ಸಿದ್ದೇಶ್ವರ ಜಾತ್ರಾ ನಿಮಿತ್ತ ಆಕರ್ಷಕ ಜಾನುವಾರುಗಳಿಗೆ ಬಹುಮಾನ ವಿತರಣೆ

ಸುಪ್ರಸಿದ್ಧ ವಿಜಯಪುರ ದ ಸಿದ್ದೇಶ್ವರ ಜಾತ್ರಾ ನಿಮಿತ್ತ ಜಾತ್ರಾ ಕಮಿಟಿ ಸಹಯೋಗ ಹಾಗೂ ಎ ಪಿ ಎಮ್ ಸಿ ವಿಜಯಪುರ ಇವರ ಸಹಯೋಗ ದೊಂದಿಗೆ ವಿವಿಧ ತಳಿಯ ಜಾನುವಾರುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ.

ವಿಜಯಪುರದ ಮಹಿಳಾ ಯೂನಿವರ್ಸಿಟಿ ಹತ್ತಿರ ಇರುವ ಎ ಪಿ ಎಮ ಸಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಕಳು ಮತ್ತು ನಾನಾ ತಳಿಯ ಹೋರಿಗಳು ಆಗಮಿಸಿದ್ದವು. ಅದರಲ್ಲಿ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿ ಬಹುಮಾನ ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ವಿಜಯಪುರ ಎ ಪಿ ಎಮ್ ಸಿ ಅಧ್ಯಕ್ಷ ಸುರೇಶ್ ಗೌಡ ಪಾಟೀಲ, ಉಪಾಧ್ಯಕ್ಷ ಸುರೇಶ ತಳವಾರ, ಕೃಷಿ ಮಾರಾಟ ಮಂಡಳಿ ಬೆಂಗಳೂರದ ಸದಸ್ಯರಾದ ಗುರು ತಾರನಾಳ, ಸಾಹೇಬಗೌಡ ಪಾಟೀಲ, ಸಿ ಪಿ ಪಾಟೀಲ, ಕಾರ್ಯದರ್ಶಿ ಕುಮಾರಸ್ವಾಮಿ,ಸೇರಿದಂತೆ ಬಹುಮಾನ ವಿತರಣೆ ಮಾಡಿದರು

ಬಹುಮಾನವನ್ನು ಎ ಪಿ ಎಮ ಸಿ ಬೋರ್ಡನಿಂದ 10 ಸಾವಿರ ,7,500,5500 ನೀಡಿದರು.

ಸಿದ್ದೇಶ್ವರ ಸಂಸ್ಥೆಯಿಂದ ಒಂದು ತೊಲೆ ಬಂಗಾರ, ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರಿಂದ ಒಂದು ತೊಲೆ ಬಂಗಾರ ಹೀಗೆ ಹಲವರಿಂದ ಬಹುಮಾನ ವಿತರಣೆ ಮಾಡಿದರು.ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಭಾಗಗಳಿಂದ ರೈತರು ಸಾರ್ವಜನಿಕರು ಅಪಾರ ಪ್ರಮಾಣದಲ್ಲಿ ಆಗಮಿಸಿದ್ದರು.

ವರದಿ:ಸಾಗರ ಉಕ್ಕಲಿ

ನಿವೃತ್ತ ಎ ಎಸ್ ಐ ಜೆ.ಎಚ್ ರಾಮಚಂದ್ರಪ್ಪ ನಿಧನ

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎ.ಎಸ ಐ.ಆಗಿ ಸೇವೆಸಲ್ಲಿಸಿ 2017ರ ಜನವರಿಯಲ್ಲಿ ನಿವೃತ್ತಿಹೊಂದಿದ್ದ.ಶಿರಾ ತಾಲ್ಲೂಕಿನ ಜುಂಜರಾಮನಹಳ್ಳಿ ಗ್ರಾಮದವರಾದ ಜೆ.ಹೆಚ್.ರಾಮಚಂದ್ರಪ್ಪ(62)ಜ15ರಂದು ಬುಧವಾರ ಬೆಳಗಿನ ಜಾವ ಸ್ವಗ್ರಾಮದಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

ಅವರು ಸುಮಾರು 3 ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರು. ಸಾರ್ವಜನಿಕ ವಲದಲ್ಲಿ ಉತ್ತಮ ಭಾಂದವ್ಯ ಹೊಂದಿ ಜನಸ್ನೇಹಿ ಪೊಲೀಸ್ ಎಂದು ಗುರುತಿಸಿಕೊಂಡವರಾಗಿದ್ದರು.

ಪೊಲೀಸ್ ಪೇದೆಯಾಗಿ ಬಳ್ಳಾರಿ ಠಾಣೆ.ತೆಕ್ಕಲಕೋಟೆ.ಹೊಸಪೇಟೆ.ತೋರಣಗಲ್ಲು.ಮುಖ್ಯಪೇದೆಯಾಗಿ ಕುರುಗೋಡು.ಇಟಗಿ

ಗುಡೇಕೋಟೆ.ಖಾನಾಹೊಸಹಳ್ಳಿಠಾಣೆಗಳಲ್ಲಿ ಮುಖ್ಯಪೇದೆಯಾಗಿ ಸೇವೆ.ಕೂಡ್ಲಿಗಿಯಲ್ಲಿ ಎ ಎಸ ಐ ಆಗಿ ಮುಂಬಡ್ತಿಹೊಂದಿ ವರ್ಷ ಕಾಲ ಸೇವೆಸಲ್ಲಿಸಿದ್ದರು.2017ರ ಜನವರಿಯಲ್ಲಿ ವಯೋನಿವೃತ್ತಿಹೊಂದಿದ್ದರು.ನಂತರ ಅವರ ಸ್ವಗ್ರಾಮದಲ್ಲಿ ನೆಲಸಿದ್ದರು.ಅವರು ತಾಯಿ.ಮಡದಿ ಮಕ್ಕಳು.ಮೂವರು ಸಹೋದರರು.ಇಬ್ಬರು ಸಹೋದರಿಯರು.ಅಪಾರ ಬಂದು ಬಳಗವನ್ನು ಹೊಂದಿದ್ದರು.ಮೃತರ ಅಂತ್ಯಕ್ರಿಯೆಯನ್ನು ಅವರ ಜಮೀನಿನಲ್ಲಿಯೇ ಬುಧವಾರದಂದು ಸಾಯಂಕಾಲ ಜರುಗಿಸಲಾಗಿದೆ.

ಸಂತಾಪ:ನಿವೃತ್ತ ಎ ಎಸ್ ಐ ರಾಮಚಂದ್ರಪ್ಪರವರ ನಿಧನಕ್ಕೆ ಬಳ್ಳಾರಿ ಜಿಲ್ಲೆಯ ಪೊಲೀಸ್ ಇಲಾಖೆಯ ಜಿಲ್ಲಾವರಿಷ್ಠಾಧಿಕಾರಿಗಳು.ಜಿಲ್ಲೆಯ ವಿವಿದ ಪೊಲೀಸ್ ಠಾಣೆಗಳ ಅಧಿಕಾರಿಗಳು. ಸಿಬ್ಬಂದಿ.ಕೂಡ್ಲಿಗಿ ಡಿವೈಎಸ್ಪಿ. ಸಿಪಿಐ.ಪಿಎಸ್ಐ.ಕೂಡ್ಲಿಗಿ ಠಾಣೆ ಸಿಬ್ಬಂದಿಗಳು ಹಾಗೂ ಹಿರಿಯನಾಗರೀಕರು.ಜನಪ್ರತಿನಿಧಿಗಳು.ವಿವಿದ ಸಂಘಟನೆಗಳ ಪದಾಧಿಕಾರಿಗಳು.ಸಂತಾಪ ವ್ಯಕ್ತಪಡಿಸಿದ್ದಾರೆ.

ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ನಿಜ ಶರಣ ಅಂಬಿಗರ ಚೌಡಯ್ಯ ಗುರು ಪೀಠದಲ್ಲಿ ಚೌಡಯ್ಯನವರ 900 ನೇಯ ಜಯಂತ್ಯೋತ್ಸವ ರಥೋತ್ಸವ ಕಾರ್ಯಕ್ರಮ

ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಮುಂದಿನ ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನ ನೀಡುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು.

ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿ ಬುಧವಾರ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ ಶರಣ ಸಂಸ್ಕೃತಿ ಉತ್ಸವ, ವಚನ ಮಹಾರಥೋತ್ಸವ, ಶ್ರೀ ನಿಜಶರಣ ಅಂಬಿಗರಚೌಡಯ್ಯನವರ 900ನೇ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್ ಚಿಂಚನಸೂರ ಅವರನ್ನು ಅಧ್ಯಕ್ಷನ್ನಾಗಿ ನೇಮಕ ಮಾಡಲಾಗಿದೆ. ಜನಾಂಗದ ಅಭಿವೃದ್ಧಿಗೆ ನಿಗಮದ ಬೇಡಿಕೆಗೆ ಸ್ಪಂದಿಸಲಾಗುವುದು ಹಾಗೂ ಅಂಬಿಗರ ಚೌಡಯ್ಯನವರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸಮಾಜದ ಬಹುದಿನಗಳ ಬೇಡಿಕೆಯಾದ ಮೊಗವಿರ, ಕೋಲಿ, ಗಂಗಾಮತ ಸಮಾಜವನ್ನು ಎಸ್.ಟಿಗೆ ಸೇರಿಸಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಈಗಾಗಲೇ ಕೇಂದ್ರದಲ್ಲಿ ಈ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಕುರಿತಂತೆ ಕೇಂದ್ರ ಸಚಿವರಿಂದಿಗೆ ಚರ್ಚಿಸಲಾಗುವುದು, ತಮ್ಮ ಸಮಾಜದ ಬೇಡಿಕೆಯನ್ನು ಈಡೇರಿಸುವ ಪ್ರಮಾಣ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಎಲ್ಲ ಸಮಾಜವನ್ನು ಒಟ್ಟಾಗಿ, ಒಂದಾಗಿ ತೆಗೆದುಕೊಂಡು ಹೋಗುವುದು ನನ್ನ ಆಶಯವಾಗಿದೆ. ಯಾವುದೇ ಸಮಾಜಕ್ಕೆ ನೋವಾಗದಂತೆ ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಿಗೆ ತಮ್ಮ ಸಹಕಾರ ಅಗತ್ಯವಾಗಿದೆ. ನಾಡು ಕಂಡರೀಯದ ಅತಿವೃಷ್ಟಿಯಿಂದ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾನಿಯಾಗಿದೆ, ನೆರೆಯಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಅವರ ಕಣ್ಣಿರೊರೆಸುವ ಕೆಲಸಮಾಡುತ್ತಿದ್ದೇವೆ ಮುಂದಿನ ಮೂರು ವರ್ಷಗಳಲ್ಲಿ ನಾಡಿನ ಅಭಿವೃದ್ಧಿಗೆ ನಿಮ್ಮ ಸಹಕಾರ ವಿರಲಿ ಎಂದು ಹೇಳಿದರು.

