ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಆಹಾರ ಧಾನ್ಯದ ಕಿಟ್ ವಿತರಣೆ:
ಕಳೆದ 10 ವರ್ಷಗಳ ಕಾಲ ಶಾಸಕರಾಗಿ ಕಾರ್ಯನಿರ್ವಹಿಸಿದ ದೇವರಹಿಪ್ಪರಗಿ ವಿಧಾನ ಸಭಾ ಕ್ಷೇತ್ರದ ದೇವರಹಿಪ್ಪರಗಿ ಪಟ್ಟಣದ ಅಭಿಮಾನಿ ಕಾರ್ಯಕರ್ತರ ಸಲಹೆಯಂತೆ ಪಟ್ಟಣದಲ್ಲಿ ಬಡ ಜನತೆಗೆ ಆಹಾರ ಪದಾರ್ಥಗಳ ಕಿಟ್ ಗಳನ್ನು ಬಾಲ ತಪಸ್ವಿ ಶ್ರೀ ಸೋಮಲಿಂಗ ಮಹಾರಾಜ ಕೆಸರಟ್ಟಿ ಇವರ ಸಾನಿಧ್ಯದಲ್ಲಿ ಮಾನ್ಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿಯವರು ಹಾಗೂ ಧರ್ಮ ಪತ್ನಿಯಾದ ಶ್ರೀಮತಿ ಮಹಾದೇವಿ ಪಾಟೀಲ ನಡಹಳ್ಳಿ ಯವರು ಜೊತೆಗೂಡಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣಪಂಚಾಯತ್ ಸದಸ್ಯರು ಮಖಂಡರು ಅಭಿಮಾನಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
ವಿಜಯಪು ಜಿಲ್ಲೆಯ ಮುದ್ದೇಬಿಹಾಳ: ನೋವೆಲ್ ಕೊರೋನಾ ವೈರಸ್ ಹಿನ್ನಲೆಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನೋವೆಲ್ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮ ವಹಿಸುತ್ತಿರುವ ನಮ್ಮ ಹೆಮ್ಮೆಯ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ತಾಳಿಕೋಟಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಆಶಾ ಕಾರ್ಯಕರ್ತರಿಗೆ ಭೇಟಿ ನೀಡಿ ಧನ್ಯವಾದ ಅರ್ಪಿಸಿದ ಸಿ ಎಸ್ ನಾಡಗೌಡ (ಅಪ್ಪಾಜೀ) ಮುದ್ದೇಬಿಹಾಳ ವಿಧಾನಸಭಾ ಮತ ಕ್ಷೇತ್ರದ ಮಾಜಿ ಸಚಿವ ಅವರಿಗೆ ಮಾಸ್ಕ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತಾಳಿಕೋಟಿ,ರಾಯನಗೌಡ ತಾತರೆಡ್ಡಿ, ಬಿ ಎಸ್ ಪಾಟೀಲ (ಯಾಳಗಿ),ಶರಣು ದೇಶಮುಖ,ಪ್ರಭುಗೌಡ ಮದರಕಲ್ಲ,ಎ ಎಮ್ ಪಟೇಲ,ಎಮ್ ಎಸ್ ಪಾಟೀಲ,ಪ್ರಕಾಶ ಪಾಟೀಲ,ಖಾಜಾಹುಸೇನ ದೋಣಿ,ಯಾಸೀನ ಕೆಂಭಾವಿ,ಯಾಸೀನ ಬುಡ್ಡಾ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
ಗುರು ಬಸವ ವಚನ ಮಂಟಪದಲ್ಲಿ ಎಲ್ಲ ಶರಣ ಶರಣೆಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಗುರು ಬಸವಣ್ಣನವರ ಪ್ರಾರ್ಥನೆ, ವಚನ ಚಿಂತನ ಹಾಗೂ ಬಸವ ನಾಮಜಪ ಸ್ಮರಣೆ ಮಾಡಿದರು.ಈ ಕಾರ್ಯಕ್ರಮ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ ನಡೆಯಿತು.
ಮತ್ರ್ಯ ಲೋಕದ ಮಹಾ ಮನೆ ಹಾಳಾಗಿ ಹೋಗಬಾರದೆಂದು
ಕರ್ತನಟ್ಟಿದನಯ್ಯಾ ಒಬ್ಬ ಶರಣನ.
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿದರು.
