ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:

ಮುದ್ದೇಬಿಹಾಳ: ಉಡುಪಿಯಲ್ಲಿ ಭಾನುವಾರ ನಿಧನರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಪಾದಂಗಳಿಗೆ ಪಟ್ಟಣದ ರಾಘವೇಂದ್ರ ದೇಗುಲದಲ್ಲಿ ಸೇರಿದ್ದ ವಿಪ್ರ ಸಮಾಜ ಬಾಂಧವರು ಶ್ರದ್ಧಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಸಂಗಣ್ಣ ಕುಲಕರ್ಣಿ, ಪೇಜಾವರ ಶ್ರೀಗಳು ಮುದ್ದೇಬಿಹಾಳ ಪಟ್ಟಣಕ್ಕೆ ಹಲವು ಸಾರಿ ಬಂದು ಹೋಗಿದ್ದರು. ಹಿಂದು ದೇಶದ ಅಖಂಡತೆ, ಹಿಂದು ಸಂಸ್ಕೃತಿ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀಗಳು ವಿದೇಶಗಳಲ್ಲಿ ಭಾರತದ ಘನತೆ, ಗೌರವ ಎತ್ತಿ ಹಿಡಿಯುವ ಕೆಲಸ ಮಾಡಿದ್ದರು. ಅವರ ಸರಳತೆ, ಸರ್ವ ಜನರನ್ನೂ ಪ್ರೀತಿಸುವ ಅವರ ಮಾನವೀಯತೆ ಎಲ್ಲರಿಗೂ ಆದರ್ಶಪ್ರಾಯ ಎಂದರು. ಪೇಜಾವರ ಸ್ವಾಮೀಜಿಗಳನ್ನು ಕುರಿತು ಎಂ.ಸಿ.ಕುಲಕರ್ಣಿ, ಸುರೇಶ ಕುಲಕರ್ಣಿ ಮಾತನಾಡಿದರು. ಸಭೆಯಲ್ಲಿ ರಾಜು ಪದಕಿ, ರಾಘವೇಂದ್ರ ಕುಲಕರ್ಣಿ, ಆರ್.ಎಸ್.ದೇಶಪಾಂಡೆ, ಅಶೋಕ ಸರಾಫ, ಪ್ರಕಾಶ ಕುಲಕರ್ಣಿ, ರವಿ ಕುಲಕರ್ಣಿ, ಅರುಣಕುಮಾರ ಪದಕಿ, ಕೃಷ್ಣ ಬಳಬಟ್ಟಿ, ವಿ.ಎಸ್. ಕುಲಕರ್ಣಿ, ಸುಭಾಸ ಕುಲಕರ್ಣಿ, ಬಾಳು ಗಿಂಡಿ ಸೇರಿದಂತೆ ಸಮಾಜದ ಗಣ್ಯರು ಇದ್ದರು.
ವರದಿ:ಸಾಗರ ಉಕ್ಕಲಿ
ಮಾನವತಾವಾದಿ ಭೀಮಪ್ಪನವರ ಪುಣ್ಯಾರಾಧನೆ ಕಾರ್ಯಕ್ರಮ
ವಿಜಯಪುರ ಜಿಲ್ಲೆಯ ಸುದ್ದಿ

ಟಕ್ಕಳಕಿಯಲ್ಲಿ ಸಸಿ ನೆಡುವ ಕಾರ್ಯ
ಮಾನವತಾವಾದಿ ಭೀಮಪ್ಪನವರ 50 ನೇ ಪುಣ್ಯಾರಾಧನೆ:
:
ಮುದ್ದೇಬಿಹಾಳ: ಕೆಲವರು ಸಾಧನೆ ಮಾಡಲೆಂದೇ ನಿರಂತರ ಯತ್ನ ಮಾಡುತ್ತಾರೆ, ಇನ್ನೂ ಕೆಲವರದು ಭಿನ್ನ ಮಾರ್ಗ. ಅವರು ತಮ್ಮ ನಡೆ, ನುಡಿಗಳಿಂದಲೇ ಇತರರಿಗೆ ಆದರ್ಶಪ್ರಾಯರಾಗಿ ಇತಿಹಾಸದಲ್ಲಿ ದಾಖಲಾಗುತ್ತಾರೆ. ಸಾಧಕರ ಸಾಲಿಗೆ ಅರಿವಿಲ್ಲದೇ ಸೇರುತ್ತಾರೆ. ಅಂಥವರ ಸಾಲಿನಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಲಿಂಗೈಕ್ಯ ಭೀಮಪ್ಪ ಬಂಗಾರಿ ಬರುತ್ತಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ, ಪ್ರಚಾರ ಬಯಸದೇ, ಸಮಾಜಕ್ಕೆ, ಮಾನವಕುಲಕ್ಕೆ ಒಳಿತನ್ನು ಮಾಡಿದವರು ಭೀಮಪ್ಪನವರು. ವಿಜಯಪುರ ಜಿಲ್ಲೆಯ ಕಟ್ಟ ಕಡೆಯ ಹಳ್ಳಿ, ಕೃಷ್ಣಾ ನದಿ ತೀರದಲ್ಲಿ ಬರುವ ಟಕ್ಕಳಕಿಯಲ್ಲಿ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಭೀಮಪ್ಪನವರಿಗೆ ಇಬ್ಬರು ಪತ್ನಿಯರು, ಆರು ಗಂಡು, ಐದು ಹೆಣ್ಣು ಮಕ್ಕಳು. ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣದ ಮಹತ್ವ ಅಷ್ಟಾಗಿ ಗೊತ್ತಿಲ್ಲದ ದಿನಗಳಲ್ಲಿ ಅವರು ತಮ್ಮ ಮಕ್ಕಳು ಸೇರಿದಂತೆ ನೆರೆಹೊರೆಯ ಮಕ್ಕಳಿಗೆ ಸಹ ಶಿಕ್ಷಣ ನೀಡಲು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮನೆ ಶಿಕ್ಷಕರನ್ನು ನೇಮಿಸಿ ಶಿಕ್ಷಣ ಜೊತೆಗೆ ಮಾನವೀಯ ಸಂಸ್ಕಾರವನ್ನು ಅವರಿಗೆ ನೀಡಿದರು. ಮಕ್ಕಳು ದೊಡ್ಡವರಾಗಿ ಸಂಸಾರದ ಜವಾಬ್ದಾರಿ ಹೊತ್ತ ನಂತರ ಅವರು ಸಂಸಾರದತ್ತ ಗಮನ ನೀಡದೇ, ಪಾರಮಾರ್ಥ ಜೀವನದ ಕಡೆ ಲಕ್ಷ್ಯ ವಹಿಸಿದರು. ಮಾನ್ವಿಯ ಕಲ್ಮಠ ಸ್ವಾಮೀಜಿಗಳಿಂದ ಗುರು(ಲಿಂಗ) ದೀಕ್ಷೆ ಪಡೆದ ನಂತರ ಸಮಾಜಮುಖಿಯಾಗಿ ಜೀವನಪರ್ಯಂತ ಸೇವೆ ಸಲ್ಲಿಸುತ್ತ ಹೋದರು. ಪಂಚಾಂಗ ಪ್ರವೀಣರಾಗಿದ್ದ ಅವರು ಹೇಳಿದ ವಾಣಿ, ಭವಿಷ್ಯ ನಿಜವಾಗುತ್ತದೆಂದು ನಂಬಿದ್ದ ಗ್ರಾಮೀಣ ಜನತೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳದೇ, ಅವರ ಮದುವೆ, ಮುಂಜುವೆ, ಜನನ, ಮರಣ, ನಾಮಕರಣ ಮೊದಲಾದ ಶುಭ, ಅಶುಭ ಕಾರ್ಯಗಳಿಗೆ ಶುಭ ಹೇಳುತ್ತಲೇ, ಬಸವಣ್ಣ ಹೇಳಿದಂತೆ ಸರ್ವ ಕಾರ್ಯಕ್ಕೂ “ಬಸವಾ, ಬಸವಾ” ಎಂದು ನೀವು ಕೆಲಸ ಆರಂಭಿಸಿ, ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ಮಾನಸಿಕ ಧೈರ್ಯ ತುಂಬುವ ಕಾರ್ಯ ಮಾಡಿದರು. ಲಿಂಗದೀಕ್ಷೆ ಪಡೆದ ನಂತರ ಗುರುಲಿಂಗ, ಜಂಗಮ ಪ್ರೇಮಿಯಾಗಿ, ಲಿಂಗವಂತ ಧರ್ಮದ ತತ್ವಗಳಾದ ಅಷ್ಟಾವರಣ, ಪಂಚಾಚಾರ, ಷಟಷ್ಥಲ ಆಚರಣೆಗೆ ಮಹತ್ವ ನೀಡಿದರು. ಉಳಿದವರಿಗೆ ಸಹ ಅದನ್ನೇ ಅನುಸರಿಸಲು ಬೋಧಿಸಿದರು. ತಮ್ಮ ಮನೆಯಲ್ಲಿ ಸದಾ ವಿಭೂತಿ, ರುದ್ರಾಕ್ಷಿ, ಲಿಂಗ, ಶಿವದಾರ, ಪೀಠಕ ಸೇರಿದಂತೆ ಇಷ್ಟಲಿಂಗ ಪೂಜೆಗೆ ಬೇಕಾದ ಪರಿಕರಗಳನ್ನು ಉಚಿತವಾಗಿ ಪೂರೈಸಿದರು. ಇಂಥ ನಿಷ್ಕಳಂಕ ಆದರ್ಶ ಜೀವನ ಸಾಗಿಸಿ, ಸರಳತೆಯ ಸಾತ್ವಿಕ ಜೀವನ ಸಾಗಿಸಿದ ತಮ್ಮ ತಂದೆಯವರ ಆಚಾರ, ವಿಚಾರಗಳು ಉಳಿದವರಿಗೆ ಸಹ ಮುಟ್ಟಲಿ ಎನ್ನುವ ಸದುದ್ದೇಶದಿಂದ ಅವರ ಮಕ್ಕಳು, ಬಂಧುಗಳು ನಾಡಿನ ಹಿರಿಯ ಮಠಾಧೀಶರ ಸಾನಿಧ್ಯದಲ್ಲಿ “ಜೀವನ ದರ್ಶನ” ಪ್ರವಚನ ಹಾಗೂ “ಸಂತೃಪ್ತಿ” ಗ್ರಂಥ ಪುಸ್ತಕ (ಡಿ.31 ರಂದು ಬೆಳಿಗ್ಗೆ 10 ಗಂಟೆಗೆ) ಲೋಕಾರ್ಪಣೆ ಮಾಡಲಿದ್ದಾರೆ. ತಮ್ಮ ತಂದೆಯವರ 50 ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಬಂಗಾರಿ ಸಹೋದರರು ಐದು ದಿನಗಳ ಕಾಲ ನಿರಂತರ ಸುತ್ತಮುತ್ತಲಿನ ಗ್ರಾಮಗಳಿಂದ ಭಜನಾ ಮಂಡಳಿಗಳಿಂದ ಭಜನೆ, ಅನ್ನದಾಸೋಹ, ಟಕ್ಕಳಕಿ ಹಾಗೂ ಇಂಗಳಗಿ ಗ್ರಾಮಗಳಲ್ಲಿ 50 ಗಿಡಗಳನ್ನು ನೆಡುವ ಕಾರ್ಯ, ಜಂಗಮ ದಾಸೋಹ, ನಿವೃತ್ತ ಸೈನಿಕರ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯ ಹಮ್ಮಿಕೊಂಡಿದ್ದಾರೆ.
ವರದಿ:ಸಾಗರ ಉಕ್ಕಲಿ
ಶ್ರೀಗಳ ಅಗಲಿಕೆಯಿಂದ ಜಿಲ್ಲಾ ಪಂಚಾಯತ ಸಭೆ ಮುಂದೂಡಿಕೆ
ಬೆಳಗಾವಿ ಜಿಲ್ಲೆಯ ಸುದ್ದಿ:
ಅಗಲಿದ ಉಡುಪಿಯ ಕೃಷ್ಣ ಮಠದ ರಾಷ್ಟ್ರಸಂತ್ ಪೇಜಾವರ ಶ್ರೀಗಳ ಅಗಲಿಕೆ (88) (27-4-1931 ರಿಂದ್ 29-12-2019) ಪಾದಗಳಿಗೆ ಅಂತಿಮ ನಮನಗಳು ಹೇಳಿದ ಜಿಲ್ಲಾ ಪಂಚಾಯತ ಅಧ್ಯಕ್ಷರು.
