ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಹಾಗೂ ಪೋಲಿಸ್ ಇಲಾಖೆಯ ವತಿಯಿಂದ ಸರ್ಕಾರದ ಮತ್ತು ಜಿಲ್ಲಾ ಅಧಿಕಾರಿ Y.S ಪಾಟೀಲ, SP ಅನುಪಮ ಅಗರವಾಲ ಅವರ ಆಜ್ಞೆ ಯಂತೆ ಪಟ್ಟಣದ ಬಜಾರದಲ್ಲಿ ಬೇಕಾ ಬಿಟ್ಟಿ ತಿರುಗಾಡುವವರ ಸಲುವಾಗಿ ರಸ್ತೆಗೆ ಅಡ್ಡಲಾಗಿ ಕಬ್ಬಿಣದ ಪೈಪ್ ಗಳನ್ನು ಕಟ್ಟಿ ಸಂಪುರ್ಣವಾಗಿ ಬಂದ ಮಾಡಿದ್ದಾರೆ.ಸಾರ್ವಜನಿಕರು ಅನಾವಶ್ಯಕವಾಗಿ ಹೋರಗಡೆ ಹೋಗಿ ಪೋಲಿಸ್ ರ ಲಾಟಿ ಏಟು ತಿನ್ನಬೇಡಿ.ನಿಮ್ಮ ಮನೆಯಲ್ಲಿ ಇರಿ ವಿಜಯಪುರ ಜಿಲ್ಲೆ ಈಗ ಡೆಂಜರ ಜೋನ್ ನಲ್ಲಿದೆ. ಅಧಿಕಾರಿಗಳೊಂದಿಗೆ ಸಹಕರಿಸಿ ನೀವು ಮನೆಯಲ್ಲಿರಿ ಕೋವಿಡ್-19 ವಿರುದ್ದ ಹೋರಾಡಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವವನ್ನು ರಕ್ಷಿಸಿ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದ ಮನೆಗಳ ಹತ್ತಿರದಲ್ಲಿ ಯಾರೊ ಎನನ್ನೊ ಚೀಲದಲ್ಲಿ ಪ್ಯಾಕ್ ಮಾಡಿ ತಂದು ಎಸೆದು ಹೋಗಿದ್ದರು, ಸ್ಥಳೀಯರು ಬೆಳಿಗ್ಗೆ ನೋಡಿ ಭಯ ಬೀತರಾಗಿದ್ದರು ಕೆಲವೊಬ್ಬರು ನೋಡಿ ಹೆದರಿ ಪೋಲಿಸ್ ಕಂಟ್ರೋಲ್ ರೂಂ ಗೆ ಕಾಲ್ ಮಾಡಿ ಪೋಲಿಸ್ ಸ್ಟೇಷನ್ ಗೆ ಕಾಲ ಮಾಡಿದಾಗ ಪೋಲಿಸ್ ರು ಬಂದು ನೋಡಿದ್ದರು ಆದರೆ ಅದರಲ್ಲಿ ಅನಾಮಧೇಯ ಗ್ಯಾಸ್ ಸಿಲಿಂಡರ್ ಪ್ಯಾಕ್ ಮಾಡಿ ಎಸೆದು ಹೋಗಿದ್ದರು,ಜನ ಇದರಲ್ಲಿ ಬಾಂಬ್ ಪಿಕ್ಸ್ ಮಾಡಿ ಒಗದಿರಬಹುದೆಂದು,ಅಲ್ಲದೇ ಕೊರೋನ ವೈರಸ್ ತುಂಬಿ ಒಗದಿರಬಹುದೆಂದು ಭಯದಲ್ಲಿ ಇದ್ದರು.
ನಂತರ ಪಿಎಸ್ಐ ಮಲ್ಲಪ್ಪ ಮಡ್ಡಿ ಹಾಗೂ ಪುರಸಭೆ ಅಧಿಕಾರಿ ರಮೇಶ ಮಾಡಬಾಳ ಅವರನ್ನು ಸಂಪರ್ಕಿಸಿದಾಗ ಪುರಸಭೆ ಸಿಬ್ಬಂದಿಗಳನ್ನು ವಾಹನದ ಸಮೇತ ಸ್ಥಳಕ್ಕೆ ಆಗಮಿಸಿದರು.
