ತಾಲ್ಲೂಕು ಪಂಚಾಯತ ಸದಸ್ಯನಿಂದ ಸ್ವಯಂಪ್ರೇರಿತ ದವಸ ಧಾನ್ಯ ವಿತರಣೆ

ಬೆಳಗಾವಿ ಜಿಲ್ಲೆಯ ಅಥಣಿ ವರದಿ:

ರಾಷ್ಟ್ರದಾದ್ಯಂತ ಭೀಕರ ಕೊರೊನಾ ವೈರಸ್ ಹಬ್ಬಿದ ಹಿನ್ನೆಲೆಯಲ್ಲಿ ಎಲ್ಲೆಡೆ ಲಾಕಡೌನ್ ಆದ ಪರಿಣಾಮ ಏಪ್ರಿಲ್‌ ೧೪ ರ ವರೆಗೆ ಭಾರತ ಬಂದ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಅದೆಷ್ಟೋ ಕೂಲಿ ಕಾರ್ಮಿಕರು ಇತ್ತ ಕೆಲಸವನ್ನು ಮಾಡದೇ ಕೊರೊನ ವೈರಸ್ ಹರಡಿರುವದರಿಂದ ಬಡಕುಟುಂಬಗಳು ಸಂಕಷ್ದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ಬಂದೋದಗಿದೆ.

ಇಂತಹ ಸಂದರ್ಭಗಳಲ್ಲಿ ಅಥಣಿ ತಾಲ್ಲೂಕು ಪಂಚಾಯತ್ ಸದಸ್ಯ ದಿಲೀಪ್ ಹಲವಾರು ಬಡ ಕುಟುಂಬಗಳ ಮನೆಮನೆಗೆ ತೆರಳಿ ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ ಜನರ ಕಷ್ಟಕಾಲದಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿವುದು ನಿಜಕ್ಕೂ ಬಡಕುಟುಂಬಗಳಿಗೆ ಸಂತೋಷದ ವಿಷಯ ಎಂದು ‌ವೃದ್ದೆ ರತ್ನವ್ವಾ ಹೇಳುತ್ತಾರೆ.

ಇದೆ ಸಂದರ್ಭದಲ್ಲಿ ಮಾತನಾಡಿದ ತಾಪಂ ಸದಸ್ಯ ದಿಲೀಪ ಕಾಂಬಳೆ ಮಾತನಾಡಿ: ಮಹಾಮಾರಿ ಕೊರೊನಾ ವೈರಸ್ ಅತ್ಯಂತ ಗಂಭೀರ ವೈರಸ್ ಆಗಿದ್ದು ಯಾರೂ ಮನೆಬಿಟ್ಟು ಹೊರಗೆ ಬರಬಾರದೆಂದು ಮನವಿ ಮಾಡಿದರು ಹಾಗೆಯೇ ನಾನು ಬಡಕೂಲಿಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಿದ್ದು ಎಕೆಂದರೆ ಕೆಲಸವಿಲ್ಲದೆ ಮನೆಯಲ್ಲಿ ಇದ್ದು ಆಹಾರ ಸಮರ್ಪಕವಾಗಿ ಸಿಗದೇ ಇದ್ದುದನ್ನು ಮನಗಂಡು ನನ್ನ ಕೈಲಾದ ಅಲ್ಪ ಸಹಾಯ ಮಾಡಿದ್ದೇನೆ ಎಂದು ಹೇಳಿದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಮುಖ್ಯಮಂತ್ರಿ ಪರಿಹಾರ ನಿಧಿಗೆ- ಶಾಸಕ ದೇವಾನಂದ ಚವ್ಹಾನರಿಂದ ವೈಯಕ್ತಿಕ ಪರಿಹಾರ

ವಿಜಯಪುರ: ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೋರನ ಕೋವಿಡ_19 ನ ವೈರಸ್ ನಿಯಂತ್ರಿಸುವ ಸಲುವಾಗಿ ನಾಗಠಾಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ದೇವಾನಂದ ಫೂ ಚವ್ಹಾಣ ರವರು ದಿನಾಂಕ 28-03-2020 ರಂದು ವಿಜಯಪುರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ 200000/- ಲಕ್ಷಗಳ ಚೆಕ್ ನೀಡುವ ಮೂಲಕ ವೈಯಕ್ತಿಕ ಪರಿಹಾರ ನೀಡಿ ಮಾನವಿಯತೆ ಮೆರೆದರು.

