ಗ್ರಹಣದ ಕಾಲದಲ್ಲಿ ಮೂಢನಂಬಿಕೆ ಆಚರಣೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಹಣದ ದಿನದಂದು ಮೂಢನಂಬಿಕೆ ಆಚರಣೆ.

ಅಂಗವಿಕಲತೆ ಹೊಂದಿರುವ 24 ವರ್ಷದ ಪಪ್ಪು ಮುಲ್ಲಾ ಎಂಬ ಯುವಕನನ್ನು ಅಂಗವೈಕಲ್ಯ ದೂರ ವಾಗುವುದು ಎಂಬ ಮೂಢನಂಬಿಕೆಯಿಂದ ತಿಪ್ಪೇಯಲ್ಲಿ ಹೂತಿರುವ ಕುಟುಂಬಸ್ಥರು ಈ ದೃಶ್ಯ ತಾವು ಕೂಡ ನೋಡಬಹುದು ಆಧುನಿಕ ಯುಗದಲ್ಲಿ ಇಂತಹ ಘಟನೆ ಸಂಭವಿಸುವುದು ನೋಡಿದರೆ ಇನ್ನು ಭಾರತದಲ್ಲಿ ಮೂಢನಂಬಿಕೆ ಇದೆ ಎಂದು ತಿಳಿಯುತ್ತದೆ.

ವರದಿ:ಸಾಗರ ಉಕ್ಕಲಿ

ಖಾಸ್ಗತ ಮಠದಲ್ಲಿ ಶರಣರ ಮಂಟಪ ವಿನೂತನ ಕಾರ್ಯಕ್ರಮ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹುಬ್ಬಳ್ಳಿ ಸಿದ್ದಾರೂಡರ ಪುರಾಣ ನಡೆಯುತ್ತಿದ್ದು ಇದರ ನಿಮಿತ್ತ “ಶರಣರ ಮಂಟಪ” ಎನ್ನುವ ಕಾರ್ಯಕ್ರಮ ಸಾಧನ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಆಯೋಜಿಸಿದ್ದರು.

  • ಸಿದ್ಧಾರೂಢರು

  • ಖಾಸ್ಗತ ಶಿವಯೋಗಿಗಳು

  • ಶರೀಫರು

  • ಗರಗದ ಮಡಿವಾಳಪ್ಪನವರು

  • ಜಡೆ ಸಿದ್ದೇಶ್ವರರು

  • ಅಥಣಿ ಮುರುಗೇಂದ್ರ ಯೋಗಿಗಳು

ಹೀಗೆ ಮಹಾನ್ ಶರಣರ ವೇಷಧರಿಸಿದ ಮಕ್ಕಳು ಕಾರ್ಯಕ್ರಮದಲ್ಲಿ ಮೆರಗು ತಂದರು.

