
ಸಚಿವ ಬಿ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಆರೊಗ್ಯ ಕವಚ 108 ನೌಕರರ ಸಭೆ

ಬೆಂಗಳೂರಿನಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಕವಚ ೧೦೮ ನೌಕರರ ಸಭೆ ಜರುಗಿತು.
ಸಚಿವರು ಮಾತನಾಡಿ:
ಆರೋಗ್ಯ ಕವಚ ನೌಕರರ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ ಕೋಡುವದು ಹಾಗೂ ನೌಕರರನ್ನು ಕಾರ್ಮಿಕ ಕಾಯ್ದೆಯಡಿಯಲ್ಲಿ ವಿಲಿನಗೋಳಿಸುವದು,ಮೂಲಭೂತ ಸೌಲಭ್ಯ ಒದಗಿಸುವುದು,ವಜಾಗೊಂಡ ನೌಕರರನ್ನು ವಾಪಾಸ ಕೆಲಸಕ್ಕೆ ತೆಗೆದುಕೊಳ್ಳುವದರ ಬಗ್ಗೆ ಸುಧೀರ್ಘ ಚರ್ಚೆ ಮಾಡಿದರು ಒಟ್ಟಾರೆ ನೌಕರರ ಪರವಾಗಿ ಸರಕಾರ ಇದೆ ನಮಗೆಲ್ಲಾರಿತಿಯ ಒಳ್ಳೆಯದು ಮಾಡುವ ಜವಾಬ್ದಾರಿ ಸರಕಾರದ್ದು ಎಂದು ಹೇಳಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು,ಆಯುಕ್ತರು, ಆರ್ಥಿಕ ಇಲಾಖೆಯ ಅಧಿಕಾರಿಗಳು,DDEMRI officer’s,Gvk EMRI ಕಂಪನಿಯ ಮೇಲಾಧಿಕಾರಿಗಳು,ಆರೋಗ್ಯ ಕವಚ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀಶೈಲ ಹಳ್ಳೂರ,ಪ್ರಧಾನ ಕಾರ್ಯದರ್ಶಿ ಸುನೀಲ್ ಮಂಡ್ಯ,ಎಲ್ಲಾ ರಾಜ್ಯ ಪದಾಧಿಕಾರಿಗಳು ಉಪಸ್ಥಿತಿ ಇದ್ದು ನೌಕರರ ಸಮಸ್ಯೆಯನ್ನು ಎಳೆ-ಎಳೆಯಾಗಿ ಸಚಿವರ ಗಮನಕ್ಕೆ ತಂದರು.ಸಚಿವರು ಸಂಪೂರ್ಣ ಬರವಸೆ ನಿಡಿದ್ದು ಆದಷ್ಟು ಬೇಗ ನ್ಯಾಯ ಸಿಗುವ ಭರವಸೆ ಇದೆ.ನಮ್ಮ ಪರವಾಗಿ ಮಾತನಾಡಿದ ಮಾನ್ಯ ಸಚಿವರಿಗೂ,ಆರೋಗ್ಯ ಇಲಾಖೆಯ ಅಧಿಕಾರಿಗಳಿಗೂ ಎಲ್ಲಾ ನೌಕರರ ಪರವಾಗಿ ಹೃದಯ ತುಂಬಿದ ಧನ್ಯವಾದಗಳು, ಎಲ್ಲಾ ರಾಜ್ಯ ಪದಾಧಿಕಾರಿಗಳ,ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರ,ಜಿಲ್ಲಾ ಪದಾಧಿಕಾರಿಗಳ ಬೆಂಬಲ ಸದಾ ಕಾಲ ಇದೆ ರೀತಿ ಇರಲಿ ಎಂದು ಶ್ರೀಶೈಲ ಹೂಗಾರ ರಾಜ್ಯ ಉಪಾಧ್ಯಕ್ಷರು ಆರೋಗ್ಯ ಕವಚ (೧೦೮) ನೌಕರರ ಸಂಘ ಬೆಂಗಳೂರು, ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸರೂರ ಹೇಳಿದ್ದಾರೆ.