ಅದರಂತೆ ಮಹಾರಾಷ್ಟ್ರ ಮತ್ತು ಗೋವಾ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ದುಡಿಯಲು ವಲಸೆ ಹೋಗಿ ಸಂಕಷ್ಟದಲ್ಲಿರುವ ಜನರನ್ನು ಸೂಕ್ತ ವೈದ್ಯಕೀಯ ತಪಾಸಣೆಗೊಳಪಡಿಸಿ ಕೊರೋನ ಸೋಂಕು ಹರಡದಿರುವುದನ್ನ ದೃಢಪಡಿಸಿಕೊಂಡು ಅವರನ್ನು ಮರಳಿ ಅವರ ಸ್ವಗ್ರಾಮಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದು. ಇದು ಸಾಧ್ಯವಾಗದಿದ್ದಲ್ಲಿ ಅವರಿಗೆ ಅವರಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದಿಂದ ಗಂಜಿ ಕೇಂದ್ರಗಳನ್ನು ತೆರೆದು ಸೂಕ್ತ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಿಕೆ ಸಲ್ಲಿಸಿದರು.

ರಾಯಲ್ ಟವಿ ನ್ಯೂಸ್ ವಿಜಯಪುರ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಜಿಲ್ಲಾ ಅಧಿಕಾರಿ ಹಾಗೂ ಪೋಲಿಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕೊರೋನ ಸೋಂಕು ಹರಡದಂತೆ ಸ್ಥಳಗಳನ್ನು ಪರಿಶೀಲನೆ ಮಾಡಿದರು.

ವಿಜಯಪುರ: ಜಿಲ್ಲಾಧಿಕಾರಿ ವೈ .ಎಸ್ ಪಾಟೀಲ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅನುಪಮ್ ಅಗರ್ವಾಲ್ ಅವರು ಇಂದು ಕೋವಿಡ್-19 ಮುನ್ನೆಚ್ಚರಿಕೆಗೆ ಕೈಗೊಳ್ಳಲಾದ ಕ್ರಮಗಳನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿನ ಮೋರಟಗಿ ಚೆಕ್ ಪೋಸ್ಟ್ ಪರಿಶೀಲನೆ ಮಾಡಿದರು,ಹಡಗಲಿ,ಶಿವಣಗಿ,ದೇವರಹಿಪ್ಪರಗಿ,ಕನ್ನೋಳಿ ಕ್ರಾಸ್,ಗಬಸಾವಳಗಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮನೆಗಳಿಂದ ಹೊರಬರದಂತೆ,ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಸೂಚಿಸಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ,ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಕರ್ತವ್ಯದಲ್ಲೂ ಮಾನವೀಯತೆ ಮೆರೆದ- ಪಿ ಎಸ್ ಆಯ್ ಮಲ್ಲಪ್ಪ ಮಡ್ಡಿ

ವಿಜಯಪುರ:ಕೊರೋನ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ಆಗಿ ಜನ ಜೀವನ ಅಸ್ತವ್ಯಸ್ತವಾಗಿದೆ.ಇನ್ನೂ ಅನೇಕ ಹಿರಿಯ ಜೀವಗಳು ಹೊಟ್ಟೆಗೆ ಅಣ್ಣ ನೀರು ಇಲ್ಲದೆ ಪರದಾಡುತ್ತಿದ್ದಾರೆ.

ವಾಸ್ತವ ಹೀಗಿರುವಾಗ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲಪ್ಪ ಮಡ್ಡಿ ಮಾನವೀಯತೆ ಮೆರೆದಿದ್ದಾರೆ,ದಾರಿಯಲ್ಲಿ ಹೋಗುವಾಗ ವೈಯಸ್ಸಾದ ಹಿರಿಯ ಜೀವ ಕಂಡು ತಮ್ಮ ವಾಹನ ನಿಲ್ಲಿಸಿ ಅವರಿಗೆ ಬಿಸ್ಕತ್ತು ಹಾಗೂ ನೀರನ್ನು ಕೊಟ್ಟು ಹೃದಯವಂತರಾಗಿದ್ದಾರೆ.ಅವರು ಇಂತಹ ಹತ್ತು ಹಲವಾರು ಕಾರ್ಯಗಳು ದಿನ ನಿತ್ಯ ಮಾಡುತ್ತ ತಾಲ್ಲೂಕಿನ ಜನರ ಪ್ರೀತಿ ಪಾತ್ರರಾಗಿದ್ದಾರೆ.ಜನರು ಕೂಡ ಅವರಿಗೆ ನೆಚ್ಚಿನ ಸಿಂಗಂ ಎಂದೆ ಬಿರುದನ್ನು ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸಂಗನಗೌಡ ಬಿರಾದಾರ, ಶಿವಾನಂದ ಮಟ್ಯಾಳ,ಮಾನವೀಯತೆಗೆ ಸಾಕ್ಷಿಯಾದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಕೊರೋನ ಮಹಾಮಾರಿಯನ್ನು ತಡೆಗಟ್ಟಲು ಸಹಕರಿಸಿ-ಶಾರದಾ ನಾಯಕ ಮನವಿ