ಈ ಸಂದರ್ಭದಲ್ಲಿ ಗಿರಿಜಾ ಕಡಿ, ಶಶಿಕಲಾ ಕೆಂಧೂಳಿ ಬಸಮ್ಮ ಕೋಳೂರು, ರತ್ನಾಬಾಯಿ ದಡ್ಡಿ, ಸರೋಜಾ ಕೋರಿ,ರೇಣುಕಾ ಹಳ್ಳೂರ,ಕಲಾವತಿ ಬಡಿಗೇರ, ಜ್ಯೋತಿ ದಡ್ಡಿ,ರಾಜೇಶ್ವರಿ ಲದ್ದಿಮಠ,ಅನ್ನಪೂರ್ಣ ಸಜ್ಜನ,ಸುಮಂಗಲಾ ಮಡಿವಾಳ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಆಯುಷ್ಮಾನ ಕಾರ್ಡ ವಿತರಣೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಹೆಣ್ಣು ಮಕ್ಕಳಿಗೆ ಆರೋಗ್ಯದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಆಯುಷ್ಮಾನ ಕಾರ್ಡ್ ಗಳನ್ನು ಸಂಘದ ಮಹಿಳಾ ಸದಸ್ಯರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಉದ್ಘಾಟನೆ ನೇರವೆರಿಸಿದ ತಾಲೂಕ ಪಂಚಾಯತ್ ಉಪಾದ್ಯಕ್ಷ ಮಂಜುನಾಥಗೌಡ ಪಾಟೀಲ ಧರ್ಮಸ್ಥಳ ಸಂಸ್ಥೆಯು ಸಮಾಜದ ಕೊನೆಯ ಪ್ರಜೆಗೂ ಮುಟ್ಟುವಂತ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ದಾರಿದೀಪವಾಗಿದೆ. ಇದು ತಾಲೂಕಿನ ಎಲ್ಲಾ ಸಾರ್ವಜನಿಕರು ಕೇಂದ್ರ ಸರ್ಕಾರದ ಯೋಜನೆಯನ್ನು ಉಪಯೋಗಿಸಿ ಕೊಳ್ಳಬೇಕು. ಪ್ರತಿಯೊಬ್ಬ ರೈತನು ತನ್ನ ದುಡಿಮೆಯ ಶೇಕಡಾ 60 ರಷ್ಟು ಆರೋಗ್ಯಕ್ಕೆ ಖರ್ಚು ಮಾಡುವುದು ದುರಂತ ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಿದರೆ ಒಳ್ಳೆಯದು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿ ಮಾತನಾಡಿದ ಸಂಸ್ಥೆಯ ತಾಲೂಕಿನ ಅದಿಕಾರಿಗಳಾದ ಶ್ರೀ ಹೊನ್ನಪ್ಪ ಧರ್ಮಸ್ಥಳ ಸಂಸ್ಥೆಯ ಮುಖ್ಯ ಉದ್ದೇಶವೇ ಗ್ರಾಮೀಣ ಬಾಗದ ಜನರ ಮೂಲಭೂತವಾಗಿ ಬದುಕುವದು. ಅದರ ಹಿತ ದೃಷ್ಟಿಯಿಂದ ಎಲ್ಲರೂ ಸಂಸ್ಥೆಯ ಜೊತೆ ಕೈಜೋಡಿಸಿ ತಮ್ಮ ಬದುಕನ್ನು ಬಂಗಾರವಾಗಿಸಲು ಪ್ರಯತ್ನಿಸೋಣ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶ್ರೀ ಎಸ್ ಎಸ್ ಮೇಟಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಸುಧಾ ಬಸರಕೋಡದ ಸಂಸ್ಥೆಯ ವತಿಯಿಂದ ಸದಸ್ಯರಿಗೆ 140 ಜನರಿಗೆ ಉಚಿತವಾಗಿ ಕಾರ್ಯಗಳನ್ನು ನೀಡುವುದು ಹಾಗೆ ಯಾರೂ ಬೇಕಾದರೂ ಆಯುಷ್ಮಾನ ಕಾರ್ಡ್ ಗಳನ್ನು ಆದಷ್ಟೂ ಬೇಗ ಮಾಡಿಸಿ ಕೊಂಡರೆ ಒಳ್ಳೆಯದು ಎಂದು ಹೇಳಿದರು

ಕಾರ್ಯಕ್ರಮದ ಸಮಾರೊಪವನ್ನು ಜನವರಿ 10 ಕ್ಕೆ ಪವಾಡ ಬಸವೇಶ್ವರ ದೇವಾಲಯದ ಆವರಣದಲ್ಲಿ ನೆರವೇರಿಸಲಾಗವದು ಎಂದು ಹೇಳಿದರು.