ವರದಿ:ಸಾಗರ ಉಕ್ಕಲಿ
ಮೌಡ್ಯಕ್ಕೆ ಸೆಡ್ಡು ಹೊಡೆದು ಮಗಳ ಹುಟ್ಟುಹಬ್ಬ ಆಚರಿಸಿದ ದಂಪತಿ

ಚಿಕ್ಕೋಡಿ ವರದಿ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಮೌಡ್ಯಕ್ಕೆ ಸೆಡ್ಡು ಹೊಡೆದು ಮಗಳ ಹುಟ್ಟುಹಬ್ಬ ಆಚರಣೆ ಮಾಡಿದ ದಂಪತಿಗಳು.
ಇಂಗಳಿ ಗ್ರಾಮದ ಮಹೇಶ ಅಶೋಕ ಶಿಂಗೆ ಅವರ ಸುಪುತ್ರಿಯಾದ ಜೀಜಾ ಎಂಬ ಹೆಸರಿನ ಮಗುವಿನ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿ ಎಲ್ಲರನ್ನು ಕಣ್ಣು ನಿಬ್ಬೆರಿಸುವಂತ ಮಾಡಿದ್ದಾರೆ.
ಸ್ಮಶಾನದಲ್ಲಿ ಹುಟ್ಟುಹಬ್ಬದ ಸಂಭ್ರಮವನ್ನು ಸಂತಸ ವ್ಯಕ್ತಪಡಿಸಿ ಅತಿಥಿಯಾಗಿ ಆಗಮಿಸಿ ಮಾತನಾಡಿದ ರವೀಂದ್ರ ನಾಯ್ಕರ್ ಬುದ್ದ,ಬಸವ,ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಮೌಡ್ಯತೆಯಿಂದ ಹೊರಬರಲು ಸಾಧ್ಯವಾಗುತ್ತದೆ.
ಸ್ಮಶಾನದಲ್ಲಿ ಮಕ್ಕಳ ಹುಟ್ಟುಹಬ್ಬದ ಆಚರಿಸುತ್ತಿರುವದು ಮಾನವ ಸಮುದಾಯದಲ್ಲಿ ಜಾಗೃತಿಗೊಂಡು ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಳ್ಳುತ್ತಿರುವದು ವೈಚಾರಿಕ ಕ್ರಾಂತಿಗೆ ನಾಂದಿಯಾಗಿದೆ.ಜೀಜಾಬಾಯಿ ಹುಟ್ಟುಹಬ್ಬ ೧೨ ನೇ ಶತಮಾನದ ಬಸವಣ್ಣನವರ ಮೌಡ್ಯದ ವಿರುದ್ದ ಸಾರಿದ್ದ ಕ್ರಾಂತಿ ನೆನಪಿಸಿಕೊಳ್ಳುವಂತೆ ಆಗಿದೆ ಎಂದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಹೂವಣ್ಣ ಚೌಗಲೆ,ಹಿರಿಯ ಪತ್ರಕರ್ತ ಮುನ್ನಾ ಬಾಗಬಾನ,ಜೀವನ ಮಾಂಜರೇಕರ,ಗಾಯತ್ರಿ ಮಾಳಗಿ,ಆನಂದ ಗೋಕಾಕ ,ಪುಂಡಲೀಕ ದನವಾಡೆ,ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ವರದಿ:ಸಚೀನ ಕಾಂಬಳೆ
ಏಕಕಾಲಕ್ಕೆ ಎಂಟು ಪುಸ್ತಕ ಬಿಡುಗಡೆ ವಿಶ್ವದಾಖಲೆ ನಿರ್ಮಿಸಿದ ಸಾಹಿತಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಾವೂರ ಗ್ರಾಮದ ಶಿಕ್ಷಕರು ಹಾಗೂ ಸಾಹಿತಿಗಳಾದ ಶಿವಕುಮಾರ್ ಹಡಪದ ರವರು 8 ಪುಸ್ತಕಗಳನ್ನು ಏಕಕಾಲಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೊಳಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಡಿಸೆಂಬರ್ 2 ನೇ ತಾರೀಕು 2018ರಂದು ಶ್ರೀ ಶಿವಕುಮಾರ್ ಹಡಪದ ರವರು 8 ಪುಸ್ತಕಗಳನ್ನು ಏಕಕಾಲಕ್ಕೆ ಬಿಡುಗಡೆಗೊಳಿಸಿ ಇನ್ಕ್ರೆಡಿಬಲ್ ಬುಕ್ ಆಫ್ ರೆಕಾರ್ಡ್ಸ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.