ವಿಶ್ವಕ್ಕೆ ಸವಾಲಾಗಿರುವ ಮಹಾಮಾರಿ ಕೊರೋನಾ ವೈರಸನ್ನು ದೇಶದ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪ ಆದೇಶ ಹಾಗೂ ಮಾರ್ಗದರ್ಶನದಂತೆ ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿತ್ತಿರುವ, ನಿಯಂತ್ರಣ ಮಾಡುತ್ತಿರುವ ನಮ್ಮ ವೈದ್ಯರು, ಆರೋಗ್ಯ ಇಲಾಖೆಯ ಸರ್ವ ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ವರ್ಗ, ಸೈನಿಕ ವರ್ಗ, ಮಾಧ್ಯಮ ಮಿತ್ರರು, ಸಂಘ ಸಂಸ್ಥೆಗಳು, ಬುದ್ದಿ ಜೀವಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ಕಾರ್ಮಿಕ ವರ್ಗ, ಅಧಿಕಾರಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ತೋರಿಸುತ್ತಿರುವ ಸರ್ವರ ಕಾರ್ಯ ವೈಖರಿ ಪ್ರಶಂಸನೀಯ ಮತ್ತು ಶ್ಲಾಘನೀಯ. ಈ ಎಲ್ಲಾ ಮಹನೀಯರಿಗೂ ವಿಶೇಷವಾದ ಹೃದಯಪುರ್ವಕವಾದ ಧನ್ಯವಾದಗಳು ತಿಳಿಸಿದ್ದಾರೆ.

ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ. ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತಿರ್ವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿಯನ್ನು ಎದುರಿಸಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರಕ ಬಂಧುಗಳು ತಾವು ಸ್ವಯಂ ಪ್ರತಿಷ್ಟೆ ಹಾಗೂ ಉದ್ದಟತನವನ್ನು ಪ್ರದರ್ಶಿಸದೆ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ. ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೆ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು.

ನಾಗರಿಕರೆ ಆದ್ದರಿಂದ ಸರ್ಕಾರದ ಮುಂದಿನ ಆದೇಶದವರೆಗೂ ಮನೆಯಲ್ಲಿರಿ ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಅಂತರವನ್ನು ಕಾಪಾಡಿಕೊಳ್ಳಿರಿ. ಪ್ರತಿಯೊಂದು ಘಂಟೆಗೊಮ್ಮೆ ಕೈಯನ್ನು ತೊಳೆದು ಕೊಳ್ಳಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು. ಯೋಗಭ್ಯಾಸವನ್ನು ಮಾಡುತ್ತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಆದೇಶ ಮತ್ತು ನಿರ್ದೇಶನದ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ಉಪಯೋಗಿಸಬೇಕು. ಅನಾವಶ್ಯಕ ಆತಂಕ ಬೇಡ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಕಸ್ಮಾತ್ ತಾಗಿ ಸೀನು ಬಂದಾಗ, ಕೆಮ್ಮಿದಾಗ, ಅತೀ ಹತ್ತಿರದಿಂದ ಮಾತನಾಡಿದಾಗ ದಯವಿಟ್ಟು ಕರವಸ್ತರ ಅಥವಾ ಟಾವೆಲ್ ಉಪಯೋಗಿಸಿ. ನಂತರ ಸುತ್ತಮುತ್ತಲಿನ 2 ಮೀಟರ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ. ಆಗಾಗ್ಗೆ ನೀರನ್ನು ಕುಡಿಯಿರಿ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರು ತೋಟಗಳಲ್ಲಿ ಇರುವುದು ತುಂಬಾ ಒಳ್ಳೆಯದು. ಇಂತಹ ಸಂದಿಗ್ಧ ಸಮಯದಲ್ಲಿ ಸಹಾಯ ಕೇಳಿದ ಅಸಹಾಯಕ ರಿಗೆ ಮತ್ತು ಬಡವರಿಗೆ ತಮ್ಮ ಕೈಯಿಂದಾದ ಸಹಾಯ ಸಹಕಾರ ಮಾಡಿ. ಎಲ್ಲರೂ ಒಕ್ಕಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ. ದಯವಿಟ್ಟು ಧನಾತ್ಮಕ ಚಿಂತನೆ ಇರಲಿ.