ಗುರುಬಸವಣ್ಣನವರನ್ನು, ನಮ್ಮ ಉಸಿರಾಗಿ, ಅವರ ಸಂದೇಶಗಳನ್ನು ನಮ್ಮ ಜೀವನದ ಹಾಸು ಹೊಕ್ಕಾಗಿ ಮಾಡಿಕೊಳ್ಳಬೇಕು. ಗುರುಬಸವಣ್ಣನವರ ಸಂದೇಶಗಳನ್ನು ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ತಿಳಿಸುವ ಸಂಕಲ್ಪ ತಾಳಿ, ಆ ಮೂಲಕವಾಗಿ ಶಾಂತಿ ಸಮಾಧಾನ, ನೆಮ್ಮದಿಗಳು ನೆಲೆಗೊಳ್ಳುವಂತೆ ಮಾಡಿ, ಈ ಮತ್ರ್ಯ ಲೋಕವನ್ನು ಸುಂದರಗೊಳಿಸೋಣ. ಗುರುಬಸವಣ್ಣನವರ ಮೆಚ್ಚುಗೆಯ ಮಕ್ಕಳಾಗೋಣ. ಎಂದು ಗುರುವಿನ ಸ್ಮರಣೆ ಮಾಡಿದರು.ಈ ಕಾರ್ಯಕ್ರಮ ರವಿ ಶರಣರ ಸಾನಿಧ್ಯದಲ್ಲಿ ನಡೆಯಿತು.
ರಾಯಲ್ ಟಿವಿ ನ್ಯೂಸ್ ಬಾಗಲಕೋಟ,ಸುದ್ದಿಗಾಗಿ ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಪೋಲಿಸ್ ಅಧಿಕಾರಿಗಳಾದ ದೇವಾನಂದ ರಾಠೋಡ ಹಾಗೂ ಸಹೋದ್ಯೋಗಿಗಳು ತಮ್ಮ ಮನೆಯಿಂದ ತಂದ ಊಟದ ಡಬ್ಬಿಯಿಂದ ಇಂದು ಬಿದಿ ನಾಯಿ ಮರಿಗಳಿಗೆ ಊಟ ಬಡಿಸಿ ಮಾನವೀಯತೆ ಮೆರೆದರು.
ಈ ಕೋವಿಡ್-19 ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿಯೂ ಕೂಡ ಈ ರೀತಿಯ ಮಾನವೀಯತೆಗೆ ಸಾಕ್ಷಿಯಾಗಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
ಕೋವಿಡ್-19 ಹಿನ್ನಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ನಾಲತ್ತವಾಡ ಪಟ್ಟಣದಲ್ಲಿ ಬಡ ಜನತೆಗೆ ಅಹಾರ ಪದಾರ್ಥಗಳ ಕಿಟ್ ವಿತರಣೆಯಲ್ಲಿ ತೊಡಗಿರುವ ಮಾನ್ಯ ಶಾಸಕರಾದ ಎ ಎಸ್ ಪಾಟೀಲ ನಡಹಳ್ಳಿ ಅವರು ಮತ್ತು ಅವರ ಧರ್ಮಪತ್ನಿ
ಶ್ರೀಮತಿ ಮಹಾದೇವಿ ಎ ಪಾಟೀಲ ನಡಹಳ್ಳಿ, ಹಾಗೂ ಹಿರಿಯ ಧುರಿಣರಾದ ಎಂ ಎಸ್ ಪಾಟೀಲ್,ಪುರಸಭೆ ಸದಸ್ಯನಿ ಸಂಗಮ್ಮ ದೇವರಹಳ್ಳಿ,ಸಹನಾ
ಬಡಿಗೇರ,ಶಿಲ್ಪಾ ಸಿದರೆಡ್ಡಿ,ಶಿಲ್ಪಾ ಶರ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರದ ತಾಳಿಕೋಟಿಯಲ್ಲಿ: ಕೊರೊನಾ ವೈರಸ್ ಹಿನ್ನಲೆಯಲ್ಲಿ ತಮ್ಮ ಪ್ರಾಣವನ್ನ ಲೆಕ್ಕಿಸದೇ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪರಿಶ್ರಮವಹಿಸುತ್ತಿರುವ ದೇಶವೂ ತಲ್ಲನವಾಗಿರುವ
ಸಂದರ್ಭದಲ್ಲಿ ಕೋವಿಡ್-19 ಸಲುವಾಗಿ ಶ್ರಮಿಸುತ್ತಿರುವ ಹೆಮ್ಮೆಯ ತಾಳಿಕೋಟಿ ಪೋಲಿಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಪೋಲಿಸ್ ಠಾಣೆಗೆ ಹೋಗಿ ಅಭಿನಂದನೆ ಸಲ್ಲಿಸಿ,ಹಾಗೂ ಪೌರ ಕಾರ್ಮಿಕರಿಗೆ,ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಹಾರ ಧಾನ್ಯಗಳ ಕಿಟ್ ಮತ್ತು N 95 ಮಾಸ್ಕ ವಿತರಿಸಿ ಮಾನವೀಯತೆ ಮೆರೆದ ಮುದ್ದೇಬಿಹಾಳ ವಿಧಾನ ಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ (ನಡಹಳ್ಳಿ)
