ಹಾಸ್ಯ ನಟ ಬುಲೆಟ್ ಪ್ರಕಾಶ ವಿಧಿವಶ

ಬೆಂಗಳೂರ:ಹಾಸ್ಯ ನಟ ಕನ್ನಡದ ಕಾಮಿಡಿ ಆಕ್ಟರ್ ಬುಲೆಟ್ ಪ್ರಕಾಶ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಇಂದ ಬೆಂಗಳೂರಿನ ಕಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.ಅವರಿಗೆ (44) ವರ್ಷ ವಯ್ಯಸ್ಸಾಗಿತ್ತು.

1976 ಎಪ್ರಿಲ್ 2 ರಂದು ಜನಿಸಿದ ಬುಲೆಟ್ ಪ್ರಕಾಶ 325 ಸಿನೆಮಾದಲ್ಲಿ ನಟಿಸಿದ್ದರು ಇವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತಿದ್ದರು ಇಂದು ಸಂಜೆ 4:45 ಸುಮಾರಿಗೆ ವಿಧಿವಶರಾಗಿದ್ದಾರೆ.ಇನ್ನೂ ಇವರ ಸಾವಿಗೆ ಇಡಿ ಚಿತ್ರರಂಗವೆ ಕಂಬನಿ ಮಿಡಿದಿದೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಹಾಸ್ಯ ನಟ ಬುಲೆಟ್ ಪ್ರಕಾಶ ವಿಧಿವಶ

ಬೆಂಗಳೂರ:ಹಾಸ್ಯ ನಟ ಕನ್ನಡದ ಕಾಮಿಡಿ ಆಕ್ಟರ್ ಬುಲೆಟ್ ಪ್ರಕಾಶ ಕಿಡ್ನಿ ಹಾಗೂ ಲಿವರ್ ಸಮಸ್ಯೆ ಇಂದ ಬೆಂಗಳೂರಿನ ಕಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದಾರೆ.ಅವರಿಗೆ (44) ವರ್ಷ ವಯ್ಯಸ್ಸಾಗಿತ್ತು.

1976 ಎಪ್ರಿಲ್ 2 ರಂದು ಜನಿಸಿದ ಬುಲೆಟ್ ಪ್ರಕಾಶ 325 ಸಿನೆಮಾದಲ್ಲಿ ನಟಿಸಿದ್ದರು ಇವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತಿದ್ದರು ಇಂದು ಸಂಜೆ 4:45 ಸುಮಾರಿಗೆ ವಿಧಿವಶರಾಗಿದ್ದಾರೆ.ಇನ್ನೂ ಇವರ ಸಾವಿಗೆ ಇಡಿ ಚಿತ್ರರಂಗವೆ ಕಂಬನಿ ಮಿಡಿದಿದೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಸಿಡಿಲು ಬಡಿದು ವ್ಯಕ್ತಿ ಸಾವು

ವಿಜಯಪುರ ಬ್ರೇಕಿಂಗ್

ಸಿಡಿಲು ಬಡಿದು ವ್ಯಕ್ತಿ ಸಾವು

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರ ಗ್ರಾಮದಲ್ಲಿ ಘಟನೆ

ಹೊಲದಲ್ಲಿದ್ದಾಗ ಸಿಡಿಲು ಬಡಿದು ವ್ಯಕ್ತಿ ಸಾವು

ಗುಂಡಪ್ಪ ಸಕ್ರಪ್ಪ ಚಬನೂರ(55) ಮೃತಪಟ್ಟ ವ್ಯಕ್ತಿ

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಕೊರೋನ ಸೋಂಕು ನಿವಾರಣೆಗೆ ಮೋದಿಜಿಯ ಆಜ್ಞೆ ಪಾಲಿಸೋನ-ಮಲ್ಲನಗೌಡ ಬಿರಾದಾರ ಕೋರವಾರ ವಿನಂತಿ

ವಿಜಯಪುರ:ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡಿರುವ ದೀಪ ಬೆಳಗಿಸುವ ಮಹತ್ತರವಾದ ಅನುಷ್ಠಾನಕ್ಕೆ ಇಂದು ರಾತ್ರಿ ಒಂಬತ್ತು ಗಂಟೆಗೆ ಆರಂಭವಾಗುವ 9 ನಿಮಿಷಗಳ ಕಾಲ ತಾವೆಲ್ಲರೂ ಪ್ರಧಾನಮಂತ್ರಿ ಮೋದಿಜಿ ಹೇಳಿದಂತೆ ತಮ್ಮ ತಮ್ಮ ಮನೆಗಳಲ್ಲಿ ದೀಪ ಹಚ್ಚುವುದರ ಮೂಲಕ ಈ ಸೋಂಕು ನಿವಾರಣೆಗೆ ಮೋದಿಜಿ ಪಣತೊಟ್ಟ ಕಾರ್ಯಕ್ಕೆ ನಾವು ನೀವೆಲ್ಲರೂ ಕೂಡಿ ಯಶಸ್ವಿಗೊಳಿಸೋಣ.

