ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ
ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರು ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅಪರಾಧ ಘಟಿಸಿದ ಮೇಲೆ ಎಚ್ಚರಗೊಳ್ಳುವುದಕ್ಕಿಂತ ಅಪರಾಧ ನಡೆಯದಂತೆ ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಜಾಣತನದ ನಡೆಯಾಗಿದೆ ಎಂದು ಸಿಪಿಐ ಆನಂದ ವಾಘ್ಮೋಡೆ ಹೇಳಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಹುಡ್ಕೋದಲ್ಲಿರುವ ಹಸಿರು ತೋರಣ ಬಳಗದ ಗಾರ್ಡನ್ ಮತ್ತು ಮಾರುತಿನಗರ ಬಡಾವಣೆಯಲ್ಲಿರುವ ಗಾರ್ಡನ್‍ನಲ್ಲಿ ಮಂಗಳವಾರ ಅಪರಾಧ ತಡೆ ಮಾಸಾಚರಣೆ ಹಿನ್ನೆಲೆ ಪೋಲಿಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜನಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅಪರಾಧ ತಡೆಗಟ್ಟುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು ಅವರು ಹೆಚ್ಚು ಮುನ್ನೆಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮೈಮೇಲೆ ಚಿನ್ನಾಭರಣಗಳನ್ನು ಹಾಕಿಕೊಂಡು ಸಂಚರಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ಓಣಿಯಲ್ಲಿ ಅಪರಿಚಿತ ವ್ಯಕ್ತಿಗಳ ಅನುಮಾನಾಸ್ಪದ ಸಂಚಾರ ಕಂಡುಬಂದರೆ ತಕ್ಷಣ ಪೋಲಿಸ್ ರಿಗೆ ಮಾಹಿತಿ ನೀಡಬೇಕು. ಚಿನ್ನಾಭರಣ ಸ್ವಚ್ಛಗೊಳಿಸುವ ನೆಪದಲ್ಲಿ ಬರುವ ಬೇರೆ ರಾಜ್ಯಗಳ ವಂಚಕರನ್ನು ನಂಬಬಾರದು. ವಾಹನಗಳನ್ನು ಮನೆಯ ಹೊರಗೆ ನಿಲ್ಲಿಸಿದಾಗ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಉತ್ತಮ. ಎಲ್ಲೆಲ್ಲೆ ಅಪರಾಧ ಚಟುವಟಿಕೆಗಳು ನಡೆಯುವ ಸಂಭವ ಇರುತ್ತದೆಯೋ ಅಲ್ಲೆಲ್ಲ ಪೆÇಲೀಸರ ಗಸ್ತು ಹೆಚ್ಚಿಸಿ ಭದ್ರತೆ ಒದಗಿಸಲು ಇಲಾಖೆ ವತಿಯಿಂದ ಕ್ರಮ ಕೈಕೊಳ್ಳಲಾಗುತ್ತದೆ ಎಂದರು.
ಅಪರಾಧ ತಡೆಗಟ್ಟುವ ಕುರಿತು ಪೋಲಿಸ್ ಇಲಾಖೆ ಹೊರಡಿಸಿರುವ ಕರಪತ್ರಗಳನ್ನು ಎಲ್ಲರೂ ಓದಿ ಅದರಲ್ಲಿರುವ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಈ ಕರಪತ್ರಗಳನ್ನು ಮನೆಯಲ್ಲಿ ಸಂರಕ್ಷಿಸಿ ಇಟ್ಟುಕೊಂಡು ಆವಾಗಾವಾಗ ಅದರಲ್ಲಿನ ಮಾಹಿತಿಗಳ ಮೇಲೆ ಕಣ್ಣಾಡಿಸುತ್ತಿರಬೇಕು. ಅಕ್ಕಪಕ್ಕದವರಿಗೆ ಈ ಬಗ್ಗೆ ಜಾಗ್ರತೆ ಮೂಡಿಸಲು ಮುಂದಾಗಬೇಕು. ಮನೆಗಳ್ಳತನದ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಬಾಗಿಲಿಗೆ ಬೀಗ ಹಾಕಿ ಪರ ಊರಿಗೆ ಹೋಗುವುದಕ್ಕೂ ಮುನ್ನ ಪೆÇಲೀಸರಿಗೆ ಮಾಹಿತಿ ಕೊಡಬೇಕು. ಪೆÇಲೀಸರು ಆಯಕಟ್ಟಿನ ಸ್ಥಗಳಲ್ಲಿ ಗಸ್ತು ತಿರುಗುತ್ತಿರುತ್ತಾರೆ. ನಮ್ಮ ಪೋಲಿಸ್ ಇಲಾಖೆ ಕೆಲವು ಕಳ್ಳತನ ಪತ್ತೆಹಚ್ಚಿ ಕಳ್ಳರನ್ನು ಜೈಲಿಗೆ ಕಳಿಸಿದ್ದಾರೆ. ಆದರೂ ಸಾರ್ವಜನಿಕರ ಸಹಕಾರ ಇಲ್ಲದೆ ಏನೂ ಮಾಡಲು ಆಗೊಲ್ಲ. ಹೀಗಾಗಿ ಅಪರಾಧ ತಡಗಟ್ಟುವಲ್ಲಿ ಸಾರ್ವಜನಿಕರ ಪಾತ್ರವೂ ಬಹುಮುಖ್ಯವಾಗಿದೆ ಎಂದರು.