ವರದಿ ಸಾಗರ ಉಕ್ಕಲಿ

ಭಾರತೀಯ ಬಂಜಾರ ಸಂಘಟನಾ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ

ಭಾರತೀಯ ಬಂಜಾರ ಸಂಘಟನಾ ಸಮಿತಿ(ರಿ) ಬೆಂಗಳೂರು ವತಿಯಿಂದ ವಿಚಾರ ಸಂಕಿರಣ:

ಬೆಂಗಳೂರಿನ ನಯನ ರಂಗ ಮಂದಿರದ ಕನ್ನಡ ಭವನದಲ್ಲಿ ಭಾರತೀಯ ಬಂಜಾರಾ ಸೇವಾ ಸಂಘಟನೆ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಂಡರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಂಜಾರಾ ಸಮಾಜದ ಸ್ವಾಮೀಜಿಗಳು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ:

ಬಂಜಾರ ಸಮಾಜದ ವಿರುದ್ದ ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯ ಕ್ಕೆ ಹಾಗೊ ಸಮಾಜದವರು ಮತಾಂತರ ಗೊಳ್ಳುತ್ತಿರುವ ಹಾಗೂ ಗುಳೇ ಹೋಗುವ ಕುರಿತು ಮಾತನಾಡಿದರು. ಅಲ್ಲದೆ ಕಲಾಪದಲ್ಲಿ ಇದರ ಸಲುವಾಗಿ ಧ್ವನಿ ಎತ್ತಿ ಮಾತನಾಡುತ್ತೇನೆ ಬಂಜಾರಾ ಸಮಾಜದ ಉಳುವಿಗಾಗಿ ಹೋರಾಟಕ್ಕೆ ಸಿದ್ದನಿರುತ್ತೇನೆ ಎಂದರು.

ಜಯರಾಜ ನಾಯಕ IAS ಅಧಿಕಾರಿ ಮಾತನಾಡಿ:

ಸಮಾಜದಲ್ಲಿ ಅನೇಕ ರೀತಿಯಲ್ಲಿ ಜನರು ಇನ್ನೂ ಅಭಿವೃದ್ಧಿ ಹೊಂದಿಕೊಳ್ಳುತ್ತಿದ್ದು ಅದಕ್ಕೆ ಪ್ರೋತ್ಸಾಹ ಇಲ್ಲದಂತಾಗಿದೆ ಸಂಘಟನೆಯವರು ಸಮಾಜದ ಬೆಳವಣಿಗೆಗೆ ಶ್ರಮಿಸುತ್ತಿದ್ದು ಅದು ತುಂಬ ಮೆಚ್ಚುವಂತ ಕಾರ್ಯ ರಾಜಕೀಯ ಯಾವುದೇ ಸಮಾಜದಲ್ಲಿ ಸಮಾಜದವರು ಇದ್ದರು ಸಮಾಜ ಬಂದಾಗ ಎಲ್ಲರೂ ಸಂಘಟಿತರಾಗಿ ಒಂದಾಗಿ ಇರಬೇಕು ಎಂದರು.

ಸೋಮಲಿಂಗ ಮಹಾರಾಜ ಕೆಸರಟ್ಟಿ ಮಾತನಾಡಿ:

ಸಮಾಜದ ಜನ ಮೂಡನಂಬಿಕೆಯ ಹೆಸರಿನಲ್ಲಿ ಬಂಜಾರ ಸಮಾಜದ ಸಂಪ್ರದಾಯವನ್ನು ಮರೆಯುತ್ತಿದೆ.ಅಲ್ಲದೆ ನಮ್ಮ ಸಮಾಜದ ಜನ ಕೆಲಸಗೋಸ್ಕರ ಬೇರೊಂದು ರಾಜ್ಯಕ್ಕೆ ಗುಳೇ ಹೋಗುತ್ತಿದ್ದು ಅಲ್ಲದೇ ಕ್ರಿಶ್ಚಿಯನ್ ಸಮುದಾಯಕ್ಕೆ ಮಂತಾರ ಗೊಳ್ಳುತ್ತಿದ್ದು ಅದರಿಂದ ಸಮುದಾಯದ ಜನರು ಕೆಡುತ್ತಿದ್ದು ಸಂಪ್ರದಾಯ ಮರೆತು ಬದುಕುತ್ತಿದ್ದಾರೆ ಅದನ್ನು ಬಿಟ್ಟು ಸರಿಯಾದ ಮಾರ್ಗದಲ್ಲಿ ಹೋಗಬೇಕು ಅಲ್ಲದೇ ಸಮಾಜದ ಮೇಲೆ ಅನೇಕ ರೀತಿಯಲ್ಲಿ ದಬ್ಬಾಳಿಕೆ ಆಗುತ್ತಿವೆ ಅದನ್ನು ಸರಿ ಪಡಿದಸೆ ಹೋದರೆ ಸಮಾಜದ ಪರವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬಿ.ಟಿ.ಲಲಿತಾ ನಾಯಕ ಸಾಹಿತಿಗಳು ಮಾತನಾಡಿ:

