.ಎ.ನಾಡಗೌಡ ವಕೀಲರು, ಕಿರಣ ಕಡಿ, ಡಾ.ವೀರೇಶ ಇಟಗಿ, ಡಾ.ಚಂದ್ರಶೇಖರ ಶಿವಯೋಗಿಮಠ, ಡಾ.ವೀರೇಶ ಪಾಟೀಲ, ಬಸವರಾಜ ಹೊನಕೇರಿ ವಕೀಲರು, ಕೂಡಗಿ, ವಿಜಯಕುಮಾರ ಕಡಿ, ಬಿ.ಎಚ್.ಬಳಬಟ್ಟಿ, ಶ್ರೀಕಾಂತ ಹಡಲಗೇರಿ, ಜಿ.ಎಂ.ಹುಲಗಣ್ಣಿ, ಶಿವನಗೌಡ ಪಾಟೀಲ, ವಿಲಾಸ ದೇಶಪಾಂಡೆ, ಪಾಲಾಕ್ಷಿಗೌಡ ಪೊಲೀಸ್ ಪಾಟೀಲ, ಸುನೀಲ ಕಳಸಾ, ವೀರೇಶ ಹಂಪನಗೌಡರ, ಬಸವರಾಜ ಬೂದಿಹಾಳ, ಮತ್ತಿತರರು ಇದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೋನ ವೈರಸ್ ನಿಯಂತ್ರಣ ಕುರಿತು ಇದೇ ಭಾನುವಾರ ದೇಶಾದ್ಯಂತ ಕರೆ ನೀಡಿದ ಜನತಾ ಕರ್ಪ್ಯೂ ಅನ್ನು ಮುದ್ದೇಬಿಹಾಳ ತಾಲೂಕಿನಾದ್ಯಂತ ಇರುವ ಜನರು ಬೆಂಬಲಿಸಬೇಕು, ಎಂದು ಸಮಾಜಸೇವಕಿ ಹಾಗೂ ಬಿಜೆಪಿ ಪಕ್ಷದ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ಎಸ್ ರಾಂಪುರ್ ವಿನಂತಿಸಿಕೊಂಡಿದ್ದಾರೆ.
ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಭಾನುವಾರ ಬೆಳಿಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಾರ್ವಜನಿಕರು ತಮ್ಮ ಮನೆಯಿಂದ ಹೊರಗೆ ಬರಬಾರದು ಅಲ್ಲದೆ ವೈರಸ್ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಎಂದು ದೇಶದ ಜನರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಅವರ ಮಾತಿಗೆ ಸಹಕರಿಸಬೇಕು ಎಂದು ಹೇಳಿದರು.
ಮೂಲತಹಃ ಚೀನಾ ದೇಶದಿಂದ ಆರಂಭವಾದ ಈ ರೋಗವು ಎಲ್ಲ ರಾಷ್ಟ್ರಗಳಲ್ಲಿ ವ್ಯಾಪಿಸಿಕೊಂಡಿದೆ ಅಮೇರಿಕಾ, ಇಟಲಿ, ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ಸಾಕಷ್ಟು ಅವಸರದಲ್ಲಿ ಈ ರೋಗ ಹರಡುತ್ತಿದೆ ಆದರೆ ಭಾರತದಲ್ಲಿ ಕೇಂದ್ರಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗವು ಹರಡದಂತೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಈ ರೋಗದ ಬಗ್ಗೆ ಜಾಗೃತಿ ವಹಿಸಬೇಕಾಗಿದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಬರುವುದು ಬಿಡಬೇಕು ಮೋದಿಯವರ ಆಜ್ಞೆಯನ್ನು ಪಾಲಿಸಬೇಕು ಎಂದು ಕಾಶೀಬಾಯಿ ರಾಂಪೂರ ಹೇಳಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿ-8792900064
ಈಜಲು ಹೋದ ಬಾಲಕರಿಬ್ಬರು ಮೃತ ಪಟ್ಟ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕುಮಾರಪ್ಪ ಮಡಿವಾಳಪ್ಪ ಕೋರಿ ಅವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಘಟನೆ ಸಂಭವಿಸಿದೆ.
ಶಾಲೆ ರಜೆ ಇದ್ದ ಕಾರಣ ಐದು ಮಕ್ಕಳು ಸೇರಿಕೊಂಡು ಈಜಲು ಈ ಕೃಷಿ ಹೊಂಡಕ್ಕೆ ಹೋಗಿದ್ದಾರೆ,ಎನ್ನಲಾಗಿದೆ ಇವರಲ್ಲಿ ಇಬ್ಬರು ಹೊರಗಡೆ ಬಂದಿದ್ದು ಒಬ್ಬ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಇಬ್ಬರು ಬಾಲಕರು ಸಾವನ್ನಪ್ಪಿದ್ದು ಅಮಿತ್ ಟಕ್ಕಳಕಿ (11 ವರ್ಷ ಸಿದ್ದರಾಮಪ್ಪ ಗೌಡ ಮುದುಕಪ್ಪ ಬಿರಾದಾರ್ (12) ವರ್ಷ ದ ಮೃತ ದುರ್ದೈವಿ ಗಳಾಗಿದ್ದಾರೆ. ಇತ್ತ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ ಘಟನೆಗೆ ಢವಳಗಿ ಗ್ರಾಮವೇ ಮೌನವಾಗಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಂಗಳೂರಿನ ಚಿನ್ನೇನಹಳ್ಳಿ ಆರ್ ಎಸ್ ಎಸ್ ಜನಸೇವಾ ವಿದ್ಯಾಕೇಂದ್ರದಲ್ಲಿ ಶಂಕರಗೌಡ ಆಯ್ ಪಾಟೀಲ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗಳು, ಭಾಜಪ ರಾಷ್ಟ್ರೀಯ ಉಪಾಧ್ಯಕ್ಷರು ಕಿಸಾನ್ ಮೋರ್ಚಾ ನವದೆಹಲಿ ಹಾಗೂ ಮಾಹಿತಿ ತಂತ್ರಜ್ಞಾನ ಉದ್ಯಮಿ ಮತ್ತು ಮುದ್ದೇಬಿಹಾಳ ಹಾಗೂ ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ ಇವರು ಸನ್ಮಾನ್ಯ ಜೆ. ಪಿ. ನಡ್ಡಾ ಜೀ ಭಾಜಪ ರಾಷ್ಟ್ರೀಯ ಅಧ್ಯಕ್ಷರು ನವದೆಹಲಿ ಮತ್ತು ಮಾನ್ಯ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಆರ್ ಎಸ್ ಎಸ್ ಪ್ರಮುಖರು, ಮೋಹನ್ ಭಾಗವತ್ ಜೀ ಆರ್ ಎಸ್ ಎಸ್ ಪ್ರಮುಖರು, ಸನ್ಮಾನ್ಯ ರಾಮ ಮಾಧವ ಜೀ ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳು ನವದೆಹಲಿ ಮತ್ತು ಆರ್ ಎಸ್ ಎಸ್ ನ ಪ್ರಮುಖ ರಾಷ್ಟ್ರೀಯ ಮುಖಂಡರನ್ನು ಭೇಟಿಯಾಗಿ ಚರ್ಚಿಸಿ ಮುಂಬರುವ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.
ರಾಯಲ್ ಟಿವಿ ನ್ಯೂಸ್ ಬೆಂಗಳೂರು ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ – 8792900064