ಕೇವಲ ಮನೆಯ ಕಿಟಕಿ ಬಾಲ್ಕನಿ ಹಾಗೂ ಮುಖ್ಯದ್ವಾರ ದಲ್ಲಿಯೇ ನಿಂತು ದೀಪ ಬೆಳಗಿಸುವ ಕಾರ್ಯವನ್ನು ಮಾಡಬೇಕು ಯಾರು ಬೀದಿಗೆ ಇಳಿಯಬಾರದು ಎಂದು

ಬಿಜೆಪಿ ಪಕ್ಷದ ಮುದ್ದೇಬಿಹಾಳ ದೇವರಹಿಪ್ಪರಗಿ ಮತಕ್ಷೇತ್ರದ ಮುಖಂಡರಾದ ಮಲ್ಲನಗೌಡ ಬಿರಾದಾರ್ ಕೋರವಾರ ಅವರು ವಿನಂತಿಸಿಕೊಂಡಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ನಿಯಂತ್ರಣ ತಪ್ಪಿ ಸರಕು ಸಾಗಾಣಿಕೆಯ ಲಾರಿ ಪಲ್ಟಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯ ಹತ್ತಿರ ಇರುವ ಸೇತುವೆ ಮೇಲೆ ಲಾಕ್ ಡೌನ್ ಸಲುವಾಗಿ ಬೇಕಾಬಿಟ್ಟಿ ವಾಹನಗಳು ಸಂಚರಿಸಿದಂತೆ ರಸ್ತೆಯ ಮೇಲೆ ಹಾಕಿರುವ ಮಣ್ಣಿನ ದಿಬ್ಬ ದೊಡ್ಡ ಗಾತ್ರದ ವಾಹನಗಳಿಗೆ ರಸ್ತೆಯ ಸಂಚಾರಕ್ಕೆ ಅಡಚಣೆಯಾಗಿದ್ದು ಕಾರಣ ಆಂಧ್ರಪ್ರದೇಶ ಮೂಲದ ಸರಕು

ಸಾಗಾಣಿಕೆ ಮಾಡುವ ಲಾರಿಯೊಂದು ನಿಯಂತ್ರಣ ತಪ್ಪಿ ಸೇತುವೆ ಮೇಲೆ ಹೊರಳಿದ್ದು ಸಂಭವಿಸಬಹುದಾದ ಬಾರಿ ಅನಾಹುತ ತಪ್ಪಿದೆ ಆದರೆ ಈ ಘಟನೆಯಲ್ಲಿ ಸಾವು ನೋವು ಸಂಭವಿಸಿಲ್ಲ ಈ ಘಟನೆ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಪ್ರಧಾನಿ ಮೋದಿ ದೇಶದ ಜನತೆಗೆ ದೀಪ ಬೆಳಗುವ ಸಂದೇಶ

ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎನ್ನುವ ಸಂದೇಶವನ್ನು ಮತ್ತೊಮ್ಮೆ ಹೇಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಏಪ್ರಿಲ್ 5ರಂದು ರಾತ್ರಿ ದೀಪ ಬೆಳಗಿಸಿ ಎಂದು ಕರೆ ನೀಡಿದ್ದಾರೆ.

ದೇಶವನ್ನು ಉದ್ದೇಶಿಸಿ ಇಂದು ಅವರು ಮಾತನಾಡಿದ ಅವರು, ಏಪ್ರಿಲ್ 5ರ ರಾತ್ರಿ 9 ಗಂಟೆಗೆ ಮನೆಯ ಎದುರು ಇಲ್ಲವೆ ಬಾಲ್ಕನಿಯಲ್ಲಿ ನಿಂತು 9 ನಿಮಿಷ ಮೊಂಬತ್ತಿ, ದೀಪ, ಬ್ಯಾಟರಿ ಇಲ್ಲವೆ ಮೊಬೈಲ್ ಲೈಟ್ ಬೆಳಗಿಸಿ. ಈ ಸಂದರ್ಭದಲ್ಲಿ ಮನೆಯ ಲೈಟ್ ಗಳನ್ನು ಸಂಪೂರ್ಣ ಆರಿಸಿರಿ ಎಂದು ಕರೆ ನೀಡಿದ್ದಾರೆ.