ಸಮಾಜದ ಜನರು ಮುಡನಂಬಿಕೆ ಬಿಡುತ್ತಿದ್ದಾರೆ ಎಂಬ ಮಾತಿಗಿ ಅವರು ಮಾತನಾಡಿ ಸಮಾಜದಲ್ಲಿ ಆಧುನಿಕ ಯುಗದಲ್ಲಿ ತಕ್ಕಂತೆ ಮಹಿಳೆಯರು ಇರಬೇಕಾಗುತ್ತದೆ ಸಮಾಜದಲ್ಲಿ ಬಂಜಾರ ಸಮಾಜದ ಸಂಪ್ರದಾಯವನ್ನು ಮರೆಯುತ್ತಿಲ್ಲ ಆದರೆ ಇವತ್ತಿನ ಸಂಪ್ರದಾಯಕ್ಕೆ ತಕ್ಕಂತೆ ಉಡುಪು ದರಿಸುತ್ತಿದ್ದಾರೆ ಹೊರತು ಅದರಿಂದ ಸಮಾಜದ ಹಳೆಯ ಪದ್ದತಿಯನ್ನು ಸುಧಾರಿಸುತ್ತಿದ್ದಾರೆ ಅದೆ ಹಳೆಯ ಸಂಪ್ರದಾಯದಲ್ಲಿ ಮುಂದುವರಿದರೆ ಇನ್ನಿತರ ಸಮಾಜದಲ್ಲಿ ಶೋಷಣೆಗೆ ಒಳಪಡುವಂತಾಗುತ್ತದೆ.ಅದನ್ನು ಬಿಟ್ಟು ಸುಧಾರಣೆ ಯಾಗಬೇಕು.ಸ್ವಾಮಿಗಳು ಸಂಘಟನೆಗಳು ಸಮಾಜದಲ್ಲಿ ಒಳ್ಳೆಯದನ್ನು ಮಾಡುವದನ್ನು ಹೇಳಬೇಕು ಹೊರತು ಸಮಾಜದ ಜನರಲ್ಲಿ ಜಗಳ ಹಚ್ಚುವ ಕಾರ್ಯ ಮಾಡಬಾರದು ಎಂದರು.

ರಾಜಪಾಲ ಚವ್ಹಾನ ಬಂಜಾರಾ ಸಮಾಜದ ಮುಖಂಡರು ವಿಜಯಪುರ ಮಾತನಾಡಿ:

ನಮ್ಮ ಸಮಾಜದ ಜನರು ಮತಾಂತರ ಗೊಳ್ಳುತ್ತಿದ್ದು ಈಗಾಗಲೇ ಮತಾಂತರ ಆದವರನ್ನು ಬಿಟ್ಟು ಈಗಾಗಲೇ ಮತಾಂತರ ಹೋಗುತ್ತಿರುವವರನ್ನು ನಾವು ನಾವೆಲ್ಲರೂ ಸೇರಿ ತಡೆಯೋನ.ಹಾಗೆ ಸಮುದಾಯದ ಮೇಲೆ ಸಮಾಜದಲ್ಲಿ ಅನೇಕ ರೀತಿಯ ದೌರ್ಜನ್ಯ ನಡೆಯುತ್ತಿದ್ದ ಸಮಾಜದ ಎಲ್ಲರೂ ಸೇರಿಕೊಂಡು ಹೋರಾಟ ಮಾಡೋನ ಎಂದರು.

