ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಹಣದ ದಿನದಂದು ಮೂಢನಂಬಿಕೆ ಆಚರಣೆ. ಅಂಗವಿಕಲತೆ ಹೊಂದಿರುವ 24 ವರ್ಷದ ಪಪ್ಪು ಮುಲ್ಲಾ ಎಂಬ ಯುವಕನನ್ನು ಅಂಗವೈಕಲ್ಯ ದೂರ ವಾಗುವುದು ಎಂಬ ಮೂಢನಂಬಿಕೆಯಿಂದ ತಿಪ್ಪೇಯಲ್ಲಿ ಹೂತಿರುವ ಕುಟುಂಬಸ್ಥರು ಈ ದೃಶ್ಯ ತಾವು ಕೂಡ ನೋಡಬಹುದು ಆಧುನಿಕ ಯುಗದಲ್ಲಿ ಇಂತಹ ಘಟನೆ ಸಂಭವಿಸುವುದು ನೋಡಿದರೆ ಇನ್ನು ಭಾರತದಲ್ಲಿ ಮೂಢನಂಬಿಕೆ ಇದೆ ಎಂದು ತಿಳಿಯುತ್ತದೆ. ವರದಿ:ಸಾಗರ ಉಕ್ಕಲಿ
Author Archives: Royal TV
ಖಾಸ್ಗತ ಮಠದಲ್ಲಿ ಶರಣರ ಮಂಟಪ ವಿನೂತನ ಕಾರ್ಯಕ್ರಮ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಹುಬ್ಬಳ್ಳಿ ಸಿದ್ದಾರೂಡರ ಪುರಾಣ ನಡೆಯುತ್ತಿದ್ದು ಇದರ ನಿಮಿತ್ತ “ಶರಣರ ಮಂಟಪ” ಎನ್ನುವ ಕಾರ್ಯಕ್ರಮ ಸಾಧನ ಮಹಿಳಾ ಒಕ್ಕೂಟ ನೇತೃತ್ವದಲ್ಲಿ ಆಯೋಜಿಸಿದ್ದರು. ಸಿದ್ಧಾರೂಢರು ಖಾಸ್ಗತ ಶಿವಯೋಗಿಗಳು ಶರೀಫರು ಗರಗದ ಮಡಿವಾಳಪ್ಪನವರು ಜಡೆ ಸಿದ್ದೇಶ್ವರರು ಅಥಣಿ ಮುರುಗೇಂದ್ರ ಯೋಗಿಗಳು ಹೀಗೆ ಮಹಾನ್ ಶರಣರ ವೇಷಧರಿಸಿದ ಮಕ್ಕಳು ಕಾರ್ಯಕ್ರಮದಲ್ಲಿ ಮೆರಗು ತಂದರು. ಈ ಸಂದರ್ಭದಲ್ಲಿ ಗಿರಿಜಾ ಕಡಿ, ಶಶಿಕಲಾ ಕೆಂಧೂಳಿ ಬಸಮ್ಮ ಕೋಳೂರು, ರತ್ನಾಬಾಯಿ ದಡ್ಡಿ, ಸರೋಜಾ ಕೋರಿ,ರೇಣುಕಾ ಹಳ್ಳೂರ,ಕಲಾವತಿ ಬಡಿಗೇರ,Continue reading “ಖಾಸ್ಗತ ಮಠದಲ್ಲಿ ಶರಣರ ಮಂಟಪ ವಿನೂತನ ಕಾರ್ಯಕ್ರಮ”
ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಆಯುಷ್ಮಾನ ಕಾರ್ಡ ವಿತರಣೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಸಂಸ್ಥೆಯ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮೀಣ ಹೆಣ್ಣು ಮಕ್ಕಳಿಗೆ ಆರೋಗ್ಯದ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಆಯುಷ್ಮಾನ ಕಾರ್ಡ್ ಗಳನ್ನು ಸಂಘದ ಮಹಿಳಾ ಸದಸ್ಯರಿಗೆ ಉಚಿತವಾಗಿ ನೀಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉದ್ಘಾಟನೆ ನೇರವೆರಿಸಿದ ತಾಲೂಕ ಪಂಚಾಯತ್ ಉಪಾದ್ಯಕ್ಷ ಮಂಜುನಾಥಗೌಡ ಪಾಟೀಲ ಧರ್ಮಸ್ಥಳ ಸಂಸ್ಥೆಯು ಸಮಾಜದ ಕೊನೆಯ ಪ್ರಜೆಗೂ ಮುಟ್ಟುವಂತ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ದಾರಿದೀಪವಾಗಿದೆ. ಇದುContinue reading “ಧರ್ಮಸ್ಥಳ ಸಂಸ್ಥೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಆಯುಷ್ಮಾನ ಕಾರ್ಡ ವಿತರಣೆ”
ಭಾರತೀಯ ಬಂಜಾರ ಸಂಘಟನಾ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ
ಭಾರತೀಯ ಬಂಜಾರ ಸಂಘಟನಾ ಸಮಿತಿ(ರಿ) ಬೆಂಗಳೂರು ವತಿಯಿಂದ ವಿಚಾರ ಸಂಕಿರಣ: ಬೆಂಗಳೂರಿನ ನಯನ ರಂಗ ಮಂದಿರದ ಕನ್ನಡ ಭವನದಲ್ಲಿ ಭಾರತೀಯ ಬಂಜಾರಾ ಸೇವಾ ಸಂಘಟನೆ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಂಡರು. ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬಂಜಾರಾ ಸಮಾಜದ ಸ್ವಾಮೀಜಿಗಳು. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಮಾತನಾಡಿ: ಬಂಜಾರ ಸಮಾಜದ ವಿರುದ್ದ ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯ ಕ್ಕೆ ಹಾಗೊ ಸಮಾಜದವರು ಮತಾಂತರ ಗೊಳ್ಳುತ್ತಿರುವ ಹಾಗೂ ಗುಳೇ ಹೋಗುವ ಕುರಿತು ಮಾತನಾಡಿದರು. ಅಲ್ಲದೆ ಕಲಾಪದಲ್ಲಿContinue reading “ಭಾರತೀಯ ಬಂಜಾರ ಸಂಘಟನಾ ಸಮಿತಿ ವತಿಯಿಂದ ರಾಜ್ಯ ಮಟ್ಟದ ವಿಚಾರ ಸಂಕಿರಣ”
ವಿದ್ಯುತ್ ಶಾಕದಿಂದ ಮೃತಪಟ್ಟಿದ್ದ ಎತ್ತುಗಳು ಹೆಸ್ಕಾ ಇಲಾಖೆಯಿಂದ ಪರಿಹಾರ
ವಿಜಯಪುರ ಜಿಲ್ಲೆಯ ಸುದ್ದಿ: ಮುದ್ದೇಬಿಹಾಳ ತಾಲ್ಲೂಕಿನ ಹರಿಂದ್ರಾಳ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಶಾಕ್ ತಗುಲಿ ಜೋಡೆತ್ತುಗಳು ಮೃತಪಟ್ಟಿದ್ದವು.