12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತ ಅಗ್ರಣ್ಯ ಶರಣರು ಅಂಬಿಗರ ಚೌಡಯ್ಯನವರು, ಲೋಕ ಕಲ್ಯಾಣಕ್ಕಾಗಿ ತಮ್ಮ ಒಡೆತನದ ಭೂಮಿ ನೀಡಿದ ಮಹಾನ್ ಶರಣ. ವಚನ ಸಾಹಿತ್ಯ ರಕ್ಷಣೆ ಮಾಡಿದ ಶ್ರೇಷ್ಠ ಶರಣರು. ಬದಲಾದ ಕಾಲಘಟ್ಟದಲ್ಲಿ 12ನೇ ಶತಮಾನದ ವಿಚಾರಗಳು ಇಂದು ಪ್ರಸ್ತುವಾಗಿವೆ. ಮುಂದಿನ ದಿನಗಳಲ್ಲಿ ಸಾಧಿಸಬೇಕಾಗಿದ್ದು ಬಹಳವಿದ್ದು, ಕಾಲಾವಕಾಶ ನೀಡಿದಲ್ಲಿ ನಾಡಿನ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯಾಣ ಪ್ರಯತ್ನಮಾಡುವೆ ಎಂದು ಹೇಳಿದರು.

ಸಮಾರಂಭದಲ್ಲಿ ಗೃಹ, ಸಹಕಾರ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಲಾಲಾಜಿ ಮೆಂಡನ್, ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಬಾಬುರಾವ್ ಚಿಂಚನಸೂರ, ಸಂಸದರಾದ ರಾಘವೇಂದ್ರ, ಜಿ.ಎಂ.ಸಿದ್ದೇಶ್ವರ, ರವಿಕುಮಾರ, ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಂ.ಬಿ.ಹೆಗ್ಗಣ್ಣನವರ, ಮಾಜಿ ಸಚಿವರಾದ ಆರ್.ಶಂಕರ್, ಬಿ.ಪಿ.ಹರೀಶ್, ಗಂಗಾಮತಸ್ತರ ಸಂಘದ ಅಧ್ಯಕ್ಷರಾದ ಬಿ.ಮೌಲಾಲಿ, ನರಸೀಪುರದ ಕ್ಷೇತ್ರದ ನಿಜಶರಣ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ, ನಿಡುಮಾಮುಡಿ ಚನ್ನಮಲ್ಲವೀರಭದ್ರ ಶ್ರೀಗಳು, ದಿಂಗಾಲೇಶ್ವರ ಶ್ರೀಗಳು, ಶಾಂತವೀರಶ್ರೀಗಳು, ಬಸವಲಿಂಗಶ್ರೀಗಳು, ಡಾ.ಈಶ್ವರ ಮಂಟೂರ ಇತರರು ಉಪಸ್ಥಿತರಿದ್ದರು.

ವರದಿ ಸಾಗರ ಉಕ್ಕಲಿ

ಪ್ರೌಢಶಾಲಾ ಹಳೇ ವಿಧ್ಯಾರ್ಥಿಗಳಿಂದ ಗುರುವಂದನ ನಡೆಸುವ ಕುರಿತು ಸಮಾಲೋಚನೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದಡಿ ನಡೆಯುತ್ತಿರುವ ವೀಬಿಸಿ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪೂರೈಸಿದ ವಿದ್ಯಾರ್ಥಿಗಳೆಲ್ಲ ಸೇರಿ ಏಪ್ರೀಲ್, ಮೇ ತಿಂಗಳಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಿದ್ದಾರೆ.

ರವಿವಾರ ಶಾಲೆಯ ಆವರಣದಲ್ಲಿ ಸಭೆ ಸೇರಿ ಚರ್ಚಿಸಿದ ಹಳೇಯ ವಿದ್ಯಾರ್ಥಿಗಳು, ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರೌಢಶಾಲೆ ವಿದ್ಯಾಭ್ಯಾಸ ಭವಿಷ್ಯ ರೂಪಿಸುವಂಥದ್ದು. ಇಂಥ ಪ್ರೌಢಶಾಲೆ ಹಂತದಲ್ಲಿ ವಿದ್ಯೆ ಕಲಿಸಿ ಬದುಕಿಗೆ ದಾರಿ ತೋರಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಅಭಿಲಾಷೆ ಆಗಿರುತ್ತದೆ. ಮಾತ್ರವಲ್ಲದೆ ವಿದ್ಯೆ ಕೊಟ್ಟ ಗುರುವಿಗೆ ಸತ್ಕರಿಸುವುದು ಗುರುವಿನ ಋಣ ತೀರಿಸುವ ಒಂದು ಸಣ್ಣ ಪ್ರಯತ್ನವೂ ಆಗಿರುತ್ತದೆ. ಹೀಗಾಗಿ ಆ ಸಾಲಿನ ಎಸ್‍ಎಸ್‍ಎಲ್‍ಸಿ ಬ್ಯಾಚ್‍ನ ಎಲ್ಲ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಉದ್ಯೋಗ, ನೌಕರಿ, ವ್ಯಾಪಾರ ಮುಂತಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರೆಲ್ಲ ಒಂದೆಡೆ ಸೇರಿ ತಮ್ಮ ಕಲಿಕೆಯ ದಿನಗಳನ್ನು ನೆನಪಿಸಿಕೊಳ್ಳುವುದಕ್ಕೂ ಇದು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಲಾಯಿತು.