ಸಂಘಟನೆ ರಾಜ್ಯ ಅಧ್ಯಕ್ಷ ಪುಂಡಲೀಕ ಪವಾರ ಮಾತನಾಡಿ:

ಬಂಜಾರಾ ಸಮಾಜದಲ್ಲಿನ ಬಡ ಜನರ ಇಂದಿನ ಪರಿಸ್ಥಿತಿ ತುಂಬಾ ಕೆಡುತ್ತಿದ್ದು ಅದಕ್ಕೆ ಸರ್ಕಾರ ಆಗಲೀ ಸಮಾಜದ ರಾಜಕೀಯ ನಾಯಕರಾಗಲಿ ಮುಖಂಡರಾಗಲಿ ಅದನ್ನು ಸರಿ ಪಡಿಸಲು ಮುಂದೆ ಬರುತ್ತಿಲ್ಲ ಕೇವಲ ಮಾತನಾಡುತ್ತಾರೆ ಹೋಗುತ್ತಾರೆ ಹೊರತು ಸಮಾಜದ ಬೆಳವಣಿಗೆ ಮಾಡಲು ಮುಂದು ಬರುತ್ತಿಲ್ಲ ಅದಕ್ಕಾಗಿ ಸಂಘಟನೆಯ ರೂಪದಲ್ಲಿ ಸಮಾಜದ ಹಿಂದುಳಿದ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದು ಅದಕ್ಕೆ ಎಲ್ಲ ರೀತಿಯಲ್ಲಿ ಸಮಾಜದವರು ಒಗ್ಗೂಡಬೇಕು ಇಲ್ಲವಾದಲ್ಲಿ ಸಮಾಜದ ಮೇಲೆ ಆಗುತ್ತಿರುವ ಪರಿಣಾಮದ ವಿರುದ್ದ ಉಗ್ರವಾಗ ಹೋರಾಟ ಮಾಡಬೇಕಾಗುತ್ತದೆ ಎಂದರು.

ರಾಜ್ಯ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಾರದಾ ನಾಯಕ ಮಾತನಾಡಿ:

ಸಮಾಜದ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ಬಂಜಾರ ನಿಗಮ ಮುಂದೆ ಬರುತ್ತಿಲ್ಲ ಕೆಲವೊಂದು ಬಡ ಕುಟುಂಬದಲ್ಲಿ ಹುಟ್ಟಿದ ಸಮಾಜದವರು ಹೊಟ್ಟೆ ಪಾಡಿಗಾಗಿ ಗುಳೇ ಹೋಗುವುದು ಅತ್ಯಂತ ವಿಪರ್ಯಾಸ ಅಲ್ಲದೆ ಸಮಾಜದವರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಗೊಳ್ಳುತ್ತಿದ್ದು ಅದನ್ನು ಸಮಾಜದ ಮುಖಂಡರು ನಾವು ನೀವೆಲ್ಲ ಕೂಡಿ ಬಂಜಾರ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡೋನ ಅಲ್ಲದೆ ಸರ್ಕಾರ ಸಮಾಜದ ಪರವಾಗಿ ಕೆಲಸ ಮಾಡದೇ ಹೋದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದರು.

ಬಂಜಾರ ಸಮಾಜದ ವಿಚಾರ ಸಂಕಿರಣ ಕುರಿತು ಪರಮಪೂಜ್ಯರಾದ ಸಿದ್ಧಲಿಂಗ ಸ್ವಾಮಿಗಳು ಲಿಂಗಸೂರ,ಬಳಿರಾಮ ಮಹಾರಾಜ ಗಬ್ಬೂರವಾಡ,ಕುಮಾರ ಮಹರಾಜ ಸೇರಿದಂತೆ ಹಲವು ಮುಖಂಡರು ಈ ಬಂಜಾರ ಸಮಾಜದ ವಿಚಾರ ಸಂಕಿರಣದಲ್ಲಿ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಪಿ.ಕೆ ಖಂಡೋಬಾ ವಿಶ್ರಾಂತ ಪ್ರಾಧ್ಯಾಪಕರು,ರಾಜಪಾಲ ಚವ್ಹಾನ ಮಾಜಿ ಜಿ.ಪ ಸದಸ್ಯ ವಿಜಯಪುರ, ಭಾರತೀಯ ಬಂಜಾರ ಸಂಘಟನಾ ಸಮಿತಿಯ ರಾಜ್ಯ ಅಧ್ಯಕ್ಷ ಪುಂಡಲೀಕ ಪವಾರ,ಮಹಿಳಾ ರಾಜ್ಯದ್ಯಕ್ಷೆ ಶ್ರೀಮತಿ ಶಾರದಾ ಕೆ ನಾಯಕ,ರಾಜ್ಯ ಉಪಾಧ್ಯಕ್ಷ ಶಿವರಾಜ ನಾಯಕ,ಮಹಿಳಾ ಉಪಾಧ್ಯಕ್ಷೆ ಲಲಿತಾ ಜಾಧವ,ಕೃಷ್ಣಾ ಜಾಧವ,ಮಹಾಂತೇಶ ಪವಾರ,ಶಾರದಾ ಚವ್ಹಾನ,ಸೇರಿದಂತೆ ಹಲವು ಜಿಲ್ಲೆಯ ಸಂಘಟನೆಯ ಪದಾಧಿಕಾರಿಗಳು ಸಮಾಜಬಾಂಧವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ

ವಿದ್ಯುತ್ ಶಾಕದಿಂದ ಮೃತಪಟ್ಟಿದ್ದ ಎತ್ತುಗಳು ಹೆಸ್ಕಾ ಇಲಾಖೆಯಿಂದ ಪರಿಹಾರ

ವಿಜಯಪುರ ಜಿಲ್ಲೆಯ ಸುದ್ದಿ:

ಮುದ್ದೇಬಿಹಾಳ ತಾಲ್ಲೂಕಿನ ಹರಿಂದ್ರಾಳ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಶಾಕ್ ತಗುಲಿ ಜೋಡೆತ್ತುಗಳು ಮೃತಪಟ್ಟಿದ್ದವು.ಅದಕ್ಕೆ ಸರ್ಕಾರದ ಪರಿಹಾರ ನೀಡಬೇಕಾಗಿತ್ತು. ಕಾರಣ ಇಂದು ಹೆಸ್ಕಾಂ AEE ಹಾದಿಮನಿ ಎತ್ತುಗಳಿಗೆ ಸಂಬಂಧಿಸಿದ ರೈತ ಸಂಗಪ್ಪ ಬಿರಾದಾರ ರೈತನಿಗೆ ಸುಮಾರು 90 ಸಾವಿರದ ಚೆಕ್ ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಮುದ್ದೇಬಿಹಾಳ ಶಾಸಕರ ಸಹೋದರ ಸೋಮನಗೌಡ ಪಾಟೀಲ ನಡಹಳ್ಳಿ ಬಾ.ಜ.ಪ ಮಂಡಲದ ನೂತನ ಅಧ್ಯಕ್ಷರಾದ ಡಾ ಪರಶುರಾಮ ಪವಾರ,ಜಗದೀಶ ಪಂಪಣ್ಣವರ,ವಾಯ್ ಎಸ್ ಹಾಲವರ(ಮಾಜಿ.ತಾ.ಪಂ.ಸದಸ್ಯರು) ಅಶೋಕ ರಾಠೋಡ ಶಿವು ಕನ್ನೊಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ:ಸಾಗರ ಉಕ್ಕಲಿ ವಿಜಯಪುರ