“ಭಾವಪೂರ್ಣ ಶ್ರದ್ಧಾಂಜಲಿ” ಸೋಮವಾರ ದಿನಾಂಕ 30-12-2019 ರಂದು , ಜಿಲ್ಲಾ ಪಂಚಾಯತ್ ಬೆಳಗಾವಿ, ಸಭಾಂಗಣದಲ್ಲಿ ನಡೆಯುವ ಸಾಮಾನ್ಯ ಸಭೆ ಯನ್ನು ಮುಂದೂಡಲಾಗುವುದು, ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ಪ್ರಶಾಂತರಾವ್ ಐಹೊಳೆ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಸಾಗರ ಉಕ್ಕಲಿ
ಉಡುಪಿ ಮಠದ ಶ್ರೀಗಳು ಇನ್ನಿಲ್ಲ
ಉಡುಪಿ ಮಠದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ನಿಧನ
ಅವರ ಅಂತಿಮ ಸಂಸ್ಕಾರ ಅವರ ಇಚ್ಛೆಯಂತೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
ಇನ್ನೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೆ ಶ್ರೀಮಠಕ್ಕೆ ಆಗಮಿಸಿದ್ದಾರೆ. ರಾಜ್ಯದಲ್ಲಿ 3 ದಿನ ಶೋಕಾಚರಣೆ ನಡೆಸಲಾಗುವುದು. ಸಕಲ ಸರಕಾರಿ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ
ವಿಜಯಪುರ ಜಿಲ್ಲೆಯ ಸುದ್ದಿ
ವಿಜಯಪುರ ಜಿಲ್ಲೆಯ ಆಲಮೇಲ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ನಡೆದ ಪ್ರಥಮ ಸಾಹಿತ್ಯ ಸಮ್ಮೇಳನ ಸಮ್ಮೇಳನದಲ್ಲಿ ಮೂವತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಭೀಮಾ ತೀರದ ಪ್ರಖ್ಯಾತ ಪತ್ರಿಕೆ ಅಪರಾಧಕ್ಕೆ ಸವಾಲು ಪತ್ರಿಕೆಯ ಸಂಪಾದಕರಾದ ಟಿ ಕೆ ಮಲಗೊಂಡ ಅವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸಾಹಿತ್ಯ ಸಮ್ಮೇಳನದ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ವರದಿ:ಸಾಗರ ಉಕ್ಕಲಿ
ನೂತನ ಪಂಚಮಸಾಲಿ ಸಮಾಜದ ಅಧ್ಯಕ್ಷರಿಗೆ ಸನ್ಮಾನ
ವಿಜಯಪುರ ಜಿಲ್ಲೆಯ ಸುದ್ದಿ:
ಮುದ್ದೇಬಿಹಾಳ: ತಾಲ್ಲೂಕಿನ ಬಿಜೆಪಿಯ ಪಕ್ಷದ ಮಹಿಳಾ ಮಖಂಡರಾದ ಶ್ರೀಮತಿ ಕಾಶಿಬಾಯಿ ರಾಂಪೂರ ಅವರು ಮುದ್ದೇಬಿಹಾಳ ತಾಲ್ಲೂಕು ಪಂಚಮಸಾಲಿ ಸಮಾಜದ ಮಹಿಳಾ ಘಟಕದ ತಾಲ್ಲೂಕಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಿದರು.
ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಹಾಗೂ ವಿಜಯಕುಮಾರ ಬಡಿಗೇರ,ಗೌರಮ್ಮ ಹುನಗುಂದ,ನಿಲಮ್ಮ ಚಲವಾದಿ,ಪರಶುರಾಮ ನಾಲತವಾಡ,ಪುನೀತ್ ಹಿಪ್ಪರಗಿ,ಶಶಿ ಹಂಗರಗಿ ಸೇರಿದಂತೆ ಹಲವರಿಂದ ಅವರನ್ನು ಸನ್ಮಾನಿಸಿದರು.