ಹುಡ್ಕೋ ಗಾರ್ಡನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರಾಧ ವಿಭಾಗದ ಪೇದೆ ಮಹೇಶ ಮಠಪತಿ ಅಪರಾಧ ತಡೆಗಟ್ಟುವ ಕುರಿತು ಮಾತನಾಡಿದರು. ಮಹಾಬಲೇಶ ಗಡೇದ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ ಪೋಲಿಸ್ ರು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ನೀಡಿದರು.
ಪಿಎಸೈ ಟಿ.ಜಿ.ನೆಲವಾಸಿ, ಹಸಿರು ತೋರಣ ಗೆಳೆಯರ ಬಳಗದ ಕಾರ್ಯದರ್ಶಿ ಸುರೇಶ ಕಲಾಲ, ಮಾಜಿ ಅಧ್ಯಕ್ಷ ಕೆ.ಆರ್.ಕಾಮಟೆ, ಅಶೋಕ ರೇವಡಿ, ಡಾ.ವೀರೇಶ ಇಟಗಿ, ಡಾ.ವಿಜಯಕುಮಾರ ಗೂಳಿ, ಡಾ.ವೀರೇಶ ಪಾಟೀಲ, ವೆಂಕನಗೌಡ ಪಾಟೀಲ, ಎಂ.ಎಸ್.ಬಾಗೇವಾಡಿ, ಸುಧಿರ ಕತ್ತಿ, ರವಿ ಗೂಳಿ, ಪುನೀತ್ ಹಿಪ್ಪರಗಿ, ಮಂಜುನಾಥ ರತ್ನಾಕರ, ಬಿ.ಎಸ್.ಮೇಟಿ ಸೇರಿದಂತೆ 25-30 ಜನ ಪಾಲ್ಗೊಂಡಿದ್ದರು.
ಮಾರುತಿನಗರ ಗಾರ್ಡನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಮನೋಹರ ತುಪ್ಪದ, ನಿವೃತ್ತ ಪ್ರಾಧ್ಯಾಪಕ ಜಿ.ಎನ್.ತಟ್ಟಿ, ಪ್ರೋಪೆಸರ.ಎಸ್.ಎಸ್.ಹೂಗಾರ ಮಾತನಾಡಿ ಸಲಹೆ ಸೂಚನೆ ನೀಡಿದರು.
ಈ ವೇಳೆ ಇದ್ದ ಸಾರ್ವಜನಿಕರು ಪೋಲೀಸರು, ಪುರಸಭೆ ಅಧಿಕಾರಿಗಳು ಜಂಟಿಯಾಗಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಮುಖ್ಯವಾಗಿ ಎಲ್ಲಾ ಕಡೆ ಬೀದಿ ದೀಪಕ್ಕೆ ಬಲ್ಬ್ ಅಳವಡಿಸಿ ಅವು ರಾತ್ರಿ ಬೆಳಕು ಬೀರುವಂತೆ ನೋಡಿಕೊಂಡಲ್ಲಿ ಅಪರಾಧ ತಡೆತಟ್ಟಲು ಹೆಚ್ಚು ಅನುಕೂಲ ಆಗುತ್ತದೆ ಎನ್ನುವ ಬಗ್ಗೆ ಗಮನಸೆಳೆಯಲಾಯಿತು. ಪಿಎಸೈ ಟಿ.ಜಿ.ನೆಲವಾಸಿ, ಪುರಸಭೆ ಸದಸ್ಯರಾದ ಭಾರತಿ ಪಾಟೀಲ, ಸದಾಶಿವ ಮಾಗಿ, ಪುರಸಭೆ ಮುಖ್ಯಾಧಿಕಾರಿಣಿ ಭಾರತಿ ಮಾಡಗಿ, ಗಣ್ಯರಾದ ಆರ್.ಬಿ.ಪಾಟೀಲ ವಕೀಲರು, ಸೋಮನಗೌಡ ಪಾಟೀಲ ನಡಹಳ್ಳಿ, ಬಿ.ಜಿ.ಜಗ್ಗಲ್, ಬಡಾವಣೆ ಪ್ರಮುಖರು ಪಾಲ್ಗೊಂಡಿದ್ದರು. ಬಸವರಾಜ ನಂದಿಕೇಶ್ವರಮಠ ಸ್ವಾಗತಿಸಿ ನಿರೂಪಿಸಿದರು.