ಪ್ರತಿಭಟನೆಗೆ ಗೋಲಿಬಾರ್ ಇಬ್ಬರ ಸಾವು

ಮಂಗಳೂರು ಸುದ್ದಿ:

ಪ್ರತಿಭಟನೆ ವೇಳೆ ಇಬ್ಬರ ಸಾವು

ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನೂ ಈ ಗೋಲಿಬಾರ್ ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ಮುಸ್ಲಿಂ ಧರ್ಮ ಗುರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಸರಕಾರ ಅಧಿಕೃತವಾಗಿ ಸಾವಿನ ವಿಷಯವನ್ನು ಇನ್ನೂ ಪ್ರಕಟಿಸಿಲ್ಲ.

ಜಲೀಲ್ (49) , ನೌಶೀನ್ (23) ಮೃತರು. ಇಂದು ಬೆಳಗ್ಗೆ ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಂತರ ಅಶ್ರುವಾಯು ಸಿಡಿಸಲಾಗಿದೆ. ಇದರಿಂದಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಗೋಲಿಬಾರ್ ನಡೆಸಿದ್ದಾರೆ

ಈ ಮಧ್ಯೆ ಇಂದು ಮಧ್ಯಾಹ್ನದಿಂದಲೇ ಮಂಗಳೂರಿನ 5 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ನಾಳೆ ಮಧ್ಯ ರಾತ್ರಿವರೆಗೂ ಕರ್ಫ್ಯೂ ಮುಂದುವರಿಯಲಿದೆ. ಮಂಗಳೂರಿನಲ್ಲಿ ಶಾಲೆ, ಕಾಲೇಜಿನ ನಾಳೆ ರಜೆ ಘೋಷಿಸಲಾಗಿದೆ.

ಮಂಗಳೂರಿನ ಘಟನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾಧ ವ್ಯಕ್ತಪಡಿಸಿದ್ದು, ಉನ್ನತ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

ಇಂತಹ ಮಧ್ಯೆ ಗಲಭೆಗೆ ಹೊರಗಿನ ಅನೇಕ ಶಕ್ತಿಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಕೇರಳದಿಂದ ಸಾಕಷ್ಟು ಜನರು ಮಂಗಳೂರಿಗೆ ಆಗಮಿಸಿರುವ ಶಂಕೆ ವ್ಯಕ್ತವಾಗಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಭಟನೆಗೆ ಹೊರಗಿನ ಶಕ್ತಿಗಳ ಪ್ರಚೋದನೆ ನಡೆಯುತ್ತಿರುವ ಬಗ್ಗೆ ಮಾಹಿತಿ ವ್ಯಕ್ತವಾಗಿದೆ.

ನೂತನ ಬಾಜಪ ಮಂಡಲ ಅಧ್ಯಕ್ಷರಾಗಿ ಪರಶುರಾಮ ಪವಾರ ಆಯ್ಕೆ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ:

ಮುದ್ದೇಬಿಹಾಳ: ತಾಲ್ಲೂಕಿನ ನೂತನವಾಗಿ ಭಾರತೀಯ ಜನತಾ ಪಾರ್ಟಿಯ ಮುದ್ದೇಬಿಹಾಳ ಮಂಡಲದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಹಾಗೂ ರಥ ಶಿಲ್ಪಿಗಳಾಗಿದ್ದ ಪರಶುರಾಮ ಪವಾರ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಬಾಜಪ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಅದಕ್ಕೆ ಅವರ ಅಭಿಮಾನಿ ಬಳಗ ಹಾಗೂ ಬಾಜಪ ಮುಖಂಡರು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ವರದಿ:ಸಾಗರ ಉಕ್ಕಲಿ