ಪುರಸಭೆ ಸಿಬ್ಬಂದಿಗಳು ಬಂದು ಅದನ್ನು ಮುಟ್ಟಲು ಹಿಂಜರಿದರು ಕಾರಣ ತುಂಬಾ ಗಬ್ಬು ವಾಸನೆ, ಒಂದೆಡೆ ಬ್ಲಾಸ್ಟ್ ಆಗುವುದೆಂಬ ಭಯ ಆದರು ಜೀವವನ್ನು ಒತ್ತೆ ಇಟ್ಟು ಅದನ್ನು ಎತ್ತಿ ಗಾಡಿಯಲ್ಲಿ ಹಾಕಿಕೊಂಡು ಹೋದರು. ನೆರೆಹೊರೆಯ ಜನರು ಭಯವನ್ನು ಹೋಗಲಾಡಿಸಿದರು.
ಇಲ್ಲಿ ಸಾರ್ವಜನಿಕರೆ ಗಮನಿಸಬೇಕು ಆ ಸಿಲಿಂಡರ್ ರಾತ್ರಿನೆ ಯಾರು ತಂದು ಒಗದಿದ್ದಾರೆ ಬೆಳಿಗ್ಗೆ ನೋಡಿದ ಜನ ಭಯ ಭೀತರಾಗಿ ನೂರಾರು ಜನ ಅದನ್ನು ದೂರದಿಂದಲೇ ನೋಡಿದರು ಮಾತ್ರ ಯಾರು ಮುಟ್ಟಲಿಲ್ಲ ಆದರೆ ಪೋಲಿಸರು ಪುರಸಭೆ ಸಿಬ್ಬಂದಿಗಳು ಅದನ್ನು ಮುಟ್ಟಬೇಕಾಯಿತು,ಯಾಕೆ ಅವರಿಗೆ ನಮ್ಮ ನಿಮ್ಮ ಹಾಗೆ ಜೀವನ ಅಲ್ಲವೆ.. ಅವರು ನೆಪ ಹೇಳಬಹುದಿತ್ತು ಆದರೆ ಅವರು ನಮ್ಮ ಸಲುವಾಗಿ ಹಗಲಿರುಳು ದುಡಿಯುತ್ತಿದ್ದಾರೆ,ಈ ಕೋವಿಡ್-19 ನಲ್ಲಿ ಮಾತ್ರ ಅಲ್ಲ ನಿರಂತರವಾಗಿ ಅವರ ಶ್ರಮ ಇದೆ ದಯವಿಟ್ಟು ಅವರಿಗೂ ಮರ್ಯಾದೆ ಕೋಡಿ ಮನೆಯಲ್ಲಿ ಇರಿ.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ರಾಯಚೂರು: ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೆ ಹಂಚಾಳದಲ್ಲಿ ವನಸಿರಿ ಫೌಂಡೇಶನ್ ಮತ್ತು ಅಕ್ಷಯ ಆಹಾರ ಜೋಳಿಗೆ ಹಾಗೂ ಆತ್ಮೀಯ ಸ್ನೇಹಿತರ ಬಳಗದಿಂದ ಬಡ ಕುಟುಂಬಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಈ ದಿನ 21ಬಡ ಕುಟುಂಬಕ್ಕೆ ಕಿರಾಣಿ ಮತ್ತು ತರಕಾರಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೆಶನ್ ನ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಹಣಮಂತರೆಡ್ಡಿ ಗದ್ದಿ,ರೇಖಾ ಗದ್ದಿ,ಹಾಗೂ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ರಾಯಚೂರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ: ನಗರದಲ್ಲಿ ಇಂದು ಕೊರೊನಾ ಸೋಂಕಿತ ಮಹಿಳೆ ರೋಗಿ ಸಂಖ್ಯೆ 221ಅವರ ಕೊರೊನಾ ಲಕ್ಷಣ ಹೊಂದಿದ್ದ ಪತಿ ಮರಣಹೊಂದಿದ್ದಾರೆ, ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಅವರು ತಿಳಿಸಿದ್ದಾರೆ. ಈಗಾಗಲೇ ಕಳುಹಿಸಿದ್ದ ಇವರ ಗಂಟಲು ದ್ರವ ಮಾದರಿ ವೈದ್ಯಕೀಯ ಪರೀಕ್ಷೆ ವರದಿಯು ಇನ್ನೂ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ವಾರ್ಡ್ ನಂಬರ 4-5 ರ ಅಂಬಿಗರ ಚೌಡಯ್ಯ ಗಲ್ಲಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕೆ ಕೋವಿಡ್-19 ನ ಚಿತ್ರವನ್ನು ಬಿಡಿಸಿ ಜನರು ಮನೆಯಿಂದ ಹೊರಗೆ ಬರದಂತೆ ಜಾಗೃತಿ ವಹಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವ ಅಸ್ಕಿ,ಭೀಮು ಬಳುಂಡಗಿ,ಬೀಮಾಶಂಕರ ಗುಡ್ಲಮನಿ,ಪರಶುರಾಮ ಮರಾಠಿ,ಮುದಕಪ್ಪಬೋತಿ, ಕಲಾವಿದ ರಜಪೂತ ವಿಠ್ಠಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ: ಕೊನೆಗೂ ವಿಜಯಪುರದಲ್ಲಿ ಕೊರೋನ ಕೇಸ್ ಪತ್ತೆ ಪ್ರಕರಣವಾದ ಬೆನ್ನಲ್ಲೇ ವಿಜಯಪುರದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿಕೆ ನೀಡಿದರು ಇಲ್ಲಿಯತನಕ ವಿಜಯಪುರದಿಂದ 110 ಸ್ಯಾಂಪಲ್ ಟೆಸ್ಟ್ ಗೆ ಕಳುಹಿಸಲಾಗಿದೆ.
ಒಟ್ಟಾರೆಯಾಗಿ ಅದರಲ್ಲಿ 80 ರಿಫೊರ್ಟ್ ನೆಗೆಟಿವ್ ಬಂದಿವೆ, ಒಂದು ವರದಿ ಪಾಸಿಟಿವ್ ಬಂದಿದೆ. ಇನ್ನು 29 ಸ್ಯಾಂಪಲ್ ಗಳ ವರದಿಗಾಗಿ ಕಾಯುತ್ತಿದ್ದೇವೆ. ಪಾಸಿಟಿವ್ ಬಂದ ವೃದ್ಧೆಯ ಏರಿಯಾ ವಿಜಯಪುರದ ಚಪ್ಪರಬಂದ್ ಕಾಲೋನಿಯಾಗಿದೆ. 60 ವರ್ಷದ ಆ ವೃದ್ಧೆಯನ್ನು ಪೇಶಂಟ್ 221ಎಂದು ಗುರುತಿಸಲಾಗಿದೆ ಇನ್ನೂ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡೆಸಲಾಗುತ್ತಿದೆ. ಇದುವರೆಗೂ ಆ ಮಹಿಳೆಯ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಮಹಾರಾಷ್ಟ್ರದಿಂದ ಬಂದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಆ ವೃದ್ಧೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈಗ ಆ ವೃದ್ಧೆ ಸ್ಥಿರವಾಗಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರೆ ಇನ್ನಾದರೂ ಅರಿತು ಮನೆಯಲ್ಲಿರಿ ನಿಮ್ಮ ಹುಚ್ಚು ತನದಿಂದ ಅಮಾಯಕರ ಜೀವವನ್ನು ಬಲಿ ಪಡೆಯದಿರಿ..ಪೋಲಿಸ್ ರೊಂದಿಗೆ ಸಹಕರಿಸಿ ಇದು ರಾಯಲ್ ಟಿವಿ ಕಳಕಳಿ..