ಎಂದು ವಿಜಯಪುರದ ರಾಷ್ಟ್ರೀಯ ಮಹಿಳಾ ಸಂಘಟನಾ ಸೇವಾ ಸಮಿತಿಯ ಅಧ್ಯಕ್ಷರಾದ ಶಾರದಾ ನಾಯಕ ವಿನಂತಿಸಿಕೊಂಡಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಮಹಾಮಾರಿ ಈ ವಿಕೋಪವನ್ನು ಎದುರಿಸೋನ ದೇಶದ ಜನತೆ ಸಹಕರಿಸಿ-ಮಲ್ಲನಗೌಡ ಬಿರಾದಾರ ಮನವಿ

ವಿಜಯಪುರ:ಇಡೀ ಮನುಕುಲಕ್ಕೆ ಸವಾಲಾಗಿರುವ ಮಹಾಮಾರಿ ಕೊರೋನಾ ವೈರಸನ್ನು ನಮ್ಮ ಪ್ರಧಾನಮಂತ್ರಿ ಸನ್ಮಾನ್ಯ ನರೇಂದ್ರ ಮೋದಿಜೀ ಮತ್ತು ನಮ್ಮ ನಾಡಿನ ದೊರೆ ಸನ್ಮಾನ್ಯ ಬಿ. ಎಸ್. ಯಡಿಯೂರಪ್ಪ ಆದೇಶ ಹಾಗೂ ಮಾರ್ಗದರ್ಶನದಂತೆ ಯಾವುದಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸಿತ್ತಿರುವ, ನಿಯಂತ್ರಣ ಮಾಡುತ್ತಿರುವ ನಮ್ಮ ವೈದ್ಯರು, ಆರೋಗ್ಯ ಇಲಾಖೆಯ ಸರ್ವ ಸಿಬ್ಬಂದಿ ವರ್ಗ, ಪೋಲಿಸ್ ಸಿಬ್ಬಂದಿ ವರ್ಗ, ಸೈನಿಕ ವರ್ಗ, ಮಾಧ್ಯಮ ಮಿತ್ರರು, ಸಂಘ ಸಂಸ್ಥೆಗಳು, ಬುದ್ದಿ ಜೀವಿಗಳು, ಸ್ವಾಮೀಜಿಗಳು, ಜನಪ್ರತಿನಿಧಿಗಳು, ಕಾರ್ಮಿಕ ವರ್ಗ, ಅಧಿಕಾರಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮತ್ತು ಸಹಕಾರವನ್ನು ತೋರಿಸುತ್ತಿರುವ ಸರ್ವರ ಕಾರ್ಯ ವೈಖರಿ ಪ್ರಶಂಸನೀಯ ಮತ್ತು ಶ್ಲಾಘನೀಯ. ಈ ಎಲ್ಲಾ ಮಹನೀಯರಿಗೂ ವಿಶೇಷವಾದ ಹೃದಯಪುರ್ವಕವಾದ ಧನ್ಯವಾದಗಳು.

ಈಗ ಬಂದಿರುವ ತುರ್ತು ಸಂಧಿಗ್ದ ಪರಿಸ್ಥಿತಿಯೆಂದರೆ. ಕರೋನಾ ವೈರಸ್. ಈ ವೈರಸ್ ನಾ ಮಹಾಮಾರಿಯನ್ನು ನಮ್ಮ ಹತ್ತಿರ ಬಾರದಂತೆ ಅತಿರ್ವ ಜಾಗರೂಕತೆಯಿಂದ ನಾವು ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ ಶೇಕಡಾ % 90 ರಷ್ಟು ಗ್ಯಾರಂಟಿಯಾಗಿ ನಾವು ಈ ಮಹಾಮಾರಿಯನ್ನು ಎದುರಿಸಬಹುದು. ಆದ್ದರಿಂದ ಎಲ್ಲಾ ನಮ್ಮ ನಾಗರಕ ಬಂಧುಗಳು ತಾವು ಸ್ವಯಂ ಪ್ರತಿಷ್ಟೆ ಹಾಗೂ ಉದ್ದಟತನವನ್ನು ಪ್ರದರ್ಶಿಸದೆ ಬದಿಗಿಟ್ಟು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಸಧ್ಯದ ಎಲ್ಲಾ ನಿಯಮಗಳು ಜನ ಹಿತಕ್ಕಾಗಿ ಜಾರಿಯಲ್ಲಿವೆ. ಸರ್ಕಾರ ಅಥವಾ ಪೋಲೀಸ್ ಇಲಾಖೆಯನ್ನು ದೂಷಿಸದೆ ಅವರು ಕರ್ತವ್ಯವನ್ನು ನಿರ್ವಹಿಸಲು ಅನುವು ಮಾಡಿಕೊಡೋಣ. ಇದು ಸರ್ಕಾರ ಅಥವಾ ಪೋಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ. ಈ ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಇದು ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮನುಕುಲದ ಭವಿಷ್ಯವನ್ನು ಯೋಚಿಸುತ್ತಾ ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಲೇಬೇಕಾಗಿದೆ. ನಾವೆಲ್ಲರೂ ಕ್ಷೇಮದಿಂದ ಇದ್ದರೆ ಇಂತಹ ಹತ್ತಾರು ಹಬ್ಬಗಳನ್ನು ಆಚರಿಸಬಹುದು.