ವರದಿ:ಸಾಗರ ಉಕ್ಕಲಿ
ನರಸೀಪುರದಲ್ಲಿ ನಡೆಯುವ ಚೌಡಯ್ಯ ಉತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ ಚೌಡಯ್ಯ ಪೀಠದ ಗುರುಗಳು

ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಟ ನರಸೀಪುರ ತಾ /ಜಿ / ಹಾವೇರಿ ಯಲ್ಲಿ ದಿನಾಂಕ 14,15,ಜನವರಿ 2020 ರಂದು ನಡೆಯುವ ವಚನ ಮಹೋತ್ಸವ ಹಾಗೂ ರತೋತ್ಸವ ಕ್ಕೆ ಮಾನ್ಯ ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಚೌಡಯ್ಯ ಗುರು ಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಹ್ವಾನಿಸಿದರು. ಜೊತೆಯಲ್ಲಿ ಹಾವೇರಿ ಶಾಸಕರು ನೆಹರು ಓಲೇಕಾರ ಹಾಗೂ ಕಾರ್ಯಾಧ್ಯಕ್ಷರಾದ ಅಶೋಕ ವಾಲೀಕಾರ ಇದ್ದರು.
ಪಂಚಮಸಾಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ
ಪಂಚಮಸಾಲಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ


ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ವೀರಶೈವ ಪಂಚಮಸಾಲಿ ಸಮಾಜದ ಮಹಿಳಾ ಅಧ್ಯಕ್ಷರನ್ನಾಗಿ ಬಿಜೆಪಿ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ರಾಂಪೂರ ಅವರನ್ನು ಆಯ್ಕೆ ಮಾಡಿದರು.
ಹಾಗೂ ವೀರಶೈವ ಪಂಚಮಸಾಲಿ ಸಮಾಜದ ನಗರ ಯುವ ಘಟಕದ ಅದ್ಯಕ್ಷರಾಗಿ ಬಸವರಾಜ ಗೋನಾಳ ಅವರನ್ನು ಆಯ್ಕೆ ಮಾಡಿದರು.ಹಾಗೆ ಹಸಿರು ತೋರಣ ಬಳಗದ ಅಧ್ಯಕ್ಷರಾಗಿ ಅಶೊಕ ರೇವಡಿ ಯವರನ್ನು ಆಯ್ಕೆ ಮಾಡಿ ಸನ್ಮಾನಿಸಿದರು.
ವರದಿ:ಸಾಗರ ಉಕ್ಕಲಿ
ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರಧಾನ
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟ್ ವತಿಯಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರಧಾನ
ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ ಟ್ರಸ್ಟ್ ಬೆಂಗಳೂರು ವತಿಯಿಂದ ನಡೆದ ಕಾರ್ಯಕ್ರಮ
64 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ 5ನೇ ರಾಷ್ಟ್ರೀಯ ಕಲಾಮೇಳ ಅಕಾಡೆಮಿ ವತಿಯಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ನಯನ್ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಅನೇಕ ಪರಮಪೂಜ್ಯರು ಹಾಗೂ ಚಿತ್ರನಟರು ಅನೇಕ ಮುಖಂಡರ ಸಮ್ಮುಖದಲ್ಲಿ ಪಡೆದುಕೊಂಡಿದ್ದಾರೆ .
ಮುದ್ದೇಬಿಹಾಳ ತಾಲೂಕಿನ ಬಿಜೆಪಿಯ ಮಹಿಳಾ ಮುಖಂಡರಾದ ಶ್ರೀಮತಿ ಕಾಶಿಬಾಯಿ ರಾಂಪುರ್ ಅವರ ಪುತ್ರಿಯರಾದ ಶ್ರೀಮತಿ ಕವಿತಾ ಎಸ್ ರಾಂಪುರ್ ಹಾಗೂ ಗೀತಾ ಎಸ್ ರಾಂಪುರ್ ಇವರಿಗೆ ಕವಿಯತ್ರಿ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇವರ ಸಾಧನೆಗೆ ಅವರ ಅಪಾರ ಅಭಿಮಾನಿ ಬಳಗ ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ ಸಾಗರ ಉಕ್ಕಲಿ