ವರದಿ:ಸಾಗರ ಉಕ್ಕಲಿ ವಿಜಯಪುರ
ವಿವಿಧ ಬೇಡಿಕೆ ಈಡೇರಿಸುವಂತೆ ಅಕ್ಷರ ದಾಸೋಹ ನೌಕರರಿಂದ ತಹಶಿಲ್ದಾರರಿಗೆ ಮನವಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ
ರಾಜ್ಯ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅಕ್ಷರ ದಾಸೋಹ ನೌಕರರ ಕನಿಷ್ಠ
ವೇತನದಲ್ಲಿ ಹೆಚ್ಚಳ ಸೇರಿದಂತೆ 13 ಪ್ರಮುಖ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಡಿ.26ರಂದು ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಆದ್ಧರಿಂದ ಅಂದಿನಿಂದ ಮುಷ್ಕರ ಮುಗಿಯುವತನ ಯಾವುದೇ ಶಾಲೆಯಲ್ಲಿ ಬಿಸಿಯೂಟ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಮುದ್ದೇಬಿಹಾಳ ತಾಲೂಕು ಘಟಕದ ಅಧ್ಯಕ್ಷೆ ಸುವರ್ಣ ರಾಠೋಡ, ಕಾರ್ಯದರ್ಶಿ ಫಾತಿಮಾ ಹಲಕಾವಟಗಿ, ಖಜಾಂಚಿ ಭೀಮಕ್ಕ ದಾಸರ ತಿಳಿಸಿದ್ದಾರೆ.
ಈ ಕುರಿತು ಇಲ್ಲಿನ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮುಷ್ಕರ ನಡೆಸುವ ಮತ್ತು ಬೇಡಿಕೆಗಳ ವಿವರ ಇರುವ ತಿಳಿವಳಿಕೆ ಪತ್ರದ ಪ್ರತ್ಯೇಕ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 1.18 ಲಕ್ಷ ಮಹಿಳೆಯರು ಮೂಲಸೌಕರ್ಯ, ಕನಿಷ್ಠ ಕೂಲಿ ಇಲ್ಲದೆ 18-19 ವರ್ಷಗಳಿಂದ ಗಾಣದ ಎತ್ತಿನಂತೆ ಈ ಯೋಜನೆಯಲ್ಲಿ ದುಡಿಯುತ್ತಿದ್ದಾರೆ. ಹಿಂದಿನ ಸರ್ಕಾರ ಈ ನೌಕರರ ಬೇಡಿಕೆ ಈಡೇರಿಸುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಬೆಳಿಗ್ಗೆ 9 ರಿಂದ ಮದ್ಯಾಹ್ನ 3ರವರೆಗೆ ನಿತ್ಯ 6 ಗಂಟೆ ಕೆಲಸ ಮಾಡಿದರೂ 4 ಗಂಟೆ ಎಂದು ನಮೂದಿಸಿ ಶೋಷಣೆ ನಡೆಸಲಾಗುತ್ತಿದೆ. ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಪೂರ್ವ ಮಾಹಿತಿ ಇಲ್ಲದೆ ಅಲ್ಲಿನ ಶಾಲೆಗಳ ಬಿಸಿಯೂಟ ಯೋಜನೆಯನ್ನು ಇಸ್ಕಾನ್ ಅಕ್ಷರ ಪಾತ್ರೆಗೆ ವಹಿಸಿಕೊಟ್ಟಿದ್ದಾರೆ. ಸರ್ಕಾರಗಳು ಬಡ ಮಹಿಳೆಯರ ಜೀವದ ಜೊತೆ ಚಲ್ಲಾಟ ಆಡುವ ಕೆಲಸ ಮಾಡುತ್ತಿವೆ. ಮುಷ್ಕರದ ವೇಳೆ ಇವೆಲ್ಲವನ್ನೂ ಪ್ರತಿಭಟಿಸಲಾಗುತ್ತದೆ. ಜೊತೆಗೆ 13 ಬೇಡಿಕೆಗಳ ಈಡೇರಿಕೆಗೂ ಒತ್ತಾಯಿಸಲಾಗುತ್ತದೆ. ಈ ಬಾರಿ ಸರ್ಕಾರ ತೀರ್ಮಾನ ಕೈಕೊಳ್ಳುವವರೆಗೂ ಮುಷ್ಕರ ಕೈಬಿಡದಿರಲು ಸಂಘದ ಕೇಂದ್ರ ಘಟಕ ತೀರ್ಮಾನಿಸಿದೆ ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಲಮಾಣಿ, ಯಲ್ಲವ್ವ ಲಮಾಣಿ, ಅಮೀನಾ ಇಸ್ಲಾಂಪುರ, ಮಲ್ಲಣ್ಣ ಪರಮಣ್ಣವರ್, ರತ್ನಾ ಸಜ್ಜನ, ಜಗದೇವಿ ಹೊಕ್ರಾಣಿ, ಕವಿತಾ ಚವ್ಹಾಣ, ಹಣಮವ್ವ ಬಿಸಲದಿನ್ನಿ, ಗಿರಿಜಾ ಅಂಗಡಿ, ಮಲ್ಲಮ್ಮ ಗುರಡ್ಡಿ, ಶ್ವೇತಾ ಹಂಗರಗಿ, ಉಮಾ ಝಳಕಿ, ಬಸಮ್ಮ ಬೆಲವಂತರಕಂಟಿ, ಜಯಾ ಬಿದರಕುಂದಿ, ಸಿದ್ದಮ್ಮ ಜಲಪುರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಬಿಸಿಯೂಟ ನೌಕರರು ಮನವಿ ಸಲ್ಲಿಸುವಾಗ ಇದ್ದರು.