ಬಂಧುಗಳೆ ಆದ್ದರಿಂದ ಸರ್ಕಾರದ ಮುಂದಿನ ಆದೇಶದವರೆಗೂ ಮನೆಯಲ್ಲಿರಿ ಎಂದು ತಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ. ದಯವಿಟ್ಟು ಎಲ್ಲರೂ ಅಂತರವನ್ನು ಕಾಪಾಡಿಕೊಳ್ಳಿರಿ. ಪ್ರತಿಯೊಂದು ಘಂಟೆಗೊಮ್ಮೆ ಕೈಯನ್ನು ತೊಳೆದು ಕೊಳ್ಳಬೇಕು, ಸ್ಯಾನಿಟೈಜರ್ ಉಪಯೋಗಿಸಬೇಕು. ಯೋಗಭ್ಯಾಸವನ್ನು ಮಾಡುತ್ತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಅಧಿಕೃತ ಆದೇಶ ಮತ್ತು ನಿರ್ದೇಶನದ ಆಧಾರದ ಮೇಲೆ ಮಾತ್ರ ಔಷಧಿಗಳನ್ನು ಉಪಯೋಗಿಸಬೇಕು. ಅನಾವಶ್ಯಕ ಆತಂಕ ಬೇಡ. ವಿಶೇಷವಾಗಿ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅಕಸ್ಮಾತ್ ತಾಗಿ ಸೀನು ಬಂದಾಗ, ಕೆಮ್ಮಿದಾಗ, ಅತೀ ಹತ್ತಿರದಿಂದ ಮಾತನಾಡಿದಾಗ ದಯವಿಟ್ಟು ಕರವಸ್ತರ ಅಥವಾ ಟಾವೆಲ್ ಉಪಯೋಗಿಸಿ. ನಂತರ ಸುತ್ತಮುತ್ತಲಿನ 2 ಮೀಟರ್ ವರೆಗಿನ ಪ್ರದೇಶವನ್ನು ಸ್ವಚ್ಛಗೊಳಿಸಿ. ಆಗಾಗ್ಗೆ ನೀರನ್ನು ಕುಡಿಯಿರಿ. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರು ತೋಟಗಳಲ್ಲಿ ಇರುವುದು ತುಂಬಾ ಒಳ್ಳೆಯದು. ಇಂತಹ ಸಂದಿಗ್ಧ ಸಮಯದಲ್ಲಿ ಸಹಾಯ ಕೇಳಿದ ಅಸಹಾಯಕ ರಿಗೆ ಮತ್ತು ಬಡವರಿಗೆ ತಮ್ಮ ಕೈಯಿಂದಾದ ಸಹಾಯ ಸಹಕಾರ ಮಾಡಿ. ಎಲ್ಲರೂ ಒಕ್ಕಟ್ಟಾಗಿ ಈ ಮಹಾಮಾರಿಯನ್ನು ಹೊಡಿದೋಡಿಸಿ ಮನುಕುಲವನ್ನು ಉಳಿಸೋಣ. ದಯವಿಟ್ಟು ಧನಾತ್ಮಕ ಚಿಂತನೆ ಇರಲಿ.