ರಾಯಲ್ ಟಿವಿ ನ್ಯೂಸ್ ವಿಜಯಪುರ,ಸುದ್ದಿಗಾಗಿ ಸಂಪರ್ಕಿಸಿ-8792900064
ಕರೋನಾ ಸಂಕಷ್ಟ ಮತ್ತು ಲಾಕ್‌ಡೌನ್ ಜನರಿಗೆ ಅಸಹನೀಯ ನೋವನ್ನು ನೀಡಿರಬಹುದು, ಆದರೆ ಇದು ನಮ್ಮನ್ನು ಮನುಷ್ಯರನ್ನಾಗಿ ಮಾಡಿದೆ. ಪ್ರತಿಯೊಬ್ಬರೂ ತಮ್ಮ ಮನುಷ್ಯತ್ವವನ್ನ ಈ ಸಂದರ್ಭದಲ್ಲಿ ತೋರಿಸುತ್ತಿದ್ದು ನಿರ್ಗತಿಕರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.
ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಹಸಿದವರಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದರೆ ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಉಳಿದವರ ಪ್ರಾಣವನ್ನು ರಕ್ಷಿಸುತ್ತಿದ್ದಾರೆ. ಬಿಹಾರದ ನಳಂದದಲ್ಲಿ ನ್ಯಾಯಾಧೀಶರೊಬ್ಬರೂ ಕೂಡ ಇದೇ ರೀತಿಯ ಕಾರ್ಯವೊಂದನ್ನ ಮಾಡಿದ್ದಾರೆ.
ಬಿಹಾರದ ನಳಂದಾ ಜಿಲ್ಲೆಯ ಬಿಹಾರ್ ಶರೀಫ್ ನಲ್ಲಿ ಅಪ್ರಾಪ್ತ ವಯಸ್ಕನನ್ನು ಕಳ್ಳತನದ ಆರೋಪದ ಮೇಲೆ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹಸಿವಿನಿಂದ ಬಳಲುತ್ತಿರುವ ತಾಯಿಯ ಹಸಿವನ್ನು ನೀಗಿಸಲು ಆ ಯುವಕ ಕಳ್ಳತನ ಮಾಡಿದ್ದ. ಬಳಿಕ ಪೋಲಿಸರು ಆತನನ್ನ ಬಂಧಿಸಿ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರಿಗೆ ಈ ವಿಷಯ ತಿಳಿದಾಗ ಅವರು ಆರೋಪಿಗೆ ಶಿಕ್ಷೆ ನೀಡುವ ಬದಲು ಅವನಿಗೆ ದವಸ ಧಾನ್ಯಗಳು ಹಾಗು ಆತನ ತಾಯಿಗೆ ಬಟ್ಟೆ ಕೊಡಿಸಿ ಮಾನವೀಯತೆಯ ನ್ಯಾಯ ಒದಗಿಸಿದ್ದಾರೆ.
ಅಷ್ಟೇ ಅಲ್ಲದೆ ಅವರು ಆ ಬಾಲಕನ ಕುಟುಂಬಕ್ಕೆ ಬೇಕಾಗುವ ಎಲ್ಲ ರೀತಿಯ ಸಹಾಯ ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಲಾಭವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ಬಾಲಾಪರಾಧಿಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಪ್ರತಿ 4 ತಿಂಗಳಿಗೊಮ್ಮೆ ಸಲ್ಲಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಇದಲ್ಲದೆ ಕುಟುಂಬಕ್ಕೆ ಪಡಿತರ ಚೀಟಿ, ಎಲ್ಲ ಸದಸ್ಯರ ಆಧಾರ್ ಕಾರ್ಡ್, ಬಾಲಕನ ತಾಯಿಗೆ ವಿಧವಾ ವೇತನ, ಮನೆ ನಿರ್ಮಾಣಕ್ಕೆ ಹಣ ನೀಡುವಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವಂತೆ ನ್ಯಾಯಾಧೀಶರು ಬಿಡಿಒಗೆ ಸೂಚಿಸಿದ್ದಾರೆ.