ಮುಂಬರುವ ಫೆಬ್ರವರಿ ತಿಂಗಳಲ್ಲಿ ಇನ್ನೊಮ್ಮೆ ಹಳೇಯ ವಿದ್ಯಾರ್ಥಿಗಳೆಲ್ಲ ಸೇರಿ ಸಭೆ ನಡೆಸಬೇಕು. ಪ್ರತಿ 3 ವರ್ಷಕ್ಕೊಮ್ಮೆ ಪಟ್ಟಣದಲ್ಲಿ ನಡೆಯುವ ದ್ಯಾಮವ್ವದೇವಿ ಜಾತ್ರೆ ಈ ವರ್ಷ ಏಪ್ರೀಲ್ ಇಲ್ಲವೇ ಮೇ ತಿಂಗಳಲ್ಲಿ ನಡೆಯಲಿದೆ. ಆ ಜಾತ್ರೆಗೆ ಬೇರೆ ಕಡೆ ನೆಲೆಸಿರುವ ಹಳೇಯ ವಿದ್ಯಾರ್ಥಿಗಳೆಲ್ಲ ಆಗಮಿಸುತ್ತಾರೆ. ಆಗ ಗುರುವಂದನೆ ಕಾರ್ಯಕ್ರಮ ನಡೆಸಿದಲ್ಲಿ ಅದು ಹೆಚ್ಚು ಜನರನ್ನು ತಲುಪಿ ಸಾರ್ಥಕ ಕಾರ್ಯ ಮಾಡಿದಂತಾಗುತ್ತದೆ ಎಂದು ತೀರ್ಮಾನಿಸಲಾಯಿತು.

ವೀವಿವ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ, ಶಾಲೆಯ ಹಿರಿಯ ಶಿಕ್ಷಕರೂ ಆಗಿರುವ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಹೊಕ್ರಾಣಿ, 1992-95ನೇ ಸಾಲಿನಲ್ಲಿ 8 ರಿಂದ 10ನೇ ತರಗತಿವರೆಗೆ ಕಲಿತ ಶಾಲೆಯ ಹಳೇಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ:ಸಾಗರ ಎಂ ಉಕ್ಕಲಿ

ಕಾಶಿ ಲಿಂಗೇಶ್ವರ ಜಾತ್ರಾ ಮಹೋತ್ಸವ ಇದೆ 12 ರಿಂದ ಆರಂಭ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸಪ್ತಸಾಗರ ಗ್ರಾಮದಲ್ಲಿ ಮಕರ ಸಂಕ್ರಮಣದ ನಿಮಿತ್ಯ ಶ್ರೀ ಕಾಶಿ ವಿಶ್ವೇಶ್ವರ ಜಾತ್ರೆಯು ಜನವರಿ 12 ರಿಂದ 16 ರ ವರೆಗೆ ಜರುಗಲಿದೆ.

ಸಪ್ತಸಾಗರ ಗ್ರಾಮದ ಪುಣ್ಯ ಕ್ಷೇತ್ರದಲ್ಲಿ ಜನಮೇಜಯ ರಾಜನು ಸರ್ಪ ಯಜ್ಞ ಮಾಡಿದ ಪುಣ್ಯ ಕ್ಷೇತ್ರವಾಗಿದೆ.ಈ ಸರ್ಪ ಯಜ್ಞ ಮಾಡಿದ ಭೂಮಿಯು ಸಪ್ತಸಾಗರ ಗ್ರಾಮದ ಪೂರ್ವೋತ್ತರಕ್ಕೆ ಎರಡು ಕಿ.ಮೀ ದೂರದಲ್ಲಿದೆ.ಈ ಗ್ರಾಮದಲ್ಲಿ ಪುರಾತನ ಶಿವನ ಶ್ರೀ ಕಾಶಿ ಈಶ್ವರನ ದೇವಸ್ಥಾನವಿದೆ.ಇಲ್ಲಿ ಪ್ರತಿವರ್ಷ ಸಂಕ್ರಮಣದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ರವಿವಾರ 12/01/2020 ರಂದು ತೇರಿನ ಕಳಸಾರೋಣ ಕಾರ್ಯಕ್ರಮ ನಡೆಯುತ್ತದೆ ಹಾಗೂ 14 /01/2020 ರಂದು ಯಜ್ಞ ಭೂಮಿಕ್ಷೇತ್ರ ಹಾಗೂ ಭೋಗಿ ಕಾರ್ಯಕ್ರಮದಲ್ಲಿ ಒನಿಕೆ ಹಾಗೂ ಒಳ್ಳದ ಕಾರ್ಯಕ್ರಮ ಮತ್ತು ದಿನಾಂಕ 15/01/2020 ರಂದು ಬುಧವಾರದಂದು ಮಕರ ಸಂಕ್ರಮಣದ ಪುಣ್ಯ ಮುಂಜಾನೆಯಿಂದ ಸಂಜೆಯವರೆಗೆ ಶ್ರೀ ಕೃಷ್ಣಾನದಿಯಲ್ಲಿ ಕಾಶಿವಿಶ್ವೇಶ್ವರನಿಗೆ ಜಲಾಭಿಷೇಕ ಹಾಗೂ ಸಂಜೆ 6 ಗಂಟೆಗೆ ವಾದ್ಯವೃಂದದೊಂದಿಗೆ ರಥೋತ್ಸವ ಕಾರ್ಯಕ್ರಮದ ಜೊತೆಗೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ ಎಂದು ಜಾತ್ರಾ ಕಮೀಟಿಯವರು ತಿಳಿಸಿದ್ದಾರೆ.