ಈ ದಾಖಲೆಯನ್ನು ಸಂಪಾದಕರಾದ ದೀಪಕ್ ಶರ್ಮಾರವರು ಆದೇಶಿಸಿದ್ದಾರೆ. ಶಿವಕುಮಾರ್ ಅವರು ಎಂಟು ಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಿದ್ದು ಅವುಗಳು ಈಕೆಳಗಿನಂತಿವೆ.
-
ಶಬ್ದಮಣಿಹಾರ,
-
ವಚನವಾರಿಧಿ,
-
ಭಾವತರಂಗ,
-
ನೆಲಮುಗಿಲು,
-
ವಿದ್ಯಾರ್ಥಿ ಮಿತ್ರ,
-
ಗೀತಲಹರಿ,
-
ದಾರಿದೀಪ,
-
ಭಾವಗಾಯನ

ಎಂದು ಪ್ರಪ್ರಥಮ ಬಾರಿಗೆ ಎಂಟು ಕನ್ನಡ ಪುಸ್ತಕಗಳನ್ನು ಬಿಡುಗಡೆಗೊಳಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ವರದಿ:ಸಾಗರ ಉಕ್ಕಲಿ
ನೂತನ ಚುಟುಕು ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಬೆಳಿಗ್ಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವಿಜಯಪುರ ಘಟಕದ ವತಿಯಿಂದ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಜರುಗಿತು.

ವೇದಿಕೆ ಮೇಲೆ ಅಧ್ಯಕ್ಷರಾದ ಪ್ರಭುದೇವ, ಕಲಬುರ್ಗಿ.ಜಿಲ್ಲಾ ಘಟಕದ ಅಧ್ಯಕ್ಷ ರಾಜು ಬಂಡೆಪ್ಪ ತೇಲಿ ಹಾಗೂ ಮುಖ್ಯ ಅತಿಥಿಗಳಾಗಿ ಎಂ ಬಿ ನಾವದಗಿ . ಮಹಾಬಲೇಶ್ವರ ಗಡೇದ. ಕೆ.ಜಿ ಭದ್ರಣ್ಣವರ ಉಪಸ್ಥಿತರಿದ್ದರು . ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷರಾದ ಬಂಡೆಪ್ಪ ತೇಲಿ ಹಾಗೂ ಎಲ್ಲ ಮುಖ್ಯ ಅತಿಥಿಗಳು ಕನ್ನಡನಾಡು ನೆಲ -ಜಲ -ನುಡಿಯ ಹಿತಕ್ಕಾಗಿ ಶ್ರಮಿಸೋಣ ಎಂದರು.ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಪ್ರಕಾಶ ಮಠ ರವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಬಂಡೆಪ್ಪ ತೇಲಿ ಧ್ವಜ ಹಸ್ತಾಂತರಿಸುವ ಮೂಲಕ ನೂತನ ಘಟಕ ಮತ್ತು ಪದಗ್ರಹಣಕ್ಕೆ ಅವಕಾಶ ಮಾಡಿಕೊಟ್ಟರು.ಹದಿನೇಳು ನೂತನ ಪದಾಧಿಕಾರಿಗಳ ಪದಗ್ರಹಣ ಮಾಡಿ ಸನ್ಮಾನಿಸಿದರು. ಪ್ರಾರ್ಥನಾ ವಿದ್ಯಾ ಮಂದಿರದ ವಿದ್ಯಾರ್ಥಿನಿ ಯರು ಪ್ರಾರ್ಥನೆ, ಸ್ವಾಗತ ಗೀತೆ ಹಾಡಿದರು.ಪ್ರಕಾಶ ಕರೇಕಲ್ಲ ನಿರೂಪಿಸಿದರು.ಸುನೀಲ ಮನಗೂಳಿ ಸ್ವಾಗತಿಸಿದರು.ಗೀತಾ ರಾಂಪೂರ ವಂದಿಸಿದರು.