ವರದಿ:ಸಾಗರ ಉಕ್ಕಲಿ ವಿಜಯಪುರ
ನೂತನ ಪುರಸಭೆ ಮುಖ್ಯಾಧಿಕಾರಿಯಾಗಿ ಜಿ ಎಚ್ ಕಾಸೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ
ಮುದ್ದೇಬಿಹಾಳ ಪುರಸಭೆ ನೂತನ ಮುಖ್ಯಾಧಿಕಾರಿಯಾಗಿ ಸವದತ್ತಿ ಪುರಸಭೆಯ ಮುಖ್ಯಾಧಿಕಾರಿ “ಮೂಲ ಹುದ್ದೆ ಸಮುದಾಯ ಸಂಘಟಕ” ಜಿ.ಎಚ್.ಕಾಸೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನೂ ಜಿ ಎಸ್ ಕಾಸೆ ಅವರು ನಾಳೆ ಹುದ್ದೆಗೆ ಹಾಜರಾಗುವ ಸಂಭವವಿದೆ.
ವರದಿ:ಸಾಗರ ಉಕ್ಕಲಿ
ಗೆಲುವಿನ ಬಳಿಕ ಮೊದಲ ಬಾರಿ ಮಾಧ್ಯಮದ ಮುಂದೆ ಮಾತನಾಡಿದ ಶಾಸಕ ಮಹೇಶ ಕುಮಠಳ್ಳಿ
ಬೆಳಗಾವಿ ಜಿಲ್ಲೆಯ ಅಥಣಿ ವರದಿ
ಚುನಾವಣೆ ಫಲಿತಾಂಶ ಬರುತ್ತಿದ್ದಂತೆಯೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಇಂದು ಅಥಣಿ ಮತಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದು ಅಥಣಿ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಭಿಂದನೆಯ ಮಹಾಪೂರ ಹರಿಸಿದರು.
ಅಥಣಿ ಉಪ ಚುನಾವಣೆ ಉಸ್ತುವಾರಿಯಾಗಿದ್ದ ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಕುಟುಂಬ ಸಮೇತ ಆಗಮಿಸಿ ಮಹೇಶ ಕುಮಠಳ್ಳಿ ಅವರನ್ನ ಸತ್ಕರಿಸಿದರು
ನಂತರ ಮಾದ್ಯಮ ದವರೊಂದಿಗೆ ಮಾತನಾಡಿದ ಅವರು ಇನ್ನು ಮುಂದೆ ಅಥಣಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ಆದ್ಯತೆ ಕೊಡುವದಾಗಿ ಹೇಳಿದ ಮಹೇಶ ಕುಮಠಳ್ಳಿ ಸವಳು ಜವಳು,ನೀರಾವರಿ ಸೇರಿದಂತೆ ಅಥಣಿ ತಾಲೂಕಿನ ಸಮಗ್ರ ಅಭಿವೃದ್ಧಿ ನನ್ನ ಧ್ಯೇಯ ಎಂದರು
ಸದ್ಯ ಗೆದ್ದ ಅಬ್ಯರ್ಥಿಗಳನ್ನು ಬೆಂಗಳೂರಿಗೆ ಕರೆದಿದ್ದಾರೆ ಇಂದು ಹೊರಡಬೇಕಿದೆ ಎಂದಷ್ಟೇ ಹೇಳುವ ಮೂಲಕ ಯಾವ ಸಚೀವ ಸ್ಥಾನದ ಆಕಾಂಕ್ಷಿ ಎಂದು ಹೇಳದೆ ಜಾರಿಕೊಂಡರಲ್ಲದೆ ರಮೆಶ್ ಜಾರಕಿಹೋಳಿ ಅವರು ನೀರಾವರಿ ಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದ ಕುಮಠಳ್ಳಿ ಅದರಿಂದ ಅಥಣಿ ತಾಲೂಕಿನ ಹಲವು ಕಾಮಗಾರಿಗಳಿಗೆ ಆದ್ಯತೆ ಸಿಗಲಿದೆ ಎಂದರು.
ವರದಿ:ಸಚೀನ ಕಾಂಬಳೆ
ಶ್ರೀಮಂತ ಪಾಟೀಲ ಗೆಲುವಿಗೆ ಸಂಭ್ರಮೀಸಿದ ಅಭಿಮಾನಿಗಳು
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಸುದ್ದಿ
ಉಪಚುನಾವಣಾ ಹಿನ್ನೆಲೆ ದಿಗ್ವಿಜಯ ಸಾಧಿಸಿ ಸ್ವಕೇತ್ರಕ್ಕೆ ಆಗಮಿಸಬೇಕಾಗಿದ್ದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಬರದೇ ಇದ್ದ ಸಮಯದಲ್ಲಿ ಮಗ ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಕಾಗವಾಡದಲ್ಲಿ ಅದ್ದೂರಿಯಿಂದ ಅಭಿಮಾನಿಗಳು ಸ್ವಾಗತಿಸಿದರು.
ಕಾಗವಾಡದ ಚನ್ನಮ್ಮ ಸರ್ಕಲ್ ನಲ್ಲಿ ಶ್ರೀಮಂತ ಪಾಟೀಲ್ ಪ್ಲೇಕ್ಸಗಳು ರಾರಾಜುಸುತ್ತಿವೆ.