ಮಾರ್ಚ್ 22ರಂದು ನಡೆಸಿದ ಜನತಾ ಕರ್ಫ್ಯೂ ಅತ್ಯಂತ ಯಶಸ್ವಿಯಾಗಿದೆ. ಇಡೀ ವಿಶ್ವವೇ ಇದನ್ನು ಪ್ರಶಂಸಿದೆ ಮತ್ತು ಅನುಸರಿಸುತ್ತಿದೆ ಎಂದ ಮೋದಿ, ಇನ್ನೂ ಎಷ್ಟು ದಿನ ಈ ಪರಿಸ್ಥಿತಿ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಕೊರೋನಾ ಹೊಡೆದೋಡಿಸಲು ಇದು ಅನಿವಾರ್ಯ ಎಂದರು.

ಏಪ್ರಿಲ್ 5ರಂದು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡೇ ದೀಪ ಬೆಳಗಿಸಬೇಕು. ಯಾರೂ ಹತ್ತಿರ ಸೇರಬಾರದು. ರಸ್ತೆಗೆ ಇಳಿಯಬಾರದು. ಮಹಾಭಾರತದ ಸಂದೇಶವನ್ನು ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ. ನಾವು 130 ಕೋಟಿ ಜನರೂ ಒಂದಾಗಿದ್ದೇವೆ ಎನ್ನುವ ಸಂದೇಶವನ್ನು ಸಾರಬೇಕಾಗಿದೆ ಎಂದೂ ಅವರು ವಿನಂತಿಸಿದ್ದಾರೆ.

ರಾಯಲ್ ಟಿವಿ ವೆಬ್ ನ್ಯೂಸ್ ನವದೆಹಲಿ ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಬಾಗಲಕೋಟ ನಲ್ಲಿ ವೃದ್ದನಿಗೆ ಕೊರೋನ ಸೋಂಕು

ಬಾಗಲಕೋಟ ಬ್ರೇಕಿಂಗ್ :

ಬಾಗಲಕೋಟಯಲ್ಲಿ ಮೊದಲ ಕೊರೋನಾ ಸೋಂಕು ದೃಡವಾಗಿದೆ

ಬಾಗಲಕೋಟ ನಗರದ ನಿವಾಸಿ

೭೦ ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ದೃಡ.

ವೃದ್ದನ ಕುಟುಂಬಸ್ಥರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ಬಾಗಲಕೋಟ ಎಸ್ ಪಿ ಲೊಕೇಶ ಜಗಲಸಾರ್ ಹೇಳಿದ್ದಾರೆ.

ಬಾಗಲಕೋಟೆಯ ಓರ್ವ ವ್ಯಕ್ತಿಗೆ ಕೋವಿಡ್-19 ಸೋಂಕು ದೃಡ

ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿಕೆ

ಬುಧವಾರ ಮೂರು ವ್ಯಕ್ತಿಗಳ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿತ್ತು

ಮೂರು ಸ್ಯಾಂಪಲ್ ವರದಿಗಳ ಪೈಕಿ ಒಂದು ಪಾಜಿಟಿವ್ ದೃಡಪಟ್ಟಿದೆ

ಉಳಿದ ಎರಡು ಸ್ಯಾಂಪಲ್ ನೆಗೆಟಿವ್ ಎಂದು ವರದಿಯಾಗಿದೆ.

ಸದ್ಯ ಕೋವಿಡ್-19 ಸೋಂಕಿತ ವ್ಯಕ್ತಿಯನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್‌ ವಾರ್ಡನಲ್ಲಿ ಚಿಕಿತ್ಸೆ.

ರಾಯಲ್ ಟಿವಿ ನ್ಯೂಸ್ ಬಾಗಲಕೋಟ,ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ದೆಹಲಿ ನಿಜಾಮುದ್ದಿನ ಮಸೀದಿಯಲ್ಲಿ ಸಭೆ ನಡೆಸಿದವರು ವಿಜಯಪುರದಲ್ಲಿ ಜಿಲ್ಲಾ ಅಧಿಕಾರಿಗಳಿಂದ ಅಧಿಕೃತ ಮಾಹಿತಿ

ವಿಜಯಪುರ:ದೆಹಲಿ ನಿಜಾಮುದ್ದೀನ್ ಮಸೀದಿಯಲ್ಲಿ ಸಭೆ ನಡೆಸಿದ ಐವರು ಹಾಗೂ ಅವರ ಜೊತೆಗಿದ್ದ ಐವರು ಮಹಿಳೆಯರು ವಿಜಯಪುರ ದಲ್ಲಿ ವಾಸವಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದ್ದಾರೆ. ಈಗಾಗಲೇ ಹತ್ತು ಜನರ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದಾರೆ.

