ನಿಧನ ವಾರ್ತೆ

ವಿಜಯಪುರ ಜಿಲ್ಲೆಯ ಸುದ್ದಿ ಮುದ್ದೇಬಿಹಾಳ ತಾಲ್ಲೂಕಿನ ಹಡಗಲಿ ಗ್ರಾಮದ ಬಸಮ್ಮಗೌಡತಿ.ದ್ಯಾಮನಗೌಡ.ಪಾಟೀಲ .ಸಾ.ಹಡಗಲಿ ಇವರು ಇಂದು 18,12.2019 ರಂದು ಮೃತಪಟ್ಟಿದ್ದಾರೆ ಅವರಿಗೆ 87 ವರ್ಷ ವಯಸ್ಸಾಗಿತ್ತು. 4 ಜನ ಗಂಡು ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಂಕಿ ತಗುಲಿ ಕಬ್ಬು ಬೆಳೆ ನಾಶ

ಅಥಣಿ ತಾಲೂಕಿನ ವರದಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ಕಬ್ಬು ಬೆಳೆ ನಾಶವಾಗಿದೆ. ಚಂದ್ರಕಲಾ ವಿಠ್ಠಲ ಮಾಚಕನೂರ ಎಂಬುವರಿಗೆ ಸೇರಿದ ಜಮೀನಿನ ರಿ.ಸ.ನಂ-98/4 ನಾಲ್ಕು ಎಕರೆ ಕಬ್ಬು ಬೆಂಕಿಗಾಹುತಿಯಾಗಿ ಸುಮಾರು 6 (ಆರು) ಲಕ್ಷ ರೂಪಾಯಿ ಹಾನಿ ಸಂಬವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ತಾಲೂಕಾ ದಂಡಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅಥಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Continue reading “ಬೆಂಕಿ ತಗುಲಿ ಕಬ್ಬು ಬೆಳೆ ನಾಶ”

ಮತದಾರರ ಪಟ್ಟಿ ಪ್ರಕಟ

ಬೆಳಗಾವಿ ಜಿಲ್ಲೆಯ ಅಥಣಿ ವರದಿ ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಯಿತು. ಸಪ್ತಸಾಗರ ಗ್ರಾಮದ ಮತದಾನ ಕೋಣೆ ಸಂಖ್ಯೆ 190,191,192 ಈ ವರ್ಷದ ಸೇರ್ಪಡೆಗೊಂಡ ಮತದಾರರ ಹೆಸರನ್ನು ಸೇರ್ಪಡಿಸಿ ಪಟ್ಟಿ ಪ್ರಕಟಿಸಲಾಯಿತು. ಈ ವೇಳೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿ ಅಶೋಕ ಕೋಗಿಲೆ ಕೆಲ ಮೃತರಾದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟು ಹೊಸ ಮತದಾರರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ಹೇಳಿದರು. ಈ ವೇಳೆ ಬಿ ಎಲ್ ಓ ಮಹಾಂತೇಶ ಘೂಳಪ್ಪನವರ,ಎ.ಕೆ.ಮುಲ್ಲಾContinue reading “ಮತದಾರರ ಪಟ್ಟಿ ಪ್ರಕಟ”

ಅಂದರ ಬಾಳಲ್ಲಿ ಬೆಳಕಾದ ಸಾಹಿತಿ ರವೀಂದ್ರ ಹೋಳ್ಕರ

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸುದ್ದಿ: ಹಾರೂಗೇರಿ:ಪಟ್ಟಣದಲ್ಲಿ ಇಂದು ದಿನಾಂಕ 15-12-2019 ರಂದು ಸಮಾಜ ಸೇವಕರು ಹಾಗೂ ಸಾಹಿತಿಗಳಾದ ಶ್ರೀಯುತ ರವೀಂದ್ರ ಹೋಳ್ಕರ ಅವರು ಬರೆದಿರುವ ಮೋಡಗಳ ಮರೆಯಲ್ಲಿ ಪುಸ್ತಕ ಮಾರಾಟ ಮಾಡಿದ ಹಾಗೂ ದೇಣಿಗೆಯಿಂದ ಬಂದಂತಹ 1 ಲಕ್ಷ ರೂಪಾಯಿ ಹಣವನ್ನು ಸಮಾಜಮುಖಿ ಸೇವೆಯಾರ್ಥ ಅಂದರಿಗೆ ದಾನವಾಗಿ ನೀಡಿದ್ದಾರೆ.ರವೀಂದ್ರ ಹೋಳ್ಕರ ಅವರ ಆತ್ಮೀಯ ಸ್ನೇಹಿತರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಹಾರೂಗೇರಿ ಪಟ್ಟಣದ ಅಂದ ಅಣ್ಣ-ತಂಗಿಯಾದ ರವಿ ನಾವಿ ಹಾಗೂ ಶೋಭಾ ನಾವಿ ಅವರಿಗೆ ಜೀವನಕ್ಕೆ ಉಪಯೋಗವಾಗಲೇಂದುContinue reading “ಅಂದರ ಬಾಳಲ್ಲಿ ಬೆಳಕಾದ ಸಾಹಿತಿ ರವೀಂದ್ರ ಹೋಳ್ಕರ”

ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದ- ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದರಾಮಯ್ಯ ಅವರಿಗೆ ಮೊನ್ನೆಯದಿನ ಅಧಿಕ ರಕ್ತದೊತ್ತಡ ದಿಂದ ಚಿಕಿತ್ಸೆಗೆ ಒಳಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು.ಇಂದು ಪರಮ ಪೂಜ್ಯ ಶ್ರೀ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಆರೋಗ್ಯವನ್ನು ವಿಚಾರಿಸಿ, ಅವರು ಬೇಗ ಗುಣಮುಖರಾಗಿ ಬರಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಉಪಸ್ಥಿತರಿದ್ದರು. ವರದಿ:ಸಾಗರ ಉಕ್ಕಲಿ

ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸುದ್ದಿ ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕ ಮೃತ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 16ನೇ ವಾರ್ಡನಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಕಿಶೋರ(8)ತಂದೆ ಗಡ್ಡಿವೀರೇಶ ಮೃತಪಟ್ಫಿದ್ದಾನೆ. ಬಾಲಕ ತಿಂಗಳಿಂದ ವಿಪರೀತವಾಗಿ ಜ್ವರದಿಂದ ಬಳಲುತಿದ್ದು.ಸ್ಥಳೀಯ ಹಾಗೂ ಹೊಸಪೇಟೆ.ಬಳ್ಳಾರಿ ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ.ತಿಂಗಳಾದರೂ ಛೇತರಿಸಿಕೊಳ್ಳದ ಹಿನ್ನಲೆಯಲ್ಲಿ ಹಲವು ದಿನಗಳ ಹಿಂದೆಯೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.ವಿಪರೀತ ಜ್ವರ ಹಾಗೂ ಅತಿಸಾರ ಬೇದಿಯಿಂದ ಬಳಲುತಿದ್ದ.ಡೆಂಗ್ಯೂ ಜ್ವರದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಬಾಲಕ ತೀರಾ ಅಸ್ವಸ್ಥ ನಾಗಿದ್ದನು. ಕಾರಣContinue reading “ಡೆಂಗ್ಯೂ ಜ್ವರಕ್ಕೆ ಬಾಲಕ ಬಲಿ”

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಮಾಡು ಇಲ್ಲವೇ ಮಡಿ ಹೋರಾಟ

ಪಿಂಚಣಿಗಾಗಿ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹೋರಾಟ ತಾಲ್ಲೂಕು ಕೇಂದ್ರಗಳಲ್ಲಿ ಮಾನ್ಯ ತಹಶೀಲ್ದಾರ್ ರವರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮಾನ್ಯ ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಅಂತಿಮ ಮನವಿ ಪತ್ರದೊಂದಿಗೆ ಗಡುವು ನೀಡುವ ಹೋರಾಟ ದಿನಾಂಕ 21-12-2019 ರ ಶನಿವಾರದಂದು. ಇದಕ್ಕೆ ಸರ್ಕಾರ ಸ್ಪಂದಿಸಿ, ಜನೇವರಿ 9ನೇ ತಾರೀಕಿನೊಳಗೆ ಪಿಂಚಣಿ ಸೌಲಭ್ಯ ನೀಡದಿದ್ದಲ್ಲಿ ಜನೇವರಿ 10 ರಿಂದ “ಅಂತಿಮ ಮಾಡು ಇಲ್ಲವೇ ಮಡಿ ಹೋರಾಟ” ಬೆಂಗಳೂರಿನಲ್ಲಿ. ದಿನಾಂಕ:1-4-2006 ರ ನಂತರ ನಿಯಮಾನುಸಾರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ನೌಕರರಿಗೆContinue reading “ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಮಾಡು ಇಲ್ಲವೇ ಮಡಿ ಹೋರಾಟ”

ಜಿ.ಪಂಚಾಯತ ವ್ಯಾಪ್ತಿಯಲ್ಲಿನ ಉಚಿತ ಸರಬರಾಜು ಯೋಜನೆ ಅಡಿ ಉಪಕರಣಗಳನ್ನು ನೀಡಿದ ಜಿ.ಪ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸುದ್ದಿ ಸರ್ಕಾರದ ಸಹಯೋಗದಲ್ಲಿ ಉಪ ನಿರ್ದೇಶಕರು (ಖಾಗ್ರಾ) ಜಿ.ಪಂ ಕೈಗಾರಿಕಾ ವಿಭಾಗ ಇಲಾಖೆಯಲ್ಲಿ ಸನ್ 2018-19 ನೇ ಸಾಲಿನ ಉಚಿತ_ಉಪಕರಣಗಳ ಸರಬರಾಜು ಯೋಜನೆಯ ಅಡಿಯಲ್ಲಿ ಬಸರಕೋಡ ಜಿ.ಪಂ ವ್ಯಾಪ್ತಿಯಲ್ಲಿ ವಿವಿಧ ವೃತ್ತಿಯ ಕುಶಲ ಕರ್ಮಿಗಳಿಗೆ ಉಚಿತ ಉಪಕರಣಗಳನ್ನು ನೀಡಿದರು. ವಿಜಯಪುರ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಪ್ರಭುಗೌಡ ಚ ದೇಸಾಯಿ ಅವರು ಇಂದು ಮುದ್ದೇಬಿಹಾಳದ ತಾಲ್ಲೂಕು ಪಂಚಾಯತ ನಲ್ಲಿ ಫಲಾನುಭವಿಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶಶಿಕಾಂತ ಶಿವಪೂರೆ,Continue reading “ಜಿ.ಪಂಚಾಯತ ವ್ಯಾಪ್ತಿಯಲ್ಲಿನ ಉಚಿತ ಸರಬರಾಜು ಯೋಜನೆ ಅಡಿ ಉಪಕರಣಗಳನ್ನು ನೀಡಿದ ಜಿ.ಪ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ”

ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಚಿತ್ರನಟಿ ಹಾಗೂ ಸಮಾಜದವರಾದ ಭಾವನಾ ಅವರಿಗೆ ಆಹ್ವಾನ

ರಾಜ್ಯ ಪ್ರಶಸ್ತಿ ವಿಜೇತೆ ಖ್ಯಾತ ಚಿತ್ರನಟಿ ಭಾವನಾ ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಚಿತ್ರ ತಾರೆ ಭಾವನಾ ಮೀನುಗಾರರ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದಂತಹ ಖ್ಯಾತ ಚಿತ್ರನಟಿ ಭಾವನಾ ಅವರನ್ನು ರಾಜ್ಯ ರಾಮೀಸಂ ಅಧ್ಯಕ್ಷರಾದ ಡಾಕ್ಟರ್ ದೇವಿಪ್ರಸಾದ್ ,ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ,ಬೆಂಗಳೂರು ವಿಭಾಗದ ಉಪಾಧ್ಯಕ್ಷರಾದ ಜಯಲಕ್ಷ್ಮಿ ಪುತ್ರನ್ ಮೈಸೂರು ವಿಭಾಗದ ಉಪಾಧ್ಯಕ್ಷರಾದ ಅಶೋಕ ಗಣಪುರ ,ಜಂಟಿ ಕಾರ್ಯದರ್ಶಿ ಸುಜಯ್ ನಾಗ್ ,ರಾಜ್ಯ ಮುಖಂಡರಾದ ಡಿಪಿ ಕೋಲಿ,ರಾಜ್ಯ ಕಾರ್ಯಕಾರಣಿContinue reading “ರಾಷ್ಟ್ರೀಯ ಮೀನುಗಾರರ ಸಮಾವೇಶಕ್ಕೆ ಚಿತ್ರನಟಿ ಹಾಗೂ ಸಮಾಜದವರಾದ ಭಾವನಾ ಅವರಿಗೆ ಆಹ್ವಾನ”

ಕಿತ್ತೂರು ಚೆನ್ನಮ್ಮ ಜಯಂತಿ ನಿಮಿತ್ತ ಪೂರ್ವ ಬಾವಿ ಸಭೆ

ವಿಜಯಪುರ: ಇಂದು ವಿಜಾಪುರ ನಗರದ ಹಳಕಟ್ಟಿ ಸಭಾಭವನದಲ್ಲಿ ಡಿಸೆಂಬರ್ 29 ರಂದು ನಡೆಯಲಿರುವ ಚೆನ್ನಮ್ಮಾಜಿಯ ವಿಜಯೋತ್ಸವದ ತಯಾರಿ ಕುರಿತು ಕಾರ್ಯಕ್ರಮ ಯಶಸ್ವಿಗೊಳಿಸಲು ಚರ್ಚಿಸಿದರು. ಸಭೆಯಲ್ಲಿ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ: 1005 ತಾಯಂದಿರು ಬುತ್ತಿ ರೊಟ್ಟಿ ಮೆರವಣಿಗೆ ಯಲ್ಲಿ ಪಾಲ್ಗೊಳ್ಳಲಿದ್ದು ಮೆರವಣಿಗೆ ಸಿದ್ದೇಶ್ವರ ಗುಡಿಯಿಂದ ಪ್ರಾರಂಭವಾಗಿ ಐಶ್ವರ್ಯ ನಗರದ ಕಿತ್ತೂರರಾಣಿ ಚೆನ್ನಮ್ಮ ಸಭಾಭವನ ತಲುಪುವುದು ಕಾರ್ಯಕ್ರಮ ಕೇ ನಮ್ಮ ಸಮಾಜದ ಸಚಿವರು ಶಾಸಕರು ಸಂಸದರು ಮಾಜಿ ಶಾಸಕರು/ ಸಂಸದರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು. ಜಿಲ್ಲಾಧ್ಯಕ್ಷರಾದContinue reading “ಕಿತ್ತೂರು ಚೆನ್ನಮ್ಮ ಜಯಂತಿ ನಿಮಿತ್ತ ಪೂರ್ವ ಬಾವಿ ಸಭೆ”

Design a site like this with WordPress.com
Get started