ಮುಂಜಾನೆಯಿಂದ ಕಾದು ಕುಳಿತಿದ್ದ
ಕಾರ್ಯಕರ್ತರು ಶ್ರೀನಿವಾಸ ಪಾಟೀಲ್ ಆಗಮಿಸುತ್ತಿದ್ದಂತೆ ಅಭಿಮಾನಗಳ ಜೈಕಾರ ಕೂಗು ಜೋರಾಯಿತು.
ಚನ್ನಮ್ಮ ಸರ್ಕಲ್ ನಲ್ಲಿ ಸುಮಾರು 6 ಗಂಟೆಯಿಂದ ಶ್ರೀಮಂತ ಪಾಟೀಲ್ ಗಾಗಿ ಕಾದು ಕುಳಿತಿದ್ದ ಕಾರ್ಯಕರ್ತರು
ಏಳು ಗಂಟೆಗೆ ಆಗಮಿಸಿ ವಿಜಯೋತ್ಸವದಲ್ಲಿ ಭಾಗಿಯಾದ ಶ್ರೀನಿವಾಸ ಪಾಟೀಲ್
ನಗರದ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದ ಶ್ರೀಮಂತ ಪಾಟೀಲ್ ಮಗ ಶ್ರೀನಿವಾಸ ಪಾಟೀಲ್
ಮಾಧ್ಯಮದವರ ಜೊತೆ ಮಾತನಾಡಿದ ಶ್ರೀನಿವಾಸ ಪಾಟೀಲ್ ನನ್ನ ತಂದೆ ಗೆಲುವು ಪ್ರತಿಯೊಬ್ಬ ಮತದಾರರ ಗೆಲುವು ನಮ್ಮ ತಂದೆಯವರ ಗೆಲುವಿಗೆ ಶ್ರಮಿಸಿದ ಮಾನ್ಯ ಸಿಎಂ ಯಡಿಯೂರಪ್ಪ ,ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಅನೆಕ ನಾಯಕರುಗಕಳಿಗೆ ಧನ್ಯವಾದ ಅರ್ಪಿಸಿದರು.
ನಮ್ಮ ತಂದೆಗೆ ಮಂತ್ರಿ ಪದವಿ ಅವಶ್ಯಕತೆ ಇಲ್ಲ ಅವರು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿ ಜನಪರ ಕೆಲಸ ಮಾಡುವದಾಗಿದೆ.ಮುಂದಿನ ತೀರ್ಮಾನ ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತೊ ಅದಕ್ಕೆ ನಾವು ಬದ್ದ ಎಂದು ತಿಳಿಸಿದರು.
ವರದಿ:ಸಚೀನ ಕಾಂಬಳೆ
ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ವಿಜಯೋತ್ಸವ ಶಾಸಕ ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ
ವಿಜಯಪುರ:
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ
ಉಪ ಚುನಾವಣೆಯಲ್ಲಿ 12 ಸ್ಥಾನಗಳನ್ನು ಬಾಚಿಕೊಂಡು ಭರ್ಜರಿ ಗೆಲುವು ಸಾದಿಸಿದ ಹಿನ್ನೆಲೆ ಇಲ್ಲಿನ ಬಿಜೆಪಿ ಧುರೀಣರು, ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಈ ವೇಳೆ ಯುವ ಮುಖಂಡರು ಮಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೌದ್ ಹುಲಿಯಾ, ರಾಜಾ ಹುಲಿಯಾ, ಯಡಿಯೂರಪ್ಪಾಗೆ ಜೈ, ಎ.ಎಸ್.ಪಾಟೀಲ ನಡಹಳ್ಳಿಗೆ ಜೈ, ಬಿಜೆಪಿಗೆ ಜೈ ಎಂದೆಲ್ಲ ಸಂಬೋ„ಸಿ ಜಯಘೋಷ ಮಾಡಿದರು. ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಿ ರಮೇಶ ಜಾರಕಿಹೊಳಿ ಗೆಲುವಿಗೆ ಹಗಲಿರುಳು ಶ್ರಮಿಸಿದ ಸ್ಥಳೀಯ ಎ.ಎಸ್.ಪಾಟೀಲ ನಡಹಳ್ಳಿ ಅವರ ಅರ್ಪಣಾ ಮನೋಭಾವವನ್ನು ಕೊಂಡಾಡಿದರು.