ಎಂದು ಮಾಹಿತಿ ತಂತ್ರಜ್ಞಾನ ಉದ್ಯಮಿ, ಮುದ್ದೇಬಿಹಾಳ ಮತ್ತು ದೇವರ-ಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಧುರೀಣ ರಾದ ಮಲ್ಲನಗೌಡ ಎಸ್ ಬಿರಾದಾರ ಕೋರವಾರ. ಹೇಳಿದ್ದಾರೆ.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಸರ್ಕಾರದ ನಿಯಮ ಉಲ್ಲಂಘನೆ ಪೋಲೀಸರಿಂದ ಲಾಟಿ ಚಾರ್ಜ

ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಎರಡು ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದವರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್. ಹಲವು ಬಾರಿ ಸಭೆ ನಡೆಸಿ ಮನವಿ ಮಾಡಿಕೊಂಡರು ಸರ್ಕಾರದ ನಿಯಮ ಉಲ್ಲಂಘಿಸಿ ಜನ ಸೇರಿದ್ದಾರೆ ಎಂದು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮೋಮಿನ್ ಗಲ್ಲಿಯ ಹುರೇರಾ ಮಸೀದಿ ಹಾಗೂ ಕುಂಬಾರ ಗಲ್ಲಿಯ ಮಸೀದಿಯಲ್ಲಿ ನಮಾಜ ಮಾಡಲು ಹೋಗಿದ್ದ 70 ಕ್ಕೂ ಹೆಚ್ಚು ಜನ ಸೇರಿದ್ದರು. ಮಸೀದಿ ಮೇಲೆ ಪೊಲೀಸ್ ದಾಳಿಯಿಂದ ಪ್ರಾರ್ಥನೆಗೆ ಸೇರಿದ್ದವರು ಚಲ್ಲಾಪಿಲ್ಲಿಯಾಗಿ ಓಡಿದರು.ಅವರನ್ನೆಲ್ಲ ಮಸೀದಿಯಿಂದ ಹೊರಗೆ ಕರೆದ ಪೊಲೀಸರು ಲಾಠಿ ಚಾರ್ಜ್ ಮಾಡಿ ಚದುರಿಸಿದರು.

ಸರ್ಕಾರದ ನಿಯಮ ಉಲ್ಲಂಘಿಸಿದವರಿಗೆ ಯಾರೂ ಸೇರಲು ಅವಕಾಶ ಇಲ್ಲ ಎಂದು ಹೇಳಿದರು. ನಾವು ಹಲವು ಬಾರಿ ಸಭೆ ನಡೆಸಿ ನಿಯಮ ಮೀರದಂತೆ ಮನವಿ ಮಾಡಿಕೊಂಡರು ಜನರು ಈ ರೀತಿ ಗುಂಪಾಗಿ ಸೇರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

ಸೂರಜ್ ಸೋಶಿಯಲ್ ಗ್ರುಪ್ ವತಿಯಿಂದ ಆರಕ್ಷಕರಿಗೆ ಸೇವೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಕೊರೊನಾ ಸೋಂಕಿನ ನಿಯಂತ್ರಣ ಕಲಂ144 ನಿಷೇಧಾಜ್ಞೆ ಜಾರಿಗೊಳಿಸಿದ್ದು ಸಾರ್ವಜನಿಕರ ಸೇವೆ ಸಲ್ಲಿಸುತ್ತಿರುವ ಆರಕ್ಷಕರಿಗೆ ಸೂರಜ್ ಸೋಷಿಯಲ್ ಗ್ರೂಪ್ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಮಹೇಬೂಬ ಶ ಹಡಲಗೇರಿ, ಶ್ರೀಕಾಂತ್ ಛಲವಾದಿ, ಕಾಶೀಮ ಕುಂಟೋಜಿ ,ಲಾಲಸಾಬ ಜತ್ತಿ, ಅಬ್ದುಲಗಫುರ ಬ ಕಡಕೂಳ ,ಹಾಗು ರೇವಣ್ಣಸಿದ್ಧ.ಬ.ನಾಯಕ, ಅಬ್ದುಲವಾಜಿದ ಹಡಲಗೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೂರಜ್ ಸೋಷಿಯಲ್ ಗ್ರೂಪ್ ವತಿಯಿಂದ ಸಾರ್ವಜನಿಕರ ಗಮನಕ್ಕೆ ವಿಶೇಷ ಸೂಚನೆಯನ್ನು ಹೇಳಿದರು. ಸಮಯ, ಕುಟುಂಬ, ಆರೋಗ್ಯ ಲೆಕ್ಕಿಸದೇ ಧೈರ್ಯದಿಂದ ಕೊರೋನಾ ವೈರಸ್ ವಿರುದ್ಧ ಸೆಣಸುತ್ತಿರುವ ವೈದ್ಯಕೀಯ ವೃಂದ, ಪೊಲೀಸರು, ಪೌರಕಾರ್ಮಿಕರ ಪರಿಶ್ರಮವನ್ನು ಗೌರವಿಸಬೇಕು. ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಯುವವರೆಗೆ ಅವರ ಧೈರ್ಯ, ತ್ಯಾಗಕ್ಕೆ ಮನ್ನಣೆ ನೀಡಬೇಕು.ಹಾಗು ಸರ್ಕಾರ ಜಾರಿಗೆ ತಂದಿರುವ ನಿಯಮವನ್ನು ಪಾಲನೆ ಮಾಡಬೇಕು ಹಾಗು ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಸೊರಜ ಸೋಷಿಯಲ್ ಗ್ರೂಪಿನ ಅಧ್ಯಕ್ಷರು ಮಹೇಬೂಬ ಶ ಹಡಲಗೇರಿ ಹಾಗೂ ಸದಸ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರಾಯಲ್ ಟಿವಿ ನ್ಯೂಸ್ ವಿಜಯಪುರ ನಿಮ್ಮ ಸುದ್ದಿಗಳನ್ನು ನೀಡಲು ಸಂಪರ್ಕಿಸಿ-8792900064