ಅಲ್ಲದೇ ಈಗಾಗಲೇ ಪಶ್ಚಿಮ ಬಂಗಾಲ ಮೂಲದ ಹತ್ತು‌ ಜನರು ಮಾರ್ಚ 3 ಕ್ಕೆ ಪಶ್ಚಿಮ ಬಂಗಾಲದಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅವರು ಮಾರ್ಚ್ 4 ಕ್ಕೆ ದೆಹಲಿ ತಲುಪಿ ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಆ ಹತ್ತು ಜನರ ತಂಡವು ಮಾರ್ಚ 10 ರಂದು ವಿಜಯಪುರ ಜಿಲ್ಲೆ ತಲುಪಿದೆ. ಬಳಿಕ ನಗರದ ಕೆಲವು ಕಡೆಗಳಲ್ಲಿ ಸಭೆ ನಡೆಸಿದ್ದಾರೆ‌. ಈ ಎಲ್ಲರ ಮಾಹಿತಿ ಕಲೆ ಹಾಕಿ ಆರೋಗ್ಯ ಇಲಾಖೆ ಅವರವರ ಮನೆ‌ಗಳನ್ನು ನಿಗಾದಲ್ಲಿರಿ ಸಿದ್ದಾರೆ. ಹಾಗೆ ಆ ಎಲ್ಲ ಹತ್ತು ಜನರ ಗಂಟಲು ದ್ರವ್ಯ ಮಾದರಿಯನ್ನು ಸಂಗ್ರಹಿಸಿ ದ್ರವ್ಯ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.

ಈ ಎಲ್ಲರ ಪರೀಕ್ಷಾ ವರದಿ ಬಳಿಕ ಕೊರೊನಾ ಪಾಸಿಟಿವ್, ನೆಗೆಟಿವ್ ಬಗ್ಗೆ ಮಾಹಿತಿ ಸಿಗಲಿದೆ. ಇನ್ನು ಇವರ ಸಂಪರ್ಕ ಹೊಂದಿದ 23 ಜನರಿಗೂ ಮನೆ ನಿಗಾ ವಹಿಸಿ ಮುಂಜಾಗೃತಾ ಕ್ರಮವಾಗಿ ಮನೆ ನಿಗಾದಲ್ಲಿ ಇರಿಸಲಾಗಿದೆ. ಅವಶ್ಯ ಬಿದ್ದರೆ ಅವರ ಗಂಟಲು ದ್ರವ್ಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ.ಅಲ್ಲದೇ ಇಂಡೋನೇಷ್ಯಾ ಹಾಗೂ ಮಲೇಷಿಯಾ ದೇಶ ಪ್ರವಾಸ ಮಾಡಿ ವಾಪಸ್ ಬಂದ ಮೂವರಿಗೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ವಿಜಯಪುರದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾಹಿತಿ ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವಿಜಯಪುರ,ವೀಕ್ಷಿಸಿ ಶೇರ್ ಮಾಡಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ನೆರೆ ರಾಜ್ಯದ ಜನರ ಪಾಲಿಗೆ ಸಂಜೀವಿನಿ ಆದರು ವಿಜಯಪುರದ ಜಿಲ್ಲಾ ಅಧಿಕಾರಿ ವೈ ಎಸ್ ಪಾಟೀಲ