ನಿಧನ ವಾರ್ತೆ

ನಿಧನ ವಾರ್ತೆ

ಹಾವೇರಿಯ ಶ್ರೀ ಎಸ್ ಎನ್ ಮೇಡ್ಲೇರಿ ಅವರ ಪುತ್ರನಾದ ರಾಘವೇಂದ್ರ ಎಸ್ ಮೇಡ್ಲೇರಿ ಅನನ್ಯ Construction ಹಾವೇರಿ ಇವರು ಅಕಾಲಿಕವಾಗಿ ದಿನಾಂಕ 18/12/2019 ರಂದು ಸಂಜೆ ದೈವಾದೀನರಾಗಿದ್ದಾರೆ.

ಇವರ ಅಂತ್ಯಕ್ರಿಯೆಯು 19/12/2019 ರಂದು ಬೆಳಿಗ್ಗೆ 11.30 ಗಂಟೆಗೆ ಹಾವೇರಿಯ ಶ್ರೀ ಮೈಲಾರ ಮಹದೇವ ಮುಕ್ತಿದಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

ಗೂಳಿ ಗಳಿಂದ ಸಂಚಾರಕ್ಕೆ ತೊಂದರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸುದ್ದಿ:

ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾನದ ಹತ್ತಿರ ಗೂಳಿ ಗಳು ರಸ್ತೆಯ ಮೇಲೆ ನಿಂತು ತೊಂದರೆ ಕೊಡುತ್ತಿವೆ ಇದಕ್ಕೆ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಹೈರಾನು,ನಗರ ಪಾಲಿಕೆಯವರು ಈ ಗೂಳಿ ಗಳನ್ನು ಹಿಡಿದು ಗೊ ಶಾಲೆಗೆ ರವಾನಿಸಿ ಸಂಚಾರಕ್ಕೆ ಮುಕ್ತ ಮಾಡಿ ಕೊಡುವಂತೆ ಸಾರ್ವಜನಿಕರ ಒತ್ತಾಯ ಇಲ್ಲವಾದರೆ ಯಾರಿಗಾದರೂ ಹಾಯುವುದರಿಂದ ಅನಾಹುತಗಳು ತಪ್ಪಿದ್ದಲ್ಲ.ಕೂಡಲೇ ಇಲಾಖೆಯವರು ಕ್ರಮ ಕೈಗೊಳ್ಳಬೇಕು.

ವರದಿ:ಚಂದ್ರಕಾಂತ ಹುಕ್ಕೇರಿ

ವಿದ್ಯುತ್ ಸ್ಪರ್ಶಿಸಿ ಕಬ್ಬು ಬೆಳೆ ನಾಶ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಶಾಪೂರ ಗ್ರಾಮದಲ್ಲಿ ಘಟನೆ

ವಿದ್ಯುತ್ ತಂತಿ ಬಿದ್ದು ಕಬ್ಬು ಬೆಳೆ ನಾಶ

ರೈತ ಶಂಕರಗೌಡ ಪಾಟೀಲ ಎಂಬುವರಿಗೆ ಸೇರಿದ ಕಬ್ಬಿನ ಜಮೀನಿನಲ್ಲಿ ನಡೆದ ಘಟನೆ

ಸುಮಾರು 4 ಎಕರೆ ಕಬ್ಬು ಬೆಂಕಿಗೆ ಆಹುತಿ ಯಾಗಿದೆ

ಅಗ್ನಿಶಾಮಕ ಸಿಬ್ಬಂದಿಯವರಿಂದ ಬೆಂಕಿ ನಂದಿಸುವ ಕಾರ್ಯ

ಇನ್ನೂ ಸ್ಥಳಕ್ಕೆ ಕಂದಾಯ ಗ್ರಾಮ ಲೆಕ್ಕಾಧಿಕಾರಿ ಭೇಟಿ ಪರಿಶೀಲನೆ

ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ವರದಿ:ಸಾಗರ ಉಕ್ಕಲಿ

Design a site like this with WordPress.com
Get started