ಬಸವೇಶ್ವರ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಹಿರಿಯ ಧುರೀಣರಾದ ಪ್ರಭು ಕಡಿ, ಶಿವಶಂಕರಗೌಡ ಹಿರೇಗೌಡರ, ಮಲಕೇಂದ್ರಗೌಡ ಪಾಟೀಲ, ರಾಜೇಂದ್ರ ರಾಯಗೊಂಡ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಸೇರಿದಂತೆ ಹಲವರು ಮಾತನಾಡಿ ಮತದಾರರು ಬಿಜೆಪಿಯನ್ನು, ಯಡಿಯೂರಪ್ಪ ಅವರನ್ನು ಆಶಿರ್ವದಿಸಿ ಪೂರ್ಣ ಬಹುಮತದೊಂದಿಗೆ ಸರ್ಕಾರ ನಡೆಸಲು ಅವಕಾಶ ಮಾಡಿಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಧೂಳಿಪಟ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಹಂಕಾರವನ್ನು ಅಡಗಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಪ್ರಶ್ನಾತೀತ ನಾಯಕರನ್ನಾಗಿ ಆಶಿರ್ವದಿಸಿದ್ದಾರೆ ಎಂದು ಹರ್ಷಪಟ್ಟರು. ಸೋಮನಗೌಡ ಪಾಟೀಲ ನಡಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಕಾಶಿಬಾಯಿ ರಾಂಪೂರ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಬಸಪ್ಪ ತಟ್ಟಿ, ಸದಾಶಿವ ಮಾಗಿ, ಅಶೋಕ ವನಹಳ್ಳಿ, ಮಂಡಲ ಅಧ್ಯಕ್ಷ ಎಂ.ಡಿ.ಕುಂಬಾರ ವಕೀಲರು, ಪ್ರಮುಖರಾದ ಎಸ್.ಎಚ್.ಲೊಟಗೇರಿ ವಕೀಲರು, ಬಿ.ಪಿ.ಕುಲಕರ್ಣಿ, ಶರಣು ಬೂದಿಹಾಳಮಠ, ರಾಜಶೇಖರ ಹೊಳಿ,ಅಶೋಕ ನೇಬಗೇರಿ, ಸಂಗಮೇಶ ವಾಲಿಕಾರ, ಮಂಜು ರತ್ನಾಕರ, ಸಂಜು ಬಾಗೇವಾಡಿ, ಶಿವು ಕನ್ನೊಳ್ಳಿ, ಪುನೀತ್ ಹಿಪ್ಪರಗಿ, ಬಸವರಾಜ ಗುಳಬಾಳ, ರಾಜು ಹೊನ್ನುಟಗಿ, ಸಂಜು ಓಸ್ವಾಲ್, ಜಗದೀಶ ಪಂಪಣ್ಣವರ್, ಪ್ರಭು ಪವಾರ, ಸಂಗಪ್ಪ ಅಬ್ಯಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ನಡಹಳ್ಳಿಗೆ ಸಚಿವ ಸ್ಥಾನಕ್ಕೆ ಆಗ್ರಹ:
ಈ ಸಂದರ್ಭ ಮಾತನಾಡಿದ ಯುವ ಮುಖಂಡರಾದ ಶಿವು ಕನ್ನೊಳ್ಳಿ, ಅಶೋಕ ವನಹಳ್ಳಿ ಸೇರಿದಂತೆ ಹಲವರು ಗೋಕಾಕ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಹಲವು ದಿನ ಅಲ್ಲೇ ಬೀಡುಬಿಟ್ಟು, ಹಗಲಿರುಳು ಪ್ರಚಾರ ಮಾಡಿ, ರಮೇಶ ಜಾರಕಿಹೊಳಿ ಅವರ ಬಹುಮತದ ಗೆಲುವಿಗೆ ಕಾರಣರಾಗಿರುವ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಅವರ ಸೇವೆ, ಶ್ರಮ, ಪಕ್ಷ ನಿಷ್ಠೆ, ಬುದ್ದಿಮತ್ತೆ ಪರಿಗಣಿಸಿ ಈ ಬಾರಿ ಸಚಿವ ಸ್ಥಾನ ನೀಡಬೇಕು. ಇದರಿಂದ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಒತ್ತಾಯಿಸಿದರು. ಈ ಬಗ್ಗೆ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರು ಸೇರಿದಂತೆ ಹಲವು ವರಿಷ್ಠರಿಗೆ ಶೀಘ್ರ ಪತ್ರ ಬರೆದು ಬಿನ್ನವಿಸಿಕೊಳ್ಳುವುದಾಗಿ ತಿಳಿಸಿದರು.