ವಿಜಯಪುರ: ಜಿಲ್ಲಾ ಆಡಳಿತದಿಂದ ದೇಶಕ್ಕೆ ಮಾದರಿಯಾಗಬಲ್ಲ ಮಾನವೀಯತೆಯ ಕೆಲಸ ಮಾಡಿದ್ದಾರೆ. ರಾಜಸ್ಥಾನ ದಿಂದ ವಲಸೆ ಬಂದ ಕಾರ್ಮಿಕರು ಬೆಂಗಳೂರಿನಿಂದ ಹೋಗುವಾಗ ಅವರು ವಿಜಯಪುರದ ಸರಹದ್ದಿನಲ್ಲಿ ಸಿಲುಕಿಕೊಂಡಿದ್ದರು,ಅವರು ರಾಜಸ್ಥಾನಕ್ಕೆ ತೆರಳಲು ಪರದಾಡುತ್ತಿದ್ದರು ಅವರ ಸಮಸ್ಯೆಯನ್ನು ಅರಿತು ಅವರ ರಾಜ್ಯಕ್ಕೆ ಕಳಿಸಲು‌ ಬಸ್ ವ್ಯವಸ್ಥೆಯನ್ನು ವಿಜಯಪುರದ ಜಿಲ್ಲಾ ಅಧಿಕಾರಿ ವೈ ಎಸ್ ಪಾಟೀಲ ಅವರು ಸರ್ಕಾರದ ಜೊತೆ ಚರ್ಚೆ ಮಾಡಿ ಅವರ ಊರುಗಳಿಗೆ ತಲುಪಲು ಸಹಾಯ ಮಾಡಿ ದೇಶವ್ಯಾಪ್ತಿಯಲ್ಲಿ ಮಾನವೀಯತೆಯನ್ನು ಮೆರದಿದ್ದಾರೆ.

ಇನ್ನೂ ಆ ಜನರು ರಾಜಸ್ಥಾನಕ್ಕೆ ತಲುಪಲು ಏಳು ಜನ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕದ ಜನರನ್ನು ಗೋವಾ ಮಹಾರಾಷ್ಟ್ರದಲ್ಲಿ ಹೊರ ಹಾಕುತ್ತಿದ್ದರು ನಮ್ಮ ಕರ್ನಾಟಕದ ಹೆಮ್ಮೆಯ ಅಧಿಕಾರಿಗಳು ಈ ರೀತಿಯಲ್ಲಿ ಮಾನವೀಯತೆಯನ್ನು ನೋಡಿದರೆ ನಿಜಕ್ಕೂ ಹೊರ ರಾಜ್ಯದ ಜನತೆಗೆ ಹಾಗೂ ಕನ್ನಡದವರ ಮೇಲೆ ದಬ್ಬಾಳಿಕೆಯ ಮಾಡುತ್ತಿರುವವರಿಗೆ ಅಸಹ್ಯ ಆಗಬೇಕು ಅದರಂತೆ ಇಂತಹ ವಿಜಯಪುರದ ವೈ ಎಸ್ ಪಾಟೀಲ ಜಿಲ್ಲಾ ಅಧಿಕಾರಿಯಂತವರ ಕಾರ್ಯ ವೈಕರಿಯಿಂದ ಬುದ್ದಿ ಕಲಿಯಬೇಕು ನೆರೆಯ ರಾಜ್ಯದ ಜನತೆ ಇನ್ನಾದರೂ ಮಾನವೀಯತೆ ಇಂದ ನಡೆದುಕೊಳ್ಳಬೇಕು ನಮ್ಮಂತೆಯೇ ಅವರ ಜೀವನವು ಕೂಡ ಎಂಬ ಅರಿವು ಮೂಡಿದರೆ ಸಾಕು.

ರಾಯಲ್ ಟಿವಿ ನ್ಯೂಸ್ ವಿಜಯಪುರ-ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಸಿಬ್ಬಂದಿಗೆ ಸ್ವಚ್ಚತೆಯ ಪಾಠ ಹೇಳಿದ ಡಿ ವೈ ಎಸ್ ಪಿ, ಎಸ್ ವಿ. ಗಿರೀಶ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣಕ್ಕೆ ಬಂದೋಬಸ್ತಗಾಗಿ ಆಗಮಿಸಿದ ಸಿ ಆರ್ ಪಿ ಎಪ್ ಸಿಬ್ಬಂದಿ ಮತ್ತು ಅಥಣಿ ಪೋಲಿಸ್ ಠಾಣೆಯ ಸಿಬ್ಬಂದಿಗೆ ಅಥಣಿ ಡಿ ವೈ ಎಸ್ ಪಿ ಎಸ್ ವಿ ಗಿರೀಶ್ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಮನವಿ ಮಾಡಿದರಲ್ಲದೆ ತಾವೇ ಸ್ವತಃ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣೆ ಮಾಡಿ ಶಾಂತಿ ಸುವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಬಂದವರು ಆರೋಗ್ಯವಂತರಾಗಿ ಇದ್ದಾಗ ಮಾತ್ರ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಈ ವೇಳೆ ಅಥಣಿ ಪೋಲಿಸ್ ಠಾಣೆ ಸಿಪಿಐ ಶಂಕರಗೌಡ ಪಾಟೀಲ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ವರದಿ:ಸಚೀನ ಕಾಂಬಳೆ

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಿ-8792900064

Design a site like this with WordPress.com
Get started