ಕಿಶೋರ್ ಅವರ ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ತನ್ನ ಪತಿಯನ್ನ ಕಳೆದುಕೊಂಡ ತಾಯಿ ಮಾನಸಿಕ ಅಸ್ವಸ್ಥಳಾಗಿಬಿಟ್ಟಿದ್ದಳು. ಈಗ ತಾಯಿಯನ್ನ ನೋಡಿಕೊಳ್ಳುವ ಜವಾಬ್ದಾರಿ ಮಗನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಕಿಶೋರ್‌ಗೆ ಕಿರಿಯ ಸಹೋದರನೂ ಇದ್ದಾನೆ. ಕುಟುಂಬದ ನಿರ್ವಹಣೆಯ ಜವಾಬ್ದಾರಿ ಯುವಕನ ಮೇಲಿದೆ. ಕುಟುಂಬವು ಕೊಳೆಗೇರಿ ಮನೆಯಲ್ಲಿ ವಾಸಿಸುತ್ತಿದ್ದು ಲಾಕ್‌ಡೌನ್ ನಿಂದಾಗಿ ಊಟಕ್ಕಾಗಿ ಪರದಾಡುತ್ತಿತ್ತು. ನ್ಯಾಯಾಧೀಶರ ಈ ನಡೆ ನಿಜಕ್ಕೂ ಶ್ಲಾಘನೀಯವೇ ಸರಿ.
ರಾಯಲ್ ಟಿವಿ ನ್ಯೂಸ್ ನವದೆಹಲಿ, ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಕೊಣ್ಣೂರ ಗ್ರಾಮದಲ್ಲಿ ಸುಮಾರು 500 ಮಾಸ್ಕಗಳನ್ನು ಗ್ರಾಮದ ಯುವಕರು ,ಹಿರಿಯರು ಹಾಗೂ ಮಹಿಳೆಯರಿಗೆ ಕೋವಿಡ್ -19 ವೈರಸ್ ಬಗ್ಗೆ ಜನಜಾಗೃತಿ ಮೂಡಿಸಿ ಸಾಮಾಜಿಕ ಅಂತರದ ಬಗ್ಗೆ ಹಾಗೂ ಮಾಸ್ಕ್ ಯಾಕೆ ಧರಿಸಬೇಕು ಅನ್ನುವ ಮಾಹಿತಿ ನೀಡಿ ವಿತರಿಸಿದರು. ಈ ಸಂದರ್ಭದಲ್ಲಿ ,ಸಿದ್ದನಗೌಡ ಗೌಡರ್, ಸಂಗಗೌಡ ಕೌಡಿಮಟ್ಟಿ,ಶಿವನಗೌಡ ತಾಳಿಕೋಟಿ, ಚಿದಾನಂದ ಯಾಳವಾರ, ಬಸಪ್ಪ ಗಣಿ, ರಾಮಣ್ಣ ಗಣಿ, ಶಿವಶರಣ ಹಡಪದ, ಹಾಗೂ ವಾಲ್ಮೀಕಿ ಸಂಘದ ಯುವಕರು ಬಾಗವಹಿಸಿದ್ದರು.