ರಾಯಲ್ ಟಿವಿ ನ್ಯೂಸ್ ವಿಜಯಪುರ
ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿ, ಎಸ್ಟಿ ಮುಖಂಡರ ಸಭೆ

ವಿಜಯಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ಸುದ್ದಿ
ಮುದ್ದೇಬಿಹಾಳ:ಮೀಸಲಾತಿಯಲ್ಲಿ ಹೊಸದಾಗಿ ಸೇರ್ಪಡೆ ಆಗಿರುವ ಜಾತಿಗಳು ಮುಂದುವರೆಯಬೇಕೆ, ಬೇಡವೇ ಎನ್ನುವುದೇ ಒಂದು ದೊಡ್ಡ ಸಮಸ್ಯೆ ಆಗಿದೆ ಎಂದು ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ್ ಹೇಳಿದ್ದಾರೆ.
ಇಲ್ಲಿನ ಹುಡ್ಕೋದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ವೈ ಎಚ್ ವಿಜಯಕರ ಅವರು, ಪ್ರಧಾನಿ ಮೋದಿ ಅವರು ಯಾವ ಗೊತ್ತು ಗುರಿ ಇಲ್ಲದೆ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ಕೊಟ್ಟರು. ಆದರೆ ಒಟ್ಟಾರೆ ಮೀಸಲಾತಿ ಶೇ.50ಕ್ಕಿಂತ ಹೆಚ್ಚಾಗಬಾರದು ಎಂದು ಸುಪ್ರೀಂಕೋರ್ಟ ಆದೇಶ ನೀಡಿದೆ. ಎಸ್ಸಿ, ಎಸ್ಟಿಯವರು ಮೀಸಲಾತಿ ಹೆಚ್ಚಿಸಿ ಎಂದರೆ ಸುಪ್ರೀಂ ಆದೇಶದ ನೆಪ ಒಡ್ಡುವ ಸರ್ಕಾರಗಳಿಗೆ ಶೇ.10 ಮೀಸಲಾತಿ ಕೊಡುವಾಗ ಆದೇಶ ನೆನಪಾಗಲಿಲ್ಲವೆ, ಇದು ಆದೇಶ ಉಲ್ಲಂಘನೆ ಅಲ್ಲವೇ ಎಂದು ಹರಿಹಾಯ್ದರು
ಡಿಎಸ್‍ಎಸ್ ಮುಖಂಡ ಡಿ.ಬಿ.ಮುದೂರ ಮಾತನಾಡಿ:
ಎಸ್ಸಿ, ಎಸ್ಟಿ ಜನರಿಗೆ ಹೆಚ್ಚಿನ ಮೀಸಲಾತಿ ಕೂಗು ಪ್ರಬಲವಾಗಿದೆ. ಬೇರೆ ಜಾತಿಯನ್ನು ಎಸ್ಸಿ, ಎಸ್ಟಿ ಪಟ್ಟಿಯಲ್ಲಿ ಸೇರಿಸಿದ್ದು ಇವರನ್ನು ತೆಗೆಯಲು ಉಗ್ರ ಹೋರಾಟ ನಡೆಸುವ ಸಂದೇಶವನ್ನು ಸರ್ಕಾರಗಳಿಗೆ ಕೊಡಬೇಕು ಎಂದರು.
ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಹರೀಶ ನಾಟಿಕಾರ ಮಾತನಾಡಿ, ಸರ್ಕಾರ, ರಾಜಕೀ ಪಕ್ಷಗಳು ದಲಿತರನ್ನು ಓಟ್ ಬ್ಯಾಂಕ್ ಮಾಡಿಕೊಂಡಿವೆ. ಮೂಲ ಅಸ್ಪೃಶ್ಯರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಎಸ್ಸಿ ಪಟ್ಟಿಯಲ್ಲಿ ಸೇರಿರುವ ಮೂಲ ಅಸ್ಪೃಶ್ಯರಲ್ಲದೆ ಜಾತಿಯವರು ರಾಜಕೀಯ ಬಲ, ಹಣ ಬಲ ಬಳಸಿಕೊಂಡು ಸೌಲಭ್ಯ ಪಡೆಯುತ್ತಿದ್ದಾರೆ. ಮೂಲ ಅಸ್ಪೃಶ್ಯರಲ್ಲದವರನ್ನು ಮೀಸಲಾತಿಯಿಂದ ಕೈಬಿಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲು ಉಗ್ರ ಹೋರಾಟ ನಡೆಯಬೇಕು ಎಂದರು.
ಎಸ್ಸಿ ಮೀಸಲಾತಿ ಪಟ್ಟಿಯಲ್ಲಿ 65 ಜಾತಿ ಇದ್ದದ್ದು ನಂತರ 101ಕ್ಕೆ ಏರಿಕೆಯಾಗಿ ಇದೀಗ 140ಕ್ಕೆ ಬಂದಿದೆ. ಎಸ್ಟಿ ಪಟ್ಟಿಯಲ್ಲಿ 4 ಜಾತಿ ಇದ್ದದ್ದು ಇದೀಗ 40ಕ್ಕೆ ಬಂದಿದೆ. ಆದರೆ ಮೀಸಲಾತಿ ಪ್ರಮಾಣದಲ್ಲಿ ಹೆಚ್ಚಳ ಆಗಿಲ್ಲ. ಕಳೆದ 25 ವರ್ಷದಿಂದಲೂ ಎಸ್ಸಿಗೆ ಶೇ.15, ಎಸ್ಟಿಗೆ ಶೇ.3 ಮೀಸಲಾತಿ ಉಳಿದುಕೊಂಡಿದೆ. ಇದರಿಂದ ನಿಜವಾದ ಅರ್ಹರಿಗೆ ಮೀಸಲಾತಿ ಪ್ರಯೋಜನ ದೊರಕುತ್ತಿಲ್ಲ. ಎಸ್ಸಿ ಮೀಸಲಾತಿ ಶೇ.21ಕ್ಕೆ, ಎಸ್ಟಿ ಮೀಸಲಾತಿ ಶೇ.7.5 ಹೆಚ್ಚಿಸುವ ಚರ್ಚೆ ನಡೆದಿದ್ದರೂ ಇದನ್ನು ಇನ್ನೂ ಹೆಚ್ಚಿಸಬೇಕು ಎಂದು ಅಂದಿನ ಸಭೆಯಲ್ಲಿ ಅಹವಾಲು ಸಲ್ಲಿಸಬೇಕು ಎಂದು ಕೋರಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ(ಗ್ರೇಡ್-2) ಎನ್.ಆರ್.ಉಂಡಿಗೇರಿ ಮಾತನಾಡಿ ಜ.10ರಂದು ಬೆಳಿಗ್ಗೆ 10-30ಕ್ಕೆ ಆಯೋಗದ ಅಧ್ಯಕ್ಷ ನ್ಯಾ.ಎಚ್.ಎನ್.ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಎಸ್ಪಿ ಕಚೇರಿ ಹತ್ತಿರ ಇರುವ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳ ಎಸ್ಸಿ, ಎಸ್ಟಿ ಜನರ ಸಮಾಲೋಚನಾ ಸಭೆ ಏರ್ಪಡಿಸಿದ್ದು ಎಲ್ಲರೂ ಆಯೋಗದ ಮುಂದೆ ಅಹವಾಲು ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಚನ್ನಪ್ಪ ವಿಜಯಕರ್, ನಾನಪ್ಪ ನಾಯಕ, ಅಶೋಕ ಇಲಕಲ್ಲ, ಪರಶುರಾಮ ಕೊಣ್ಣೂರ, ಸಿದ್ದು ಚಲವಾದಿ, ಪ್ರಕಾಶ ಸರೂರ, ದೇವರಾಜ ಹಂಗರಗಿ, ರಾಮಣ್ಣ ರಾಜನಾಳ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ತಿಪ್ಪಣ್ಣ ಗೋನಾಳ, ರಾಜು ವಾಲಿಕಾರ, ಸಿದ್ದು ತಳ್ಳಳ್ಳಿ, ದೇವೇಂದ್ರ ಹುನಕುಂಟಿ ಮತ್ತಿತರರು ಪಾಲ್ಗೊಂಡಿದ್ದರು.
ವರದಿ:ಸಾಗರ ಉಕ್ಕಲಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಜಿ ಸಚಿವ ಸಿ.ಎಸ್.ನಾಡಗೌಡ ಉಪಸ್ಥಿತಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಇಂದು ನಡೆದ ಪ್ರತಿಭಟನೆ ದೇಶದಲ್ಲಿ ಶಾಂತಿ ಕದಡಲು ಮೋದಿ ಅಮಿತ್ ಶಾ ಜೋಡಿ ಹುನ್ನಾರ ನಡೆಸಿದೆ. ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಮುಗ್ಧ ಜನತೆಯ ಗಮನವನ್ನು ಬೇರೆಡೆ ಸೆಳೆದು ಆರ್ಥಿಕವಾಗಿ ದೇಶವನ್ನು ಸಮಸ್ಯೆಗೆ ಸಿಲುಕಿಸಿರುವ ವೈಫಲ್ಯ ಮುಚ್ಚಿಕೊಳ್ಳಲು ಹೂಡಿದ ತಂತ್ರಗಾರಿಕೆ ಆಗಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಕಟುವಾಗಿ ಟೀಕಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಮುತ್ತಾಹಿದಾ ಕೌನ್ಸಿಲ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶನಿವಾರ ನಡೆದ ಕೌನ್ಸಿಲ್ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು, ಡಿಎಸ್‍ಎಸ್ ಮುಖಂಡರ ಪ್ರತಿಭಟನಾ ರ್ಯಾಲಿ ನಂತರ ಮಿನಿ ವಿಧಾನಸೌಧ ಎದುರು ನಡೆದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ಕಾಯ್ದೆ ಷಡ್ಯಂತ್ರವೇ ಹೊರತು ಬೇರೇನೂ ಅಲ್ಲ. ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಬಹುಮತ ಇದೆ ಎಂದು ಮನಸ್ಸಿಗೆ ತೋಚಿದ ತೀರ್ಮಾನ ಕೈಕೊಳ್ಳುತ್ತಿರುವುದು ಸರಿ ಅಲ್ಲ. ಮನಮೋಹನಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಡಾಲರ್ ಮೌಲ್ಯ 40ರೂ ಇತ್ತು. ಅದೀಗ 70ರೂ ದಾಟಿದೆ. ಇದೆಲ್ಲ ವೋಟ್‍ಬ್ಯಾಂಕ್ ರಾಜಕಾರಣ. ಬಿಜೆಪಿಯವರು ದೇಶವನ್ನು ಧರ್ಮ ಆಧಾರದಲ್ಲಿ ವಿಭಜಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಎಂಎಂಸಿ ಅಧ್ಯಕ್ಷ ಡಿ.ಎಂ.ಚೌದ್ರಿ, ಎಪಿಎಂಸಿ ನಿರ್ದೇಶಕ ವೈ.ಎಚ್.ವಿಜಯಕರ್, ಡಿಎಸ್‍ಎಸ್ ಮುಖಂಡ ಹರೀಶ ನಾಟಿಕಾರ, ಡಾ.ಎ.ಎಂ.ಮುಲ್ಲಾ, ಅಂಜುಮನ್ ಸಂಸ್ಥೆ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ಕಾಯ್ದೆ ವಿರೋಧಿಸಿ ಮಾತನಾಡಿದರು. ಇದೇ ವೇಳೆ ಕಾಯ್ದೆ ವಿರೋಧಿಸಿ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಎಂಎಂಸಿ ಕಾರ್ಯದರ್ಶಿ ಎನ್.ಬಿ.ಮುದ್ನಾಳ ವಕೀಲರು ಓದಿ ತಹಸೀಲ್ದಾರ್‍ಗೆ ಸಲ್ಲಿಸಿದರು.
ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತಪ್ಪ ನಾವದಗಿ, ಡಿಎಸ್‍ಎಸ್ ಮುಖಂಡ ಸಿ.ಜಿ.ವಿಜಯಕರ್, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಲ್ಲಾಭಕ್ಷ ನಾಯ್ಕೋಡಿ, ಉಪಾಧ್ಯಕ್ಷ ಅಬ್ದುಲ್‍ಜಬ್ಬಾರ್ ಗೋಲಂದಾಜ, ಮುದ್ದೇಬಿಹಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್‍ಗಫೂರ ಮಕಾನದಾರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ, ಪುರಸಭೆ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಪ್ರಮುಖರಾದ ಅಯ್ಯೂಬ ಮನಿಯಾರ, ಹಾಜಿಸಾಬ ತೆಗ್ಗಿ, ನೂರ್‍ಎಹುಸೇನ್ ನದಾಫ, ಅರ್ಷದ್‍ಹುಸೇನ ಮೋಮಿನ್, ಲಾಳೇಮಶ್ಯಾಕ ನಾಯ್ಕೋಡಿ, ದಾವಲಸಾಬ ಸಂಕನಾಳ, ಮಹಿಬೂಬ ಹಳ್ಳಿ, ಡಿ.ಡಿ.ಬಾಗವಾನ, ಪುರಸಭೆ ಮಾಜಿ ಸದಸ್ಯರಾದ ಪಿಂಟೂ ಸಾಲಿಮನಿ, ಕಾಮರಾಜ ಬಿರಾದಾರ, ಗೋಪಿ ಮಡಿವಾಳರ, ಕಾಂಗ್ರೆಸ್, ಬಿಎಸ್ಪಿ, ಡಿಎಸ್‍ಎಸ್ ಮುಖಂಡರು, ಕೌನ್ಸಿಲ್ ಕಾರ್ಯಕರ್ತರು, ನಾಡಗೌಡರ ಅಭಿಮಾನಿಗಳು ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.