ವರದಿ:ಸಚೀನ ಕಾಂಬಳೆ ಅಥಣಿ

ರಾಷ್ಟ್ರೀಯ “ಮಾಧ್ಯಮ ಭೂಷಣ “ಪ್ರಶಸ್ತಿಗೆ ಅಂಕಣಕಾರ & ಪತ್ರಕರ್ತ ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಆಯ್ಕೆ

ಗದಗ/ಉಡುಪಿ :

ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿ ಮನೆಯ ಶ್ರೀಯುತ ಜಗನ್ನಾಥ್ ಶೆಟ್ಟಿ ಮತ್ತು ವಸಂತಿ ಶೆಟ್ಟಿ ಅವರ ಪುತ್ರನಾದ

ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರು ಈ ಬಾರಿಯ “ರಾಷ್ಟ್ರೀಯ ಮಾಧ್ಯಮ ಭೂಷಣ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಕಟಣೆ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಂಸ್ಥೆಯ ಆಡಳಿತ ವರ್ಗ ಪ್ರಕಟಣೆ ಹೊರಡಿಸಿದೆ.ಇವರು ಹಲವಾರು ವರ್ಷಗಳಿಂದ ವಿವಿಧ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಪತ್ರಿಕೆಗಳಿಗೆ ಅಂಕಣಗಳು ಹಾಗೂ ಬರಹಗಳನ್ನು ವಿಶೇಷವಾಗಿ ನೀಡುತ್ತಿದ್ದು ಇವರನ್ನು ಈ ಬಾರಿ ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಕರ್ನಾಟಕ ರಾಜ್ಯದ ಹುಬ್ಬಳ್ಳಿಯ ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆ ನೀಡುತ್ತಿರುವ ರಾಜ್ಯದ ಮೂವತ್ತ ಮೂರು ಕ್ಷೇತ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ಪ್ರಾರಂಭಿಪ್ರಾರಂಭಿಸಿದ್ದು ,ಅದರಲ್ಲಿ ಸಾಮಾಜಿಕ ಚಿಂತನೆ, ಉತ್ತಮ ವರದಿಗಳ ಪ್ರಸಾರ, ಸಂಗ್ರಹ ಯೋಗ್ಯ ಅಂಕಣಗಳ ಬರಹ ಹಾಗೂ ಸಮಾಜ ಕಟ್ಟುವಲ್ಲಿ , ಧಾರ್ಮಿಕ ದರ್ಶನ ಹಾಗೆಯೇ, ಸಮಾಜಕ್ಕೆ ಅತಿ ಮುಖ್ಯವಾಗಿರುವ ವಿಷಯಗಳನ್ನು ಪತ್ರಿಕೋದ್ಯಮದ ಮೂಲಕ ನಾಡಿನ ಸಮಸ್ತ ಓದುಗರಿಗೆ ತಿಳಿಸಿದ ಅರ್ಹ

  • ದೃಶ್ಯ ಮಾಧ್ಯಮ

  • ಪತ್ರಿಕೋದ್ಯಮ,

  • ಕಿರುತೆರೆ,

  • ಬಯಲಾಟ ,

  • ಚಿತ್ರಕಲೆ ,

  • ಯಕ್ಷಗಾನ ,

  • ಕ್ರೀಡೆ,

  • ಸಮಾಜ ಸೇವೆ,

  • ಸಾಹಿತ್ಯ ,

  • ಶಿಕ್ಷಣ ,

  • ಕಾನೂನು ,

  • ರಾಜಕೀಯ,

  • ಸರಕಾರಿ ಸೇವೆ ,

  • ಜ್ಯೋತಿಷ್ಯ ,

  • ಸಂಘ ಸಂಸ್ಥೆ ,

  • ಯುವ ಪ್ರತಿಭೆ,

ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಶಸ್ತಿಯನ್ನು ಆಯ್ಕೆ ಮಾಡಲಾಗಿದೆ .ಅದೇ ರೀತಿ ಕಾರ್ಯನಿರತ ಪತ್ರಕರ್ತರಿಗೆ ರಾಜ್ಯದ ಮೂವತ್ತ ಮೂರು ಕ್ಷೇತ್ರಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ .ಅದೇ ರೀತಿ ಕರಾವಳಿಯ ಇಬ್ಬರೂ ಕಣ್ಮಣಿಗಳಿಗೆ ಈ ಬಾರಿ ಪ್ರಶಸ್ತಿ ಲಭಿಸಿದೆ .ಯಕ್ಷಗಾನ ವಿಭಾಗದಲ್ಲಿ “ಮಂಕಿ ಈಶ್ವರ ನಾಯಕ್” ಹೊನ್ನಾವರ ಹಾಗೂ ಕರಾವಳಿಯ ಇನ್ನೋರ್ವ ನಿರೂಪಕ ,ಅಂಕಣಕಾರ, ಬರಹಗಾರ ,ಪತ್ರಕರ್ತರಾದ ಉಡುಪಿ ಜಿಲ್ಲೆಯ

ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ ಕಳೆದ ಬಾರಿ 2013ರಲ್ಲಿ ಕರ್ನಾಟಕ ರಾಜ್ಯದ “ಮೀಡಿಯಾ ಅಸೋಸಿಯೇಷನ್ ಆಫ್ ಕರ್ನಾಟಕ (ರಿ.)” ಕೊಡಮಾಡಿದ ಮಾಧ್ಯಮ ಪ್ರಶಸ್ತಿ , 2015 ರಲ್ಲಿ ದೆಹಲಿಯ ಕಾರ್ಯನಿರತ ಪತ್ರಕರ್ತರ ಸಂಘದಿಂದ “ಬೆಸ್ಟ್ ರಿಪೋರ್ಟರ್ ಅವಾರ್ಡ್” ಹಾಗೂ

2019 ರಲ್ಲಿ ಆಲ್ ಇಂಡಿಯಾ ಮೀಡಿಯಾ ಅಸೋಸಿಯೇಷನ್ ಮತ್ತು ಕರ್ನಾಟಕ ದರ್ಶನ ಮಾಧ್ಯಮ ಸಂಸ್ಥೆ ಘೋಷಿಸಿದ “ರಾಷ್ಟ್ರೀಯ ಮಾಧ್ಯಮ ಲೋಕ ಪ್ರಶಸ್ತಿ “ಲಭಿಸಿದೆ. ಆಯ್ಕೆಯಾದ ಕಾರ್ಯನಿರತ ಪತ್ರಕರ್ತರಿಗೆ ಈ ಬಾರಿ ಗದಗ ಜಿಲ್ಲೆಯಲ್ಲಿ ನಡೆಯುವ ಬೃಹತ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಗದಗದ ಕೆ. ಎಚ್ . ಸಭಾಭವನದಲ್ಲಿ (ಎಪಿಎಂಸಿ ಯಾರ್ಡ್ ಸಂಕಿರಣ ) ದಿನಾಂಕ 02-02 -2020 ಭಾನುವಾರ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ತನಕ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದಲ್ಲಿ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ್ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯಕಾರಿಣಿ ಯುವ ಮೋರ್ಚಾ ಬಿ.ವೈ ವಿಜಯೇಂದ್ರ ,ಉಚ್ಚ ನ್ಯಾಯಾಧೀಶರಾದ ಅರಳಿ ನಾಗರಾಜ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.,ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀನಾಥ್ ಜೋಶಿ ಪೊಲೀಸ್‌ ವರಿಷ್ಠಾಧಿಕಾರಿಗಳು ಗದಗ ಜಿಲ್ಲೆ ,ಕರ್ನಾಟಕ ಸರ್ಕಾರದ ಅಧಿಕಾರಿಗಳು ಹಾಗೂ ಪತ್ರಿಕೋದ್ಯಮಿಗಳು, ವಿವಿಧ ಮಠದ ಮಠಾಧೀಶರು ,ಚಿಂತಕರು, ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವರದಿ:ಸಾಗರ ಉಕ್ಕಲಿ

ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ

ಬೆಂಗಳೂರಿನ ವೈದಿಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ರಾಷ್ಟ್ರಮಟ್ಟದ ಅರ್ಚಕರ ಮತ್ತು ಪುರೋಹಿತರ ಆಗಮಿಕರ ಗಿರಿಜಾ ಕಲ್ಯಾಣ ಪ್ರಯೋಗಿಕ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಗುರುಗಳಾದ “ಲಾಲಪ್ಪ ಗದ್ದೆಪ್ಪ ಹವಾಲ್ದಾರ” ಅವರನ್ನು ಗುರುತಿಸಿ ಜ್ಯೋತಿಷ್ಯ ಮತ್ತು ವೈದ್ಯ ಪಂಡಿತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ಜಗದ್ಗುರು ಶ್ರೀ 1008 ಡಾ ” ವೀರಸೋಮೇಶ್ವರ ಶಿವಾಚಾರ್ಯ ಭಗವತ ಪಾದರು ರಂಭಾಪುರಿ ಪೀಠ ಅವರು ಆಯುರ್ವೇದಿಕ್ ಪಂಡಿತರು “ವೈದಿಕ ಸಂಪನ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

ಲಾಲಪ್ಪ ಶರಣರಿಗೆ “ವೈದಿಕ ಸಂಪನ್ನ” ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ

ಬೆಂಗಳೂರಿನ ವೈದಿಕ ಚಾರಿಟಬಲ್ ಟ್ರಸ್ಟ್ ಮಹಾಲಕ್ಷ್ಮಿ ಗುರುಕುಲ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ತೃತೀಯ ರಾಷ್ಟ್ರಮಟ್ಟದ ಅರ್ಚಕರ ಮತ್ತು ಪುರೋಹಿತರ ಆಗಮಿಕರ ಗಿರಿಜಾ ಕಲ್ಯಾಣ ಪ್ರಯೋಗಿಕ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಪಟ್ಟಣದ ಗುರುಗಳಾದ “ಲಾಲಪ್ಪ ಗದ್ದೆಪ್ಪ ಹವಾಲ್ದಾರ” ಅವರನ್ನು ಗುರುತಿಸಿ ಜ್ಯೋತಿಷ್ಯ ಮತ್ತು ವೈದ್ಯ ಪಂಡಿತರ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ಜಗದ್ಗುರು ಶ್ರೀ 1008 ಡಾ ” ವೀರಸೋಮೇಶ್ವರ ಶಿವಾಚಾರ್ಯ ಭಗವತ ಪಾದರು ರಂಭಾಪುರಿ ಪೀಠ ಅವರು ಆಯುರ್ವೇದಿಕ್ ಪಂಡಿತರು “ವೈದಿಕ ಸಂಪನ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ವರದಿ:ಸಾಗರ ಉಕ್ಕಲಿ