21 ದಿನಗಾಳ ಕಾಲ ದೇಶವೆ ಲಾಕ್ ಡೌನ್ ದೇಶದ ಜನತೆಯ ಪ್ರಾಣ ಕಾಪಾಡಲು ಪ್ರಧಾನಿ ಮೋದಿ ಆದೇಶ

ನವದೆಹಲಿ: ಕೊರೋನ ಸೋಂಕು ಹರಡದಂತೆ ಜಾಗೃತಿ ವಹಿಸಲು ಇನ್ನು 21 ದಿನಗಳ ಕಾಲ ಸಂಪೂರ್ಣವಾಗಿ ಭಾರತ ಲಾಕ್ ಡೌನ್ ಆಗಲಿದೆ. ಏಪ್ರಿಲ್14 ವರೆಗೆ ಭಾರತ ದೇಶಾದ್ಯಂತ ಯಾರೂ ಮನೆಯಿಂದ ಹೊರಗೆ ಬರಬೇಡಿ. 21 ದಿನ ನೀವು ಮನೆಯಲ್ಲಿರದಿದ್ದಲ್ಲಿ ನಿಮ್ಮ ಕುಟುಂಬ 21 ವರ್ಷ ಹಿಂದಕ್ಕೆ ಹೋಗಲಿದೆ -ಪ್ರಧಾನ ನರೇಂದ್ರ ಮೋದಿ ರಾಷ್ಟ್ರದ ಜನರಿಗೆ ಮಾಡಿದ ಮನವಿ ಮಾಡಿಕೊಂಡರು ಎಚ್ಚರಿಕೆಯ ಸಂದೇಶವನ್ನು ಹೇಳಿದ್ದಾರೆ.

ಭಾರತ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ಜನರಲ್ಲಿ ಕೈ ಮುುಗಿದು ಮನವಿ ಮತ್ತು ಎಚ್ಚರಿಕೆಯ ಸಂದೇಶ ನೀಡಿದರು. ನಾನು ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದಲ್ಲಿನ ಒಬ್ಬ ಸದಸ್ಯನಾಗಿ ಕೈ ಮಗಿದು ಬೇಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಈ ಕೊರೋನಾ ಸೋಂಕಿನಿಂದ ವಿಶ್ವದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ, ನಿಮಗೆ ನೀವೇ ಲಕ್ಷ್ಮಣ ರೇಖೆ ಹಾಕಿಕೊಂಡು ಎಲ್ಲಿದ್ದೀರೊ ಅಲ್ಲೇ ಇರಿ. ಏನು ಮಾಡಬೇಕೆಂದಿದ್ದೀರೋ ಅಲ್ಲಿಂದಲೇ ಮಾಡಿ. ದಯಮಾಡಿ ಹೊರಗೆ ಬರಲೇ ಬೇಡಿ. ನಾನು ನಿಮಗೆ ಕೈ ಮುಗಿದು ಪ್ರಾರ್ಥಿಸುತ್ತೇನೆ. 21 ದಿನದ ನಂತರ ಎಲ್ಲವೂ ಸುಗಮವಾಗಲಿದೆ ಎಂದು ಹೇಳಿದರು.