ಮುದ್ದೇಬಿಹಾಳ ಪಟ್ಟಣದ ಕಿಲ್ಲಾದಲ್ಲಿರುವ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ರ್ಯಾಲಿ ವಿವಿಧ ರಸ್ತೆ, ವೃತ್ತಗಳಲ್ಲಿ ಸಂಚರಿಸಿ ಮಿನಿ ವಿಧಾನಸೌಧದಲ್ಲಿ ಮುಕ್ತಯಗೊಂಡಿತು. ರ್ಯಾಲಿಯಲ್ಲಿ ಯುವಕರು ಡಾ.ಅಂಬೇಡ್ಕರ್, ಮೌಲಾನಾ ಅಬುಲ್‍ಕಲಾಮ್ ಆಜಾದ್, ಹುತಾತ್ಮ ಅಶ್ರಫ್‍ಉಲ್ಲಾ ಖಾನ್ ವೇಷಧಾರಿಗಳಾಗಿ ಗಮನಸೆಳೆದರು. ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‍ಶಾ ಮತ್ತು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸಿಪಿಐ ಆನಂದ ವಾಗಮೋರೆ, ಪಿಎಸೈ ಮಲ್ಲಪ್ಪ ಮಡ್ಡಿ ಉಸ್ತುವಾರಿಯಲ್ಲಿ ವಿವಿಧೆಡೆಯಿಂದ ಆಗಮಿಸಿದ್ದ ಪೊಲೀಸರಿಂದ ಬಿಗಿ ಬಂದುಬಸ್ತ ಮಾಡಿದ್ದರು.
ವರದಿ:ಸಾಗರ ಉಕ್ಕಲಿ
ಅನುದಾನಿತ ಶಾಲಾ ಕಾಲೇಜು ನೌಕರರಿಂದ ರಾಜ್ಯಮಟ್ಟದ ಹೋರಾಟ ಕುರಿತು ಪತ್ರಿಕಾಗೋಷ್ಠಿ

ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಜನವರಿ 10ರಿಂದ ಬೆಂಗಳೂರಿನಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ಮಾಡಲು ಕರೆ ನೀಡಿದ್ದಾರೆ.
ಜನವರಿ 10ರಿಂದ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದಿಂದ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವುದು.
ಜನವರಿ 10ರಿಂದ ಅನುದಾನಿತ ಸಂಸ್ಥೆಗಳ ನೌಕರರಿಂದ ಅಹೋರಾತ್ರಿ ಪ್ರಾಣ ಬಿಟ್ಟೆವು ಪಿಂಚಣಿ ಬಿಡೆವು ಹೋರಾಟ.
2006 ಇಸ್ವಿಯ ನಂತರ ನೇಮಕವಾದ ಅನುದಾನಿತ ಶಾಲೆಯ ಶಿಕ್ಷಕರು ಈ ಪ್ರತಿಭಟನೆ ಧರಣಿಯಲ್ಲಿ ಪಾಲ್ಗೊಳ್ಳಲು ಹೇಳಿದ್ದಾರೆ.
ರಾಜ್ಯದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರ ನಿವೃತ್ತಿ ಜೀವನದ ಆಸರೆಯಾದ ಪಿಂಚಣಿ ಸೌಲಭ್ಯದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಜನವರಿ ಹತ್ತರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಅಂತಿಮವಾಗಿ ಅಹೋರಾತ್ರಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಕಾರಣ ವಿಜಯಪುರ ಜಿಲ್ಲೆಯ ಎಲ್ಲ ನೌಕರರು ಭಾಗಿಯಾಗಲು ಅನುದಾನಿತ ಶಾಲಾ ಕಾಲೇಜು ಪಿಂಚಣಿ ವಂಚಿತ ನೌಕರರ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಅಶೋಕ ಕಟ್ಟಿ ಮಹಾಂತೇಶ ಮೆರೆಖೋರ, ನಾಗಯ್ಯ ಸ್ಥಾವರಮಠ ಪ್ರಭುಗೌಡ ಕುಂಟರೆಡ್ಡಿ ಉಪಸ್ಥಿತರಿದ್ದರು
ವರದಿ:ಸಾಗರ ಉಕ್ಕಲಿ
ವಾಲ್ಮೀಕಿ ಮಹಿಳಾ ಸಂಘದಿಂದ ಹೊಸ ವರ್ಷಾಚರಣೆ