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರ ಸಲಹೆಯಂತೆ ಇಂದು ಮುದ್ದೇಬಿಹಾಳದ ನೇತಾಜಿ ನಗರ,ಇಂದಿರಾ ನಗರ ಗಳಲ್ಲಿ ಸ್ವತಃ ಬಿಜೆಪಿ ಪಕ್ಷದ ಮಹಿಳಾ ಮಂಡಳದ ವತಿಯಿಂದ ತಯಾರಿಸಲಾದ ಮಾಸ್ಕಗಳನ್ನು ಉಚಿತವಾಗಿ ವಿತರಿಸಿದರು.
ಬಿಜೆಪಿ ಪಕ್ಷದ ಮಹಿಳಾ ಮಂಡಲದ ಅಧ್ಯಕ್ಷರಾದ ಗೌರಮ್ಮ ಹುನಗುಂದ ಹಾಗೂ SC ಮೋರ್ಚಾ ಮಹಿಳಾ ಅಧ್ಯಕ್ಷರಾದ ನೀಲಮ್ಮ ಚಲವಾದಿ ಹಾಗೂ ಪ್ರಮುಖ ಕಾರ್ಯಕರ್ತೆಯರು ವಿತರಿಸಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಇಂದು ಬೆಳಗ್ಗಿನ ಜಾವ ಅಮಾನವೀಯ ಕೃತ್ಯ ನಡೆದಿರುವದು ಕಂಡು ಬಂದಿದೆ.
ಮುಗಳಖೋಡದ ಕೆನಾಲ್ ಆಫಿಸ್ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ. ಆ ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾರ್ಯಕರ್ತರು ಆರೋಗ್ಯ ಕೇಂದ್ರದ ನರ್ಸ, ಆರಕ್ಷಕ ಠಾಣೆ ಸಿಬ್ಬಂದಿ ಎ.ಎಸ್. ಐ ದುಂಡಿನಮನಿ ಬೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ಘಟನೆಯನ್ನು ಪರಿಶೀಲಿಸಿ ಮಗುವನ್ನು ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವ ಕೆಲಸ ಮಾಡುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸ್ಥಳೀಯ ಜನರನ್ನು ಆ ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಬೆಳಿಗ್ಗೆ 4-5 ಗಂಟೆ ಸುಮಾರಿಗೆ ಈ ಗಂಡು ಮಗವನ್ನು ಹಾಕಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಈ ಕಂದಮ್ಮನ ರಕ್ಷಣೆ ಆಶಾ ಕಾರ್ಯಕರ್ತೆಯರು ಹಾಗೂ ಸ್ಟಾಪ್ ನರ್ಸ ಅವರ ಹೆಗಲಮೇಲಿದೆ.
ರಾಯಲ್ ಟಿವಿ ನ್ಯೂಸ್ ಬೆಳಗಾವಿ, ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ:ನೋವೆಲ್ ಕೊರೋನಾ ವೈರಸ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಆರೋಗ್ಯ ಇಲಾಖೆಯ ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರನ್ನು ಮುದ್ದೇಬಿಹಾಳ ನಗರದ ಎಸ್ ವ್ಹಿ ಎಮ್ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಹರೀಶ ಹವಲ್ದಾರಮಠ ಅವರು ಉಚಿತವಾಗಿ ವಿತರಣೆ ಮಾಡಿದರು. ನಂತರ ಮಾತನಾಡಿದರು. ಕೋವಿಡ್ 19 ನಿಯಂತ್ರಣದಲ್ಲಿ ವಿಜಯಪುರ ಜಿಲ್ಲೆಯ ಆರೋಗ್ಯ ಇಲಾಖೆಯ ಸಿಬ್ಬಂದಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಶ್ಲ್ಯಾಘನೀಯ ಮುಖ್ಯವಾಗಿ ಕ್ಷೇತ್ರ ಸಿಬ್ಬಂದಿಗಳು ಮನೆಮನೆಗೆ ಭೇಟಿ ನೀಡಿ ಹೋಂ ಕ್ವಾರೆಂಟೇನ್ ಶಂಕಿತ ರೋಗಿಗಳ ಆರೋಗ್ಯ ತಪಾಸಣೆ ಮತ್ತು ಕೋವಿಡ್ ನಿಯಂತ್ರಣ ಕುರಿತು ಮಾಹಿತಿಯನ್ನು ನೀಡುತ್ತಿದ್ದು ಈ ಸಿಬ್ಬಂದಿಗಳಿಗೆ ಸ್ವಯಂ ರಕ್ಷಣೆ ಬಹಳ ಅವಶ್ಯವೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಎಮ್ ಎಸ್ ಗೌಡರ ತಾಲೂಕ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರು ತಾಲೂಕಿನ ಎಲ್ಲಾ ಆರೋಗ್ಯ ಇಲಾಖೆಯ ನೌಕರರ ಪರವಾಗಿ ಎಸ್ ವ್ಹಿ ಎಮ್ ಕಾಲೇಜಿನ ಪ್ರಾಂಶುಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ತಾಲೂಕಾ ಆರೋಗ್ಯ ಸಹಾಯಕರ ಹಾಗೂ ಮೇಲ್ವಿಚಾರಕರ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಚಲವಾದಿ ಹಾಗೂ ಅನುಸೂಯ ತೇರದಾಳ ಟಿಎಚ್ಈಓ ಈರಣ್ಣ ಚಿನಿವಾರ ಸೀನಿಯರ್ ಲ್ಯಾಬ್ ಟೆಕ್ನಾಲಾಜಿಸ್ಟ್ ಎಸ್ ಸಿ ರುದ್ರವಾಡಿ ಎಮ್ ಟಿ ಎಸ್ ಬಸವರಾಜ್ ಬಿಪಿಎಮ್ ಎಸ್ ಐ ಕಮಲಪ್ಪನವರ ಪ್ರವೀಣ್ ಬಿದರಿ ಚೇತನ್ ಕಲ್ಲುಂಡಿ ವೀರೇಶ್ ಭಜಂತ್ರಿ ಶ್ರೀಕಾಂತ್ ಸಜ್ಜನ ರಫೀಕ್ ರಂಜಣಗಿ ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನಮಗೆ ನೀಡಿ-8792900064
ವಿಜಯಪುರ:ಇಡಿ ಜಗತ್ತನ್ನೆ ಅಲ್ಲೊಲ ಕಲ್ಲೋಲ ಮಾಡಿದ ಕೋವಿಡ್-19 ಸೋಂಕು ರೋಗಕ್ಕೆ ಸಹಾಯಾರ್ಥವಾಗಿ ಹಗಲಿರುಳು ಲಾಠಿ ಹಿಡಿದು ಕರ್ತವ್ಯ ಮಾಡುತ್ತಿರುವ ಪೊಲೀಸರು ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ಮಾನವೀಯ ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವ ಜನರಿಗೆ ವಿನೂತನ ರೀತಿಯಲ್ಲಿ ಶಿಕ್ಷೆಗಳನ್ನು ನೀಡುತ್ತಿದ್ದ ಪೊಲೀಸರು ಈಗ ಅವರ ಸ್ವತಃ ಮಾನವೀಯತೆಯ ಗುಣದಿಂದ ತಮ್ಮ ಸಹಕಾರ ನೀಡುತ್ತಾ ಬರುತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪ ವಿಭಾಗದ ಡಿ ವಾಯ್ ಎಸ್ಪಿ ಶಾಂತವೀರ ಅವರು ತಮ್ಮ ಕರ್ತವ್ಯ ನಿರತದ ಮಾಸಿಕ ವೇತನವನ್ನು ಕೊರೋನ ಸೋಂಕು ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ್ದಾರೆ.
ಈ ಕುರಿತು ವಿಜಯಪುರ ಜಿಲ್ಲೆಯ ಎಸ್ಪಿ ಅನುಪಮ ಅಗರವಾಲ ಅವರಿಗೆ ಏಪ್ರಿಲ್ 6 ರಂದು ಲಿಖಿತವಾಗಿ ಪತ್ರ ಬರೆದಿರುವ ಅವರು, ತಮ್ಮ ಏಪ್ರಿಲ್ ತಿಂಗಳ ವೇತನ 75 ಸಾವಿರ ರೂ. ಕಡಿತಮಾಡಿ ಸೋಂಕಿನ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಲು ಕೋರಿದ್ದಾರೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ-ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064