ಕೊರೋನಾ ಯಾವ ರೀತಿಯಲ್ಲಿ ಮತ್ತು ಎಷ್ಟು ವೇಗವಾಗಿ ಹರಡುತ್ತಿದೆ ಎಂದು ವಿವರಿಸಿದ ಅವರು, ಅತ್ಯಾಧುನಿಕ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳೇ ತತ್ತರಿಸಿ ಹೋಗಿವೆ. ಕೇವಲ 11 ದಿನದಲ್ಲಿ 1 ಲಕ್ಷ ಜನರಿಗೆ ಸೋಂಕು ತಗುಲಿದೆ. ನಾವು ಜಾಗ್ರತರಾಗದಿದ್ದರೆ ಇನ್ನು ಮೂರೇ ದಿನದಲ್ಲಿ ಇನ್ನೂ ಒಂದು ಲಕ್ಷ ಜನರಿಗೆ ಹರಡಲಿದೆ ಎಂದು ಎಚ್ಚರಿಸಿದರು.

ಈ ಕೊರೋನಾ ವಿರುದ್ಧ ಕಾರ್ಯಾಚರಣೆಗಾಗಿ 15 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ನರೇಂದ್ರ ಮೋದಿ ಘೋಷಿಸಿದರು.

ಈ ಸೋಂಕು ಹರಡದಂತೆ ತಡೆಗಟ್ಟಲು ನಿಮ್ಮ ಸಹಕಾರ ಮಹತ್ವದಾಗಿದೆ ದೇಶದ ಜನತೆ ಸಹಕರಿಸಿ ಎಂದರು.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಿ-8792900064

ಕೊರೋನ ಸೋಂಕು ನಿಯಂತ್ರಣಕ್ಕೆ ಸಹಕರಿಸಿ-ಡಿ ಬಾಸ್ ಮನವಿ

ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಈ ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ತಮ್ಮ ಮನದ ಮಾತನ್ನು ಹೇಳಿದ್ದಾರೆ. ಜಾಗೃತರಾಗಿ ಜನಗಳೆ.

ಎಲ್ಲಾ ಭಾರತೀಯರಲ್ಲೂ ನನ್ನ ಕಳಕಳಿಯ ವಿನಂತಿ. ಈ ಮಾರಕವಾದ ಕರೋನ ವೈರಸ್ ಇಂದ ಪಾರಾಗುವುದು ನಮ್ಮ ಮೊದಲ ಆಧ್ಯತೆ ಆಗಿರಬೇಕು. ಈ ವೈರಸ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಗವರ್ನಮೆಂಟ್, ಡಾಕ್ಟರ್ಸ್, ಪೊಲೀಸ್ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ದಯಮಾಡಿ ನಿಮ್ಮ ಫ್ಯಾಮಿಲಿ ಗಾಗಿ, ನಿಮ್ಮ ನೆರೆ ಹೊರೆಯ ಗೆಳೆಯರಿಗಾಗಿ, ನಮಗಾಗಿ ಆದಷ್ಟು ನಿಮ್ಮ ಮನೆಯಲ್ಲಿ ಸುರಕ್ಷಿತವಾಗಿರಿ. ಈ ಸೋಂಕು ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದರೂ ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದು ಮಾಡದಿರಿ.

ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ. ಇಟಲಿ ಸ್ಪೇನ್ ದೇಶಗಳಲ್ಲಿ ಜಾಗೃತಕ್ರಮಗಳನ್ನು ಮೊದಲೇ ಸರಿಯಾಗಿ ಪಾಲಿಸದೆ ಆಗುತ್ತಿರುವ ಅನಾಹುತಗಳು ನಿಮ್ಮ ಕಣ್ಣ ಮುಂದಿವೆ. ನಿಮ್ಮ ಕರ್ತವ್ಯ ಮನೆಯಲ್ಲಿಯೇ ಇದ್ದು ದೇಶದ ಹಿತಕ್ಕಾಗಿ ಎಲ್ಲಾ ನಿಯಮಗಳನ್ನು ಪಾಲಿಸುವುದು. ಇದನ್ನು ದಯಮಾಡಿ ನೆರವೇರಿಸಿಕೊಡಿ.’Common sense is not common’ ಎನ್ನುವ ಹಾಗೆ ಮಾಡಬೇಡಿ.

Please behave like a responsible citizen of the country.

ರಾಯಲ್ ಟಿವಿ ನ್ಯೂಸ್ ವೀಕ್ಷಿಸಿ ನಿಮ್ಮ ಸುದ್ದಿಗಳನ್ನು ನಮಗೆ ನೀಡಲು ಸಂಪರ್ಕಿಸಿ-8792900064

Design a site like this with WordPress.com
Get started