ಅದಕ್ಕೆ ಸರ್ಕಾರದ ಪರಿಹಾರ ನೀಡಬೇಕಾಗಿತ್ತು. ಕಾರಣ ಇಂದು ಹೆಸ್ಕಾಂ AEE ಹಾದಿಮನಿ ಎತ್ತುಗಳಿಗೆ ಸಂಬಂಧಿಸಿದ ರೈತ ಸಂಗಪ್ಪ ಬಿರಾದಾರ ರೈತನಿಗೆ ಸುಮಾರು 90 ಸಾವಿರದ ಚೆಕ್ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ಮುದ್ದೇಬಿಹಾಳ ಶಾಸಕರ ಸಹೋದರ ಸೋಮನಗೌಡ ಪಾಟೀಲ ನಡಹಳ್ಳಿ ಬಾ.ಜ.ಪ ಮಂಡಲದ ನೂತನ ಅಧ್ಯಕ್ಷರಾದ ಡಾ ಪರಶುರಾಮ ಪವಾರ,ಜಗದೀಶ ಪಂಪಣ್ಣವರ,ವಾಯ್ ಎಸ್ ಹಾಲವರ(ಮಾಜಿ.ತಾ.ಪಂ.ಸದಸ್ಯರು) ಅಶೋಕ ರಾಠೋಡ ಶಿವು ಕನ್ನೊಳ್ಳಿ,Continue reading “ವಿದ್ಯುತ್ ಶಾಕದಿಂದ ಮೃತಪಟ್ಟಿದ್ದ ಎತ್ತುಗಳು ಹೆಸ್ಕಾ ಇಲಾಖೆಯಿಂದ ಪರಿಹಾರ”
ಪ್ರತಿಭಟನೆಗೆ ಗೋಲಿಬಾರ್ ಇಬ್ಬರ ಸಾವು
ಮಂಗಳೂರು ಸುದ್ದಿ: ಪ್ರತಿಭಟನೆ ವೇಳೆ ಇಬ್ಬರ ಸಾವು ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಈ ಗೋಲಿಬಾರ್ ನಲ್ಲಿ ಇಬ್ಬರು ಸಾವಿಗೀಡಾಗಿರುವುದನ್ನು ಮುಸ್ಲಿಂ ಧರ್ಮ ಗುರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಸರಕಾರ ಅಧಿಕೃತವಾಗಿ ಸಾವಿನ ವಿಷಯವನ್ನು ಇನ್ನೂ ಪ್ರಕಟಿಸಿಲ್ಲ. ಜಲೀಲ್ (49) , ನೌಶೀನ್ (23) ಮೃತರು. ಇಂದು ಬೆಳಗ್ಗೆ ಪ್ರತಿಭಟನೆ ತೀವ್ರತೆ ಹೆಚ್ಚುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ನಂತರ ಅಶ್ರುವಾಯು ಸಿಡಿಸಲಾಗಿದೆ. ಇದರಿಂದಲೂ ಪರಿಸ್ಥಿತಿContinue reading “ಪ್ರತಿಭಟನೆಗೆ ಗೋಲಿಬಾರ್ ಇಬ್ಬರ ಸಾವು”
ನೂತನ ಬಾಜಪ ಮಂಡಲ ಅಧ್ಯಕ್ಷರಾಗಿ ಪರಶುರಾಮ ಪವಾರ ಆಯ್ಕೆ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ: ಮುದ್ದೇಬಿಹಾಳ: ತಾಲ್ಲೂಕಿನ ನೂತನವಾಗಿ ಭಾರತೀಯ ಜನತಾ ಪಾರ್ಟಿಯ ಮುದ್ದೇಬಿಹಾಳ ಮಂಡಲದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು ಹಾಗೂ ರಥ ಶಿಲ್ಪಿಗಳಾಗಿದ್ದ ಪರಶುರಾಮ ಪವಾರ ಅವರನ್ನು ಮುದ್ದೇಬಿಹಾಳ ತಾಲ್ಲೂಕು ಬಾಜಪ ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.ಅದಕ್ಕೆ ಅವರ ಅಭಿಮಾನಿ ಬಳಗ ಹಾಗೂ ಬಾಜಪ ಮುಖಂಡರು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ವರದಿ:ಸಾಗರ ಉಕ್ಕಲಿ