ಮುದ್ದೇಬಿಹಾಳ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಮುದ್ದೇಬಿಹಾಳ: ಪಟ್ಟಣದಲ್ಲಿ ಪೊಲೀಸ್ ಠಾಣೆಯ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಯಿತು.ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಸರ್ಕಲ್ ಇನ್ಸ್ಪೆಕ್ಟರ್ ಆನಂದ ವಾಗ್ಮೋಡೆ ರಸ್ತೆ ಸುರಕ್ಷತಾ ಕ್ರಮದ ಬಗ್ಗೆ ಮಾತನಾಡಿದರು:

ಸಾರ್ವಜನಿಕರಲ್ಲಿ ರಸ್ತೆಯಲ್ಲಿ ನಡೆದಂತ ಅಪಘಾತಗಳು ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಯಾವ ರೀತಿ ತಡೆಗಟ್ಟಬೇಕು ಎಂಬ ಮಾಹಿತಿಯನ್ನು ಸಾರ್ವಜನಿಕರಲ್ಲಿ ಹೇಳಿದರು, ಅಲ್ಲದೆ ತಾಲೂಕಿನ ಆದಂತ ನಡೆಯುವ ಅಪರಾಧಗಳ ಬಗ್ಗೆ ಕೂಲಂಕುಶವಾಗಿ ಪರೀಕ್ಷಿಸಿ ಅಪರಾಧ ನಡೆಯದ ರೀತಿಯಲ್ಲಿ ಸಂಚಾರ ಮಾಡುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಹೇಳಿದರು.

ಪಿಎಸ್ಐ ಮಲ್ಲಪ್ಪ ಮಡ್ಡಿ ಮಾತನಾಡಿ:

ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಅಜಾಗರೂಕತೆಯಿಂದ ಇರುವುದರಿಂದ ಅಪಘಾತಗಳು ಸಂಭವಿಸುತ್ತಿರುತ್ತವೆ ಕಾರಣ ರಸ್ತೆಯ ಮೇಲೆ ಸಂಚರಿಸುವಾಗ ನಿಯಮಗಳನ್ನು ಪಾಲಿಸಿ ಸಾರ್ವಜನಿಕರು ಅಪಘಾತವಾಗದೆ ಸುರಕ್ಷಿತ ರೀತಿಯಲ್ಲಿ ಸಂಚಾರವನ್ನು ಮಾಡಬೇಕು. ಅಲ್ಲದೆ ಅಪರಾಧ ಆಗುವದರಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ಅಪರಾಧದ ಬಗ್ಗೆ ಇರುವುದಿಲ್ಲ ಅಪರಾಧಗಳು ನಡೆಯುವಂತ ಸಂದರ್ಭದಲ್ಲಿ ನಮಗೆ ಮಾಹಿತಿಯನ್ನು ನೀಡಿ ಆಗಬಹುದಾದ ಅಪರಾಧವನ್ನು ತಪ್ಪಿಸುವಲ್ಲಿ ನಮಗೆ ಮಾಹಿತಿ ನೀಡಿದರೆ ನಾವು ನೀವು ಸೇರಿಕೊಂಡು ಅಪರಾಧ ತಡೆಯಲು ಕ್ರಮ ಕೈಗೊಳ್ಳಬಹುದು. ಆದ್ದರಿಂದ ಸಾರ್ವಜನಿಕರು ರಸ್ತೆ ನಿಯಮದ ಬಗ್ಗೆ ತಿಳುವಳಿಕೆ ಪಡೆದುಕೊಂಡು ಅಲ್ಲದೆ ನಿಮ್ಮ ನಿಮ್ಮ ಲೈಸೆನ್ಸ್ ಅನ್ನು ವಾಹನದ ಪರವಾನಿಗೆಗಳನ್ನು ಕಾನೂನಿನ ನಿಯಮದಂತೆ ತೆಗೆದುಕೊಂಡು ವಾಹನ ಸಂಚಾರ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಆಗಲಾರವು ಅಲ್ಲದೆ ರಸ್ತೆ ನಿಯಮಗಳನ್ನು ಮೀರಿ ಅಪರಾಧವನ್ನೂ ಸೃಷ್ಟಿಸುವ ಬದಲು ನೀವು ಕೂಡ ನಮ್ಮೊಂದಿಗೆ ಕೈಜೋಡಿಸುವ ಮುಖಾಂತರ ಅಪಘಾತ ರಹಿತ ಸುಗಮ ಸಂಚಾರಕ್ಕೆ ಅನುವು ಮಾಡೋನ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಡಿ ಗಾಂಜಿ ಮಾತನಾಡಿ:

ಅಪರಾಧಗಳು ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ನಡೆಯುತ್ತಿದ್ದು ಆದರೆ ಮನುಷ್ಯನಿಗೆ ಎಲ್ಲದಕ್ಕಿಂತ ಪ್ರಾಣ ಮುಖ್ಯ ರಸ್ತೆ ಮೇಲೆ ಸಂಚರಿಸುವಾಗ ಎಚ್ಚರದಿಂದ ಸಂಚರಿಸಿದರೆ ವಾಹನ ಜೊತೆಗೆ ನಮ್ಮ ಜೀವ ಕೂಡ ರಕ್ಷಣೆಯಾಗುತ್ತದೆ ಮನೆಯಲ್ಲಿ ನಮ್ಮನ್ನು ನಂಬಿಕೊಂಡ ಕುಟುಂಬವೇ ಇರುತ್ತದೆ ಕಾರಣ ರಸ್ತೆ ನಿಯಮವನ್ನು ಪಾಲಿಸಿ ಅಪರಾಧವನ್ನು ತಡೆಗಟ್ಟಬೇಕು ಎಂದು ಹೇಳಿದರು.

ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರೆ ಮಾತನಾಡಿ:

ಸಂಚಾರ ನಿಯಮವನ್ನು ಪಾಲಿಸದೆ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ ಕಾರಣ ಸಾರ್ವಜನಿಕರು ವಾಹನ ಸವಾರರು ತಮ್ಮ ಜವಾಬ್ದಾರಿಯುತವಾಗಿ ನಿಯಮವನ್ನು ಪಾಲಿಸಿ ಸಂಚಾರ ಮಾಡಬೇಕು ಮನುಷ್ಯನಿಗೆ ಪ್ರಾಣ ಎನ್ನುವುದು ಅಮೂಲ್ಯವಾದದ್ದು ಅದನ್ನು ಅರಿತು ವಾಹನ ಸಂಚಾರವನ್ನು ಮಾಡಬೇಕು ಅದರಿಂದ ಅಪರಾಧ ಮುಕ್ತ ಅಪಘಾತ ಮುಕ್ತ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರು ವಾಹನ ಚಾಲಕರು ಹಾಗೂ ಸಾರ್ವಜನಿಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ಹಿರಿಯ ಲೇಖಕ, ಸಂಶೋಧಕರಾದ ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಕೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಕಂಪ್ಯೂಟರ್ ಶಿಕ್ಷಣ ಸಂಸ್ಥೆ(KEONICS) ಯಲ್ಲಿ ಹಿರಿಯ ಸಾಹಿತಿ,ಲೇಖಕ,ಡಾ.ಎಂ ಚಿದಾನಂದಮೂರ್ತಿ ಯವರಿಗೆ ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಸಿದರು.

ಆರೋಗ್ಯ ಕವಚ ೧೦೮ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರು,ಹಾಸ್ಯ ಕಲಾವಿದ ಶ್ರೀಶೈಲ ಹೂಗಾರ ಮಾತನಾಡಿ:

ಡಾ.ಚಿದಾನಂದಮೂರ್ತಿ ಯವರು,ಕನ್ನಡವನ್ನು ಬೆಳೆಸುವದಕ್ಕಾಗಿ ಬೆಂಗಳೂರು ದಿಂದ ಹಂಪಿಯವರೆಗೆ ಪಾದಯಾತ್ರೆ ಮಾಡಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ ಕಿರ್ತಿ ಅವರಿಗೆ ಸಲ್ಲುತ್ತದೆ,ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ,ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ,ಅವರ ಆತ್ಮಕ್ಕೆ ಶಾಂತಿ ಸಿಗಲಿ,ಕನ್ನಡ ನಾಡಿನ ಹಿರಿಯ ಚೇತನನ್ನು ಕಳೆದುಕೊಂಡ ಇಂದು ಕನ್ನಡ ತಾಯಿ ಬಡವಳಾಗಿದ್ದಾಳೆ,ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ತಪ್ಪಾಗಲಾರದು, ಮತ್ತೋಮ್ಮೆ ಕನ್ನಡನಾಡಿನಲ್ಲಿ ಹುಟ್ಟಿ ಬನ್ನಿ ಎಂದು ಭಾವಪೂರ್ಣ ಶ್ರಂಧಾಂಜಲಿ ಸಲ್ಲಿಸಿದರು.

ಹಿರಿಯ ಸಾಹಿತಿಗಳು,ದಲಿತ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಶೀವಪುತ್ರ ಅಜಮನಿ ಮಾತನಾಡಿ:

ಡಾ.ಚಿಮು ಅವರು ಎಡಪಂಥೀಯ ಹೋರಾಟಗಾರರಾಗಿದ್ದರು,ಮುಡನಂಬಿಕೆಗಳನ್ನು,ದೇವರು,ದ್ಯೆವ ಇವಗಳನ್ನು ನಂಬುತ್ತಿರಲಿಲ್ಲಾ,ಗೋಕಾಕ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿ ಅನ್ಯಾಯದ ವಿರುದ್ಧ ದ್ವನಿಯಾಗುತಿದ್ದರು,ಕನ್ನಡ ವನ್ನು ಉಳಿಸಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಹೇಳಿದರು.

ಕಂಪ್ಯೂಟರ್ ಕೇಂದ್ರದ ಮುಖ್ಯಸ್ಥ ನಾಗರಾಜ ಬಿರಾದಾರ,ಶ್ರೀಮತಿ ಶಿವನಿಲಾ ನಾಗರಾಜ ಬಿರಾದಾರ, ಗಾಯಕಿ ದೀಪಾರತ್ನಶ್ರೀ,ಗಾಯಕರಾದ ಚಂದ್ರಶೇಖರ ಪ್ಯಾಟೆಗೌಡರ್,ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

Design a site like this with WordPress.com
Get started