ಅಲ್ಲದೆ ಹೊಲಿಗೆ ಕೆಲಸ ಮಾಡುವ ಲಕ್ಷಾಂತರ ಜನ ಅಸಂಘಟಿತ ಕಾರ್ಮಿಕರಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸರಕಾರ ಪ್ಯಾಕೇಜ್ ಘೋಷಣೆ ಮಾಡಬೇಕು. ಮತ್ತು ಸರಕಾರ ನೀಡುವ ಪ್ಯಾಕೇಜ್ ಸಹಾಯ ಪಡೆದುಕೊಳ್ಳಲು ಕಾರ್ಮಿಕರಿಗೆ ಕನಿಷ್ಠ ಒಬ್ಬರು 150ರಿಂದ 200 ಮಾಸ್ಕಗಳನ್ನು ತಯಾರು ಮಾಡಿ ತಾಲೂಕಾಡಳಿತಕ್ಕೆ ಒಪ್ಪಿಸುವ ಜವಾಬ್ದಾರಿ ನೀಡಬೇಕು. ಆಶಾ ಕಾರ್ಯಕರ್ತರಿಂದ ಪ್ರತಿ ಮನೆಗೆ ಮುಟ್ಟಿಸಬಹುದು ಸರಕಾರ ಈ ತರ ಮಾಡಿದರೆ ಕರ್ನಾಟಕದ ಪ್ರತಿ ಮನೆಮನೆಗೂ ಕೇವಲ ಒಂದು ವಾರದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್ ಸುಲಭವಾಗಿ ತಲುಪಿಸಬಹುದು.ಎಂಬ ಅಭಿಪ್ರಾಯ ಅವರದಾಗಿದೆ.
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳಿಗಾಗಿ ಸಂಪರ್ಕಿಸಿ-8792900064
ವಿಜಯಪುರ:ಕೊರೋನ ಸೋಂಕು ತಗುಲಿ ಲಾಕ್ ಡೌನ್ ನಿಂದಾಗಿ ರಾಜ್ಯದ ಜನತೆ ಹಸಿವಿನಿಂದ ಅನೇಕರು ಚಟಪಡಿಸುತ್ತಿದ್ದಾರೆ,ಇನ್ನೂ ಎಷ್ಟೋ ಜನರು ಅನೇಕ ಬಡ ಜನರಿಗೆ ಆಹಾರ ಧಾನ್ಯಗಳು ಸರಿಯಾಗಿ ಮುಟ್ಟುತ್ತಿಲ್ಲ.ಹೀಗಾಗಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಎ ಎಸ್ ಪಾಟೀಲ ನಡಹಳ್ಳಿ1 ಕೋಟಿ ವೆಚ್ಚದಷ್ಟು ಆಹಾರ ದಾನ್ಯ,ಸೇರಿದಂತೆ ಊಟಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ತಂದು ಸ್ವತಃ ಮುಂದೆ ನಿಂತು ತಾವು ಅದರಲ್ಲಿ ಸಕ್ರಿಯವಾಗಿ ಭಾಗಿಯಾಗಿ ಕಿಟ್ ತಯಾರಿಸಿ ಮುದ್ದೇಬಿಹಾಳದ ಸ್ಲಂ
ನಿವಾಸಿಗಳಿಗೆ ಕುಟುಂಬ ಸಮೇತವಾಗಿ ನಿಜವಾದ ಬಡವರಿಗೆ ತಲುಪಿಸುವಲ್ಲಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ, ಧರ್ಮಪತ್ನಿ ಮಹಾದೇವಿ ಪಾಟೀಲ ನಡಹಳ್ಳಿ ದಾಸೋಹದಲ್ಲಿ ಪಾಲ್ಗೊಳ್ಳುವ ಮೂಲಕ ಬಡವರ ಪಾಲಿಗೆ ಆಶಾ ಕಿರಣ ವಾದರು,
ಇನ್ನೂ ಈ ಕಾರ್ಯವನ್ನು ಇಡಿ ಮುದ್ದೇಬಿಹಾಳ ವಿಧಾನ ಸಭಾ ವ್ಯಾಪ್ತಿಯಲ್ಲಿನ ಬಡ ಜನರಿಗೆ ಹಂಚಲು ಕಾರ್ಯಾರಂಭ ಸುರುವಾಗಿದೆ.
ಇದೆ ಸಂದರ್ಭದಲ್ಲಿ ಮುದ್ದೇಬಿಹಾಳ ಪೋಲಿಸ್ ಠಾಣೆಯ ಸಿಪಿಐ ಆನಂದ ವಾಗ್ಮೋಡೆ ಹಾಗೂ ಪಿಎಸ್ಐ ಮಲ್ಲಪ್ಪ ಮಡ್ಡಿ ಅವರ ಕೈಗಳಿಂದಲು ಕಿಟ್ ವಿತರಿಸಲು ಮಾನ್ಯ ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತರವಲಯವು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಸಾಗರ ಉಕ್ಕಲಿ
ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಾಗಿ ಸಂಪರ್ಕಿಸಿ-8792900064