ನಿಧನ ವಾರ್ತೆ
ನಿಧನ ವಾರ್ತೆ ಹಾವೇರಿಯ ಶ್ರೀ ಎಸ್ ಎನ್ ಮೇಡ್ಲೇರಿ ಅವರ ಪುತ್ರನಾದ ರಾಘವೇಂದ್ರ ಎಸ್ ಮೇಡ್ಲೇರಿ ಅನನ್ಯ Construction ಹಾವೇರಿ ಇವರು ಅಕಾಲಿಕವಾಗಿ ದಿನಾಂಕ 18/12/2019 ರಂದು ಸಂಜೆ ದೈವಾದೀನರಾಗಿದ್ದಾರೆ. ಇವರ ಅಂತ್ಯಕ್ರಿಯೆಯು 19/12/2019 ರಂದು ಬೆಳಿಗ್ಗೆ 11.30 ಗಂಟೆಗೆ ಹಾವೇರಿಯ ಶ್ರೀ ಮೈಲಾರ ಮಹದೇವ ಮುಕ್ತಿದಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ
ಗೂಳಿ ಗಳಿಂದ ಸಂಚಾರಕ್ಕೆ ತೊಂದರೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸುದ್ದಿ: ಚಿಕ್ಕೋಡಿ ಪಟ್ಟಣದ ಬಸ್ ನಿಲ್ದಾನದ ಹತ್ತಿರ ಗೂಳಿ ಗಳು ರಸ್ತೆಯ ಮೇಲೆ ನಿಂತು ತೊಂದರೆ ಕೊಡುತ್ತಿವೆ ಇದಕ್ಕೆ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಹೈರಾನು,ನಗರ ಪಾಲಿಕೆಯವರು ಈ ಗೂಳಿ ಗಳನ್ನು ಹಿಡಿದು ಗೊ ಶಾಲೆಗೆ ರವಾನಿಸಿ ಸಂಚಾರಕ್ಕೆ ಮುಕ್ತ ಮಾಡಿ ಕೊಡುವಂತೆ ಸಾರ್ವಜನಿಕರ ಒತ್ತಾಯ ಇಲ್ಲವಾದರೆ ಯಾರಿಗಾದರೂ ಹಾಯುವುದರಿಂದ ಅನಾಹುತಗಳು ತಪ್ಪಿದ್ದಲ್ಲ.ಕೂಡಲೇ ಇಲಾಖೆಯವರು ಕ್ರಮ ಕೈಗೊಳ್ಳಬೇಕು. ವರದಿ:ಚಂದ್ರಕಾಂತ ಹುಕ್ಕೇರಿ
ವಿದ್ಯುತ್ ಸ್ಪರ್ಶಿಸಿ ಕಬ್ಬು ಬೆಳೆ ನಾಶ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸುದ್ದಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಶಾಪೂರ ಗ್ರಾಮದಲ್ಲಿ ಘಟನೆ ವಿದ್ಯುತ್ ತಂತಿ ಬಿದ್ದು ಕಬ್ಬು ಬೆಳೆ ನಾಶ ರೈತ ಶಂಕರಗೌಡ ಪಾಟೀಲ ಎಂಬುವರಿಗೆ ಸೇರಿದ ಕಬ್ಬಿನ ಜಮೀನಿನಲ್ಲಿ ನಡೆದ ಘಟನೆ ಸುಮಾರು 4 ಎಕರೆ ಕಬ್ಬು ಬೆಂಕಿಗೆ ಆಹುತಿ ಯಾಗಿದೆ ಅಗ್ನಿಶಾಮಕ ಸಿಬ್ಬಂದಿಯವರಿಂದ ಬೆಂಕಿ ನಂದಿಸುವ ಕಾರ್ಯ ಇನ್ನೂ ಸ್ಥಳಕ್ಕೆ ಕಂದಾಯ ಗ್ರಾಮ ಲೆಕ್ಕಾಧಿಕಾರಿ ಭೇಟಿ ಪರಿಶೀಲನೆ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ವರದಿ:ಸಾಗರ ಉಕ್ಕಲಿ