ವರದಿ:ಸಾಗರ ಉಕ್ಕಲಿ
ಗ್ರಾಮ ಪಂಚಾಯತ ವತಿಯಿಂದ ಗ್ರಾಮ ಸಭೆ
ವಿಜಯಪುರ ಜಿಲ್ಲೆಯ ಸುದ್ದಿ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳೊಂದಿಗೆ ಗ್ರಾಮ ಸಭೆಯನ್ನು ಜೋತಿ ಬೆಳಗಿಸುವುದರ ಮುಖಾಂತರ ಉದ್ಘಾಟನೆ ಮಾಡಿದರು. ಶಾಲಾ ಮಕ್ಕಳಿಗೆ ತಮ್ಮಹಕ್ಕುಗಳ ಬಗ್ಗೆ ತಿಳಿಸಿ ಹೇಳಲಾಯಿತು,ಮನೆಯಲ್ಲಿ ಮುಖ್ಯವಾಗಿ ಶೌಚಾಲಯನ್ನು ಕಟ್ಟಲು,ಶಾಲೆಯಲ್ಲಿ ಎನೆ ಸಮಸ್ಯೆ ಇದ್ದರು ನಮ್ಮ ಗಮನಕ್ಕೆ ತರಬೇಕು ಎಂದು ಹೇಳಿದರು,ಶಿಕ್ಷಣದ ಗುಣಮಟ್ಟದ ಬಗ್ಗೆ ಪರಿಸಿಲಿಸಿ ,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕರು ನನಗೆ ಸನ್ಮಾನಿಸಿ ಗೌರವಿಸಿದರು,ಮಕ್ಕಳ ಹಕ್ಕುಗಳ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳು ಮಾತನಾಡಿದರು,ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕಮಲಾಭಾಯಿ ಯಮನೂರಿ ಲಮಾಣಿ ಯವರು ವಹಿಸಿದ್ದರು,ಸುಮಾರು ೪ ಗ್ರಾಮಗಳಿಂದ ಆಶಾ ಕಾರ್ಯಕರ್ತೆಯರು,ಮಹಿಳಾ ಸಹಾಯಕಿರು,ಅಂಗನವಾಡಿ ಕಾರ್ಯಕರ್ತೆರು,ಭಾಗವಹಿಸಿದ್ದರು,ಮುಖ್ಯ ಗುರುಗಳು,ಶಿಕ್ಷಕರು ಉಪಸ್ಥಿತಿ ಇದ್ದರು,ಅಧಿಕಾರಿಗಳ ಜೊತೆಗೂಡಿ ವಿಧ್ಯಾರ್ಥಿಗಳ ಜೋತೆಗೆ ಮಧ್ಯಾಹ್ನದ ಊಟ ಮಾಡಿದರು,ಪೌಷ್ಟಿಕ ಆಹಾರದ ಬಗ್ಗೆ, ಬಿಸಿ ಊಟದ ಬಗ್ಗೆ, ಶಾಲೆಯಲ್ಲಿ ಕುಡಿಯುವ ನೀರಿನ ಬಗ್ಗೆ, ಮೂಲ ಭೂತ ಸೌಲಭ್ಯದ, ಶೌಚಾಲಯದ ಬಗ್ಗೆ ಪರಿಸಿಲಿಸಿ ಮುಖ್ಯಗುರುಗಳಿಂದ ವರದಿಯನ್ನು ಪಡೆಯಲಾಯಿತು.ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಹಾಗೂ ಶಾಲಾ ಸುತ್ತಲು ಕಾಂಪೌಂಡ್ ಕಟ್ಟಿಸಲು ಮನವಿ ಮಾಡಿದರು.ಶಾಲಾ ಅಭಿವೃದ್ಧಿಗೆ ನಮ್ಮಿಂದ ಸಾಧ್ಯವಾದಷ್ಟು ಕೆಲಸ ಮಾಡಲು ನಾನು ಸಿದ್ದನಿದ್ದೇನೆ,ಅದಕ್ಕೆ ಪಂಚಾಯತ್ ಅಧಿಕಾರಿಗಳು ಸಂಪೂರ್ಣ ಸಾತನೀಡುವ ಭರವಸೆ ನಿಡಿದ್ದಾರೆ ನಮ್ಮೂರ ಶಾಲೆಯಲ್ಲಿ ನನ್ನ ಪ್ರಥಮ ಸಭೆ ಇದಾಗಿದ್ದು ತುಂಬಾ ಸಂತೋಷ ತಂದು ಕೊಟ್ಟಿತು, ಊರಿನ ಅಭಿವೃದ್ಧಿ ಮಾಡಲು ನಾನು ಸದಾ ಸಿದ್ದನಾಗಿದ್ದೇನೆ..ಕಾರ್ಯಕ್ರಮ ದಲ್ಲಿ ಭಾಗವಹಿಸಿ ಯಶಸ್ವಿಯಾಗಿ ನೆರವೆರಿಸಲು ಸಹಾಕಾರ ನೀಡಿದ ಮುಖ್ಯಗುರುಗಳಿಗೆ,ಶಿಕ್ಷಕರಿಗೆ,ಆಡಳಿತಮಂಡಳಿಗೆ,ಮುದ್ದು ವಿದ್ಯಾರ್ಥಿಗಳಿಗೆ ತುಂಬಾ ಧನ್ಯವಾದಗಳು ಎಂದು ಗ್ರಾಮ ಪಂಚಾಯತ ಸದಸ್ಯ ಶ್ರೀಶೈಲ ಹೂಗಾರ ಹೇಳಿದರು.
ವರದಿ:ಸಾಗರ ಉಕ್ಕಲಿ
ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದರಾಮಯ್ಯನವರು ಶಾಸಕಾಂಗ ನಾಯಕ ಸ್ಥಾನಕ್ಕೆ ರಾಜೀನಾಮೆ
ರಾಜ್ಯ ಸುದ್ದಿ-ಬೆಂಗಳೂರು
ಕರ್ನಾಟಕ ರಾಜ್ಯದ ಜಿದ್ದಾಜಿದ್ದಿನ ಫಲಿತಾಂಶ ಹೊರ ಬಂದ ಹಿನ್ನೆಲೆ ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಯಾ ಕ್ಷೇತ್ರದ ಜನರು ನೀಡಿರುವ ತೀರ್ಪನ್ನು ನಾನು ಗೌರವಿಸಿ ಸ್ವಾಗತಿಸಿದ್ದೇನೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಮುಖಂಡ ಸಿದ್ದರಾಮಯ್ಯನವರು ತಮ್ಮ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಪ್ರಜಾಪ್ರಭುತ್ವ ಇರುವಿಕೆಯ ದೃಷ್ಟಿಯಿಂದ ನಮ್ಮ ಪಕ್ಷವನ್ನು ಬಿಟ್ಟು ಹೋಗಿ ಕುದುರೆ ವ್ಯಾಪಾರಕ್ಕೆ ಒಳಗಾದವರಿಗೆ ಕರ್ನಾಟಕದ ಜನತೆ ಅವರಿಗೆ ಪಾಠ ಕಲಿಸುತ್ತಾರೆ ಎಂದು ನಿರೀಕ್ಷೆಯಲ್ಲಿ ಇದ್ದೆ ಆದರೆ ನನ್ನ ನಿರೀಕ್ಷೆ ಹುಸಿಯಾಗಿದೆ ಎಂದು ನೋವಿನಿಂದ ಸಿದ್ದರಾಮಯ್ಯ ಮಾತನಾಡಿದರು.
ಇಂತಹ ಜನಗಳ ಮಧ್ಯೆ ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಜೆಗಳ ಹಿತವನ್ನು ಕಾಪಾಡಬೇಕೆಂದು ಮಾಡಿದ್ದೆ.ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ ನನ್ನ ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ರಾಜೀನಾಮನೆ ನೀಡಿದ್ದೇನೆ.
ರಾಜೀನಾಮೆಯ ಒಂದು ಪ್ರತಿಯನ್ನು ಎಐಸಿಸಿಗೆ ಹಾಗೂ ಕೆಪಿಸಿಸಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿವೇಣುಗೋಪಾಲ್ ಅವರಿಗೆ ಈಗಾಗಲೇ ಸಲ್ಲಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹೇಳಿದರು.
ಕರ್ನಾಟಕದ ರಾಜ್ಯದ ಉಪ ಚುನಾವಣೆ ಫಲಿತಾಂಶ
ರಾಜ್ಯ ಸುದ್ದಿ-ಬೆಂಗಳೂರು ಕರ್ನಾಟಕ ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆದ ರಾಜ್ಯ ವಿಧಾನಸಭೆಯ ಕ್ಷೇತ್ರಗಳ ಉಪಚುನಾವನೆಯ ಫಲಿತಾಂಶ ಮತ ಎಣಿಕೆ ಕಾರ್ಯ ಮುಗಿದಿದೆ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ರಾಜ್ಯದಲ್ಲಿ ಬಿಜೆಪಿ ಪಾಲಿಗೆ ನಿರ್ಣಾಯಕ ಚುನಾವಣೆಯಾಗಿದ್ದ ಉಪಚುನಾವಣೆ ಫಲಿತಾಂಶದಲ್ಲಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಮುಖಭಂಗವಾಗಿದ್ದು, ಕೇವಲ 2 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದೆ. ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ.
15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?
ಗೋಕಾಕ್ – ರಮೇಶ್ ಜಾರಕಿಹೊಳಿ (ಬಿಜೆಪಿ)ರಾಣೆಬೆನ್ನೂರು-ಅರುಣ್ ಕುಮಾರ್ ಪೂಜಾರ (ಬಿಜೆಪಿ)ವಿಜಯನಗರ- ಆನಂದ್ ಸಿಂಗ್ (ಬಿಜಪಿ)ಕೆ.ಆರ್.ಪುರ-ಭೈರತಿ ಬಸವರಾಜ (ಬಿಜೆಪಿ)ಯಶವಂತಪುರ-ಸೋಮಶೇಖರ್ (ಬಿಜೆಪಿ)ಕೆ.ಆರ್. ಪೇಟೆ-ನಾರಾಯಣಗೌಡ (ಬಿಜೆಪಿ)ಮಹಾಲಕ್ಷ್ಮೀ ಲೇಔಟ್ -ಗೋಪಾಲಯ್ಯ (ಬಿಜೆಪಿ)ಚಿಕ್ಕಬಳ್ಳಾಪುರ- ಕೆ. ಸುಧಾಕರ್ (ಬಿಜೆಪಿ)ಅಥಣಿ-ಮಹೇಶ್ ಕುಮಟಳ್ಳಿ (ಬಿಜೆಪಿ)ಹಿರೇಕೆರೂರು -ಬಿ.ಸಿ. ಪಾಟೀಲ್ (ಬಿಜೆಪಿ)ಕಾಗವಾಡ-ಶ್ರೀಮಂತ ಪಾಟೀಲ್ (ಬಿಜೆಪಿ)ಯಲ್ಲಾಪುರ -ಶಿವರಾಜ್ ಹೆಬ್ಬಾರ್ (ಬಿಜೆಪಿ)ಶಿವಾಜಿನಗರ -ರಿಜ್ವಾನ್ ಅರ್ಷಾದ್ (ಕಾಂಗ್ರೆಸ್)ಹುಣಸೂರು-ಹೆಚ್.ಪಿ.ಮಂಜುನಾಥ್ (ಕಾಂಗ್ರೆಸ್)ಹೊಸಕೋಟೆ -ಶರತ್ ಬಚ್ಚೇಗೌಡ (ಪಕ್ಷೇತರ ಅಭ್ಯರ್ಥಿ)

ಒಟ್ಟಾರೆಯಾಗಿ ರಾಜ್ಯದ ಹದಿನೈದು ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.











